ನೀವು ಹೋಗುವಲ್ಲೆಲ್ಲಾ ದೇವರು ನಿಮ್ಮ ಸಂಗಡ ಇದ್ದಾನೆ !

  Posted on   by   No comments

ed4839e1295aefcda3b5e97bbe2f8ab0--joshua---christian-life

“ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಅಂಜಬೇಡ, ಕಳವಳಗೊಳ್ಳಬೇಡ ನೀನು ಹೋಗುವಲ್ಲೆಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುತ್ತಾನೆ” (ಯೆಹೋ. 1:9).

ಮೋಶೆ ದೇವರ ಮನುಷ್ಯನಾಗಿದ್ದನು! ಅವನು ದೇವರ ವಾಕ್ಯದಿಂದ ಆತನ ಚಿತ್ತವನ್ನು ಅರಿತುಕೊಂಡು ಇಸ್ರಾಯೇಲ್ಯರನ್ನು ನಡೆಸಿದನು. ಯೆಹೋಶುವ ಅವನ ಸಂಗಡವಿದ್ದು ಅವನಿಗೆ ನೆರವಾದನು. ಈ ಸಮಯದಲ್ಲಿ ಮೋಶೆ ಸತ್ತಾಗ, ದೇವರು ಯೆಹೋಶುವನನ್ನು ಆರಿಸಿ ಇಸ್ರಾಯೇಲ್ಯರನ್ನು ನಡೆಸಿ ಆತನ ಚಿತ್ತವನ್ನು ಪೂರೈಸಲು ಕರೆದನು. ಯೆಹೋಶುವನಿಗೆ ಈ ಕರೆ ಬಂದಾಗ, ಅವನಿಗೆ ದಿಗ್ಬ್ರಮೆಯುಂಟಾಯಿತು. ಆ ಸಮಯದಲ್ಲಿ ದೇವರು ಅವನನ್ನು ಸಂತೈಸಿ, “ಭಯಪಡಬೇಡ, ಮನಗುಂದದಿರು. ಸ್ಥಿರಚಿತ್ತನಾಗಿದ್ದು ಧೈರ್ಯದಿಂದಿರು” ಎಂದನು. ಆತನು ಅವನನ್ನು ಸಂತೈಸಿದಲ್ಲದೆ, ಬಲಪಡಿಸಿ ಅವನ ಸಂಗಡವಿದ್ದು ತನ್ನ ಯೋಜನೆಯನ್ನು ಪೂರೈಸಲು ನಡೆಸಿದನು (ಯೆಶಾ. 41:10).

ಒಬ್ಬ ಯೌವನಸ್ಥನು ತನ್ನ ತಂದೆ ತಾಯಂದಿರ ಜೊತೆ ಇದ್ದನು. ಅವನಿಗೂ ಅವನ ತಂದೆ ತಾಯಂದಿರಿಗೂ ದೇವರ ಅರಿವಿಲ್ಲದೆ ಲೌಕೀಕ ಜೀವಿತ ಜೀವಿಸುತ್ತಿದ್ದರು. ಒಂದು ದಿನ, ಕರ್ತನು ತನ್ನನ್ನೇ ದರ್ಶನದ ಮೂಲಕ ಇವನಿಗೆ ಪ್ರಕಟಿಸಿಕೊಂಡನು. ತನ್ನ ಜೀವವನ್ನು ಕ್ರೂಜೆಯ ಮೇಲೆ ಹೇಗೆ ಅರ್ಪಿಸಿ ಅವನನ್ನು ರಕ್ಷಿಸಿದನೆಂದು ತೋರಿಸಿದನು. ಆ ಕ್ಷಣದಲ್ಲೇ ಅವನು ತನ್ನ ಜೀವಿತವನ್ನು ಸಂಪೂರ್ಣವಾಗಿ ದೇವರಿಗೆ ಅರ್ಪಿಸಿದನು. ಈ ಬದಲಾವಣೆಯನ್ನು ಕಂಡ ಅವನ ತಂದೆ ತಾಯಂದಿರು, ಅವನನ್ನು ತಿರಸ್ಕರಿಸಿದರು. ಅವನ ಜೀವಿತವನ್ನು ಬದಲಾಯಿಸಲು ಬೆದರಿಸಿದರು. ಆದರೆ ಈ ಯೌವನಸ್ಥನು ಕರ್ತನಲ್ಲಿದ್ದ ಪ್ರೀತಿ ಮತ್ತು ನಂಬಿಕೆಯಲ್ಲಿ ಸ್ಥಿರಚಿತ್ತನಾಗಿದ್ದನು. ತನ್ನ ನಂಬಿಕೆಯಿಂದ ಹಿಂದೆ ಹೋಗಲು ನಿರಾಕರಿಸಿದನು. ತಂದೆ ತಾಯಿಯರು ಬೇರೆ ದಾರಿಯಿಲ್ಲದೆ ಅವನನ್ನುಮನೆಯಿಂದ ಓಡಿಸಿದರು. ಅವನಿಗೆ ನೋವಾಗಿದ್ದರೂ ಸಹ ಕ್ರಮೇಣವಾಗಿ, ದೇವರ ವಾಗ್ದಾನದಂತೆ ತನ್ನನ್ನು ಕೈಬಿಡುವದಿಲ್ಲ, ತೊರೆಯುವದಿಲ್ಲ ಎಂಬಂತೆ ತನ್ನನ್ನು ಸಂತೈಸಿಕೊಂಡನು. ಆದ್ದರಿಂದ, ಅವನು ಜೀವಿತದಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಗಿದ್ದರೂ ಸಹ, ಅವುಗಳನ್ನು ಜಯಿಸುವಂತೆ ದೇವರು ಅವನಿಗೆ ಬಲ ನೀಡಿದನು. ತನ್ನ ಸೇವೆಯ ಮೂಲಕ ಅನೇಕ ಆತ್ಮಗಳನ್ನು ರಕ್ಷಿಸುವಂತೆ ದೇವರು ಸಹಾಯ ಮಾಡಿದನು. ದೇವರು ತನ್ನ ಸೇವಕನೊಬ್ಬನು ಈ ಯೌವನಸ್ಥನನ್ನು ದತ್ತು ತೆಗೆದುಕೊಂಡು ಬೆಳೆಸುವಂತೆ ಮಾರ್ಗ ಮಾಡಿದನು. ಈ ಸಮಯದಲ್ಲಿ ತನ್ನ ವೃದ್ಧ ತಂದೆ ತಾಯಿಯರಿಗೆ ಏಕಾಂಗಿಯಾಗಿ ನಿಸ್ಸಾಹಾಯಕರಾಗಿದ್ದರು. ಆದ್ದರಿಂದ, ಅವರನ್ನು ಸಹ ತನ್ನ ಮನೆಗೆ ಕರೆದುಕೊಂಡು ಬಂದು ಅವರನ್ನು ಪ್ರೀತಿ ವಾತ್ಸಲ್ಯದಿಂದ ನೋಡಿಕೊಂಡನು. ಶೀಘ್ರದಲ್ಲಿ ಅವರೂ ಸಹ ಕರ್ತನಾದ ಯೇಸುವನ್ನು ತಮ್ಮ ಸ್ವಂತ ರಕ್ಷಕನನ್ನಾಗಿ ಅಂಗೀಕರಿಸಿಕೊಂಡು ತಮ್ಮ ಮಗನ ಸಂಗಡ ಜೀವಿತದ ಅಂತ್ಯದವರೆವಿಗೂ ಜೀವಿಸತೊಡಗಿದರು.

