ನಿಮ್ಮ ಆತ್ಮ ಸಾಕ್ಷಿಯನ್ನು ಶುದ್ದಿಮಾಡುವ ರಕ್ತ!

  Posted on   by   1 comment

“ಕ್ರಿಸ್ತನ ರಕ್ತವು ಎಷ್ಟೂ ಹೆಚ್ಚಾಗಿ ನಮ್ಮನ್ನು ನಿರ್ಜೀವಕರ್ಮಗಳಿಂದ ಬಿಡಿಸಿ ನಾವು ಜೀವವುಳ್ಳ ದೇವರನ್ನು ಆರಾಧಿಸುವವರಾಗುವಂತೆ ನಮ್ಮ ಮನಸ್ಸನ್ನು ಶುದ್ದೀಕರಿಸುವದಲ್ಲವೇ” (ಇಬ್ರಿ. 9:14).

ದೇವರೇ, ನಮಗೆ ಮನಸಾಕ್ಷಿಯನ್ನು ಕೊಟ್ಟಿದ್ದಾನೆ. ಅದು ಯಾವುದು ಸರಿ ಯಾವುದು ತಪ್ಪು ಎಂದು ಹೇಳುತ್ತದೆ (ರೋಮ. 2:15). ಅನನೀಯ ಮತ್ತು ಸಫ್ಪೈರ ಅವರು ತಮ್ಮ ಜೀವನವನ್ನು ದುಷ್ಟ ಮನಸ್ಸಾಕ್ಷಿಯಿಂದ ಹಾಳು ಮಾಡಿಕೊಂಡರು (ಅ.ಕೃ. 5ನೇ ಅಧ್ಯಾಯ). ಯೇಸು ತನ್ನ ರಕ್ತವನ್ನು ಶಿಲುಬೆಯ ಮೇಲೆ ಸುರಿಸಿದ್ದದರಿಂದ, ದುಷ್ಟ ಆತ್ಮಸಾಕ್ಷಿ ಶುದ್ಧಿಮಾಡಬಹುದು ಮತ್ತು  ಪವಿತ್ರತೆಗೊಳಿಸಬಹುದು. ನಾವು ಹೃದಯವನ್ನು ಪರೀಕ್ಷಿಸಿಕೊಂಡು ದೇಹವನ್ನು ತಿಳಿನೀರಿನಿಂದ ತೊಳೆದುಕೊಂಡು ಪರಿಪೂರ್ಣವಾದ ನಂಬಿಕೆಯುಳ್ಳವರಾಗಿಯೂ ಯಥಾರ್ಥ ಹೃದಯವುಳ್ಳವರಾಗಿಯೂ ದೇವರ ಬಳಿಗೆ ಬರೋಣ (ಅ.ಕೃ. 24:16).

