ನಗ್ಮಾ – ಬಾಲಿವುಡ್ ನಟಿ

  Posted on   by   13 comments

” ಈ ವೃತ್ತಿ ಜೀವನದಲ್ಲಿ 20 ವರ್ಷಗಳ ನಂತರ, ನಾನು ಜೀವಿತದ ನಿಷ್ಪಲತೆಯನ್ನು ಅನುಭವಿಸಲು ಪ್ರಾರಂಭಿಸಿದೆನು “.

ನಾನು ಸಿನಿಮಾ ತಾರೆಯಾದೆ, ನಾನು ಹೋದ ಕಡೆಯಲ್ಲೆಲ್ಲಾ ಜನರು ನನ್ನನ್ನು ಗುರುತಿಸುತ್ತಿದ್ದರು ಮತ್ತು ವಿಶೇಷ ಸತ್ಕಾರ ಮಾಡುತ್ತಿದ್ದರು ಮತ್ತು ಜೀವಿತ ಸಾಮಾನ್ಯವಾಗಿ ಸುಂದರವಾಗಿತ್ತು. ನಾನು ಇನ್ನೂ ಹೆಚ್ಚಾಗಿ ಏನು ಕೇಳಬೇಕಾಗಿತ್ತು ? ನನ್ನಲ್ಲಿ ಸುಮಾರು 100 ಕ್ಕೂ ಅಧಿಕವಾದ ಚಲನಚಿತ್ರಗಳಿದ್ದವು. ಚಲನಚಿತ್ರ ರಂಗದ ಸೂಪರ್ ಸ್ಟಾರ್ ಗಳು ಮತ್ತು ಉತ್ತಮ ನಿರ್ದೇಶಕ ಜೊತೆ ಕೆಲಸಮಾಡಿದ್ದೇನೆ. ಆದರೆ, ನನ್ನ 20 ವರ್ಷಗಳ ವೃತ್ತಿ ಜೀವನದಲ್ಲಿ, ಜೀವಿತದ ನಿಷ್ಪಲತೆಯನ್ನು ಅನುಭವಿಸಲು ಪ್ರಾರಂಭಿಸಿದೆನು. ನಾನು ಪ್ರಾಖ್ಯಾತಿಯಾಗಿದ್ದನು, ಆದರೆ ಜನರನ್ನು ಮನರಂಜಿಸುವಂತದ್ದು ಮಾತ್ರ ನನ್ನ ಜೀವಿತದ ಉದ್ದೇಶವ ಎಂಬ ಪ್ರಶ್ನೆಯನ್ನು ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದೆನು ? ದೇವರು, ನನಗೆ ಮಾಡಬಾರದೆಂಬುದಾಗಿ ಬಯಸುವುದು ಇದೇನಾ ? ಎಲ್ಲಿಗೆ ಸಾಗುತ್ತಿದ್ದೇನೆ ? 

