ದೇವರೇ! ನಿನ್ನ ಸತ್ಯದಲ್ಲಿ ನನ್ನನ್ನು ನಡಿಸಿ ನನಗೆ ಉಪದೇಶಿಸು!

  Posted on   by   No comments

ps25

“ನಿನ್ನ ಸತ್ಯಾನುಸಾರವಾಗಿ ನನ್ನನ್ನು ನಡಿಸುತ್ತಾ ಉಪದೇಶಿಸು. ನೀನೇ ನನ್ನನ್ನು ರಕ್ಷಿಸುವ ದೇವರು ಹಗಲೆಲ್ಲಾ ನಿನ್ನನ್ನೇ ನಿರೀಕ್ಷಿಸುವವನಾಗಿದ್ದೇನೆ” (ಕೀರ್ತ. 25:5).

ಕೆಲವು ಸಲ, ನಾವು ಮುಂದೆ ಏನು ಮಾಡಬೇಕು ಎಂದು ಒದ್ದಾಡುತ್ತೇವೆ. ನಾನು ಯಾವದಾರಿ ಹಿಡಿಯಬೇಕು? ಯಾರ ಹತ್ತಿರ ಹೋಗಬೇಕು? ಇದನ್ನು ಹೇಗೆ ಮಾಡಬೇಕು? ಈ ಪರಿಸ್ಥಿತಿಗಳು ನಮ್ಮನ್ನು ಗಲಿಬಿಲಿಗೊಳಿಸುತ್ತದೆ. ಆದರೆ, ನಮ್ಮ ದೇವರು ನಮಗೆ ವಾಗ್ದಾನಗಳನ್ನು ಕೊಟ್ಟಿದ್ದಾನೆ ಮತ್ತು ಆತನು ಎಂದಿಗೂ ವಾಗ್ದಾನ ತಪ್ಪುವುದಿಲ್ಲ, ಆತನು ನಿಮ್ಮ ರಕ್ಷಣೆಯ, ದೇವರು ಆತನು ನಿನ್ನ ಕೈಹಿಡಿದು ನಿನ್ನನ್ನು ಸರಿಯಾದ ದಾರಿಯಲ್ಲಿ ನಡೆಸುತ್ತಾನೆ (ಕೀರ್ತ. 32:8). ನೀನು ಮಾಡಬೇಕಾಗಿರುವದು ಅಂದರೆ, ಆತನ ಸನ್ನಿಧಾನದಲ್ಲಿ  ಮೊಣಕಾಲೂರುವದು, ಆತನ ಆಶೀರ್ವಾದ ಪಡೆದು, ನಿನ್ನ ಜೀವನವನ್ನು ಆತನಿಗೆ ಸಮರ್ಪಿಸುವದು, ಆಗ ನೀನು ನಡೆಸಲ್ಪಡುವಿ. ಆದ್ದರಿಂದಲೇ ಕೀರ್ತನೆಗಾರನು ಹೇಳುವದು “ದಿನವೆಲ್ಲಾ ನಿನ್ನಲ್ಲಿ ಕಾಯುತ್ತೇನೆ” ನೀನು ಸಹ ಇದೇ ರೀತಿ ಮಾಡಿದರೆ ಅತನು ಸತ್ಯವನ್ನು ಬೋಧಿಸಿ ನೀನು ಹೋಗಬೇಕಾಗಿರುವ ದಾರಿಯಲ್ಲಿ ನಡೆಸುತ್ತಾನೆ (ಯೆಶಾ. 48:1).

