ನಿತ್ಯವೂ ನಾನು ನನ್ನ ಕೈಗಳನ್ನು ನಿನ್ನ ಕಡೆಗೆ ಚಾಚುತ್ತೇನೆ!

  Posted on   by   No comments

6a0fb9a996eb4576a261a68c049d3a73

“ಬಾಧೆಯಿಂದ ನನ್ನ ಕಣ್ಣುಗಳು ಮೊಬ್ಬಾಗಿ ಹೋಗಿವೆ. ಯೆಹೋವನೇ ಹಗಲೆಲ್ಲಾ ಕೈಯೊಡ್ಡಿ ನಿನಗೆ ಮೊರೆಯಿಡುತ್ತೇನೆ” (ಕೀರ್ತ. 88:9).

ಈ ಪಾಪದ ಪ್ರಪಂಚದಲ್ಲಿ ಒಬ್ಬ ವ್ಯಕ್ತಿಯ ಅಂತಸ್ತು, ಸ್ಥಾನ ಏನೇ ಆಗಿದ್ದರೂ ಚಿಂತೆ ಅಥವಾ ಬಾಧೆಗಳಿಲ್ಲದೆ ಜೀವಿಸುವದು ಅಸಾಧ್ಯ. ಆದ್ದರಿಂದಲೇ ನಮ್ಮ ಕರ್ತನು ತಾನೇ ಹೇಳಿದ್ದಾನೆ, ಲೋಕದಲ್ಲಿ ನಿಮಗೆ ಸಂಕಟ ಉಂಟು” (ಯೋಹಾ. 16:33). ಆದರೆ ನಮ್ಮ ಕರ್ತನು ಸೈತಾನನ್ನು ಸೋಲಿಸಿ ಈ ಪ್ರಪಂಚವನ್ನು ಗೆದ್ದಿದ್ದಾನೆ. ಆದ್ದರಿಂದ, ಆತನು ಈ ಪ್ರಪಂಚದಲ್ಲಿ ನಮ್ಮನ್ನು ಬಿಡುಗಡೆ ಮಾಡಿ ಸಹಾಯ ಮಾಡಲು ಆತನು ಬೇಕಾದಷ್ಟು ಆಗಿದ್ದಾನೆ. ದೇವರ ದೊಡ್ಡ ಸೇವಕನಾದ ಮೋಶೆಯು ಹೀಗೆ ಹೇಳುತ್ತಾನೆ, “ನೀನು ನಮ್ಮನ್ನು ಕುಗ್ಗಿಸಿದ ದಿವಸಗಳಿಗೂ ನಾವು ಕೇಡನ್ನು ಅನುಭವಿಸಿದ ವರುಷಗಳಿಗೂ ತಕ್ಕಂತೆ ನಮ್ಮನ್ನು ಸಂತೋಷಪಡಿಸು” (ಕೀರ್ತ. 90:15). ಆದ್ದರಿಂದ, ನಾವು ಎಲ್ಲಾ ಸಮಯದಲ್ಲಿ ಒಳ್ಳೆ ಮತ್ತು ಕೆಟ್ಟ ದಿನಗಳಲ್ಲಿ ನಮ್ಮ ಕೈಗಳನ್ನು ಚಾಚಿ ಪ್ರಾರ್ಥಿಸಿರಿ, “ಪ್ರಿಯ ಪರಲೋಕದ ತಂದೆಯೇ! ಇಂಥಹ ಕಷ್ಟದ ಸಮಯದಲ್ಲಿ ನನಗೆ ಸಹಾಯ ಮಾಡಲು ನನಗೆ ಯಾರೂ ಇಲ್ಲ. ನಾನು ನನ್ನ ಪೂರ್ಣ ಹೃದಯದಿಂದ ನಿನ್ನನ್ನು ನಂಬುತ್ತೇನೆ, ದಯಮಾಡಿ ಕಾಪಾಡು ಮತ್ತು ಈ ತೊಂದರೆಯಿಂದ ಬಿಡಿಸು” ಎಂದು. ಆತನು ನಿಜಕ್ಕೂ ನಿನ್ನನ್ನು ಅದ್ಭುತವಾದ ರೀತಿಯಲ್ಲಿ ಹೇರಳವಾಗಿ ನಿನ್ನನ್ನು ಆಶೀರ್ವದಿಸುತ್ತಾನೆ.