       ನಾನು ಸಂಪೂರ್ಣವಾಗಿ ಅದ್ವಿತೀಯ ಪಾಲನೆ ಹೊಂದಿದೆನು. ನನ್ನ ತಾಯಿ ಮುಸ್ಲಿ, ನನ್ನ ತಂದೆ ಹಿಂದು. ನಾನು ಕ್ಯಾಥೊಲಿಕ್ ಸ್ಕೂಲ್ ನಲ್ಲಿ ಓದಿದೆ ! ನನ್ನ ತಂದೆ ತಾಯಂದಿರು ನನ್ನನ್ನು ತುಂಬಾ ಧಾರಾಳವಾಗಿ ಬೆಳೆಸಿದರು ಮತ್ತು ನಾನು ಉತ್ಸಾಹ ಭರಿತ ಓದುಗಳಾಗಿದ್ದೆನು. ಇಂತಹ ವೈವಿಧ್ಯಮಯ ಪಾಲನೆಯಿಂದಾಗಿ, ಗೀತಾ, ಕುರಾನ್ ಮುಂತಾದ ಪುಸ್ತಕಗಳನ್ನು ಓದಲು ಅವಕಾಶ ಸಿಕ್ಕಿತು ಮತ್ತು ಶಾಲೆಯ ಪ್ರಭಾವದಿಂದಾಗಿ, ನಾನು ಸತ್ಯವೇದವನ್ನು ಓದುತ್ತಿದ್ದೆನು. ನಾನು ಓದುತ್ತಿದ್ದಂತಹ ಎಲ್ಲಾ ಪುಸ್ತಕಗಳಲ್ಲಿ, ಕೆಲವು ಕಾರಣಕ್ಕಾಗಿ, ಸತ್ಯವೇದವು,ನನ್ನ ವೈಯಕ್ತಿಕವಾಗಿ  ” ಅತ್ಯಂತ ಹೆಚ್ಚಿನದು ” ಆಗಿತ್ತು. ಇಂತಹ ಪ್ರಶ್ನೆಗಳನ್ನು ನನ್ನಲ್ಲಿ ನಾನೇ ಕೇಳಿಕೊಳ್ಳಲು ಪ್ರಾರಂಭಿಸಿದಾಗ, ನಾನು ಸ್ವಯಂಚಾಲಿತವಾಗಿ  ” ಅತ್ಯಂತ ಹೆಚ್ಚಿನ ಪ್ರಿಯವಾದ ” ಸತ್ಯವೇದದ ಕಡೆ ಒಲವನ್ನು ತೋರಿಸಲು ಪ್ರಾರಂಭಿಸಿದೆನು. ಜೀವಿತದಲ್ಲಿ ಪ್ರತಿಯೊಂದು ಕೈಪಿಡಿಯನ್ನು ಹೊಂದಿದೆ,ನನ್ನ ಜೀವಿತಕ್ಕೆ ಸತ್ಯವೇದವು ” ಕೈಪಿಡಿಯಾಗಿ ” ಇದೆ ಎಂಬುದಾಗಿ ನಾನು ಭಾವಿಸುತ್ತೇನೆ. 

        ನಾನು ಯಾವುದಾದರೂ ಸವಾಲುಗಳನ್ನು ಮತ್ತು ಜೀವಿತದ ತೊಂದರೆಗಳನ್ನು ಎದುರಿಸಬೇಕಾದರೆ ನಾನು ತಿರುಗಿಸುತ್ತಿದ್ದತಂಹ ಪುಸ್ತಕ ಸತ್ಯವೇದವಾಗಿತ್ತು. ನನ್ನ ಮೇಲೆ ಮತ್ತೇನಲ್ಲದೇ, ಬಹಳವಾಗಿ ಪರಿಣಾಮ ಬೀರಿದ ಪುಸ್ತಕ ಇದಾಗಿದೆ. ಸತ್ಯವೇದವು ನನ್ನ ಸ್ಪೂರ್ತಿಯಾಗಿದೆ ಮತ್ತು ನನ್ನ ಕೆಳ ಸಮಯಗಳಲ್ಲಿ ನನಗೆ ಬಹಳ ಪ್ರೋತ್ಸಾಹವನ್ನು ಕೊಟ್ಟಿದೆ.ನಾವು ದೇವರನ್ನು ಆರಸಿಕೊಳ್ಳಲಿಲ್ಲ, ದೇವರೇ ನಮ್ಮನ್ನು ಆರಿಸಿಕೊಂಡನು ಎಂಬ ಸಂಗತಿ, ನಾನು ಎಷ್ಟೊಂದು ಸತ್ಯವಾಗಿ ಆಶೀರ್ವಾದಿಸಲ್ಪಟ್ಟಿದ್ದೇನೆ ಮತ್ತು ಅರಿವಾಗುತ್ತದೆ. ಯೇಸುವಿನ ಗುಣಸ್ವರೂಪಗಳು ಅತ್ಯಂತ ಆಸಕ್ತಿಯಾಗಿರುವುದನ್ನು ಮತ್ತು ಒಲವಾಗಿರುವುದನ್ನು ನಾನು ಗುರುತಿಸಿದ್ದೇನೆ. 

