ನಂಬಿಕೆಯು ಆಶೀರ್ವಾದವನ್ನು ತರುತ್ತದೆ!

  Posted on   by   3 comments

faithmanprayingchurchjpg

“ನಂಬಿಗಸ್ತನು ಆಶೀರ್ವಾದನಾಗುವನು” (ಜ್ಞಾನೋ. 28:20).

ಸದ್ಗುಣಗಳಲ್ಲಿ ಒಂದಾದ ನಂಬಿಕೆ ದೇವರು ಬಹುವಾಗಿ ಪ್ರೀತಿಸುತ್ತಾನೆ “ದೇವರು ನಂಬಿಗಸ್ತನು ನಿಮ್ಮನ್ನು ಕರೆದವನು ಆತನೇ” (1 ಕೊರಿ. 1:9). ಯೇಸು, ಪರಲೋಕದ ತನ್ನ ತಂದೆಗೆ ತನ್ನ ಜೀವಮಾನವೆಲ್ಲಾ ನಂಬಿಗಸ್ತರಾಗಿ ಜೀವಿಸಿದನು. ಆದ್ದರಿಂದ, ನಿಜಕ್ಕೂ ಆತನು ನಮ್ಮಿಂದಲೂ ನಂಬಿಕೆಯ ಜೀವನವನ್ನು ಅಪೇಕ್ಷಿಸುತ್ತಾನೆ. ನಾವು ನಂಬಿಕೆ ಜೀವನ ನಡೆಸಲು ಆತನ ಸಹಾಯಕ್ಕಾಗಿ ಆತನಲ್ಲಿಗೆ ಹೋದಾಗ, ಆತನು ತಕ್ಷಣವೇ ಸಹಾಯಕ್ಕೆ ಬರುವುದಲ್ಲದೆ ಆತನು ನಮ್ಮನ್ನು ಆಶೀರ್ವಾದಿಸುತ್ತಾನೆ. ನಾವು ಆತನನ್ನು ಹುಡುಕುವಲ್ಲಿ ನಂಬಿಕೆಯಲ್ಲಾಗಲೀ, ಆರಾಧಿಸುವುದರಲ್ಲಿಯಾಗಲಿ, ಪ್ರೀತಿ ಮಾಡುವುದರಲ್ಲಿಯಾಗಲೀ, ನಾವು ನಮ್ಮ ದಿನ ನಿತ್ಯದ ನಡುವಳಿಕೆಯಲ್ಲಾಗಲೀ, ಸತ್ಯವೇದದಲ್ಲಿ ವಾಗ್ದಾನ ಮಾಡಿದ ಪ್ರಕಾರ ಆತನು ನಮ್ಮನ್ನು ನಿಜಕ್ಕೂ ಆಶೀರ್ವಾದಿಸುತ್ತಾನೆ. ಆದ್ದರಿಂದ, ನಮ್ಮ ನಿರೀಕ್ಷೆಯ ಅರಿಕೆಯನ್ನು ಗಟ್ಟಿಯಾಗಿ ಹೊಯ್ದಾಡದೆ ವಾಗ್ದಾನ ಮಾಡಿದಾತನು ನಂಬಿಗಸ್ತನು ಎಂದು ಹಿಡಿದಿಟ್ಟಿಕೊಳ್ಳಬೇಕು (ಇಬ್ರಿ. 10:23).

ಒಂದು ಕಛೇರಿಯಲ್ಲಿ, ಒಬ್ಬ ನೌಕರನನ್ನು ಕೆಟ್ಟನಡತೆಯ ಆರೋಪ ಹೊರಿಸಿ ಒಡನೆಯೇ ಯಾವ ಸರಿಯಾದ ವಿಚಾರಣೆಯಿಲ್ಲದೆ ಕೆಲಸದಿಂದ ತೆಗೆದುಬಿಟ್ಟರು. ಆದ್ದರಿಂದ, ಅವನು ದಿನದಿಂದ ದಿನಕ್ಕೆ ಹೇಳಲಸಾಧ್ಯವಾದ ನೋವು ಯಾತನೆಯಿಂದ ಬಹಳವಾಗಿ ಭಾದಿತನಾದನು. ಆದರೂ, ಅವನು ದೇವರ ವಿರುದ್ಧವಾಗಿ ಗುಣಗುಟ್ಟಲಿಲ್ಲ. ಬದಲಾಗಿ ತನ್ನ ಪ್ರಾರ್ಥನೆಯ, ಮೂಲಕ ಅವನು ದೇವರ ಹತ್ತಿರ ಹತ್ತಿರಕ್ಕೆ ಸಮೀಪಿಸಿದನು. ಇಂಥಹ ಎಲ್ಲಾ ತೊಂದರೆ, ಬಾಧೆಗಳ ಮಧ್ಯೆ ಆತನು ದೇವರಿಗೆ ನಂಬಿಕೆಯುಳ್ಳವನಾಗಿದ್ದು ದೈವತ್ವದ ಜೀವನ ನಡೆಸುತ್ತಿದ್ದನು. ಜನರು ಅವನ ಬಗ್ಗೆ ಕೆಟ್ಟದ್ದನ್ನು ಮಾತನಾಡಲು ಆರಂಭಿಸಿದ್ದರೂ, ಅವನು ದೃತಿಗೆಡದೆ, ಬಿಡುಗಡೆಗಾಗಿ ದೇವರನ್ನೇ ನೋಡುತ್ತಿದ್ದನು. ಆತನು ಎಲ್ಲಾ ಅವಮಾನವನ್ನು ಧೈರ್ಯವಾಗಿ ಎದುರಿಸಿ ಸಮಾಧಾನದಿಂದ ಇದ್ದನು. ಕೆಲವು ವರ್ಷಗಳಾದ ಮೇಲೆ, ಆತನ ಧಣಿಗೆ ಅವನು ಯಾವ ತಪ್ಪನ್ನು ಮಾಡದ ನಿಷ್ಕಳಂಕನೆಚಿದು ಗೊತ್ತಾಯಿತು. ಆದ್ದರಿಂದ, ಇವನು ಅವನಿಗೆ ಒದಗಿದ್ದ ಎಲ್ಲಾ ಅನ್ಯಾಯದ ರೀತಿಗಳಿಗೆ ಕ್ಷಮಾಪಣೆ ಯಾಚಿಸಿ ಅವನಿಗೆ ಕೆಲಸವನ್ನು ಬಡ್ತಿಯೊಂದಿಗೆ ಮತ್ತು ಬಾಕಿ ಸಂಬಳದೊಡನೆ ಹಿಂತಿರುಗಿ ಕೊಡಲಾಯಿತು.