ಒಂದು ಸಲ, ಒಬ್ಬ ಮನುಷ್ಯನು ಒಂದು ಕಛೇರಿಯಲ್ಲಿ ಕೆಲಸಮಾಡುತ್ತಿದ್ದನು, ಒಂದು ದಿನ, ಅವನು ತನ್ನ ಮೇಲಾಧಿಕಾರಿಯ ಹತ್ತಿರ ಸೇವೆಯಲ್ಲಿ ಭಾಗವಹಿಸಲು ಅಪ್ಪಣೆ ಪಡೆಯಲು ಹೋದ. ಆದರೆ, ಆ ಹಿರಿಯ ಅಧಿಕಾರಿ ಅಪ್ಪಣೆ ತಿರಸ್ಕರಿಸಿದ್ದು ಮಾತ್ರವಲ್ಲ ಕೆಲವು ಕಟು ಮಾತುಗಳನ್ನು ಹೇಳಿ ಅವನನ್ನು ಕಳುಹಿಸಿ ಬಿಟ್ಟನು. ಆದ್ದರಿಂದ, ಅವನ ಸಹಚರರೂ ಸುಳ್ಳು ವಿವರಣೆ ನೀಡಿ ರಜೆಯನ್ನು ಪಡೆದು ಕೂಟದಲ್ಲಿ ಭಾಗವಹಿಸುವಂತೆ ಸಲಹೆಯಿತ್ತರು. ಆದರೆ ಆ ಉದ್ಯೋಗಿ, ಒಂದು ದೀನತೆಯ ಪತ್ರ ಬರೆದನು ಅದರಲ್ಲಿ “ಸರ್! ಈ ಬಾರಿ ನಾನು ಈ ಕೂಟದಲ್ಲಿ ಭಾಗವಹಿಸದಿದ್ದರೆ ನಾನು ಇನ್ನು ಎಂದಿಗೂ ಅಲ್ಲಿಗೆ ಹೋಗಿ ಭಾಗವಹಿಸಲು ಆಗುವದಿಲ್ಲ. ಆದ್ದರಿಂದ ನಾನು ಈ ಕೂಟದಲ್ಲಿ ಭಾಗವಹಿಸುವ ತೀರ್ಮಾನವನ್ನು ನಿಮಗೆ ಅವಿಧೇತೆಯಿಂದ ಮಾಡುತ್ತಿದ್ದೇನೆ. ದಯಮಾಡಿ ಕ್ಷಮಿಸಿ, ಈ ಕಾಗದವನ್ನು ಆತನ ಟೇಬಲ್ ಮೇಲೆ ಇಟ್ಟು ಶಕ್ತಿಯುತ ಕೂಟದಲ್ಲಿ ಭಾಗವಹಿಸಲು ಹೊರಟು ಹೋದನು. ಅಲ್ಲಿ, ಆತನು ಸಂತೋಷದಿಂದ ಅನೇಕ ಆಶೀರ್ವಾದಗಳನ್ನು ದೇವರಿಂದ ಪಡೆದನು ಮತ್ತು ಆತನ ಪ್ರಸನ್ನತೆಯನ್ನು ಅನುಭವಿಸಿದನು. ಕೊನೆ ದಿನ ಅವನು ದೇವರಿಗೆ ಪ್ರಾರ್ಥಿಸಿದನು”. ಪ್ರಿಯ ಕರ್ತನೇ! ನಿನಗೆ ಗೊತ್ತು ನಾನು ಈ ಶಕ್ತಿಯುತ ಕೂಟವನ್ನು ಒಂದು ಶುದ್ಧ ಆತ್ಮ ಸಾಕ್ಷಿಯಿಂದ ಭಾಗವಹಿಸಿದ್ದೇನೆ. ಇದು ನಿನ್ನ ಸೇವೆಯಾಗಿರುವದರಿಂದ ನಾನು ಇಲ್ಲಿಗೆ ಬಂದೆ. ಈಗ ಕರ್ತನೇ, ದಯಮಾಡಿ ಸಹಾಯ ಮಾಡು” ಎಂದು. ನಂತರ, ಅವನು ತನ್ನ ಕಛೇರಿಗೆ ಹೋದನು, ಅವನು ಕಛೇರಿಗೆ ಹೋದಾಗ, ಅವನ ಹಿರಿಯ ಅಧಿಕಾರಿ ವರ್ಗಾವಣೆಯು ಹೊಂದಿದ್ದು, ಹೊಸ ಅಧಿಕಾರಿ ಅಧಿಕಾರವನ್ನು ಪಡೆದಿರುವದು ಗೊತ್ತಾಯಿತು. ಈ ಮನುಷ್ಯ, ಕರುಣೆಯ ಮತ್ತು ಪ್ರೀತಿಯ ಮನುಷ್ಯನಾಗಿದ್ದನು, ಈ ಉದ್ಯೋಗಿಯನ್ನು ಹೆಸರಿಟ್ಟು ಕರೆದು ಮುಖದ ಮೇಲೆ ಮುಗುಳ್ನಗೆಯಿಂದ ಹೇಳಿದರು “ಅಭಿನಂದನೆ! ನಿನಗೆ ಬಡ್ತಿ ದೊರತಿದೆ! ನಾನು ನಿನ್ನನ್ನು ಭೇಟಿಮಾಡಿ ಈ ಶುಭ ಸುದ್ದಿ ತಿಳಿಸಲು ಕಾತುರದಿಂದ ಕಾದಿದ್ದೆ,” ಅವನ ಸಂತೋಷಕ್ಕೆ ಪಾರವೇ ಇಲ್ಲ. ಅವನು ಈ ಬಡ್ತಿಯ ಆದೇಶ ಪಡೆಯಲು, ಇದು ಅವನ ಶುದ್ಧ ಆತ್ಮ ಸಾಕ್ಷಿಯಿಂದಲೂ, ದೇವರಲ್ಲಿ ಇದ್ದ ಬಲವಾದ ನಂಬಿಕೆಯಿಂದಲೂ, ಅವನ ಸೇವೆಯಿಂದಲೂ, ಸಾಧ್ಯವಾಯಿತು. ಹೌದು! ಹೇಗೆ ದೇವರು ತನ್ನನ್ನು ನಂಬಿದವರನ್ನು ಆಶೀರ್ವದಿಸುತ್ತಾನೆಂದು!

ಪ್ರಾರ್ಥನೆ : ಪ್ರಿಯ ಕರ್ತನೇ! ಮೇಲಿನ ಪ್ರಸಂಗದಲ್ಲಿ ಆ ಸಹೋದರನಿಗೆ ಕೊಟ್ಟ ಹಾಗೆ ನನಗೂ ಶುದ್ಧ ಆತ್ಮ ಸಾಕ್ಷಿಯನ್ನು ಕೊಡು. ನಿನ್ನ ರಕ್ತದಿಂದ ಶುದ್ಧೀಕರಿಸಿ ನನ್ನನ್ನು ಪವಿತ್ರ ವ್ಯಕ್ತಿಯನ್ನಾಗಿ ಮಾಡು. ಇಂದಿನಿಂದ, ನನ್ನ ಜೀವನವನ್ನು ಈ ದಿನ ಶುದ್ಧ ಮಾಡಿದ್ದಕ್ಕಾಗಿ ನಿನಗೆ ವಂದನೆ. ಸಾಟಿಯಿಲ್ಲದ ಯೇಸುವಿನ ಹೆಸರಿನಲ್ಲಿ ನಾನು ಪ್ರಾರ್ಥಿಸುವೆ, ಆಮೆನ್.

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ  whatsapp ಗೆ join ಆಗಿ  Click here to join :??

http://bit.ly/2qZzHAR

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.?

https://play.google.com/store/apps/details?id=org.anudinadamanna.app

For Daily Devotion Contact: +91 9964247889

1 comment

  1. Uma Kumar. says:

    Nice story.

Comments

Your email address will not be published. Required fields are marked *

× WhatsApp us