ನಾವು ದೇವರ ಅದ್ಭುತ ಕಾರ್ಯಗಳನ್ನು ಘೋಷಿಸೋಣ!

  Posted on   by   No comments

“ಯೆಹೋವನ ಘನತೆಯನ್ನೂ ಆತನ ಪರಾಕ್ರಮವನ್ನೂ ಅದ್ಭುತಕೃತ್ಯಗಳನ್ನೂ ಮುಂದಣ ಸಂತತಿಯವರಿಗೆ ವಿವರಿಸುವೆವು” (ಕೀರ್ತ. 78:4).

ನಮ್ಮ ದೇವರು ಅತ್ಯಧಿಕವಾದದ್ದನ್ನು ಅದ್ಭುತಕಾರ್ಯಗಳನ್ನು ದಿನನಿತ್ಯ ಜೀವಿತದಲ್ಲಿ ಮಾಡುವನು. ಅದಲ್ಲದೆ, ಆತನ ತನ್ನ ಮಕ್ಕಳಿಗೆ ಮಾಡಿದ ಅತೀ ಅದ್ಭುತವಾದ ಮತ್ತು ಅಗೋಚರವಾದ ಸಂಗತಿಗಳ ಬಗ್ಗೆ, ಸತ್ಯವೇದದಲ್ಲಿ ಓದುತ್ತೇವೆ. ಅದನ್ನು ಅನುಭವಿಸಲು ದೇವರು ನಮಗೆ ನೀಡಿದ ಭಾಗ್ಯಕ್ಕೆ ಕೃತಜ್ಞತೆ ಸಲ್ಲಿಸುವದಲ್ಲದೆ, ನಮ್ಮ ಸಂತತಿಯವರಿಗೂ ಇತರರಿಗೂ ಹೇಳಬೇಕು. ಇದನ್ನೇ ನಾವು ಮಾಡಬೇಕೆಂದು ದೇವರು ಇಚ್ಛಿಸುತ್ತಾನೆ ಮತ್ತು ಪ್ರೀತಿಸುತ್ತಾನೆ. ಆಗ ಮಾತ್ರವೇ, ನಮ್ಮ ಸಂತತಿಯವರು ದೈವ ಜನಾಂಗವಾಗುತ್ತಾರೆ. ಹೀಗೆಯೇ, ಅಬ್ರಹಾಮ, ದಾವೀದ ಮತ್ತು ಇನ್ನಿತರರು ಕರೆಯಲ್ಪಟ್ಟವರಾಗಿದ್ದರು ಮತ್ತು ದೇವರ ಆರಿಸಲ್ಪಟ್ಟ ಜನಾಂಗವಾದರು (ಆದಿ. 18:19; 1 ಪೂರ್ವ. 28:9). 1 ಸಮು. 2:30ರಲ್ಲಿ ಹೇಳುವ ಹಾಗೆ, “ನನ್ನನ್ನು ಸನ್ಮಾನಿಸುವವರನ್ನು ಸನ್ಮಾನಿಸುವೆನು” ಎಂಬಂತೆ, ನಮ್ಮ ಜೀವಿತಗಳಲ್ಲಿ ಆತನು ಮಾಡಿರುವ ಎಲ್ಲಾ ಒಳ್ಳೆಯ ಹಾಗೂ ಮಹತ್ಕಾರ್ಯಗಳನ್ನು ನಾವು ಘೋಷಿಸುವಾಗ ಆತನು ನಮ್ಮನ್ನು ಉನ್ನತವಾದ ರೀತಿಯಲ್ಲಿ ಸನ್ಮಾನಿಸುತ್ತಾನೆ.

