ನಿನ್ನ ಹೆಜ್ಜೆಗಳು ಜಾರದಂತೆ ಕರ್ತನು ಎತ್ತಿಹಿಡಿಯುತ್ತಾನೆ!

  Posted on   by   1 comment

1

“ನಿನ್ನ ಮಾರ್ಗದಲ್ಲೇ ಹೆಜ್ಜೆಯಿಟ್ಟು ನಡೆಯುತ್ತಾ ಇದ್ದೇನೆ, ನನ್ನ ಕಾಲು ಜಾರಲಿಲ್ಲ” (ಕೀರ್ತ. 17:5).

ಈ ಪ್ರಪಂಚದಲ್ಲಿ ನಮ್ಮ ಜೀವಿತದ ಎಲ್ಲಾ ಸಮಯಗಳಲ್ಲಿ ನಾವು ಸಂತೋಷವಾಗಿಯೂ ಆನಂದವಾಗಿಯೂ ಇರಲು ಸಾಧ್ಯವಿಲ್ಲ. ಕೆಲವು ಸಮಯಗಳಲ್ಲಿ ನಾವು ತೊಂದರೆಗಳನ್ನು ಎದುರಿಸಿದಾಗ ನಾವು ನಿರಾಶೆಯಿಂದ ಹೇಳುತ್ತೇವೆ, “ಅಯ್ಯೋ! ನನ್ನ ಕಾಲು ಜಾರುತ್ತಿದೆ! ಈಗ ನಾನು ಏನು ಮಾಡಲಿ? ಕೆಲವು ಸಲ ನಾವು ನಮ್ಮ ಭರವಸೆಯನ್ನು ಮನುಷ್ಯನಲ್ಲಿ ಹಾಕಿ ನಂತರ ನಿರಾಶೆ ಹೊಂದುವದಕ್ಕಾಗಿಯೇ. ಇಂಥಹ ಸಮಯಗಳಲ್ಲಿ ನಾವು ದು:ಖಿತರಾಗುತ್ತೇವೆ. ನಮ್ಮ ಭಾರಗಳಿಂದ ನಾವು ಹೇಗೆ ಹೊರಬರಬಹುದು ಎಂದು ಆಶ್ಚರ್ಯಪಡುತ್ತೇವೆ. ಆದರೆ ನಮಗೆ ಗೊತ್ತಿರಬೇಕು. ನಮ್ಮ ಕಾಲು ಜಾರಿದಾಗ ನಮಗೆ ದೇವರು ಹೇರಳವಾದ ಕೃಪೆಯು ನಮ್ಮನ್ನು ಆವರಿಸಿ ಜಾರುವ ಕಾಲುಗಳನ್ನು ಎತ್ತಿ ಹಿಡಿಯುತ್ತದೆ (ರೋಮ. 5:20). ಜೊತೆಗೆ ನಾವು ಭಾರಗಳಿಂದ, ಕಾಯಿಲೆಗಳಿಂದ, ಮತ್ತು ಅನಿರೀಕ್ಷಿತ ಹಿಂಜರಿಯುವಿಕೆಯಿಂದ ಎದುರಾದಾಗ, ನಮಗೆ ತಿಳಿಯಬೇಕು, ಏನಂದರೆ ನಮಗೆ ಜೀವಿಸುವ ಪ್ರೀತಿಸುವ ದೇವರು ಸಹಾಯಕ್ಕಾಗಿಯೂ ಬಿಡುಗಡೆಗಾಗಿಯೂ ಇದ್ದಾನೆ ಎಂದು. ಆತನ ಪರಿಪೂರ್ಣ ಕೃಪೆ ನಿಜಕ್ಕೂ ಜಾರುತ್ತಿರುವ ನಂಬಿಕೆಯನ್ನು ಎತ್ತಿ ಹಿಡಿದು ನಮ್ಮನ್ನು ಬಲಪಡಿಸುತ್ತದೆ (ಯೋಹಾ. 1:16).