ಹೌದು! ನೀನು ನಿನ್ನ ಜೀವನದಲ್ಲಿ ನಂಬಿಕೆಯಿಂದಿದ್ದರೆ ದೇವರೂ ನಿನ್ನನ್ನು ಸಹ ಗೌರವಿಸುತ್ತಾನೆ. ಎಲ್ಲಾ ಪರಿಸ್ಥಿತಿಯಲ್ಲಿ ಎಲ್ಲಾ ಸಮಯದಲ್ಲಿ ದೃತಿಗೆಡದೆ ನಂಬಿಕೆಯಿಂದಿರು. ದೇವರು ನಿಜಕ್ಕೂ ನಿನ್ನನ್ನು ಹೇರಳವಾಗಿ ಆಶೀರ್ವದಿಸುತ್ತಾನೆ (ಇಬ್ರಿ. 3:5; ವಿಮೋ. 11:3). ಸತ್ಯವೇದದಲ್ಲಿ ದಾನಿಯೇಲನ ಬಗ್ಗೆ ಹೀಗೆ ಓದುತ್ತೇವೆ. ಆದರೆ ತಪ್ಪು ಹೊರಸುವ ಯಾವ ಸಂದರ್ಭವನ್ನು ಯಾವ ತಪ್ಪನ್ನು ಕಾಣಲಾರದೆ ಹೋದರು. ಅವನು ನಂಬಿಗಸ್ತನೇ ಆಗಿದ್ದನು (ದಾನಿ. 6:4). ನಿನ್ನ ಎಲ್ಲಾ ಕೆಲಸದಲ್ಲಿ ನೀನು ನಂಬಿಗಸ್ತನೇ ಆಗಿರು, ಆಗ ಯಾರೂ ನಿನ್ನ ಚಾರಿತ್ರ್ಯದ ಬಗ್ಗೆ ತಪ್ಪು ಹೊರಸುವುದಿಲ್ಲ. ನಿಜಕ್ಕೂ ಶುಭವೂ ಕೃಪೆಯೂ ನಿನ್ನನ್ನು ಹಿಂಬಾಲಿಸುವವು.

ಪ್ರಾರ್ಥನೆ : ಪ್ರಿಯ ತಂದೆಯೇ, ನಾವು ನಂಬಿಗಸ್ತರಾಗಿರುವಾಗಲೂ ನಾವು ಅನೇಕ ಕಷ್ಟಗಳು ಬಾಧೆಗಳನ್ನು ಈ ಪ್ರಪಂಚದಲ್ಲಿ ಎದುರಿಸುತ್ತೇವೆ. ನಮ್ಮ ಶೋಧನೆಗಳು ಎಣಿಸಲಿಕ್ಕಾಗದು. ಈ ದಿನ ನನ್ನ ಜೀವನವನ್ನು ನಿನಗೆ ಸರ್ಮಪಿಸುತ್ತೇನೆ. ಕರ್ತನು ಬೇರೆಯವರು ನನ್ನ ಸತ್ಯ ಪ್ರೀತಿಯನ್ನು ನಂಬಿಕೆಯ ಜೀವನವನ್ನು ಅರ್ಥಮಾಡಿಕೊಳ್ಳುವಂತೆ ಬೇರೆಯವರಿಗೆ ಸಹಾಯ ಮಾಡು. ತಂದೆಯೇ, ಈಗಲೇ ನನಗೆ ಸಹಾಯಮಾಡು. ನೀನು ನನ್ನನ್ನು ಆಶೀರ್ವದಿಸುವೆ ಯಾಕಂದರೆ, ನೀನು ನನ್ನ ಪ್ರಾರ್ಥನೆಗಳಿಗೆ ಉತ್ತರವನ್ನು ಕೊಡುತ್ತೀಯ. ಯೇಸುವಿನ ಅಮೂಲ್ಯ ನಾಮದಲ್ಲಿ ನಾನು ಪ್ರಾರ್ಥಿಸುವೆ, ಆಮೆನ್.

MANNA MINISTRIES

Mannaministries.in@gmail.com

*For Daily Devotion Contact: +91 9964247889*

3 comments

  1. raju says:

    I love jesus

  2. Kavya says:

    I beleave in jesus

  3. John says:

    I beleave and I love in jesus

Comments

Your email address will not be published. Required fields are marked *

WhatsApp us