ನಮ್ಮ ಒಳ್ಳೆಯ ದೇವರು ಮೇಲನ್ನು ಮಾತ್ರವೇ ಮಾಡುತ್ತಾನೆ !

  Posted on   by   No comments

7EF5243744C143FE98D711C3351CF5C7.ashx_

“ನೀನು ಒಳ್ಳೆಯವನೂ, ಒಳ್ಳೆಯದನ್ನು ಮಾಡುವವನೂ ಆಗಿದ್ದೀ; ನಿನ್ನ ನಿಬಂಧನೆಗಳನ್ನು ನನಗೆ ಬೋಧಿಸು”. (ಕೀರ್ತ. 119:68).

ನಮ್ಮ ದೇವರು ಪರಿಶುದ್ಧನು. ಆತನು ನೀತಿವಂತನಾದ ದೇವರು. ಆತನು ಎಲ್ಲಾ ಸಮಯಗಳಲ್ಲಿ ಮೇಲನ್ನು ಮಾಡುವ ದೇವರು. ಆತನು ನಮಗೆ ಪ್ರೀತಿಯ ಕರ್ತನು ಆತನು ನಮಗೆ ಮೇಲು ಮಾತ್ರವೇ ಮಾಡುತ್ತಾನೆ.

ದೇವರ ವಾಕ್ಯದಲ್ಲಿ ಎಷ್ಟೋ ವಿವರವಾಗಿ ಹೇಳಲಾಗುವ ವಿಷಯವೇನೆಂದರೆ, “ಯೆಹೋವನು ಸರ್ವೋತ್ತಮನೆಂದು ಅನುಭವದಿಂದ ತಿಳಿದುಕೊಳ್ಳಿರಿ” (ಕೀರ್ತ. 34:8). ಈ ಮಾತಿನಲ್ಲಿರುವ ಆಳವಾದ ಅರ್ಥವನ್ನು ನಾವು ತಿಳಿದುಕೊಳ್ಳಬೇಕು. ಅದೇ ರೀತಿ ನಮ್ಮ ಜೀವನಗಳಲ್ಲಿ ದೇವರ ಒಳ್ಳೇತನವನ್ನು ಅನುಭವಿಸಬೇಕು. ಆತನ ಮಾರ್ಗಗಳಲ್ಲಿ ನಡೆದುಕೊಂಡರೆನೇ ಇದು ನಮಗೆ ಸಾಧ್ಯವಾಗುತ್ತದೆ. ಆಗ ಆತನು ನಮಗೆ ದಯಪಾಲಿಸಿದ ಎಲ್ಲಾ ಆಶೀರ್ವಾದಗಳನ್ನು ನಾವು ಸ್ವತಂತ್ರಿಸಿಕೊಳ್ಳುತ್ತೇವೆ.

ಒಂದು ಕುಟುಂಬವಿತ್ತು. ಆ ಕುಟುಂಬದ ಹಿರಿಯನು ಕುಡುಕನಾಗಿದ್ದನು. ಅಷ್ಟೇ ಅಲ್ಲ ಎಲ್ಲರೊಂದಿಗೆ ಜಗಳವಾಡುತ್ತಿದ್ದನು. ಈ ಕಾರಣದಿಂದ ಆ ಕುಟುಂಬದಲ್ಲಿ ಶಾಂತಿ ಸಮಾಧಾನವಿರಲಿಲ್ಲ. ಆದರೆ ಅದ್ಭುತವಾದ ಕಾರ್ಯ ಯಾವುದೆಂದರೆ, ಆತನ ಪತ್ನಿಗೆ ದೇವರ ಒಳ್ಳೆಯತನವನ್ನು ಕುರಿತು ಗೊತ್ತಿತ್ತು. ಆಕೆ ಒಬ್ಬ ಪ್ರಾರ್ಥನಾ ವೀರಳು. ಉಪವಾಸದಿಂದ ಎಡಬಿಡದೆ ಪ್ರಾರ್ಥನೆ ಮಾಡುತ್ತಿದ್ದಳು. ಆಕೆ ಮಾಡುತ್ತಿದ್ದ ಎಡಬಿಡದ ಪ್ರಾರ್ಥನೆಗಳನ್ನು ನಮ್ಮ ಕರ್ತನು ನೋಡಿ ಆಕೆಯ ಪತಿಯು ಕಠಿಣವಾದ ಹೃದಯವನ್ನು ಮಾರ್ಪಡಿಸಿದನು. ಆತನು ತನ್ನ ದುಷ್ಟ ಮಾರ್ಗಗಳನ್ನು ಬಿಟ್ಟು ಒಳ್ಳೆಯ ವ್ಯಕ್ತಿಯಾದನು. ಕುಟುಂಬ ಸಮೇತವಾಗಿ ಅವರೆಲ್ಲಾ ದೇವರಿಗೆ ಪ್ರಾರ್ಥನೆ ಮಾಡಲು ಪ್ರಾರಂಭಿಸಿದ ಕೂಡಲೆ, ಆ ಕುಟುಂಬದಲ್ಲಿ ಶಾಂತಿ ನೆಲೆಯಾಯಿತು. ಅವರು ಹಿಂದೆ ಕಳೆದುಕೊಂಡ ಆಶೀರ್ವಾದಗಳನ್ನೆಲ್ಲಾ ದೇವರು ಅವರಿಗೆ ದಯಪಾಲಿಸಿದನು. ಈಗ ಆ ಕುಟುಂಬದಲ್ಲಿ ಸಂತೋಷ ತುಂಬಿ ಹೊರ ಸೂಸುತ್ತಿದೆ.

