ನಿದೋರ್ಷಿಯು ಜೀವನದಲ್ಲಿ ಒಳ್ಳೇ ಸಂಗತಿಗಳನ್ನು ಬಾಧ್ಯತೆಯಾಗಿ ಪಡೆಯುವರು!

  Posted on   by   No comments

5452bc77cd9f666ae75a6d47cc8dc711

“ನಿರ್ದೋಷಿಗಳಿಗೂ ಸುಖವು ಗೊತ್ತಾಗುವದು” (ಜ್ಞಾನೋ. 28:10).

ಸತ್ಯವೇದದಲ್ಲಿ ನಾವು ಅನೇಕ ನಿರ್ದೋಷಿಗಳು ಮತ್ತು ನೀತಿವಂತ ಜನರ ಜೀವನದ ಬಗ್ಗೆ ಓದುತ್ತೇವೆ. ಅವರಲ್ಲಿ ಯೋಬನು ಒಬ್ಬ ದೇವರು ತಾನೇ ಅವನನ್ನು ನಿರ್ದೋಷಿ ಯಥಾರ್ಥಚಿತ್ತನು, ದೇವರ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾನೆ (ಯೋಬ. 1:1-8). ರಾಜನಾದ ಯೋಷಾಪಟನು ಹೇಳುತ್ತಾನೆ, “ಯೆಹೋವನು ಸಜ್ಜನರ ಸಹಾಯಕನು” (2 ಪೂರ್ವ. 19:11). ನಾವು ಆತನನ್ನು ನಂಬಿಕೆಯಿಂದ ಹುಡುಕುವುದರಲ್ಲಿ ಎಚ್ಚರವಾಗಿದ್ದು ಯಥಾರ್ಥವಾಗಿ ಆತನ ಹೆಜ್ಜೆ ಜಾಡಿನಲ್ಲಿ ಸ್ವಚ್ಛ ಮತ್ತು ಶುಭ್ರ ಹೃದಯದಿಂದ ನಡೆಯಬೇಕು. ಪರಿಶುದ್ಧ ದೇವರು ತನ್ನ ಮಕ್ಕಳು ಸಹ ಪವಿತ್ರರಾಗಿರಬೇಕು ಎಂದು ಇಷ್ಟಪಡುತ್ತಾನೆ. ಇನ್ನೊಂದು ತಿಂಗಳ ಈ ಮೊದಲನೆ ದಿನವನ್ನು ಪ್ರವೇಶಿಸಿರುವ ಆತನ ಮಕ್ಕಳಾದ ನಾವು ಯಥಾರ್ಥವಾಗಿ ನಡೆದು ಸತ್ಯವೇದದ ಜನರಂತೆ ದೇಹ, ಆತ್ಮ, ಪ್ರಾಣಗಳಲ್ಲಿ ನಿರ್ದೋಷಿಗಳಾಗಿಯೂ ಪವಿತ್ರವಾಗಿಯೂ ನಡೆಯಬೇಕು. “ಆತನು ಸದ್ಭಕ್ತರಿಗೆ ಯಾವ ಶುಭವನ್ನು ದಯಪಾಲಿಸದೆ ಇದ್ದಾನು?” (ಕೀರ್ತ. 84:11).

ಒಂದು ಸಲ ಒಬ್ಬ ಮನುಷ್ಯನು ದಿನವೂ ಸತ್ಯವೇದವನ್ನು ಓದಿ ಎಲ್ಲಾ ಸಮಯದಲ್ಲಿ ಶ್ರದ್ಧೆಯಿಂದ ಪ್ರಾರ್ಥಿಸಿ, ನಿರ್ದೋಷಿಯಾಗಿರುವಂತೆ ಎಚ್ಚರವಾಗಿದ್ದನು. ಅವನು ಆತನ ಹೆಜ್ಜೆ ಜಾಡಿನಲ್ಲಿ ಅತಿ ಜಾಗರೂಕನಾಗಿ ನಡೆದು ಪೂರ್ಣವಾಗಿ ಆತನ ಸಾನಿಧ್ಯದಲ್ಲಿ ನೆಲೆಗೊಂಡಿದ್ದನು ಹೇಗೆ ಕರ್ತನಾದ ಯೇಸು ತನ್ನ ಅಮೂಲ್ಯವಾದ ರಕ್ತವನ್ನು ಶಿಲುಬೆಯ ಮೇಲೆ ತನ್ನನ್ನು ತನ್ನ ಪಾಪಗಳಿಂದ ಬಿಡಿಸುವದಕ್ಕಾಗಿ ಸುರಿಸಿದನೆಂದು ಅವನಿಗೆ ಗೊತ್ತಿತ್ತು. ಆದ್ದರಿಂದ ಅವನು ಯಾವಾಗಲೂ ತನ್ನ ನ್ಯೂನ್ಯತೆಗಳನ್ನು ಪಾಪಗಳನ್ನು ಆತನಿಗೆ ಅರಿಕೆ ಮಾಡಿ ಅವನನ್ನು ನಂಬಿಕೆಯಿಂದ ಹಿಡಿದುಕೊಂಡಿದ್ದನು. ಆದ್ದರಿಂದ ಅವನಿಗೆ ದೇವರು ಪ್ರಭಾವದ ನಿರೀಕ್ಷೆಯಾಗಿದ್ದನು (ಕೊಲೊ. 1:27). ಕರ್ತನ ಸಂಸರ್ಗದಲ್ಲಿರುವವನಾದರೂ ಆತನೊಂದಿಗೆ ಒಂದೇ ಆತ್ಮವಾಗಿದ್ದಾನೆ (1 ಕೊರಿ. 6:17).

