ನಂಬಿಗಸ್ತ ನಾಯಿ – ಆತ್ಮೀಕ ಕಥೆ – 4

  Posted on   by   No comments

ಸ್ವಿಜರ್ ಲ್ಯಾಂಡಿನಲ್ಲಿ ಒಬ್ಬ ಶ್ರೀಮಂತನಿದ್ದನು. ಅವರಿಗೆ ಒಂದು ನಂಬಿಗಸ್ತ ನಾಯಿ ಇತ್ತು. ಈ ನಾಯಿ ತನ್ನ ಯಜಮಾನನಿಗೂ ಇತರರಿಗೂ ನಂಬಿಗಸ್ತ ಸೇವೆ ಮಾಡಿ ಅಪಾಯಗಳಿಂದಲೂ ಕಾಪಾಡುತ್ತಿತ್ತು.

ಒಂದು ದಿನ ದೊಡ್ಡ ಕೆರೆಯಲ್ಲಿ ಭಯಂಕರವಾದ ಬಿರುಗಾಳಿ ಬೀಸಿತು. ತೆರೆಗಳು ರಭಸವಾಗಿ ಎದ್ದವು. ಆಗ ದಡಕ್ಕೆ ಸ್ವಲ್ಪ ದೂರದಲ್ಲಿ ಒಂದು ದೋಣಿಯು ಬಹು ಅಪಾಯದ ನೆಲೆಯಲ್ಲಿ ಕಾಣಿಸಿತು. ಆ ದೋಣಿಯು ಸ್ವಲ್ಪ  ಸಮಯದಲ್ಲಿ ಮುಳುಗುವ ಹಾಗಿತ್ತು. ಆ ದಾರಿಯಲ್ಲಿ ಹೋಗುತ್ತಿದ್ದ ನಾಯಿ ಇದನ್ನು ನೋಡಿತು. ದೋಣಿ ಕಡೆ ನೋಡುತ್ತಾ ಬಲವಾಗಿ ಬೊಗಳಲಾರಂಭಿಸಿತು. ಆಗ ನಾಯಿಯು ಯಜಮಾನನು ನಾಯಿ ಬೊಗಳುವ ಕಾರಣವೇನೆಂದು ತಿಳಿಯಲು ಆ ಕಡೆ ಹೋದನು. ದೋಣಿ ಅಪಾಯ ಹಂತದಲ್ಲಿರುವದನ್ನು ಆತನು ಅರ್ಥ ಮಾಡಿಕೊಂಡನು.

ಕೂಡಲೇ ಆತನು ಸಮೀಪದಲ್ಲಿದ್ದ ಮನೆಗೆ ಓಡಿ ಹೋಗಿ ಒಂದು ದೊಡ್ಡ ಹಗ್ಗವನ್ನು ತೆಗೆದುಕೊಂಡು ಬಂದನು. ನಾಯಿಯು ಬಾಯಲ್ಲಿ ಹಗ್ಗವನ್ನು ಕೊಟ್ಟು ಕೆರೆಯಲ್ಲಿ ನಾಯಿಯನ್ನು ಇಳಿಸಿದನು. ಆ ಹಗ್ಗವನ್ನು ಕೆಲವು ನೀರಲ್ಲಿ ತೇಲಾಡುವ ಟಯರುಗಳು ಕಟ್ಟಲ್ಪಟ್ಟಿದ್ದವು. ನಾಯಿ ದೋಣಿಯನ್ನು ಸಮೀಪಿಸಿದಾಗ ,ದೋಣಿಯಲ್ಲಿದ್ದರವರು ನೀರಲ್ಲಿ ಜಿಗಿದು ನಾಯಿ ಎಳೆದು ತಂದ ತೇಲಾಡುವ ಟಯರನ್ನು ಹಿಡಿದುಕೊಂಡರು. ಕೊನೆಗೆ ನಾಯಿಯ ಸಹಾಯದಿಂದ ಸುರಕ್ಷಿತವಾಗಿ ದಡ ಸೇರಿದರು.

ಈ ನಾಯಿಯ ಸಹಾಯವಿಲ್ಲದೆ ಅವರು ಸತ್ತು ಹೋಗುತ್ತಿದ್ದರು. ನಂಬಿಗಸ್ತ ನಾಯಿಯ ಸಾಹಸವನ್ನು ಜ್ಞಾಪಕಮಾಡಿಕೊಳ್ಳುವಂತೆ ಸ್ವಿಜರ್ ಲ್ಯಾಂಡಿನಲ್ಲಿ ಒಂದು ದೊಡ್ಡ ಪ್ರತಿಮೆ ಮಾಡಿಟ್ಟುಕೊಂಡಿದ್ದಾರೆ.

ಅನ್ವಯ :- ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗುವನು. (ಲೂಕ 16:10)

Categories: Spiritual Stories

Comments

Your email address will not be published. Required fields are marked *

× WhatsApp us