ದೇವರ ಕೃಪೆ ಆತನ ದೇವಾಲಯದಲ್ಲಿ!

  Posted on   by   1 comment

SCC

“ದೇವರೇ ನಾವು ನಿನ್ನ ಆಲಯದಲ್ಲಿ ನಿನ್ನ ಪ್ರೀತಿಯನ್ನು ಸ್ಮರಿಸುತ್ತೇವೆ” (ಕೀರ್ತ. 48:9).

ಕರ್ತನ ಆಲಯಕ್ಕೆ ಹೋಗಲು ತನಗೆ ಸಂತೋಷವೂ, ಉಲ್ಲಾಸವೂ ಆಯಿತೆಂದು ಅರಸನಾದ ದಾವೀದನು ಹೇಳಿರುವನು (ಕೀರ್ತ. 122:1). ಇಂದು ಎಷ್ಟು ಜನರಿಗೆ ಅದೇ ಭಾವನೆ ಇದೆ? ಕೆಲವರು ಯೋಚನೆ ಮಾಡುತ್ತಾರೆ, ಯಾವುದಾದರೂ ಒಂದು ಕ್ರೈಸ್ತ ಕಾರ್ಯಕ್ರಮವನ್ನು ದೂರದರ್ಶನದಲ್ಲಿ ನೋಡಿದರೆ ಅಷ್ಟೇ ಸಾಕು, ದೇವಾಲಯಕ್ಕೆ ಹೋಗುವ ಅವಶ್ಯಕತೆಯಿಲ್ಲ ಎಂದು. ಇನ್ನೂ ಕೆಲವರು ದೇವಾಲಯಕ್ಕೆ ಹೋಗುವದು ಕೇವಲ ಒಂದು ಧರ್ಮಾಚಾರಣೆಯಿಂದಲೇ ಹೊರತು ದೇವರ ಸನ್ನಿಧಾನವನ್ನು ಅನುಭವಿಸುವದಕ್ಕಲ್ಲ ಎಂಬುದಾಗಿ, ನಿಜವಾಗಲೂ ನಾವು ಕರ್ತನನ್ನು ಆತನ ದೇವಾಲಯದಲ್ಲಿ ಹುಡುಕಿದಾಗ ನಮಗೆ ಯಾವ ಪ್ರಯೋಜವಿದೆ? ಯೆಹೋವನು ತನ್ನ ಪರಿಶುದ್ಧ ಮಂದಿರದಲ್ಲಿದ್ದಾನೆ (ಕೀರ್ತ. 11:4, ಹಬ. 2:20). ಆತನನ್ನು ನಂಬಿಕೆಯಿಂದ ಹುಡುಕುವವರೆಲ್ಲರನ್ನೂ ಆತನು ಬಲ್ಲನು. ಆತನ ಆಲಯದಲ್ಲಿ ನಾವು ಸ್ತೋತ್ರಗಳನ್ನೂ, ಸ್ತುತಿಗಳನ್ನೂ ಹುಡುಕುವಾಗ ಆತನು ಸಂತೋಷಿಸುತ್ತಾನೆ. ಆತನ ಆಲಯದಲ್ಲಿ ನಾವು ನಮ್ಮ ಹೃದಯಗಳನ್ನು ಆತನ ಪಾದದಲ್ಲಿ ಸುರಿದಾಗ, ಆತನು ನಮ್ಮ ಪ್ರಾರ್ಥನೆಯನ್ನು ವಿಜ್ಞಾಪನೆಗಳನ್ನು ಕೇಳಿ ಉತ್ತರಿಸುತ್ತಾನೆ. ಮುಂದೆ, ಆತನು ನಮ್ಮನ್ನು ಮಹತ್ವವುಳ್ಳ ಪ್ರತಿಭೆಯಿಂದ ತುಂಬಿಸುತ್ತಾನೆ (ಧರ್ಮೋ. 4:7). ಮೇಲಿನ ವಚನದಂತೆ ದೇವರ ಕೃಪೆ ನಮ್ಮ ಮೇಲೆ ಇಳಿಯುತ್ತದೆ (ಕೀರ್ತ. 48:9).