       ಆತನು ಒಬ್ಬ ” ಧಾರ್ಮಿಕ ” ವ್ಯಕ್ತಿಯಲ್ಲ. ಒಬ್ಬರನೊಬ್ಬರು ಪ್ರೀತಿಸಿರಿ, ಹಗೆತನವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಡಿರಿ. ಅಥವಾ ಜನರ ಕಡೆಗೆ ದ್ವೇಷ ಇಟ್ಟು ಕೊಳ್ಳಬೇಡಿರಿ ಎಂಬುದಾಗಿ ಆತನು ಪ್ರೀತಿಯ ಸಂದೇಶವನ್ನು ನೀಡಿದ್ದಾನೆ. ಪ್ರೀತಿಯ ಸಂದೇಶವು ಇದುವರೆಗೂ ತಪ್ಪಾಗಿಲ್ಲಾ ಎಂಬುದಾಗಿ ನಾನು ಸತ್ಯವಾಗಿ ನಂಬುತ್ತೇನೆ. ಪ್ರತಿಯೊಬ್ಬರು, ಹುಡುಕುವಂತಹ ಅದರಂತಿರಲು ಬಯಸುವ ಮತ್ತು ಅನುಕರಣೆ ವಿಗ್ರಹಗಳನ್ನು ಹೊಂದಿದ್ದಾರೆ. ನಾನು ಯೇಸುವಿನಂತೆ ಇರಬೇಕು ಎಂಬುದಾಗಿ ಬಯಸುತ್ತೇನೆ. ನಾನು ಆತನನ್ನೇ ಹುಡುಕುತ್ತೇನೆ, ಎದುರು ನೋಡುತ್ತೇನೆ. ನಾನು ಆತನಿಗೆ ನನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದೇನೆ. ಯಾಕೆಂದರೆ ಆತನು ನನಗಾಗಿ ಒಳ್ಳೇಯ ಯೋಜನೆಯನ್ನು ಹೊಂದಿದ್ದಾನೆ ಎಂಬುದಾಗಿ ನನಗೆ ಗೊತ್ತುಂಟು. ದೇವರು ಆಕಾಶದಲ್ಲಿ ಹಾರುವ ಪಕ್ಷಿಗಳಿಗೆ ಆಹಾರ ನೀಡುತ್ತಾನೆ ಮತ್ತು ಭೂಮಿಯ ಮೇಲಿನ ಹುಲ್ಲನ್ನು ಕಾಳಜಿಯಿಂದ ನೋಡುತ್ತಾನೆ. ಆತನ ಮಕ್ಕಳಾದ ನಮಗೆ ಇನ್ನೆಷ್ಟು ಅಧಿಕವಾಗಿ ಕಾಳಜಿ ವಹಿಸುವನಲ್ಲವೆ. 

