ನಮ್ಮ ಬಲಹೀನತೆಯಲ್ಲಿ ದೇವರ ಶಕ್ತಿ !

  Posted on   by   No comments

strength-in-weakness

 “ಸೋತವನಿಗೆ ತ್ರಾಣವನ್ನು ಅನುಗ್ರಹಿಸಿ, ನಿರ್ಬಲನಿಗೆ ಬಹು ಬಲವನ್ನು ದಯಪಾಲಿಸುತ್ತಾನೆ” (ಯೆಶಾ. 40:29).

ಆಧುನಿಕ ಪ್ರಪಂಚದಲ್ಲಿ, ಜನರು ಜೀವನದಲ್ಲಿ ಅನೇಕ ಕಾರಣಗಳಿಗಾಗಿ ನಂಬಿಕೆಯನ್ನು ಕಳೆದುಕೊಳ್ಳುತ್ತಿರುವುದು  ಸಾಮಾನ್ಯವಾಗಿದೆ.  ಅಯ್ಯೋ! ನಾನು ನನ್ನ ಓದಿನ ಮೇಲೆ ಕೇಂದ್ರಿಕರಿಸಲು ಆಗುತ್ತಿಲ್ಲ! ನನ್ನ ಜೊತೆ ಮದುವೆಯಾದವರಿಗೆಲ್ಲಾ ಮಕ್ಕಳು ಇವೆ! ನನಗೆ ಯಾವಾಗ ಮಗು ಆಗುತ್ತದೆ? ನಾನು ಪರೀಕ್ಷೆಯಲ್ಲಿ ಯಾಕೆ ಇಷ್ಟು ಸಲ ಅನುತ್ತೀರ್ಣನಾಗುತ್ತಿದ್ದೇನೆ? ನನ್ನ ಮದುವೆ ನಿಧಾನವಾಗುತ್ತಿದೆ. ನನ್ನ ಜೀವನದಲ್ಲಿ ನಾನು ಎಂದಾದರೂ ಆಶೀರ್ವಾದ ಪಡೆಯುವೆನಾ? ನನ್ನ ಸಾಲ ಹೆಚ್ಚುತ್ತಿದೆ. ಇದಕ್ಕೆ ಪರಿಹಾರ ಇಲ್ಲವೇ? ಈ ರೀತಿಯಾಗಿ ನಿಮಗೆ ಬೇರೆ ರೀತಿಯ ಭಾರಗಳಿರಬಹುದು. ಆದರೆ ಜ್ಞಾಪಕದಲ್ಲಿಟ್ಟುಕೊಳ್ಳಿರಿ, ಯೆಶಾ. 40:29ರಲ್ಲಿ ಕೊಟ್ಟಿರುವ ವಾಗ್ದಾನದಂತೆ ಯೇಸು ನಿಮ್ಮನ್ನು ಪ್ರೀತಿಸುತ್ತಾನೆ. ಆತನ ಇಷ್ಟ ನಿನ್ನನ್ನು ಆಶೀರ್ವದಿಸಬೇಕೆಂಬುದೇ. ನಿನ್ನ ಎಲ್ಲಾ ಭಾರವನ್ನು ಆತನ ಪಾದದ ಅಡಿಯಲ್ಲಿ ಹಾಕಿದಾಗ, ಆತನು ನಿನ್ನನ್ನು ಬಿಡಿಸಿ ನಿನ್ನನ್ನು ಸಂತೋಷಪಡಿಸುತ್ತಾನೆ. ಸತ್ಯವೇದದಲ್ಲಿ, ನಾವು ಹನ್ನಳ ಬಗ್ಗೆ, ಅವಳ ಗರ್ಭ ಮುಚ್ಚಿದ್ದರೆ ಬಗ್ಗೆ ಓದುತ್ತೇವೆ. ಆದರೆ, ಅವಳು ಕರ್ತನ ಮುಂದೆ ತನ್ನ ಆತ್ಮವನ್ನು ತೊಡಿಕೊಂಡಾಗ, ದೇವರು ಅವಳಿಗೆ ಒಂದು ಮಗು ಅಲ್ಲ ಅನೇಕ ಮಕ್ಕಳನ್ನು ಕೊಟ್ಟನು (1 ಸಮು. 1:15, 2:21).

