ನೀವು ಎಲ್ಲಾ ಜನರಿಗಿಂತ ಆಶೀರ್ವದಿಸಲ್ಪಡುವಿರಿ!

  Posted on   by   No comments

“ನೀವು ಎಲ್ಲಾ ಜನರಿಗಿಂತಲೂ ಹೆಚ್ಚಾಗಿ ದೇವರ ಅನುಗ್ರಹವನ್ನು ಹೊಂದಿದವರಾಗಿರುವಿರಿ” (ಧರ್ಮೋ. 7:14).

ಇದು ಈ ದಿನ ದೇವರು ನಿಮಗಾಗಿ ಕೊಡುವ ಪೂರ್ಣ ಸಮಗ್ರ ಆಶೀರ್ವಾದ ಆಗಿದೆ. ಈ ರೀತಿಯಾಗಿ ದೇವರು ಮನುಷ್ಯನನ್ನು ಆಶೀರ್ವದಿಸುವಾಗ ಆತನು ಎಲ್ಲಾ ಪೂರ್ಣ ಮತ್ತು ಒಳ್ಳೇ ಸಂಗತಿಗಳನ್ನು ಆತನ ಜೀವಿತದಲ್ಲಿ ಪಡೆಯುತ್ತಾನೆ. ಯೆಹೋವನ ಆಶೀರ್ವಾದವು ಭಾಗ್ಯದಾಯಕವು (ಜ್ಞಾನೋ. 10:22). ಈ ವಚನದಂತೆ, ಆತನನ್ನು ಪೂರ್ಣ ಹೃದಯದಿಂದ ಯಾರ್ಯಾರು ನಂಬುತ್ತಾರೋ ಆತನು ಎಲ್ಲಾ ಅವಶ್ಯಕತೆಗಳನ್ನು ಅಂದರೆ ಹಣ ಮತ್ತು ವಸ್ತುಗಳ ರೂಪದಲ್ಲಿ ಅದ್ಭುತವಾದ ರೀತಿಯಲ್ಲಿ ಸಂಧಿಸುತ್ತಾನೆ. ನಮ್ಮ ಕರ್ತನು ಎಂದಿಗೂ ನಿಮ್ಮ ಜೀವನದಲ್ಲಿ ಕೊರತೆಯುಂಟು ಮಾಡುವದಿಲ್ಲ. ಆದರೆ ಆಶೀರ್ವಾದವನ್ನು ಹೇರಳವಾಗಿ ಸರಿಯಾದ ಸಮಯದಲ್ಲಿ ಪೂರೈಸುತ್ತಾನೆ. ಆತನು ಎಂದಿಗೂ, ಬಲಹೀನತೆ, ಕಾಯಿಲೆ ಅಥವಾ ರೋಗ ನಿನ್ನ ಮೇಲೆ ತರುವದಿಲ್ಲ. ಆತನು ಗುಣಪಡಿಸುವ ದೇವರು ಮತ್ತು ನಿಮ್ಮನ್ನು ಆರೋಗ್ಯವಂತರಾಗಿಯೂ ಗಟ್ಟಿಯಾಗಿಯೂ (ವಿಮೋ. 15:26) ಇಡುತ್ತಾನೆ (ಯೆಶಾ. 26:3). ಆತನು ನಿಮ್ಮನ್ನು ಹೇರಳವಾಗಿಯೂ, ಅದ್ಭುತವಾಗಿಯೂ ಎಲ್ಲರಿಗಿಂತಲೂ ಮೇಲಾಗಿ ಇಡುತ್ತಾನೆ.