ಒಂದು ಕಛೇರಿಯಲ್ಲಿ ಕೆಲಸಮಾಡುತ್ತಿದ್ದ ಎಲ್ಲಾರೂ ದುಷ್ಟರಾಗಿದ್ದರು. ಪ್ರತಿ ದಿನ, ಅವರವರಲ್ಲಿಯೇ ಹೊಡೆದಾಟವಿರುತ್ತಿದ್ದು ಯಾರೂ ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗುತ್ತಿರಲಿಲ್ಲ. ಅವರಲ್ಲಿ ದೇವರಿಗೆ ಭಯಪಡುವ ಮತ್ತು ಯಥಾರ್ಥ ಮಹಿಳೆಯೊಬ್ಬಳು ಇದ್ದಳು. ಆದರೆ, ಈ ದುಷ್ಟ ಜನರು ಯಾವಾಗಲೂ ಆಕೆಗೆ ತೊಂದರೆಕೊಡುತ್ತಾ ಅವಳಿಗೆ ಕಿರಿಕಿರಿಯುಂಟುಮಾಡುತ್ತಿದ್ದರು. ಅವಳು “ನಾನು ಏನು ಮಾಡಲಿ? ನಾನು ವರ್ಗಾವಣೆ ಕೇಳಿ ಬೇರೆ ಕಛೇರಿಗೆ ಹೊರಟುಹೋಗಲಾ? ಅಯ್ಯೋ ಹೇಗೆ ಹೋಗಲಿ? ನನ್ನ ಪತಿ ಮತ್ತು ಮಕ್ಕಳು ಇದೇ ಜಾಗದಲ್ಲಿ ಇರಬೇಕಲ್ಲಾ? ಎಂದು ಯೋಚಿಸಿಕೊಂಡಿದ್ದಳು”.  ಮರುಕ್ಷಣವೇ ಅವಳು ದೇವರ ಸಾನಿಧ್ಯಕ್ಕೆ ಹೋಗಿ ಪ್ರಾರ್ಥಿಸಿದಳು. ಅವಳು ತನ್ನ ಕಛೇರಿಯಲ್ಲೂ ಪ್ರಾರ್ಥಿಸಿದಳು. ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಪ್ರಾರ್ಥಿಸುತ್ತಿದ್ದಳು. ಅವಳಿಗೆ ಅವಕಾಶ ಒದಗಿ ಬಂದಾಗಲೆಲ್ಲಾ ಅವಳು ಪ್ರಾರ್ಥಿಸುತ್ತಿದ್ದಳು. “ಪ್ರಿಯ ತಂದೆ ದೇವರೇ, ಈ ದುಷ್ಟ ಜನರಿಂದ ನನ್ನನ್ನು ರಕ್ಷಿಸು ಈ ಜನರೂ ನಿನ್ನನ್ನು ಮತ್ತು ನಿನ್ನ ಪ್ರೀತಿ ನನ್ನ ಜೀವನದ ಮೂಲಕ ಕಂಡುಕೊಳ್ಳುವಂತೆ ಮಾಡು” ಎಂದು. ಓಹೋ! ಎಂಥಹಾ ಅದ್ಭುತ! ನಿಧಾನವಾಗಿ ಒಬ್ಬರಾದ ಮೇಲೆ ಒಬ್ಬರು ಅವರು ತಮ್ಮ ಸಮಸ್ಯೆಗಳಿಂದ ಅವಳ ಬಳಿಗೆ ಬಂದು, ಆಕೆಯ ಪ್ರಾರ್ಥನೆಯನ್ನು ಬಯಸುತ್ತಿದ್ದರು. ಯಾವ ಕಹಿ ಇಲ್ಲದೆ ಆಕೆಯೂ ಅವರಿಗಾಗಿ ಕಣ್ಣೀರಿನಿಂದ ಪ್ರಾರ್ಥಿಸುತ್ತಿದ್ದಳು. ಅವಳು ಅವರಿಗೆ ಯಾವಾಗಲೂ ದೇವರ ಬಗ್ಗೆ ಆತನ ಪ್ರೀತಿಯ ಬಗ್ಗೆ ಹೇಳುತ್ತಿದ್ದಳು. ಬೇಗನೇ ಆ ಕಛೇರಿಯಲ್ಲಿ ಒಂದು ಅದ್ಭುತ ಬದಲಾವಣೆಯಾಗಿ ಆ ಜಾಗಕ್ಕೆ ಸಮಾಧಾನವು ಹಿಂತಿರುಗಿತ್ತು. ಹೌದು! ಒಬ್ಬ ದೇವರ ಮಗುವಿನ ಪ್ರಾರ್ಥನೆಯಿಂದ ಆ ಕಛೇರಿಯಲ್ಲಿ ಸಮುದ್ರದಷ್ಟು ಬದಲಾವಣೆಗಳು ಉಂಟಾದವು.