       ದೇವರ ಸಮಯಗಳನ್ನು ನಾನು ದೃಢವಾಗಿ ನಂಬುತ್ತೇನೆ. ವಿಷಯಗಳು ಬೇಗನೆ ಜರುಗುಬೇಕೆಂದು ನಾವು ಅಪೇಕ್ಷಿಸುತ್ತೇವೆ. ಮತ್ತು ಜೀವಿತದಲ್ಲಿನ ವಿಷಯಗಳ ಬಗ್ಗೆ ಆತಂಕಿತರಾಗಿರುತ್ತೇವೆ.ಆದರೆ, ದೇವರು ಎಲ್ಲದಕ್ಕೂ ಸಮಯ ಇಟ್ಟಿದ್ದಾನೆ ಮತ್ತು ಆತನ ಸಮಯದಲ್ಲಿ ಸಂಗತಿಗಳು ಜರುಗಿದರೆ ಅವು ಯಾವಾಗಲೂ ಪರಿಪೂರ್ಣವಾಗಿರುತ್ತವೆ. ಆತನು ಯಾವಾಗಲೂ ನಮ್ಮ ಜೊತೆ ಇದ್ದಾನೆ ಮತ್ತು ನಮ್ಮನ್ನು ಎಂದಿಗೂ ತೊರೆಯುವುದಿಲ್ಲ ಎಂಬ ನಂಬಿಕೆ ಮತ್ತು ನಿರೀಕ್ಷೆಯೊಡನೆ ,ಆತನ ಸಮಯಕ್ಕಾಗಿ ಕಾದುಕೊಂಡಿರಬೇಕು. ಆತನ ಪ್ರಸನ್ನತೆಯು ಯಾವಾಗಲೂ ನಮ್ಮೊಡನೆ ಇದ್ದರೆ – ನಾವು ಏಕೆ ಭಯಪಡಬೇಕು. ಮತ್ತು ಯಾವುದಾದರೊಂದರಲ್ಲಿ ಏಕೆ ಆತಂಕಿತರಾಗಿಬೇಕು ? ಸಮಾಜಕ್ಕಾಗಿ ಸ್ವಲ್ಪವಾದರೂ ಕೆಲಸ ಮಾಡಬೇಕೆಂಬುದಾಗಿ, ರಾಜಕೀಯ ಕಣಕ್ಕೆ ನಾನು ಪ್ರವೇಶಿಸಿದೆನು. ನನ್ನ ಹೃದಯ ಜನರ ಕಡೆಗೆ ಒಲವು ತೋರುತ್ತದೆ ಮತ್ತು ಅನೇಕ ಸ್ವಯಂ ಸೇವಾ ಸಂಸ್ಥೆಗಳ ಜೊತೆ ಸಾಮಾಜಿಕ ಸೇವೆಗಾಗಿ ಪಾಲುಗಾರಳಾಗೀದ್ದೇನೆ. ಸವಲತ್ತುರಹಿತ ಸಮಾಜದ ಕಡೆಗೆ, ನಾವೆಲ್ಲರೂ ನೈತಿಕ ಬಾಧ್ಯತೆ ಹೊಂದಿದ್ದೇವೆ ಎಂಬುದಾಗಿ ನಾನು ನಂಬುತ್ತೇನೆ  ಮತ್ತು ಯಾವುದೇ ಮಾರ್ಗದಲ್ಲಾದರು ನಾವು ಈ ಬಾಧ್ಯತೆಯನ್ನು ನೆರವೇರಿಸಬೇಕು.

 ದೇವರು ನನ್ನ ಪ್ರಖ್ಯಾತಿಯನ್ನು ಉಪಯೋಗಿಸಿಕೊಳ್ಳಲು ಶಕ್ತಗೊಳಿಸಿದ್ದಾ ಮತ್ತು ಇಂತಹ ಉದಾತ್ತ ಕಾರಣಗಳಿಗಾಗಿ ತಾರಾಪಟ್ಟವನ್ನು ನೀಡಿದ್ದಾರೆ. ಮತ್ತು ಇಂತಹ ಜನರಿಗೆ ಸೇವೆ ಸಲ್ಲಿಸುವುದು ಮತ್ತು ಸಂಧಿಸುವಿಕೆಗೆ ರಾಜಕೀಯ ಒಂದು ಉತ್ತಮ ವೇದಿಕೆ ಎಂಬುದಾಗಿ ನಾನು ಅಭಿಪ್ರಾಯಪಡುತ್ತೇನೆ. ಯೇಸುವನ್ನು ನನ್ನ ಸ್ವಂತ ರಕ್ಷಕನಾಗಿ ಮತ್ತು ನನ್ನ ಕರ್ತನಾಗಿ ಅಂಗೀಕರಿಸಿಕೊಂಡ ನಂತರ, ನನ್ನ ಜೀವಿತದಲ್ಲಿ ಪ್ರಚಂಡ ಬದಲಾವಣೆಯಾಗಿದೆ. ನಾನು ಅತಿಬೇಗನೆ ಕೋಪಗೊಳ್ಳುವ ಮತ್ತು ನನ್ನ ಭಾವನೆಗಳು ಮತ್ತು ಅಭಿಪ್ರಾಯಗಳನ್ನು ಮಲುಚ್ಚಿಟ್ಟುಕೊಳ್ಳದಂತಹ ವ್ಯಕ್ತಿ ಯಾಗಿದ್ದೆ ಆದರೆ ಇಂದು, ನಾನು ದೇವರ ಶಾಂತಿಯಿಂದ ತುಂಬಲ್ಪಟ್ಟಿದ್ದೇನೆ. 

