ನಿರಂತರ ತಂದೆಯ ಶಾಶ್ವತ ಪ್ರೀತಿ!

  Posted on   by   No comments

“ತಂದೆಯು ಮಕ್ಕಳನ್ನು ಕನಿಕರಿಸುವಂತೆ ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ” (ಕೀರ್ತ. 103:13).

ಈ ಪ್ರಾಪಂಚಿಕ ಜೀವನದಲ್ಲಿ ತಂದೆಯ ಪ್ರೀತಿ ಸಾಟಿಯಿಲ್ಲದ್ದು. ಮಗು ತಪ್ಪು ಮಾಡಿದಾಗ ತಂದೆ ಕೋಪದಿಂದ ಮಗುವನ್ನು ದಂಡಿಸುತ್ತಾನೆ. ಆದರೆ ಮರುಕ್ಷಣವೇ, ಅವನು ಎಲ್ಲವನ್ನು ಮರೆತು ಮಗುವನ್ನು ಕ್ಷಮಿಸುತ್ತಾನೆ. ಮಗುವನ್ನು ಅಪ್ಪಿಕೊಂಡು ಪ್ರೀತಿಸುವದನ್ನು ಮುಂದುವರಿಸುತ್ತಾನೆ. ಇದು ತಂದೆಯ ನಿಜವಾದ ಪ್ರೀತಿ! ಇದು ಅದ್ವಿತೀಯ ಸಾಟಿಯಿಲ್ಲದು (ಕೀರ್ತ. 103:13). ಇಂದಿನ ಪ್ರಪಂಚದಲ್ಲಿ ಅನೇಕರು ಇಂಥಹ ಸಾಟಿಯಿಲ್ಲದ ಪ್ರೀತಿಗಾಗಿ ಹಾತೊರೆಯುತ್ತಿರುತ್ತಾರೆ. ಆದರೆ ಪರಲೋಕ ತಂದೆಯ ಪ್ರೀತಿ ಪ್ರಾಪಂಚಿಕ ತಂದೆಯ ಪ್ರೀತಿಗಿಂತಲೂ ಬಹಳ ದೊಡ್ಡದ್ದೂ, ಎತ್ತರವೂ ಆಗಿದೆ. ಈ ಹೊಸ ತಿಂಗಳಲ್ಲಿ ದೈವೀಕ ಮತ್ತು ತ್ಯಾಗದ ಪ್ರೀತಿಯನ್ನು ದೇವರು ಶಿಲುಬೆಯ ಮೇಲೆ ತೋರಿಸಿ ನಿನ್ನನ್ನು ನಿಜಕ್ಕೂ ಆಶೀರ್ವದಿಸಿದ್ದಾನೆ (1 ಯೋಹಾ. 4:10).