ಒಬ್ಬ ತಂದೆ, ತನ್ನ ಒಬ್ಬನೇ ಮಗ ಒಂದಲ್ಲಾ ಒಂದು ದಿನ ಹೆಸರು ಮತ್ತು ಕೀರ್ತಿಯುಳ್ಳ ಒಬ್ಬ ಇಂಜಿನಿಯರ್ ಆಗಬೇಕೆಂಬ ಆಸೆ ಇತ್ತು. ಈ ಗುರಿ ಮುಟ್ಟಲು ಆತನು ಎಲ್ಲಾ ವಿಧವಾದ ತ್ಯಾಗ ಮಾಡಲು ಇಷ್ಟಪಟ್ಟಿದ್ದನು. ಕಾಲೇಜಿನ ಪ್ರಾಂಶುಪಾಲರು ಮೊದಲು ಸೀಟು ಕೊಡಲು ಒಪ್ಪಿದ್ದರು. ಬಹಳ ಕಷ್ಟದಿಂದ ಫೀಜಿಗಾಗಿ ಹಣವನ್ನು ಹೊಂದಿಸಿ, ಮಾರನೆ ದಿನ ಕಾಲೇಜಿಗೆ ಹೋದರು. ಅಷ್ಟರಲ್ಲಿ, ಪ್ರಾಂಶುಪಾಲರು ಮನಸ್ಸು ಬದಲಾಯಿಸಿ ದಾಖಲಾತಿ ಮಾಡಲು ನಿರಾಕರಿಸಿ, ಒಂದು ರೀತಿಯಲ್ಲಿ ಕಛೇರಿಯಿಂದ ಹೊರದೂಡಿದರು. ತಂದೆ ಮತ್ತು ಮಗ ಹೃದಯ ಮುರಿದವರಾದರು. ದೇವರಲ್ಲಿ ಪೂರ್ಣ ಭರವಸೆಯಿಂದಲೂ, ತಂದೆಯ ಪ್ರೋತ್ಸಾಹದಿಂದಲೂ ಹುಡುಗ ಒಂದು ಕಲಾ ಕಾಲೇಜಿಗೆ ಸೇರಿ ಪದವಿಯನ್ನು ಪಡೆದನು. ತಕ್ಷಣವೇ ಅವನಿಗೆ ಒಂದು ಒಳ್ಳೇ ನೌಕರಿ ದೊರೆತು, ಇಲಾಖೆಯ ಎಲ್ಲಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ಉತ್ತಮವಾದ, ಉನ್ನತವಾದ ಹುದ್ದೆಗೆ ಅಂದರೆ ಎಂಜನೀಯರ್‍ನ ಹುದ್ದೆಗಿಂತಲೂ ಮೇಲೆ ಏರಿದನು. ಕಾರಣ ತನ್ನ ಎಲ್ಲಾ ನಿರೀಕ್ಷೆಯನ್ನು ದೇವರಲ್ಲಿ ಇಟ್ಟಿದ್ದರಿಂದ ಅವನು ಅದ್ಭುತವಾಗಿ ಆಶೀರ್ವದಿಸಲ್ಪಟ್ಟನು.

ಪ್ರಾರ್ಥನೆ : ಪ್ರಿಯ ತಂದೆಯೇ, ನನ್ನ ಎಲ್ಲಾ ಭಾರ, ಚಿಂತೆ, ತೊಂದರೆಗಳನ್ನು ನಿನ್ನ ಮುಂದೆ ಇಡುತ್ತೇನೆ. ಇಂದಿನಿಂದ ನನ್ನನ್ನು ಬಲಪಡಿಸಿ. ನಿನ್ನಲ್ಲಿ ನನಗಿರುವ ನಂಬಿಕೆಯನ್ನು ವೃದ್ಧಿಮಾಡು. ನೀನು ಇದನ್ನು ನನಗಾಗಿ ಮಾಡುವೆಯೆಂದು ನಂಬಿದ್ದೇನೆ. ನಾನು ನಿನ್ನನ್ನು ವಂದಿಸಿ ಸ್ತುತಿಸುತ್ತೇನೆ. ಯೇಸುವಿನ ಅಮೂಲ್ಯ ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ. ಆಮೆನ್.

 

ಪ್ರಾರ್ಥನೆ ಮತ್ತು ವಂದನೆಗಳೊಂದಿಗೆ,

MANNA MINISTRIES

Mannaministries.in@gmail.com

*For Daily Devotion Contact: +91 9964247889*

Comments

Your email address will not be published. Required fields are marked *