ಒಂದು ಸಲ ಒಂದು ಕುಟುಂಬ ಪ್ರತಿ ಭಾನುವಾರ ಸಮಯಕ್ಕೆ ಮೊದಲೇ ಆಲಯಕ್ಕೆ ಹೋಗಿ ಕರ್ತನನ್ನು ಆರಾಧಿಸುತ್ತಿದ್ದರು. ಪ್ರಾರ್ಥನಾ ಸಮಯದಲ್ಲಿ ಅವರು ಶ್ರದ್ಧೆಯಿಂದಲೂ ನಂಬಿಕೆಯಿಂದಲೂ ಕೇವಲ ತಮ್ಮ ಅವಶ್ಯಕತೆಗಳಿಗಾಗಿ ಅಲ್ಲದೆ ತಮಗೆ ತಿಳಿದವರ ಕಣ್ಣೀರನ್ನು ಒರೆಸುವುದಕ್ಕಾಗಿಯೂ ಮತ್ತು ನೋವು ಯಾತನೆಯಲ್ಲಿ ಇರುವವರಿಗೂ ಪ್ರಾರ್ಥಿಸುತ್ತಿದ್ದರು. ಇದು ಕರ್ತನ ದೃಷ್ಟಿಯಲ್ಲಿ ಆನಂದಕರವಾಗಿತ್ತು. ಒಂದು ಸಮಯದಲ್ಲಿ ಮನೆಯ ಯಜಮಾನನಿಗೆ ಸರಿಯಾದ ಸಮಯದಲ್ಲಿ ಕಾಣದ ಸಮಸ್ಯೆಗಳಿಂದಲೂ, ಅಡೆತಡೆಗಳಿಂದಲೂ ಬಡ್ತಿ ಸಿಗಲಿಲ್ಲ. ಆದ್ದರಿಂದ ಅವರೆಲ್ಲಾ ಆಲಯಕ್ಕೆ ಹೋಗಿ ದೇವರ ಹತ್ತಿರ ತಮ್ಮ ಹೃದಯ ತೋಡಿಕೊಂಡರು. ಬೇರೆಯವರು ಅವನಿಗೆ ಬಡ್ತಿ ಸಿಗುವುದೇ ಇಲ್ಲ ಎಂದು ಹೇಳಿ ನಿರುತ್ಸಾಹಗೊಳಿಸಿದರು. ಆದರೆ ಈ ಕುಟುಂಬ ಆಲಯದಲ್ಲಿ ಬಹಳವಾದ ನಂಬಿಕೆಯಿಂದ ಕರ್ತನ ಪಾದದ ಬಳಿ ಕುಳಿತು ಕರ್ತನು ಅವರ ಪ್ರಾರ್ಥನೆಯನ್ನು ಕೇಳಿ ಅವನಿಗೆ ಬರಬೇಕಾಗಿದ್ದ ಬಡ್ತಿಯನ್ನು ದೇವರು ಕೊಡುತ್ತಾನೆ ಎಂದು ನಂಬಿದರು. ಅವರು ನಂಬಿದಂತೆ, ಕರ್ತನು ಮಾರ್ಗದಲ್ಲಿದ್ದ ಎಲ್ಲಾ ತಡೆಯನ್ನು ತೆಗೆದು, ಬಹಳ ಅದ್ಭುತವಾಗಿ ಬಡ್ತಿಯನ್ನು ಕೊಟ್ಟನು. ತಾನು ನಿರೀಕ್ಷಿಸಿದಕ್ಕಿಂತ ಹೆಚ್ಚಾಗಿ ಕರ್ತನು ಹೇರಳವಾಗಿ ಆಶೀರ್ವದಿಸಿದನು.

ನನ್ನ ಪ್ರಿಯ ಸಹೋದರ ಮತ್ತು ಸಹೋದರಿಯರೇ! ಮೇಲಿನ ಕಥೆಯಲ್ಲಿನ ದಂಪತಿಗಳಂತೆ ನೀವೂ ಸಹ ಆಲಯಕ್ಕೆ ಅಥವಾ ಆತನ ಜನರ ಕೂಡುವಿಕೆಯಲ್ಲಿ ಸೇರಿ, ದೇವರ ಕೃಪೆಯನ್ನು ಪಡೆದು ನಿಮ್ಮ ಹೃದಯವನ್ನು ಆತನ ಹತ್ತಿರ ಸುರಿಯಿರಿ. ಆತನು ನಿಜಕ್ಕೂ ನಿಮ್ಮ ಪ್ರಾರ್ಥನೆಯನ್ನು ಕೇಳಿ ನೀವೂ ಆಲೋಚನೆ ಮಾಡುವದಕ್ಕಿಂತಲೂ, ನಿರೀಕ್ಷಿಸುವದಕ್ಕಿಂತಲೂ ಆತನು ಆಶೀರ್ವದಿಸುತ್ತಾನೆ (ಕೀರ್ತ. 65:4).

ಪ್ರಾರ್ಥನೆ :- ಪ್ರಿಯ ಕರ್ತನೇ, ನೀನೇ ನಮ್ಮ ಪ್ರೀತಿಯ ಮತ್ತು ಜೀವಿಸುವ ದೇವರು. ನಿನ್ನ ಆಲಯದ ಮಧ್ಯದಲ್ಲಿ ನಾನು ನಿನ್ನನ್ನು ಹುಡುಕುವಂತೆ, ನನ್ನನ್ನು ನಿನ್ನ ಶುಭದಿಂದ ಮತ್ತು ಕರುಣೆಯಿಂದ ಆಶೀರ್ವದಿಸು. ಇಂದಿನಿಂದ, ನನ್ನ ಪೂರ್ಣ ಹೃದಯದಿಂದ ನಿನ್ನನ್ನು ಹುಡುಕುವಂತೆಯೂ, ನಿನ್ನಿಂದ ನಡೆಸಲ್ಪಡುವಂತೆಯೂ ನಿನ್ನ ಕೃಪೆಯನ್ನು ಕೊಡು. ಕರ್ತನಾದ ಯೇಸುವಿನ ದಿವ್ಯ ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

Please fill this form to receive Manna ministry “Daily Devotional‎” in Kannda https://goo.gl/forms/SAa56s26a1vNc2pp1 To (Free)

For Daily Devotion Contact: +91 9964247889


1 comment

  1. Vikas says:

    Really very meaningful words. As king David says a day spent in church is equal to thousand day. Let’s all go and pray in church jesus will bless in his home. Amen.

Comments

Your email address will not be published. Required fields are marked *

WhatsApp us