       ನನ್ನ ಜೀವಿತದಲ್ಲಿ ಖಾಲಿಯಾಗಿದ್ದಿದ್ದು ತುಂಬಿಸಲ್ಪಟ್ಟಿತು. ಇದು ಸಂಪೂರ್ಣ ಮತ್ತು ಪರಿಪೂರ್ಣವಾಗಿ ಮಾಡಲ್ಪಟ್ಟಿತ್ತು. ನನ್ನ ಕೀರ್ತಿ ಮತ್ತು ಯಶಸ್ಸಿನ ಶಿಖರದಲ್ಲಿ, ಇಂತಹ ಆಳವಾದ ಶಾಶ್ವತವಾದ ಶಾಂತಿ ಮತ್ತು ನೆರವೇರಿಕೆ ಅದು ಇಂದು ಇರುವ ಪ್ರಕಾರವೇ, ನನ್ನ ಭಾಗವಾಗಿತ್ತು ನನ್ನ ಪ್ರಕಾರವಾಗಿ, ದೇವರು  ” ವಸ್ತುಗಳಲ್ಲಿ ” ಕಂಡು ಬಂದಿಲ್ಲ  ಅಥವಾ ಸಾಧನೆಗಳು ಮತ್ತು ಯಶಸ್ಸಿನ ಹಿಂದೆ ಓಡುವಂತದ್ದು ಇದರಲ್ಲಿಯು ಕಂಡು ಬಂದಿಲ್ಲ. ಆತನು ನಮ್ಮ ಜೊತೆಯಲ್ಲಿದ್ದಾನೆ. ನಮ್ಮ ಆಪ್ತ ಸ್ನೇಹಿತರಿಗಿಂತಲೂ ಆತನು ಅತೀ ಆಪ್ತನಾಗಿದ್ದಾನೆ. ನಾನು ಮಾಡಿದ್ದೇನೆ – ನಾನು ಆತನಿಗಾಗಿ ಹುಡುಕಾಡಿದ್ದೇನೆ ಮತ್ತು ನಾನು ಆತನನ್ನು ಕಂಡುಕೊಂಡಿದ್ದೇನೆ. 

 ಆತನಲ್ಲಿ ನನ್ನ ಶಾಂತಿಯನ್ನು ಕಂಡುಕೊಂಡಿದ್ದೇನೆ, ನೀವು ? 

13 comments

 1. shivaprakash says:

  Praise the lord
  God is great

 2. shivaprakash says:

  Praise the lord
  God is great
  God is every where

 3. Rev.Murphy.W.Soans says:

  Praise the Lord.

 4. pastor rajkumar says:

  God. is love

 5. Rini says:

  Yes u bilve in fast.than getting 100% blasing

 6. Likes.T says:

  Praise the Lord
  Rejoice in the lord

 7. Lokesh.T says:

  Praise the Lord
  Rejoice in the Lord

 8. MURUGA says:

  praise the lord JESUS. god is good he loves every one

 9. James varghese says:

  Praise God

 10. Pastor Sumithra Mundrikeri says:

  Praise the Lord Jesus with you yesterday today and forever

 11. Swetha says:

  Praise the lord

 12. Padma says:

  Praise the,,& lord he is always with us!! AMEN.

Comments

Your email address will not be published. Required fields are marked *

× WhatsApp us