ಕುಟುಂಬದಲ್ಲಿನ ತಂದೆಗೆ ದೇವರ ಬಗ್ಗೆ ತಿಳಿಯದೆ ಕೆಟ್ಟ ಜೀವಿತ ನಡೆಸುತ್ತಿದ್ದನು. ಅವರು ತನಗೆ ಇಷ್ಟ ಬಂದ ರೀತಿಯಲ್ಲಿ ಜೀವಿಸಿ ಸುಮಾರಾಗಿ ತನ್ನ ಜೀವನವನ್ನು ಹಾಳುಮಾಡಿಕೊಂಡಿದ್ದನು. ಅನೇಕ ಒಳ್ಳೆಯ ಜನರು ಅವರ ಬಳಿ ಬಂದು ಹೇಗೆ ದೈವತ್ವದ ಹಾಗೂ ಭಕ್ತಿಯ ಜೀವನ ನಡೆಸಬೇಕು ಎಂದು ಹೇಳಿದರು. ಆದರೆ, ಅವನು ಅವರ ಸಲಹೆಗೆ ತನ್ನ ಕಿವಿಕೊಡಲಿಲ್ಲ ಆದರೆ ಪಾಪದಲ್ಲೇ ಜೀವಿಸುತ್ತಿದ್ದರು. ಒಂದು ದಿನ, ಅವನು ಒಂದು ರಸೀದಿಗಾಗಿ ಒಂದು ಉಪಯೋಗಿಸದೇ ಇದ್ದ ಧೂಳು ತುಂಬಿದ ಸತ್ಯವೇದವನ್ನು ತೆಗೆದು, ಅದರಲ್ಲೇನಾದರೂ ಇದೆಯಾ ಎಂದು ನೋಡಿದನು. ಅವನು ಸತ್ಯವೇದದಲ್ಲಿ ಆ ರಸೀದಿ ಕಂಡು ಅದನ್ನು ತೆಗೆಯುವಾಗ, ಹಾಳೆಯನ್ನು ತಿರುಗಿಸಿದಾಗ ಅವನ ಕಣ್ಣು ಮೇಲಿನ ವಾಗ್ಧಾನ ವಚನದ ಮೇಲೆ ಬಿದ್ದಿತು. ಅವರು ಆ ವಚನ ಓದಿದಾಗ ದೇವರು ಅವರ ಹೃದಯವನ್ನು ಮುಟ್ಟಿದನು. ಆಗ ಅವರಿಗೆ ತನ್ನ ಪಾಪ ಮತ್ತು ನ್ಯೂನ್ಯತೆಯ ಬಗ್ಗೆ ಅಪರಾಧಿ ಮನೋಭಾವವುಂಟಾಯಿತು. ಅದೇ ಜಾಗದಲ್ಲಿ, ಅವರು ಮೊಣಕಾಲೂರಿ ಪ್ರಾರ್ಥಿಸಿದರು, “ನಾನು ಅಪರಾಧಿ! ನಾನು ಇಂಥಹ ಹೀನ ಸ್ಥಿತಿಯಲ್ಲಿದ್ದೇನೆ! ನನ್ನ ಕಾಲುಗಳು ಸರಿಯಾದ ದಾರಿಯಿಂದ ಜಾರಿದೆ ಮತ್ತು ನಾನು ಪುಡಿಯಾಗುತ್ತಿದ್ದೇನೆ” ಎಂದು. ಅವರು ತಮ್ಮ ಪಾಪಗಳನ್ನೆಲ್ಲಾ ಅರಿಕೆ ಮಾಡಿದನು ಮತ್ತು ದೇವರ ಕೃಪೆ ಅವರನ್ನು ಹೇರಳವಾಗಿ ತುಂಬಿಕೊಂಡಿತು. ದೇವರು ದಿಢೀರನೇ ಅವರ ಹೃದಯವನ್ನು ತಲೆಕೆಳಗಾಗಿ ಮಾಡಿದನು. ರಕ್ಷಣೆಯ ಆನಂದ ಅವರನ್ನು ತುಂಬಿತು. ನಿಧಾನವಾಗಿ, ಅವರ ಜೀವನ ದೇವರಲ್ಲಿ ಬಲ ಹೊಂದಿತು.

ನನ್ನ ಪ್ರಿಯರೇ! ಪ್ರತಿ ಸಾರಿ ನಮ್ಮ ಪಾದಗಳು ಜಾರುತ್ತಿದೆಯಾ ಎಂದು ಅನ್ನಿಸಿದಾಗ, ನಾವು ಕರ್ತನನ್ನು ನೋಡಿ, ಆತನ ಶಕ್ತಿಯಿಂದ ನಮ್ಮನ್ನು ಬಲಪಡಿಸುವಂತೆ ಕೇಳಿಕೊಳ್ಳೋಣ. ಆತನು ನಮಗೆ ತನ್ನ ಕೃಪೆಯನ್ನು ಕೊಟ್ಟು ನಮ್ಮ ಎಲ್ಲಾ ತೊಂದರೆಗಳಿಂದಲೂ, ಭಾರಗಳಿಂದಲೂ ನಮ್ಮನ್ನು ಬಿಡುಗಡೆ ಮಾಡುತ್ತಾನೆ. ಯಾವ ಪರಿಸ್ಥಿತಿಯನ್ನಾಗಲೀ ಬದಲಾಯಿಸಲು ಆತನ ಕೃಪೆ ಸಾಕು ಮತ್ತು ಕೃಪಾಸನ ನೋಡಿ ಆತನಿಂದ ನಡೆಸಲ್ಪಡೋಣ (ಕೀರ್ತ. 23:1-2).

ಪ್ರಾರ್ಥನೆ :- ಪ್ರಿಯ ಕರ್ತನೇ, ನಿನ್ನ ಕೃಪೆ ಎಷ್ಟೊಂದು ದೊಡ್ಡದಾಗಿದೆ ಮತ್ತು ಅದ್ಭುತವಾಗಿದೆ. ಇಂದಿನಿಂದ, ಯಾವಾಗ ನಮ್ಮ ಕಾಲು ಜಾರಿದಂತೆಲ್ಲಾ ನಿನ್ನನ್ನು ನೋಡಲು ಸಹಾಯ ಮಾಡು. ನನ್ನ ಬಲಹೀನತೆಯಲ್ಲೂ ಮತ್ತು ಕಾಯಿಲೆಯಲ್ಲೂ ನನ್ನನ್ನು ಅಲಂಗಿಸು ಮತ್ತು ಬಲಪಡಿಸು, ನಡೆಸು ಮತ್ತು ಆಶೀರ್ವದಿಸು. ಕರ್ತನಾದ ಯೇಸುವಿನ ಬಲಪಡಿಸುವ ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

Please fill this form to receive Manna ministry “Daily Devotional‎” in Kannda https://goo.gl/forms/SAa56s26a1vNc2pp1 To (Free)

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.👇

For more install our app from Play Store

Manna Ministry Kannada👇

https://play.google.com/store/apps/details?id=org.mannaministry.app&hl=en

1000 Praises Kannada👇

https://play.google.com/store/apps/details?id=org.mannaministry1000praises.app&hl=en

Mannaministries.in@gmail.com

For Daily Devotion Contact: +91 9964247889

1 comment

  1. Naresh Timothy says:

    Praise the Lord JESUS
    Amen

Comments

Your email address will not be published. Required fields are marked *

WhatsApp us