ದೊಡ್ಡದ್ದನ್ನು (ಶ್ರೇಷ್ಠವಾದುದನ್ನು) ಕೊಡುವ ದೇವರು! – ಆತ್ಮೀಕ ಕಥೆ 24

  Posted on   by   2 comments

104215_fullsize

ಒಬ್ಬ ಚಿಕ್ಕ ಬಾಲಕಿ ತನ್ನ ತಂದೆಯ ಬಳಿಗೆ ಬಂದಳು. “ಅಪ್ಪಾ ನನಗೆ 50 ಪೈಸೆಗಳು ಬೇಕು ಕೊಡಿರಿ” ಎಂದು ಕೇಳಿದಳು. ಪ್ರೀತಿಯಿಂದ ಮಗಳನ್ನು ನೋಡಿದ ತಂದೆ 5 ರೂಗಳನ್ನು ಮಗಳಿಗೆ ಕೊಟ್ಟನು. ಆದರೆ ಬೆಲೆ ಗೊತ್ತಿಲ್ಲದ ಮಗಳು “ಕಲರ್ ಪೇಪರ್ ನನಗೆ ಬೇಡ, ನನಗೆ 50 ಪೈಸೆ ಅಷ್ಟೇ ಬೇಕು” ಅಂದಳು. ಎಷ್ಟು ಬುದ್ಧಿಹೀನವಾದ ಕಾರ್ಯವಿದು.

ನಮ್ಮ ತಂದೆಯಾದ ದೇವರೂ ಸಹ ನಮಗೆ ಬಹಳ ದೊಡ್ಡ ಕಾರ್ಯಗಳನ್ನು ಕೊಡುತ್ತಾನೆ. ಆದರೆ ನಾವು ಅದನ್ನು ಅರ್ಥಮಾಡಿಕೊಳ್ಳುವದಿಲ್ಲ. ದೇವರು ಯಾಕೋಬನನ್ನು ನೋಡಿ ನಿನ್ನ ಮೂಲಕವಾಗಿ ಭೂಮಿಯ ಕುಡಿಗಳನ್ನೆಲ್ಲಾ ಆಶೀರ್ವದಿಸುವೆನು ಅಂದನು. ಅವನಾದರೋ “ದೇವರೇ, ನಾನು ಹೋಗುವಲ್ಲೆಲ್ಲಾ ಅನ್ನ ವಸ್ತ್ರಗಳನ್ನು ನನಗೆ ಕೊಡು” ಎಂದು ಪ್ರಾರ್ಥಿಸಿದನು (ಆದಿ. 28:14-20).

ಹೀಗೆ ನಾವು ದೇವರ ಮಹತ್ತುಗಳನ್ನು ಅಸಡ್ಡೆ ಮಾಡಬಾರದು. ನಾವಾದರೋ ಚಿಕ್ಕ ಕಾರ್ಯಗಳನ್ನು ಯೋಚಿಸುತ್ತೇವೆ. ಆತನಾದರೋ ದೊಡ್ಡ ಕಾರ್ಯಗಳನ್ನು ಮಾಡುತ್ತಾನೆ!

Categories: Spiritual Stories

2 comments

  1. nagaraj tengale says:

    blessed

  2. PAMPAPATHI V says:

    Hallelujah….. He is Cheerful Giver…

Comments

Your email address will not be published. Required fields are marked *

WhatsApp us