ನನ್ನ ಪ್ರಿಯರೇ, ಯೇಸು ಕ್ರಿಸ್ತನನ್ನು ಅಂಗೀಕರಿಸಿಕೊಂಡಾಗ ನೀವು ಸಹ ನಿಮ್ಮ ಜೀವಿತದಲ್ಲಿ ಅನೇಕ ತೊಂದರೆ ಕಷ್ಟಗಳನ್ನು ಎದುರಿಸಬಹುದು. ಆದರೆ, ಇದೆಲ್ಲದರ ನಡುವೆ ನೀವು ನಿಮ್ಮ ನಂಬಿಕೆ ಮತ್ತು ಆತನ ಮೇಲೆ ಪ್ರೀತಿಯಲ್ಲಿ ಸ್ಥಿರಚಿತ್ತವಾಗಿದ್ದರೆ, ಆತನು ನಿಮ್ಮಲ್ಲಿ ಬಂದು ನೆಲೆಗೊಂಡು, ನಿಮ್ಮನ್ನು ಅದ್ಭುತವಾಗಿ ನಡೆಸಿ ನಿಮ್ಮ ಜೀವಿತದಲ್ಲಿ ಬೇಕಾದ ವಿಶ್ರಾಂತಿಯನ್ನು ನೀಡುವನು (ವಿಮೋ. 33:14).

ಪ್ರಾರ್ಥನೆ : ಪ್ರಿಯ ರಕ್ಷಕನೇ, ಇಂದಿನಿಂದ, ನೀನು ನನ್ನ ಸಂಗಡ ನೆಲೆಗೊಂಡು ನನ್ನ ಜೀವಿತವು ನಿನಗೋಸ್ಕರ ಉಲ್ಲಾಸಕರವಾಗಿರಲಿ. ನೀನು ಯೆಹೋಶುವನನ್ನು ನಡೆಸಿದಂತೆ, ನನ್ನನ್ನು ಸಹ ನಡೆಸು. ನನ್ನ ಕೈ ಹಿಡಿದು ನನ್ನ ಸಂಗಡ ನಡೆ. ನನ್ನನ್ನು ನನ್ನ ಜೀವಿತದಲ್ಲಿ ಅತ್ಯಧಿಕವಾಗಿ ಆಶೀರ್ವದಿಸು, ಕರ್ತನಾದ ಯೇಸುವಿನ ಅಸಮಾನವಾದ ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

MANNA MINISTRIES
Mannaministries.in@gmail.com
*For Daily Devotion Contact: +91 9964247889*

For more install our App: 

https://play.google.com/store/apps/details?id=org.mannaministry.app&hl=en

https://play.google.com/store/apps/details?id=org.mannaministry1000praises.app&hl=en

 

Comments

Your email address will not be published. Required fields are marked *

WhatsApp us