ನಿರಾಶನಾಗದೇ ಪ್ರಾರ್ಥಿಸು – ಆತ್ಮೀಕ ಕಥೆ 31

  Posted on   by   10 comments

faithmanprayingchurchjpg

“ಯೆಹೋವನೇ, ನಿನಗೆ ಗಟ್ಟಿಯಾಗಿ ಮೊರೆ ಇಡುತ್ತೇನೆ; ನನ್ನನ್ನು ಕರುಣಿಸಿ ಸದುತ್ತರವನ್ನು ದಯಪಾಲಿಸು” (ಕೀರ್ತ. 27:7).

ರಿಚರ್ಡ್ ನಿಕ್ಸನ್ ಅಧ್ಯಕ್ಷನಾಗಿದ್ದಾಗ ಅಮೇರಿಕೆಯಲ್ಲಿ ಒಂದು ಕ್ರಾಂತಿ ನಡೆದ ಕಾರಣ, ಅಧ್ಯಕ್ಷರಿಗೆ ನಿಕಟರಾದ ಬಹಳ ಅಧಿಕಾರಿಗಳು ಸೆರೆಮನೆಗೆ ಹಾಕಲ್ಪಟ್ಟರು. ಅವರಲ್ಲಿ ಒಬ್ಬನೂ ಚಕ್ ಕೋಲ್‍ಸನ್. ಆತನು ಐಶ್ವರ್ಯ, ಶಕ್ತಿ ಮತ್ತು ಸುಖಭೋಗದಲ್ಲಿ ಜೀವಿಸಿ ಸೆರೆಮನೆಯಲ್ಲಿ ಬಹಳ ಕಷ್ಟಪಟ್ಟನು. ಪ್ರತಿದಿನವೂ ಆತನಿಗೆ ಒಂದು ಕರಾಳ ಜೀವನದಂತೆ ಇತ್ತು. ಆದರೂ ಒಬ್ಬನೇ ಸತ್ಯ ದೇವರೆಂದು ಯೇಸುಕ್ರಿಸ್ತನನ್ನು ತನ್ನ ಹೃದಯದಲ್ಲಿ ಸ್ವೀಕರಿಸಿ ಕೊಂಡಿದ್ದರಿಂದ, ಆತನು ಸ್ವಲ್ಪ ಸಮಾಧಾನ ಹೊಂದಿದನು.
ಕೆಲವು ದಿನಗಳು ಕಳೆದನು, ಒಂದು ದಿನ ಆತನು ಬಹಳ ಕಷ್ಟಕರವಾದ ಕೆಲಸ ಮಾಡಬೇಕಾಯಿತು. ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಒಂದು ಸಹಿಸಲಾರದ ದು:ಖ ಮತ್ತು ಕೊರಗು ಆತನನ್ನು ಬಾಧಿಸಿತು. ಆತನು ಕೈಯಲ್ಲಿರುವುದನ್ನು ಎಸೆದುಬಿಟ್ಟನು. ಆತನು ಜೋರಾಗಿ ಕೂಗಿದನು. ಪ್ರಯೋಜನವಿಲ್ಲದೆ ಈ ದೇವರನ್ನು ನಾನು ಸೇವಿಸುತ್ತಿರುವೆನು. ಈತನ ಸೇವೆ ಮಾಡುವುದರಿಂದ ನನಗೇನು ಸಿಕ್ಕುತ್ತದೆ? ಈತನು ನನ್ನ ಚಿಕ್ಕ ಅವಶ್ಯಕತೆಗೆ ಸಹಾಯ ಮಾಡಿರುವನೇ? ನನ್ನ ಯಾವ ಪ್ರಾರ್ಥನೆಯನ್ನಾದರೂ ಕೇಳುವನೋ? ಎಂದು ಆತನು ಕಣ್ಣೀರು ಸುರಿಸಿದನು. ಇದ್ದಕ್ಕಿದಂತೆ ಸೆರೆಮನೆಯ ಮೇಲ್ವಿಚಾರಕರಿಂದ ಮೈಕ್‍ನ ಮೂಲಕ ಒಂದು ಘೋಷಣೆಯನ್ನು ಕೇಳಿದನು. “ಚಕ್ ಕೋಲ್‍ಸನ್, ಇಲ್ಲಿ ಕೆಲವು ಜನರು ನಿನ್ನನ್ನು ನೋಡಲು ಬಂದಿರುವರು. ಈಗಲೇ ಬಾ” ತನ್ನ ಕಣ್ಣೀರನ್ನು ಒರೆಸಿಕೊಂಡು, ಮನಸ್ಸಿಲ್ಲದೆ ಆತ ಹೊರಗೆ ಹೋದನು. ಅಲ್ಲಿ ತನಗಾಗಿ ಕಾಯುತ್ತಿದ್ದ, ತನ್ನ ಹತ್ತಿರದ ಸ್ನೇಹಿತರನ್ನು ಕಂಡನು. ಬೇಸರದಲ್ಲಿ ಅವರನ್ನು ಕೇಳಿದನು; “ಯಾಕೆ ನೀವು ಇಲ್ಲಿ ಬಂದಿರಿ”. ಆದರೆ ಅವರು ಆವೇಶದಿಂದ ಹೇಳಿದರು; “ಚಿಕ್ ಕೋಲ್‍ಸನ್, ನಿನಗೆ ಬಿಡುಗಡೆಯಾಗಿದೆ, “ಆತನು ಅವರನ್ನು ನಂಬಲಾಗಲಿಲ್ಲ. ಬೇಸರಗೊಂಡಿದ್ದ ಅವನ ಹೃದಯ ಈ ಶುಭಸಮಾಚಾರ ಸ್ವೀಕರಿಸಲಿಲ್ಲ. ನೋಡಲು ಬಂದವರಲ್ಲಿ ಒಬ್ಬರು ಅಧ್ಯಕ್ಷರಿಂದ ಸಹಿ ಹಾಕಿದ ಕಾಗದವನ್ನು ಚಕ್ ಕೋಲ್‍ಸನ್‍ಗೆ ತೋರಿಸಿದರು. ಅದು “ಚಕ್ ಕೋಲ್‍ಸನ್ ಈ ದಿನದಿಂದ ನೀನೊಬ್ಬ ಬಿಡುಗಡೆಯಾದ ಪ್ರಜೆ. ನಾನು ಬಿಡುಗಡೆ ಕೊಟ್ಟಿದ್ದೇನೆ”. ಇದನ್ನು ನೋಡುತ್ತಾ, ಆತನ ಸ್ನೇಹಿತರನ್ನು ಅತಿಯಾದ ಸಂತೋಷದಲ್ಲಿ ಅಪ್ಪಿಕೊಂಡನು. ಆತನು ಗಟ್ಟಿಯಾಗಿ ಮಗುವಿನಂತೆ ಅತ್ತನು. ಆನಂದಬಾಪ್ಪ ಎಲ್ಲರ ಕಣ್ಣುಗಳಲ್ಲಿ ತುಂಬಿತು.