ಪ್ರಿಯರೇ! ಒಬ್ಬ ಸಾಧಾರಣವಾದ ನಾಶವಾಗುವ ಮನುಷ್ಯನು ಅಷ್ಟೊಂದು ನಂಬಿಕೆಯಿಂದಲೂ ನಿರ್ದೋಷಿಯೂ ಆದರೆ, ನಾವೂ ಸಹ ಅದನ್ನೇ ಮಾಡಿ ಸರ್ವಶಕ್ತ ಕರ್ತನಿಂದ ಆಶೀರ್ವಾದ ಹೊಂದಬಾರದು? ಹೌದು! ನೀವೂ ಸಹ ದಯಮಾಡಿ ಅದನ್ನೇ ಮಾಡಿ ನಿರ್ದೋಷಿಯಾದ ಮತ್ತು ಯಥಾರ್ಥತೆಯ ಜೀವನ ನಡೆಸಿರಿ. ನಾನು ಮೊದಲೇ ಹೇಳಿದಂತೆ, ಪ್ರತಿ ದಿನ ಸತ್ಯವೇದ ಓದಿ, ಶ್ರದ್ಧೆಯಿಂದ ಆತನಿಗೆ ಪ್ರಾರ್ಥನೆ ಮಾಡುವುದು. ನಿಮ್ಮ ಜೀವನದಲ್ಲಿ ಬಹು ಮುಖ್ಯವಾಗಿ ಅವಶ್ಯಕ. ಕರ್ತನನ್ನು ಕೇಳು! ಈ ದೈವೀಕ ಗುಣದಿಂದ ಆತನು ನಿನ್ನನ್ನು ಆಶೀರ್ವದಿಸುತ್ತಾನೆ. ನಿನ್ನ ಎಲ್ಲಾ ದುಷ್ಟತನಗಳನ್ನು, ಕೆಟ್ಟ ಆಲೋಚನೆಗಳನ್ನು ಅನೈತಿಕ ಸಂಬಂಧಗಳನ್ನು ಬಿಟ್ಟು ಬಿಡು. ದೇವರ ಮಕ್ಕಳೊಡನೆ ಸತ್ಯದ ಅನ್ಯೂನ್ಯತೆಯನ್ನು ಯಥಾರ್ಥರಾಗಿ ನಡೆಯುವವರೊಡನೆ ಬೆಳೆಸಿಕೊ. ಆಗ, ಕರ್ತನು ಆತನಿಗೆ ಆನಂದ ಉಂಟು ಮಾಡುವ ದಾರಿಗಳಲ್ಲಿ ನಡೆಯುವಂತೆ ದೇವರು ಸಹಾಯ ಮಾಡುತ್ತಾನೆ. ಆತನು ನಿನಗೆ ಕೃಪೆ, ಕರುಣೆ ಮತ್ತು ಬೇಕಾಗಿರುವ ಪ್ರೀತಿಯನ್ನು ಕೊಡುತ್ತಾನೆ. ನೀವೂ ಸಹ ಈ ಸಂತೋಷ ಜೀವನದ ಅನುಭವವನ್ನು ಪಡೆಯಬಹುದು (ಮತ್ತಾ. 25:21-23).

ಪ್ರಾರ್ಥನೆ :- ಪ್ರೀತಿಯ ಪರಲೋಕದ ತಂದೆಯೇ, ಈ ಶುದ್ಧವಾದ ಪರಲೋಕದ ಜೀವಿತದಿಂದ ನನ್ನನ್ನು ಆಶೀರ್ವದಿಸು. ನನ್ನ ಹೃದಯದಲ್ಲಿನ ಎಲ್ಲಾ ದುಷ್ಟ ಮತ್ತು ಕೆಟ್ಟ ಆಲೋಚನೆಗಳನ್ನು ತೊಡೆದು ಹಾಕು. ನಿನ್ನ ದೈವೀಕ ಶಕ್ತಿಯಿಂದ ನನ್ನನ್ನು ತುಂಬು. ಇಂದಿನಿಂದ, ನನ್ನ ಜೀವನದಲ್ಲಿ ಎಲ್ಲಾ ಒಳ್ಳೇ ವಿಷಯಗಳನ್ನು ಬಾಧ್ಯತೆಯಾಗಿ ಪಡೆಯುವ ಕೃಪೆಯನ್ನು ಕೊಡು. ನಮ್ಮ ಕರ್ತನಾದ ಯೇಸುಕ್ರಿಸ್ತನ ನಿರ್ದೋಷವಾದ, ಯಥಾರ್ಥವಾದ ಹೆಸರಿನ ಮೂಲಕ ನಾನು ಪ್ರಾರ್ಥಿಸುವೆ, ಆಮೆನ್.

Please fill this form to receive Manna ministry “Daily Devotional‎” in Kannda https://goo.gl/forms/SAa56s26a1vNc2pp1 To (Free)

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.👇

For more install our app from Play Store

Manna Ministry Kannada👇

https://play.google.com/store/apps/details?id=org.mannaministry.app&hl=en

1000 Praises Kannada👇

https://play.google.com/store/apps/details?id=org.mannaministry1000praises.app&hl=en

Mannaministries.in@gmail.com

For Daily Devotion Contact: +91 9964247889

Comments

Your email address will not be published. Required fields are marked *

WhatsApp us