ಒಂದು ಸಾರಿ, ಒಬ್ಬ ತಂದೆಯಿದ್ದನು. ಅವನು ಆತನ ಮಗನನ್ನು ಎಲ್ಲಾ ಪ್ರೀತಿಯಿಂದಲೂ, ಸ್ನೇಹದಿಂದಲೂ ಬೆಳೆಸಿದನು. ದುರದೃಷ್ಟವಶಾತ್, ಮಗನು ಶುದ್ಧವಾದ, ಅದ್ವಿತೀಯ ಪ್ರೀತಿಯ ಬೆಲೆಯನ್ನು, ಪ್ರಾಮುಖ್ಯತೆಯನ್ನು ತಿಳಿಯಲಿಲ್ಲ. ಒಂದು ದಿನ, ಮಗನು ತಂದೆಯನ್ನು ಕೆಟ್ಟ ಮಾತಿನಿಂದ ಬೈದು ತನ್ನ ಸ್ನೇಹಿತನೊಡನೆ ಮನೆಬಿಟ್ಟು ಹೋದನು. ತಂದೆ ಆಘಾತವಾಗಿ ಹೃದಯ ಮುರಿದವನಾದನು. ಕಣ್ಣಿನಲ್ಲಿ ನೀರಿನಿಂದ, ದಿನದಿಂದ ದಿನಕ್ಕೆ ಮಗನ ಬರೋಣಕ್ಕಾಗಿ ಕಾದಿದ್ದನು. ಒಂದು ದಿನ, ಮಗನಿಂದ ಒಂದು ಪತ್ರವನ್ನು ಪಡೆದನು. ಅದರಲ್ಲಿ ಮಗನು ಹೀಗೆ ಬರೆದಿದ್ದನು, “ಪ್ರಿಯ ತಂದೆಯೇ, ನಿನ್ನ ಪ್ರೀತಿ ಮತ್ತು ಸ್ನೇಹದ ಬೆಲೆಯನ್ನು ಅರ್ಥಮಾಡಿಕೊಳ್ಳದೆ ಇದ್ದದಕ್ಕಾಗಿ ಕ್ಷಮೆ ಯಾಚಿಸುತ್ತೇನೆ. ನಿನಗೆ ಕೆಟ್ಟ ಮಾತುಗಳನ್ನು ಉಪಯೋಗಿಸಿದ್ದರಿಂದಲೂ ಮತ್ತು ಕೆಟ್ಟ ಸ್ನೇಹಿತರ ಜೊತೆ ಸೇರಿ ಮನೆ ಬಿಟ್ಟದಕ್ಕಾಗಿ ನಾನು ಪಶ್ಚಾತ್ತಾಪಪಡುತ್ತೇನೆ. ಆದರೆ ಈಗ, ನಾನು ಎಲ್ಲಾ ದುಷ್ಟ ಮತ್ತು ಚರಿತ್ರ ಹೀನ ಜೀವಿತಕ್ಕಾಗಿ ಪಶ್ಚಾತ್ತಾಪಪಡುತ್ತೇನೆ. ನಾನು ನಿನ್ನ ಸ್ವಾರ್ಥರಹಿತ ಮತ್ತು ನಿಜವಾದ ಪ್ರೀತಿಗಾಗಿ ನಾನು ಕಾತುರದಿಂದ ಕಾದಿದ್ದೇನೆ. ದಯಮಾಡಿ ನನ್ನ ಅನೀತಿಯ ಜೀವನವನ್ನು ಕ್ಷಮಿಸಿ, ನಿನ್ನ ಮಗನನ್ನಾಗಿ ನನ್ನನ್ನು ಸ್ವೀಕರಿಸುವಿಯಾ” ಎಂದು. ಒಡನೆಯೇ, ತಂದೆ ತನ್ನ ಸ್ನೇಹಿತನನ್ನು, ಮಗನನ್ನು ಕರೆದುಕೊಂಡು ಬರಲು ಕಳುಹಿಸಿದನು. ಅವನ ಎಲ್ಲಾ ತಪ್ಪು ದಾರಿಗಳನ್ನು ಕ್ಷಮಿಸಿ, ಅವನ ಪ್ರೀತಿಯ ಮಗನನ್ನಾಗಿ ಸ್ವೀಕರಿಸಿದನು. ಇದು ತಂದೆಯ ಸತ್ಯವಾದ ಪ್ರೀತಿ! ಆದರೆ, ನಮ್ಮ ಪರಲೋಕದ ತಂದೆ ನಮ್ಮನ್ನು ಎಷ್ಟೊಂದು ಪ್ರೀತಿಸಿದನೆಂದರೆ ಅವನು ತನ್ನ ಒಬ್ಬನೇ ಮಗನನ್ನು ಕಳುಹಿಸಿ, ಯಾರಾರು ಆತನಲ್ಲಿ ನಂಬಿಕೆಯಿಡುತ್ತಾರೋ ಅವರು ಸಾಯದೆ ನಿತ್ಯ ಜೀವ ಪಡೆಯುತ್ತಾರೆ (ಯೋಹಾ. 3:16).

ನನ್ನ ಪ್ರಿಯ ಸ್ನೇಹಿತರೇ, ನೀವು ಯಾಕೆ ನಿಮ್ಮ ಜೀವನದಲ್ಲಿ ರೇಗುವುದು ಅಥವಾ ಕೋಪ. ನಿಮಗೆ ಯಾವ ಖರ್ಚಿಲ್ಲದೆ ನಿಜವಾದ ದೈವ ಪ್ರೀತಿ ಕೊಡುವವರಿರುವಾಗ? ನಮ್ಮ ಪ್ರೀತಿಯ ಪರಲೋಕದ ತಂದೆಯನ್ನು ಮಾತ್ರ ನೋಡಿರಿ. ಆಗ ಆತನು ಹೇರಳವಾಗಿ ನಿಮ್ಮನ್ನು ಆಶೀರ್ವದಿಸುತ್ತಾನೆ (ಧರ್ಮೋ. 30:20).

ಪ್ರಾರ್ಥನೆ : ಪ್ರಿಯ ಕರ್ತನೇ, ಪ್ರಪಂಚದ ಈ ಪ್ರೀತಿ ನಮ್ಮನ್ನು ಕುರುಡುಗೊಳಿಸಿದೆ. ಆದರೆ ಇಂದಿನಿಂದ ನಾನು ನಿನ್ನ ಸಾಟಿಯಿಲ್ಲದೆ ಪ್ರೀತಿಯನ್ನು ನಂಬುತ್ತೇನೆ ಮತ್ತು ನನ್ನ ಜೀವನವನ್ನು ನಿನಗೆ ಸಮರ್ಪಿಸುತ್ತೇನೆ. ಇಂದಿನಿಂದ, ನಾನು ಪ್ರಪಂಚದ ಕಡೆಗೆ ತಿರುಗದಂತೆ ನನಗೆ ಸಹಾಯ ಮಾಡಿ ಆಶೀರ್ವದಿಸಿ ನನ್ನನ್ನು ರಕ್ಷಿಸು. ಯೇಸು ಕ್ರಿಸ್ತನ ಹೆಸರಿನಲ್ಲಿ ಪ್ರಾರ್ಥಿಸುತ್ತೇನೆ, ಆಮೆನ್.

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ  whatsapp ಗೆ join ಆಗಿ  Click here to join :??

http://bit.ly/2qZzHAR

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.?

https://play.google.com/store/apps/details?id=org.anudinadamanna.app

Comments

Your email address will not be published. Required fields are marked *

× WhatsApp us