ಈ ದಿನದಲ್ಲಿ ನೀವು ಸಹ ಹೇಳುತ್ತಿರಬಹುದು, “ಓಹೋ ನಾನು ಏನು ಮಾಡಬಹುದು? ನನ್ನ ಕಛೇರಿಯಲ್ಲಿ ಎಷ್ಟೊಂದು ತೊಂದರೆಗಳನ್ನು ನಾನು ಎದುರಿಸುತ್ತಿದ್ದೇನೆ”. ನನ್ನ ಸ್ನೇಹಿತನೇ ಚಿಂತೆ ಬೇಡ! ಆತನು ನಿಜಕ್ಕೂ ನಿನ್ನ ಪರಿಸ್ಥಿತಿ ಬದಲಾಯಿಸುತ್ತಾನೆ. ಆದರೆ, ನೀನು ಎಲ್ಲಾ ಹಿಡಿತವಿಲ್ಲದ ಮಾತುಗಳನ್ನು, ಹರಟೆಯನ್ನು ಬಿಟ್ಟುಬಿಡು, ನಿನ್ನನ್ನು ನೀನು ಶುದ್ಧವಾಗಿಯೂ ಪವಿತ್ರವಾಗಿಯೂ ಇಟ್ಟುಕೊ. ಆಗ ದೇವರು ಸತ್ಯವನ್ನು ತಿಳಿಯುವಂತೆ ಸಹಾಯ ಮಾಡುತ್ತಾನೆ (ಯೋಹಾ. 8:32). ಮತ್ತು ನಿನ್ನ ಜೀವನ ಇತರರಿಗೆ ನಿದರ್ಶನವಾಗಿದ್ದು ಕರ್ತನಾದ ಯೇಸುವನ್ನು ಹಿಂಬಾಲಿಸುವಂತೆ ಆಗುತ್ತದೆ.

ಪ್ರಾರ್ಥನೆ :- ಪ್ರಿಯ ತಂದೆಯೇ, ನಾನು ನನ್ನ ಕಛೇರಿಯಲ್ಲಿ ಮಾತ್ರವಲ್ಲದೆ ಮನೆಯಲ್ಲೂ, ಅನೇಕ ದುಷ್ಟ ವ್ಯಕ್ತಿಗಳಿಂದ ಆವರಿಸಿದ್ದೇನೆ. ಅವರ ಮಧ್ಯದಲ್ಲಿ ನಿನ್ನ ಪ್ರೀತಿ ಮತ್ತು ಸಮಾಧಾನ ಪ್ರತಿಬಿಂಬಿಸುವಂತೆ ಸಹಾಯ ಮಾಡು. ಅವರಿಗೆ ಬೋಧಿಸಿ, ಅವರನ್ನು ನಿನ್ನಡಗೆ ನಡೆಸುವಂತೆ ನನಗೆ ಕೃಪೆಕೊಡು. ಇಂದಿನಿಂದ, ನಾನು ನನ್ನ ಜೀವಿತವನ್ನು ನಿನಗೆ ಸಮರ್ಪಿಸುತ್ತೇನೆ. ಆಗ ನಾನು ನಡೆಯಬೇಕಾಗಿರುವ ದಾರಿಯಲ್ಲಿ ನೀನು ನನ್ನನ್ನು ನಡೆಸು. ಸಾಟಿಯಿಲ್ಲದ ಯೇಸುವಿನ ಹೆಸರಿನಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

ಪ್ರಾರ್ಥನೆ ಮತ್ತು ವಂದನೆಗಳೊಂದಿಗೆ,

MANNA MINISTRIES

Mannaministries.in@gmail.com

*For Daily Devotion Contact: +91 9964247889*

Comments

Your email address will not be published. Required fields are marked *

WhatsApp us