ದೇವರಿಂದ ಆಶೀರ್ವದಿಸಲ್ಪಟ್ಟ ಮನುಷ್ಯರೊಬ್ಬರು ತನ್ನ ಆಶೀರ್ವಾದಗಳನ್ನು ತನ್ನ ಕುಟುಂಬದವರೊಡನೆ ಹಂಚಿಕೊಳ್ಳಲು ಕಾತುರದಿಂದಿದ್ದರು. ಆದರೆ ಅವರೆಲ್ಲರೂ ನೆಪ ಹೇಳುತ್ತಾ ತಪ್ಪಿಸಿಕೊಳ್ಳುತ್ತಿದ್ದರು. ಆದ್ದರಿಂದ, ಅವರು ಕರ್ತನಿಗೆ ಮೊದಲು ಪ್ರಾರ್ಥನೆ ಮಾಡಿ ಎಲ್ಲರನ್ನೂ ಒಟ್ಟಾಗಿ ಕೂಡಿಸಿ ಅವರಿಗೆ ದೇವರು ಮಾಡಿದ ಮಹತ್ಕಾರ್ಯಗಳ ಬಗ್ಗೆ ಹೇಳಬೇಕೆಂದು ಬಯಸಿದನು. ದೇವರು ಹಾಗೆಯೇ ಮಾಡಿದನು. ಒಂದು ಹೇಳಿಕೆಯಂತೆಯೇ, “ಲೋಕವು, ನಾನು ಹೊಂದಿಕೊಂಡ ಆಶೀರ್ವಾದಗಳನ್ನು ಹೊಂದಿಕೊಳ್ಳಲಿ” ಎಂಬಂತೆ, ದೇವರು ಮಾಡಿದ ಆಶೀರ್ವಾದಗಳ ಬಗ್ಗೆ ಹೇಳುತ್ತಿದ್ದರು. ಇದರಿಂದಾಗಿ, ಅವರ ಸಂತತಿಯವರು ದೇವರನ್ನು ಪ್ರೀತಿಸುವ ಸಂತತಿಯರಾದರು. ಅವರಿಗೆ ದೇವರ ಕಾರ್ಯದ ಮೇಲೆ ಪ್ರೀತಿ, ಉತ್ಸುಕತೆ ಇದ್ದು ಆತನ ವಾಕ್ಯವನ್ನು ಪ್ರಚುರಪಡಿಸುತ್ತಾ ಹೋದರು. ಅವರು ಸತ್ತಾಗ, ಅನೇಕರು ಬಂದು ಸಾಕ್ಷಿ ನುಡಿದು ತಮ್ಮ ಜೀವಿತಗಳನ್ನು ದೇವರಿಗೆ ಸಮರ್ಪಿಸಿಕೊಂಡು ಅವರ ಸೇವೆಯ ಮೂಲಕ ಆಶೀರ್ವಾದ ಹೊಂದಿಕೊಂಡರು. ಈ ಸಾಕ್ಷಿಗಳನ್ನು ಕೇಳಿಸಿಕೊಳ್ಳಲು ಅನೇಕರಿಗೆ ಸಂತೋಷವಾಯಿತು!

ಪ್ರಿಯರೇ, ದೇವರು ಬಯಸುವ ಜೀವಿತ ಇದಾಗಿದೆ. ನಾವು ದೇವರ ಆಶೀರ್ವಾದಗಳನ್ನು ಅನುಭವಿಸಿ ಅರ್ಥಮಾಡಿಕೊಳ್ಳುವದಿಲ್ಲ. ನಮಗೆ ತಿಳಿದಿರುವ ಕುಟುಂಬದವರಿಗೂ ಇತರರಿಗೂ ಹೇಳಬೇಕು. ಇದು ನಮ್ಮ ಜೀವನಗಳಲ್ಲಿ ಅತ್ಯಗತ್ಯವಾಗಿದೆ. ನಮ್ಮ ಜೀವಿತಗಳಲ್ಲಿ ಈ ಬಲವನ್ನು ಅನುಭವಿಸಿಕೊಂಡು ನಮ್ಮ ಜೀವಿತವನ್ನು ಆತನಿಗೆ ಸಮರ್ಪಿಸಿಕೊಂಡು ಇತರರಿಗೆ ಘೋಷಿಸಲು ಬಲ ಹೊಂದೋಣವೇ? (ಅ.ಕೃ. 1:8).

ಪ್ರಾರ್ಥನೆ : ಪ್ರಿಯ ಕರ್ತನೇ, ಈ ಲೋಕದಲ್ಲಿ ನಿನಗೆ ಜೀವಿಸಿ ನಿನಗೋಸ್ಕರ ಜೀವಿಸುವಂತೆ ನನಗೆ ಕೃಪೆ ನೀಡು! ಇಂದಿನಿಂದ, ನಿನ್ನನ್ನು ಸ್ತುತಿಸುವದು ಮಾತ್ರವಲ್ಲದೆ, ಇತರರಿಗೆ ನಿನ್ನ ಆಶೀರ್ವಾದಗಳನ್ನು ಘೋಷಿಸಿ ನಿನ್ನ ಬಳಿಗೆ ನಡೆಸುವಂತೆ ಸಹಾಯ ಮಾಡು. ನಾನು ನಿನ್ನನ್ನು ಸ್ತುತಿಸಿ ಆಶೀರ್ವದಿಸುತ್ತೇನೆ. ಕರ್ತನಾದ ಯೇಸುವಿನ ದಿವ್ಯ ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

MANNA MINISTRIES
Mannaministries.in@gmail.com
*For Daily Devotion Contact: +91 9964247889*

For more install our App: 

https://play.google.com/store/apps/details?id=org.mannaministry.app&hl=en

https://play.google.com/store/apps/details?id=org.mannaministry1000praises.app&hl=en

Comments

Your email address will not be published. Required fields are marked *

× WhatsApp us