ನಿನ್ನಂಥ ದೇವರು ಯಾರು ಇಲ್ಲಾ– ಆರಾಧನೆ ಗೀತೆ
Posted on July 15, 2018 by MannaMinistries 13 comments

ನಿನ್ನಂಥ ದೇವರು ಯಾರು ಇಲ್ಲಾ
ನಿನ್ನ ಹಾಗೆ ಪ್ರೀತಿಸುವವರು ಒಬ್ಬರು ಇಲ್ಲಾ -2
ಯೇಸಯ್ಯಾ ಯೇಸಯ್ಯಾ ನೀನಿಲ್ಲದೆ ನಾನಿಲ್ಲಯ್ಯಾ -2
1. ಪಾಪದ ಮರಣದಲ್ಲಿ ಇದ್ದಂತ ನನ್ನ
ಪ್ರೀತಿಮಾಡಿ ಪ್ರಾಣಕೊಟ್ಟು ಬದುಕಿಸಿದೆ ದೇವಾ -2
ನಿನ್ನ ಕೃಪೆ ಶಾಶ್ವತ ಎಂದೆಂದೂ ದೇವಾ -2
ನಿನ್ನ ಪ್ರೀತಿಯಿಂದ ನಾನು ಜೀವಿಸುವೇ ದೇವಾ -2
2. ನನ್ನಯ ಜೀವಿತವೆಲ್ಲವನ್ನು ತಿಳಿದಿರುವೆ ನೀನು
ನನ್ನಯ ಕುರಿತು ಹಿತವಾಗಿ ಚಿಂತಿಸುವೆ ನೀನು -2
ನಿನ್ನಯ ಕರದಿ ಹಿಡಿದು ನನ್ನ ನಡೆಸಿರುವೆ ದೇವಾ -2
ನನ್ನ ಸಹಾಯ ನನ್ನ ಬಂಡೆ ನೀನೇ ಯೇಸಯ್ಯಾ -2
3. ಕಷ್ಟಗಳಲ್ಲಿ ದುಃಖಗಳಲ್ಲಿ ಜೊತೆಯಾಗಿರುವವನು
ರೋಗದಲ್ಲಿ ಸಂಕಟದಲ್ಲಿ ಬಲವ ಕೊಡುವವನು -2
ಕೊರತೆಗಳನ್ನು ನೀಗಿಸುವವನು ನೀನೇ ಯೇಸಯ್ಯಾ -2
ಸೋಲುಗಳಲ್ಲಿ ಜಯವನ್ನು ಕೊಡುವ ದೇವಾ ನೀನಯ್ಯಾ -2
Super song thanks for mannaministry
Super wonderful song music and singing amen praise the lord
Super song
Super song
ಸುಂದರವಾದ ಗೀತೆ,
ನಿಮಗೆ ತುಂಬಾ ಧನ್ಯವಾದಗಳು..
Very good 💓 touchingly super song exelant thank you manna ministry
Super song
Beautiful song
Super song hortouching .
My fevret song super 👌👌👌 thank you for manna ministry
Praise the Lord
Beautiful song
Amen praise the Lord mind blowing song sir Praise God
Super song faster