ಒಬ್ಬ ಯೌವನಸ್ಥನು ಒಂದು ಪುಸ್ತಕವನ್ನು ಓದಿದನು. ಅದರ ಹೆಸರು “ದೇವರು ಇಲ್ಲ”. ಇದನ್ನು ತಮಾಷೆಗಾಗಿ ಒಬ್ಬ ನಾಸ್ತಿಕ ಬರೆದದ್ದು. ಬೇಗನೇ ಅವನು ಅವರ ಬಗ್ಗೆ ಇತರರಿಗೆ ಹೇಳುವುದಕ್ಕೋಸ್ಕರ ಅದನ್ನು ದಿನವೂ ಆಳವಾಗಿ ಓದಲು ಆರಂಭಿಸಿದನು. ದಿನಗಳು ಕಳೆದಂತೆ, ಅವನು ಗಲಿಬಿಲಿಗೊಂಡು ಅವನು ತನ್ನ ಮನಸ್ಸಿನ ಸಮಾಧಾನ ಕಳೆದುಕೊಂಡನು. ಕತ್ತಲೆಯ ಪದರ ಅವನನ್ನು ಸುತ್ತುವರೆಯಿತು. ಅವನ ಭವಿಷ್ಯ ಕರಾಳವಾಗಿಯೂ, ನಿರೀಕ್ಷೆಯಲ್ಲಿದ್ದಾಗಿಯೂ ಅವನಿಗೆ ಕಂಡುಬಂದಿತು. ಆದ್ದರಿಂದ ಒಂದು ದಿನ ಅವನು ಒಬ್ಬ ದೇವರ ಸೇವಕರ ಹತ್ತಿರ ಈ ಪುಸ್ತಕದ ಬಗ್ಗೆ ವಿವರಣೆ ವಿಷಯ ಮತ್ತು ಅದರ ಬಗ್ಗೆ ಅನುಮಾನಗಳನ್ನು ಕೇಳಲು ಹೋದನು. ಆ ದೇವರ ಮನುಷ್ಯನು ಪ್ರೀತಿಯಿಂದಲೂ, ತಾಳ್ಮೆಯಿಂದಲೂ ಸ್ನೇಹದಿಂದಲೂ ದೇವರ ಪ್ರೀತಿಯ ಬಗ್ಗೆಯೂ, ಮತ್ತು ಆತನು ಹೇಗೆ ಈಗಲೂ ಜೀವಿಸುವವನಾಗಿದ್ದಾನೆ ಮತ್ತು ಅವನು ಸಮಾಧಾನ, ಸಂತೋಷ ಹೇಗೆ ಆತನು ಕೊಡುತ್ತಾನೆ ಮತ್ತು ಹೇಗೆ ಆತನು ಬೆಳಕನ್ನು ಕೊಟ್ಟು ತನ್ನ ಜನರನ್ನು ಆತನ ದಾರಿಯಲ್ಲಿ ನಡೆಸುತ್ತಾನೆ ಎಂದು ಹೇಳಿದನು. ಇದು ತಾನು ಎಂಥ ಭಯಾನಕವಾದ ಮತ್ತು ಅವನ ಜೀವನ ಮತ್ತು ದಾರಿ ಎಷ್ಟು ಕಷ್ಟವಾಗಿದೆ ಎಂದು ತಿಳಿಯಿತು. ಒಡನೆಯೇ ಅವನು ಮೊಣಕಾಲೂರಿ ಪ್ರಾರ್ಥಿಸಿದನು “ಪ್ರಿಯ ಕರ್ತನೇ! ಇಂದು ನೀನು ನನಗೆ ಸತ್ಯದ ಮತ್ತು ದೈವೀಕ ದಾರಿಯನ್ನು ತೋರಿಸಿದ್ದಕ್ಕಾಗಿಯೂ ಮತ್ತು ನನ್ನ ಜೀವನದ ತಪ್ಪು ಮತ್ತು ಅಂಧಕಾರದ ಭಾಗವನ್ನು ತಿಳಿದುಕೊಳ್ಳುವಂತೆ ಮಾಡಿದ್ದಕ್ಕಾಗಿ ವಂದನೆ”. ಅಂದಿನಿಂದ ಅವನು ದೇವರನ್ನು ಗಟ್ಟಿಯಾಗಿ ಜೀವಮಾನದ ಎಲ್ಲಾ ಸಮಯದಲ್ಲಿ ಹಿಡಿದುಕೊಂಡನು. ಅವನ ಸಾಧಾರಣ ಜೀವನ ಅಸಾಧಾರಣವಾಯಿತು ಮತ್ತು ಎಲ್ಲಾ ಕಡೆ ಅಭಿವೃದ್ಧಿ ಹೊಂದಿತು. ಆನರು ಈ ಗಣನೀಯ ಬದಲಾವಣೆಯನ್ನು ಅವನ ಜೀವನದ ಬಗ್ಗೆ ಕೇಳಿದಾಗ, ಅವನು ಧೈರ್ಯವಾಗಿ ಹೇಳಿದನು “ನಾನು ಕರ್ತನನ್ನು ಹುಡುಕಿ ಪಡೆದುಕೊಂಡೆ” ಎಂದು. ಇವನ ಸಾಕ್ಷಿ ಅನೇಕ ಜೀವನದಲ್ಲಿ ದೇವರನ್ನು ದೃಷ್ಟಿಸುವಂತೆ ಮಾಡಿತು. ಪ್ರಿಯರೇ! ನಿನ್ನ ಜೀವನದ ಬಗ್ಗೆ ಏನು? ನಿನಗೆ ಆತನು ಗೊತ್ತಿದ್ದರೂ ನೀನು ಉದಾಸೀನವಾಗಿದ್ದೀಯೋ? ಇದು ನಿನಗೆ ಒಳ್ಳೆಯದಲ್ಲ, ಈ ಅಜ್ಞಾನ ಮತ್ತು ಉದಾಸೀನ ಕೇವಲ ಶಾಪಗಳನ್ನು ತರುತ್ತದೆ ಹೊರತು ಆಶೀರ್ವಾದಗಳಲ್ಲಿ ಮೇಲಿನ ಪ್ರಸಂಗದಲ್ಲಿನ ಯೌವನಸ್ಥ ಹುಡುಗನಂತೆ ಮೊಣಕಾಲೂರಿ ದೇವರಿಗೆ ಶ್ರದ್ಧೆಯಿಂದ ಪ್ರಾರ್ಥಿಸಿರಿ ಮತ್ತು ಆತನಿಗೆ ನಿನ್ನ ಜೀವನವನ್ನು ಸಮರ್ಪಿಸಿರಿ. ಆತನು ತನ್ನ ಪರಲೋಕದ ಆಶೀರ್ವಾದಗಳನ್ನು ಕೊಟ್ಟು ನಿನ್ನನ್ನು ಸಂತೋಷವಾಗಿಯೂ ಆರೋಗ್ಯವಾಗಿಯೂ ಮಾಡುತ್ತಾನೆ (ಜ್ಞಾನೋ. 13:21).