ಒಂದು ಸಲ ಒಬ್ಬ ಯೌವನಸ್ಥನು ಕರ್ತನಾದ ಯೇಸುವನ್ನು ತನ್ನ ಸ್ವಂತ ರಕ್ಷಕನನ್ನಾಗಿ ಸ್ವೀಕರಿಸಿದನು. ಅವನು ನಂಬಿಗಸ್ಥನೂ ಮತ್ತು ಸತ್ಯವೇದವನ್ನು ಓದುವುದರಲ್ಲಿ ಕ್ರಮಬದ್ಧವಾಗಿಯೂ ಮತ್ತು ಎಲ್ಲಾ ಸಮಯದಲ್ಲಿ ಶ್ರದ್ಧೆಯಿಂದ ಪ್ರಾರ್ಥಿಸಿ ತನ್ನ ಕೈಲಾದಷ್ಟು ಮಟ್ಟಿಗೆ ಸೇವೆಯನ್ನು ಮಾಡುತ್ತಿದ್ದನು. ಅವನು ತನ್ನ ಯಜಮಾನನ ಹೆಜ್ಜೆ ಜಾಡನ್ನು ಹಿಂಬಾಲಿಸುತ್ತಿದ್ದನು. ದೇವರು ಅವನ ನಂಬಿಕೆಯನ್ನು ಅವನ ವಚನ ಬದ್ಧತೆಯನ್ನು ನೋಡಿ ಅವನ ಸೇವೆಗೆ ಅನೇಕ ವಿಭಾಗಗಳನ್ನು ಸೇರಿಸಿದನು. ಅವನು ಮೊಣಕಾಲೂರಿ ಪ್ರಾರ್ಥಿಸಿದನು, “ಕರ್ತನಾದ ಯೇಸುವೆ! ಈ ಕೆಲಸವನ್ನು, ನಾನು ಸ್ವಂತ ಬಲದಿಂದ ಮಾಡಲು ಸಾಧ್ಯವಿಲ್ಲ. ನೀನು ನನ್ನಲ್ಲಿ ನೆಲೆಸಿ ಈ ಧರ್ಮಪ್ರಚಾರ ಕಾರ್ಯವನ್ನು ನೆರವೇರಿಸುವಂತೆ ನನಗೆ ನಿನ್ನ ಕೃಪೆ ಕೊಡು” ಎಂದನು. ಹೌದು! ತೊಂದರೆಗಳು ಇರುತ್ತವೆ, ಅಡೆತಡೆಗಳು ಬರುತ್ತವೆ, ವಿರೋಧಗಳು ಬರುತ್ತವೆ, ದುಷ್ಟ ಮತ್ತು ಹೊಟ್ಟೆಕಿಚ್ಚು ಜನರಿಂದ ಬರುತ್ತವೆ. ಆದರೆ ಕೊನೆಗೆ ಕರ್ತನು ಅವರ ಪ್ರಾರ್ಥನೆಗಳನ್ನು ಕೇಳಿ ಆತನ ನಾಮಕ್ಕೋಸ್ಕರ ಎಲ್ಲವನ್ನು ನೆರವೇರಿಸುವಂತೆ ಅವನಿಗೆ ಕೃಪೆ ತೋರಿಸುತ್ತಾನೆ.
ಪ್ರಿಯರೇ! ಒಬ್ಬ ಸಾಧಾರಣ ಮನುಷ್ಯ ಕರ್ತನಿಗಾಗಿ ಅಷ್ಟೊಂದು ಸಾಧಿಸಿ ಆತನನ್ನು ಸಂತೋಷಪಡಿಸಬೇಕಾದರೆ, ನೀನೂ ಮತ್ತು ನಾನೂ ಸಹ ನಮ್ಮ ತೊಂದರೆಗಳನ್ನು ನಮ್ಮ ಜೀವನದಲ್ಲಿ ಆತನ ದೈವೀಕ ಸಾನಿಧ್ಯದಿಂದ ಜಯಿಸಬಹುದು ಮತ್ತು ಆತನ ದೃಷ್ಟಿಯಲ್ಲಿ ಅಮೂಲ್ಯವಾದ ಜೀವನ ನಡೆಸುವುದರಿಂದಲೇ ಮೇಲಿನ ಪ್ರಸಂಗದಲ್ಲಿನ ಯೌವನಸ್ಥನಂತೆ ಪ್ರಾರ್ಥಿಸಿರಿ ಮತ್ತು ಆತನ ಹೇರಳವಾದ ಆಶೀರ್ವಾದವನ್ನು ಪಡೆಯಿರಿ! ಕರ್ತನಿಗಾಗಿ ಒಳ್ಳೆ ಫಲ ಬಿಡುವ ಜೀವನವನ್ನು ನಡೆಸಿರಿ, ಮೇಲೆ ಹೇಳಿದ ಯೌವನಸ್ಥನಂತೆ ಆತನ ಮುಂದೆ ತಗ್ಗಿಸಿಕೊಳ್ಳಿರಿ ಮತ್ತು ಆತನ ಹೆಜ್ಜೆ ಜಾಡಿನಲ್ಲಿ ನಡೆಯಿರಿ (ಕೀರ್ತ. 121:1-2).

ಪ್ರಾರ್ಥನೆ :- ಅಮೂಲ್ಯ ರಕ್ಷಕನೇ! ನಿನ್ನಲ್ಲಿ ನೆಲೆಗೊಂಡು, ನಿನಗೆ ಸಮರ್ಪಿಸಿಕೊಂಡು, ಮತ್ತು ನಿನಗೆ ಪ್ರಾರ್ಥಿಸುವದು ನಿಜಕ್ಕೂ ಅದ್ಭುತವಾದ ಅನುಭವ. ಇಂದಿನಿಂದ, ನನಗೆ ಈ ಆಶೀರ್ವಾದದ ಅನುಭವಕೊಡು. ನಿನ್ನ ದೈವೀಕ ಆಶೀರ್ವಾದಗಳನ್ನು ಪಡೆಯುವಂತೆ ನನಗೆ ಕೃಪೆ ಕೊಡು. ನಮ್ಮ ಕರ್ತನಾದ ಯೇಸುವಿನ ಉತ್ತರ ಕೊಡುವ ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

Please fill this form to receive Manna ministry “Daily Devotional‎” in Kannda https://goo.gl/forms/SAa56s26a1vNc2pp1 To (Free)

For Daily Devotion Contact: +91 9964247889

Comments

Your email address will not be published. Required fields are marked *

WhatsApp us