ಪ್ರಿಯರೇ, ನೀವು ಈ ಅನುಭವವನ್ನು ಹೊಂದಿದ್ದೀರೇ? ಎಲ್ಲಾ ಸಮಯಗಳಲ್ಲಿ ದೇವರು ಒಳ್ಳೆಯವನೆಂಬ ಅನುಭವವನ್ನು ನೀವು ಹೊಂದಿದ್ದೀರೇ ಇಲ್ಲವೇ? ಇಲ್ಲವಾದರೆ ಇಂದೇ ಯೇಸುವನ್ನು ನಿಮ್ಮ ಸ್ವಂತ ರಕ್ಷಕನನ್ನಾಗಿ ಅಂಗೀಕರಿಸಿರಿ. ನೀವು ಹಾಗೆ ಆತನನ್ನು ಸ್ವೀಕರಿಸಿದರೆ ಎಲ್ಲಾ ಮೇಲುಗಳನ್ನು ನಿಮಗೆ ಸಮೃದ್ಧಿಯಾಗಿ ಕೊಡಲ್ಪಡುತ್ತದೆ. ಅದು ಇಂದಿನಿಂದಲೇ ಪ್ರಾರಂಭವಾಗುತ್ತದೆ.

ಪ್ರಾರ್ಥನೆ : ಪ್ರೀತಿಯ ಕರ್ತನೇ, ಇಂದೇ ನಿನ್ನ ಮಗುವಾಗಿ ಮಾರ್ಪಡುವ ಕೃಪೆಯನ್ನು ನನಗೆ ದಯಪಾಲಿಸು. ಎಲ್ಲಾ ಸಮಯಗಳಲ್ಲಿ ನಿನ್ನ ಮೇಲನ್ನು ತಿಳಿದು ಅದನ್ನು ಅನುಭವಿಸುವ ಕೃಪೆಯನ್ನು ದಯಪಾಲಿಸು. ಯೇಸುವಿನ ಶಕ್ತಿಯುಳ್ಳ ನಾಮದಲ್ಲಿ ಪ್ರಾರ್ಥಿಸುತ್ತಿದ್ದೇನೆ, ಆಮೆನ್.

Please fill this form to receive Manna ministry “Daily Devotional‎” in Kannda https://goo.gl/forms/SAa56s26a1vNc2pp1 To (Free)

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.👇

For more install our app from Play Store

Manna Ministry Kannada👇

https://play.google.com/store/apps/details?id=org.mannaministry.app&hl=en

1000 Praises Kannada👇

https://play.google.com/store/apps/details?id=org.mannaministry1000praises.app&hl=en

Mannaministries.in@gmail.com

For Daily Devotion Contact: +91 9964247889

 

 

 

 

Comments

Your email address will not be published. Required fields are marked *

WhatsApp us