ನೂರು ಅಂಕಗಳು – ಆತ್ಮೀಕ ಕಥೆ 25

  Posted on   by   No comments

100-percent-one-hundred-top-score-total-complete-road-3-d-animation_huahtyo_l_thumbnail-full09

ಇಗೋ ಒಂದು ಸಣ್ಣಕಥೆ ಪರಲೋಕವನ್ನು ಪ್ರವೇಶಿಸಲು ತ್ವರೆ ಪಡುತ್ತಿದ್ದ ಒಬ್ಬರನ್ನು, ಬಾಗಿಲಲ್ಲಿದ್ದ ದೇವದೂತನೊಬ್ಬನು ತಡೆದು ನಿಲ್ಲಿಸಿದನು. “ನಿನ್ನನ್ನು ನಾನು ಯಾಕೆ ಒಳಗೆ ಬಿಡಬೇಕು? ಎಂಬುದನ್ನು ಹತ್ತು ವಾಕ್ಯಗಳಲ್ಲಿ ಹೇಳು. 100 ಅಂಕಗಳನ್ನು ಪಡೆದರೆ ಒಳಕ್ಕೆ ಹೋಗಬಹುದು” ಎಂದನು.  ಆತನು ಉತ್ತರ ಹೇಳಲಾರಂಭಿಸಿದರು. “ನಾನು ಭಾನುವಾರಗಳಲ್ಲಿ ತಪ್ಪದೆ ದೇವಾಲಯಕ್ಕೆ ಹೋಗುತ್ತೇನೆ” ದೇವದೂತನು ಅಂಕೆಗಳನ್ನು ಹಾಕಿದನು. “ಉದಾರವಾಗಿ ಕಾಣಿಕೆ ಕೊಡುತ್ತಿದ್ದೇನೆ, ನಮ್ಮ ಊರಿನಲ್ಲಿ ಶಾಲೆ ಕಟ್ಟಿಸಿಕೊಟ್ಟಿದ್ದೇನೆ” ದೇವದೂತನು ಮೂರು ಅಂಕೆಗಳನ್ನು ಹಾಕಿದನು. “ಸಬ್ಬತ್ತು ಶಾಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಉಪಾಧ್ಯಾಯನಾಗಿದ್ದೇನೆ” ಅದಕ್ಕೆ ಐದು ಅಂಕೆಗಳು ದೊರೆತವು. ಬೇರೇನೂ ಮಾಡಿದೆ? ಆತನ ಸ್ವಲ್ಪ ಯೋಚಿಸಲಾರಂಭಿಸಿದನು. “ಹೌದು ನಾನು ದೇವಾಲಯದ ಗಾನವೃಂದದಲ್ಲಿ ಸೇರಿ ಕ್ರಿಸ್‍ಮಸ್ ಗೀತೆಗಳನ್ನು ಹಾಡಿದ್ದೇನೆ” ಸರಿ ಎರಡು ಅಂಕಗಳನ್ನು ಕೊಡುತ್ತೇನೆಂದನು ದೇವದೂತನು. ಈ ವಿಧದಲ್ಲಿ ಅಂಕೆಗಳನ್ನು ಗಳಿಸುವುದಾದರೆ ನಾನು ಪರಲೋಕ ಸೇರುವುದು ಸಾಧ್ಯವಿಲ್ಲ ಎಂದು ತಿಳಿದು ಆತನು ಭಯದಿಂದ ನಡುಗಿದನು, ಮತ್ತು ದೂತನನ್ನು ಕುರಿತು ಭಯಭಕ್ತಿಯಿಂದ; ಅಯ್ಯಾ ದೇವರ ಕೃಪೆಯ ಮೂಲಕ ನಂಬಿಕೆಯಿಂದ ರಕ್ಷಿಸಲ್ಪಟ್ಟೆನು ಇದು ನನ್ನಿಂದುಂಟಾದುದಲ್ಲ, ಅದು ದೇವರ ವರವೆ, ಯೇಸುಕ್ರಿಸ್ತನ ಅಮೂಲ್ಯವಾದ ರಕ್ತದಿಂದಲೇ ರಕ್ಷಣೆ ಹೊಂದಿದೆನು.

ಅವರು ಹೇಳಿ ಮುಗಿಸುವ ಮೊದಲೇ ಪರಲೋಕದ ಬಾಗಿಲು ತೆರೆಯಲ್ಪಟ್ಟವು. “ನೂರು ಅಂಕಗಳು” ಎಂದು ಹೇಳಿದನು ದೇವದೂತನು. ಆತನು ಉತ್ಸಾಹದಿಂದ ಒಳಗೆ ಪ್ರವೇಶಿಸಿದರು.

“ಆದರೆ ಕರುಣಾನಿಧಿಯಾಗಿರುವ ದೇವರು ನಮ್ಮ ಮೇಲೆ ಮಹಾ ಪ್ರೀತಿಯನ್ನಿಟ್ಟು, ಅಪರಾಧ ದೆಸೆಯಿಂದ ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು (ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ)” (ಎಫೆ. 2:4-5).

Categories: Spiritual Stories

Comments

Your email address will not be published. Required fields are marked *

WhatsApp us