ದೇವರ ಪ್ರೀತಿ! – ಆತ್ಮೀಕ ಕಥೆ 49

  Posted on   by   3 comments

“ಎಷ್ಟೋ ಪ್ರೀತಿಯನ್ನಿಟ್ಟು” ಎಂಬುದಾಗಿ ಯೋಹಾ. :3:16 ರಲ್ಲಿ ಬರೆಯಲ್ಪಟ್ಟಿರುವ “ದೇವರ ಪ್ರೀತಿಯನ್ನು” ಕುರಿತು ‘ಹೆನ್ರಿಮಾರ್’ ಎಂಬಾತನು ಪ್ರಸಂಗ ಮಾಡುತ್ತಲೇ ಇದ್ದರು. ಏಳು ದಿನಗಳ ರಾತ್ರಿಯೂ ಪ್ರಸಂಗಿಸಿದ ವಾಕ್ಯ ಇದೇ ಆಗಿತ್ತು. ಒಂದೊಂದು ರಾತ್ರಿಯೂ ನೂತನವಾದ ಪ್ರಕಟಣೆಯೊಂದಿಗೆ ಆದಿಕಾಂಡದಿಂದ ಪ್ರಕಟಣೆ ಪುಸ್ತಕದವರೆಗೂ, ಸುರಿಸಲ್ಪಟ್ಟ ದೇವ ಪ್ರೀತಿಯನ್ನೂ, ಆತನು ಪ್ರೀತಿಯಿಂದ ದಾನವಾಗಿ ಕಳುಹಿಸಿದ ಕುಮಾರನನ್ನೂ, ಕಲ್ವಾರಿಯ ಪ್ರೀತಿಯನ್ನೂ ವಿವರಿಸಿ ಪ್ರಸಂಗಿಸಿದಾಗ್ಯೂ ತೃಪ್ತಿಯಾಗದ ಆ ಭಕ್ತನು ಕೊನೆಯಲ್ಲಿ ಹೀಗೆಂದರು ‘ಇಷ್ಟು ದಿನವೂ ದೇವರ ಪ್ರೀತಿಯನ್ನು ನನ್ನ ಅಲ್ಪ  ಜ್ಞಾನಂದಿಂದಲೂ ತೊದಲು ನುಡಿಯಿಂದಲೂ ವಿವರಿಸಲು ಪ್ರಯತ್ನಿಸಿದೆನು; ಯಾಕೋಬನ ಏಣಿ ನನ್ನ ಬಳಿ ಇದ್ದಿದ್ದರೆ ಅದನ್ನು ಹತ್ತಿಹೋಗಿ ಪರಲೋಕದ ದ್ವಾರದಲ್ಲಿ ಸೇರಿ, ದೇವರ ಪ್ರಸನ್ನತೆಯಲ್ಲಿರುವ ದೇವದೂತನಾದ ಗಬ್ರಿಯೇಲನನ್ನು ಕುರಿತು ದೇವ ಪ್ರೀತಿಯನ್ನು ನನಗೆ ತೋರಿಸು” ಎಂದು ಕೇಳುತ್ತಿದ್ದನು.

ಆತನಿಂದಲೂ ದೇವ ಪ್ರೀತಿಯನ್ನು ವಿವರಿಸಲಾಗದ “ಆತನನ್ನೇ ಕೊಟ್ಟು ಲೋಕವನ್ನು ಪ್ರೀತಿಸಿದ್ದಾನೆ” ಎಂದು ಹೇಳಬಹುದು, ದೇವರು ನಮ್ಮ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟಿದ್ದಾರೆ ಎಂದು ಹೇಳಿದರು.

ಸತ್ಯವೇದದ ಆರಂಭದಿಂದ ಅಂತ್ಯದವರೆಗೂ ಪ್ರವಹಿಸುವುದು ದೇವಪ್ರೀತಿಯೇ!  ದೇವರನ್ನು  ಪ್ರೀತಿಸಿ; ನಿನ್ನ ನೆರೆಯವನನ್ನು ಪ್ರೀತಿಸು ಎಂಬ ಎರಡು ಕಟ್ಟಳೆಗಳೇ ಮುಖ್ಯವಾದದು ಎಂದು ಯೇಸು ಹೇಳಿದನು.

ನಾವು ಪ್ರೀತಿಸುವವರ ಬಳಿಯಲ್ಲೇ ನಾವು ಹೆಚ್ಚು ಮಾತಾಡಿ, ಹೆಚ್ಚು ವೇಳೆ ಕಳೆಯುತ್ತೇವೆ; ನಮ್ಮನ್ನು ಪ್ರೀತಿಸಿ ಭೂಮಿಗೆ ಬಂದ, ನಮ್ಮ ಆತ್ಮದಾಪ್ತನನ್ನು  ಪ್ರೀತಿಸಿ, ಹೆಚ್ಚು ಸಮಯ ಆತನ ಪಾದದಲ್ಲಿ ಕಳೆಯುತ್ತೇವೆಯೋ? ಆತನು ಪ್ರೀತಿಸ್ವರೂಪಿ ಮಾತ್ರವಲ್ಲ ಪ್ರೀತಿಗಾಗಿ ಪರಿತಪಿಸುವಾತನೂ ಹೌದು!

“ಕ್ರಿಸ್ತನು ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟದ್ದರಲ್ಲಿಯೇ ಪ್ರೀತಿ ಇಂಥದೆಂದು ನಮಗೆ ತಿಳಿದು ಬಂದಿದೆ” (1 ಯೋಹಾ. 3:16).

Categories: Spiritual Stories

3 comments

 1. Jeevan says:

  Very nice and easy going to be able and interested in this website.
  Thanks for the delay I had a great time.
  Thanks, any mistakes in my grammar, I’m sorry.
  Thank you

 2. Padma says:

  Hallelujah ,LOVE U JESUS ,,Satya devaroo Ella devarugalalli ,BHAYANKARANADATANU, neenu ,nanna devaru.

 3. Shamu says:

  ಈ ಲೋಕದಲ್ಲಿ ಎಲ್ಲಾರೂ ದೇವರನ್ನು ಆರಾಧಿಸುತ್ತಾ ಪ್ರೀತಿಸಲಿ…….. ಆಮೆನ್ ✝️✝️✝️✝️✝️✝️✝️✝️

Comments

Your email address will not be published. Required fields are marked *

× WhatsApp us