ನಿನ್ನ ಪ್ರೀತಿಸಲು ಈ ಹೃದಯ ಸಾಲದು ಯೇಸಯ್ಯ MP3 song – ಹಾಡಿದವರು :-ರಾಕೇಶ್

  Posted on   by   5 comments

i-love-jesus1-1

ನಿನ್ನ ಪ್ರೀತಿಸಲು ಈ ಹೃದಯ ಸಾಲದು ಯೇಸಯ್ಯ
ಇನ್ನು ಹೆಚ್ಚಾಗಿ ಪ್ರೀತಿಸುವ ಆಸೆ ನನಗಯ್ಯ
ಸ್ತೋತ್ರ ಯೇಸಯ್ಯ ಸ್ತೋತ್ರ ಯೇಸಯ್ಯ
ಮಹಿಮೆ ಯೇಸಯ್ಯ ಮಹಿಮೆ ಯೇಸಯ್ಯ

ರೋಗಗಳನ್ನು ವಾಸಿ ಮಾಡಿ ಹೊಸ ಜೀವನ ನನಗೆ ತಂದೆ
ನನ್ನನ್ನು ನಾಶನದಿಂದ ತಪ್ಪಿಸಿದವರು ನೀನೇ
ಸಮೃದ್ಧಿ ಜೀವನ ನನಗೆ ನೀಡಿರುವೆ ||2||

ನಿನ್ನ ಪ್ರೀತಿಯನ್ನು ವರ್ಣಿಸಲು
ಈ ಹೃದಯ್ಯ ತವಕ ಪಡುತ್ತಿದೆ ಯೇಸಯ್ಯ ||2||

ಯೇಸುವೇ ನಿನ್ನ ರಕ್ತದಿಂದ ನನ್ನನ್ನು ಶುದ್ಧಿ ಮಾಡಿದೆ
ಪರಿಶುದ್ಧ ಆತ್ಮನಿಂದ ನನ್ನನ್ನು ತುಂಬಿಸಿರುವೆ
ನಮ್ಮ ಪಾಪಗಳ ಕ್ಷಮಿಸಿರುವೆ ||2||
ನಿನ್ನ ಪ್ರೀತಿಯನ್ನು ವರ್ಣಿಸಲು
ಈ ಹೃದಯ ತವಕ ಪಡುತ್ತಿದೆ ಯೇಸಯ್ಯ ||2||

ಶಾಶ್ವತ ಪ್ರೇಮದಿಂದ ನನ್ನನ್ನು ಪ್ರೀತಿಸಿರುವೆ
ನನ್ನನ್ನು ಮಮತೆಯಿಂದ ಸೆಳೆದುಕೊಂಡ ಯೇಸುವೇ
ನಿನ್ನಂತೆ ನನ್ನನ್ನು ಮಾರ್ಪಡಿಸು ||2||
ನಿನ್ನ ಪ್ರೀತಿಯನ್ನು ವರ್ಣಿಸಲು
ಈ ಹೃದಯ ತವಕ ಪಡುತ್ತಿದೆ ಯೇಸಯ್ಯ ||2||

Categories: Audio

5 comments

 1. says:

  beautiful song

 2. says:

  Very nice song

 3. says:

  Beautiful song
  And very nice

 4. says:

  It’s an good, god should give bless to you

Comments

Your email address will not be published. Required fields are marked *