“ಆಗ ನೀನು ನನ್ನ ಗೋಳಾಟವನ್ನು ತಪ್ಪಿಸಿ ಸಂತೋಷದಿಂದ ಕುಣಿದಾಡುವಂತೆ ಮಾಡಿದ್ದೀ” (ಕೀರ್ತ. 30:11).

Categories: Spiritual Stories

10 comments

 1. Deepa says:

  Praise God thank u lord

 2. Sudesh Raj j says:

  👍be dependent god only never let u down u r way

 3. Prathana says:

  Praise the Lord

 4. Venkatesh says:

  Praise the lord ord

 5. Ashwini. B says:

  Amen halleluya praise the lord

 6. Pushpa says:

  Praise the lrd

 7. Susheele says:

  Praise the lord u r mighty God love u jesus

 8. Dinesh putran says:

  Praise the Lord
  Hallelujah Amen Amen Amen Amen Amen

 9. Manju paul says:

  Jesus is son of God he is mediatior God and men ex 2john 1:9 Anyone who runs ahead and does not continue in the teaching of Christ does not have God; whoever continues in the teaching has both the Father and the Son.
  5:19 Jesus gave them this answer: “I tell you the truth, the Son can do nothing by himself; he can do only what he sees his Father doing, because whatever the Father does the Son also does.,johnJohn.

Comments

Your email address will not be published. Required fields are marked *

WhatsApp us