ಪ್ರಾರ್ಥನೆ : ಪ್ರಿಯ ಕರ್ತನೇ ಇಂದಿನಿಂದ ನಿನ್ನ ಪರಲೋಕ ಆಶೀರ್ವಾದಗಳನ್ನು ನನ್ನ ಜೀವನದಲ್ಲಿ ಕೊಡು. ಇಂದಿನಿಂದ, ನಿನ್ನ ಜ್ಞಾನ ತಿಳುವಳಿಕೆಯಲ್ಲಿ ಹೆಚ್ಚಾಗುವಂತೆ ಕೃಪೆಮಾಡು. ನನ್ನನ್ನು ಪ್ರಕಾಶವಾದ ಬೆಳಕಿನಂತೆ ಹೊಳೆಯಲು ಮತ್ತು ಇತರರನ್ನು ನಿನ್ನ ಬಳಿಗೆ ತರುವಂತೆ ಸಹಾಯ ಮಾಡಿ, ಆಶೀರ್ವದಿಸಿ ನನ್ನನ್ನು ನಡೆಸು! ನಮ್ಮ ಕರ್ತನಾದ ಯೇಸುವಿನ ಆಶೀರ್ವದಿತ ನಾಮದಲ್ಲಿ ನಾನು ಪ್ರಾರ್ಥಿಸುವೆ, ಆಮೆನ್.

 

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ  whatsapp ಗೆ join ಆಗಿ  Click here to join :??

http://bit.ly/2qZzHAR

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.?

https://play.google.com/store/apps/details?id=org.anudinadamanna.app

For Daily Devotion Contact: +91 9964247889

Comments

Your email address will not be published. Required fields are marked *

× WhatsApp us