ನೆನೆಸಿಕೋ! – ಆತ್ಮೀಕ ಕಥೆ 27

  Posted on   by   6 comments

3Rs-4

“ಯಾಕೋಬೇ, ಇಸ್ರಾಯೇಲೇ, ಈ ವಿಷಯಗಳನ್ನು ಜ್ಞಾಪಕದಲ್ಲಿಟ್ಟುಕೋ. ನನ್ನ ಸೇವಕನಾಗಿದ್ದೀಯಲ್ಲವೇ, ಇಸ್ರಾಯೇಲೇ, ನಾನು ನಿನ್ನನ್ನು ನಿರ್ಮಿಸಿದೆನು; ನೀನು ನನ್ನ ಸೇವಕನು, ನಿನ್ನನ್ನು ಮರೆತು ಬಿಡೆನು” (ಯೆಶಾ. 4:21).

ಐಶ್ವರ್ಯವಂತನಾದ ಒಬ್ಬ ಭಕ್ತನು ತನ್ನ ಕಾರಿನಲ್ಲಿ ಹೋಗುತ್ತಿದ್ದಾಗ, ಒಬ್ಬ ಬಡಹುಡುಗನು, ಕೊಳಕಾದ ಚಿಂದಿ ಉಡುಪಿನಲ್ಲಿ ಕಸದ ತೊಟ್ಟಿಯಲ್ಲಿದ್ದ ಎಂಜಲನ್ನು ಆಯ್ದು ತಿನ್ನುತ್ತಿದ್ದುದನ್ನು ನೋಡಿದನು. ನಿರ್ಗತಿಕನಾಗಿ ಉಣ್ಣಲು, ಉಡಲು ಇಲ್ಲದೇ ಅವನ ಶರೀರ ಒಣಗಿ ಎಲುಬಿನ ಗೂಡಾಗಿತ್ತು. ಆ ಭಕ್ತನು ಕಾರನ್ನು ನಿಲ್ಲಿಸಿ ಅವನನ್ನು ಫೋಟೋ ಹಿಡಿದನು. ಆತನ ಮನಸ್ಸು ಬಹಳ ಮರುಗಿತು. ಅವನನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡು ತನ್ನ ಮನೆಗೆ ಕರೆತಂದನು. ಅವನನ್ನು ತನ್ನ ಮಗನನ್ನಾಗಿ ಸ್ವೀಕರಿಸಿಕೊಂಡು ತನ್ನ ಪ್ರೀತಿಯನ್ನು ಅವನಿಗೆ ಎರೆದು ಸಾಕಿದರು”.

ಹಣವಂತರ ಮನೆಯ ಮಗನಾಗಿ ಒಳ್ಳೆಯ ಭೋಜನ ಆರೈಕೆಯಿಂದ ಆ ಹುಡುಗ ಚೆನ್ನಾಗಿ ಬೆಳೆದು ಯೌವನಸ್ಥನಾದನು. ಕ್ರಮೇಣ ತನ್ನ ಸಾಕು ತಂದೆಯ ಪ್ರೀತಿಯನ್ನು ಮರೆತನು. ಒಂದು ದಿನ ಕುಡಿದು ಧೂಮಪಾನ ಮಾಡುತ್ತಾ ಮನೆಗೆ ಬಂದ ಮಗನನ್ನು ನೋಡಿದ ತಂದೆಯ ಮನಸ್ಸಿಗೆ ಬಹು ವ್ಯಥೆಯಾಯಿತು. ಕೂಡಲೇ ಆತನು ಹೋಗಿ, ಚಿಕ್ಕಂದಿನಲ್ಲಿ ತೆಗೆದ ಫೋಟೋವನ್ನು ತಂದು ಮಗನಿಗೆ ತೋರಿಸಿ, “ಇದು ಯಾರೆಂದು ಗೊತ್ತಿದೆಯಾ ಮಗನೆ” ಎಂದು ಕಣ್ಣೀರುಬಿಡುತ್ತಾ ಕೇಳಿದನು.
ಆಗ ಅವನ ಕಣ್ಣು ತೆರೆಯಿತು, ಬುದ್ಧಿಬಂದಿತು. “ಕರ್ತನು ಮಾಡಿದ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ” ಎಂದು ಸತ್ಯವೇದ ಪದೇಪದೇ ನೆನಪು ಮಾಡುತ್ತದೆ.

“ಯೆಹೋವನ ಕೃತ್ಯಗಳನ್ನು ವರ್ಣಿಸುವೆನು; ಪೂರ್ವದಿಂದ ನೀನು ನಡೆಸಿದ ಅದ್ಭುತಗಳನ್ನು ನೆನಪು ಮಾಡಿಕೊಳ್ಳುವೆನು” (ಕೀರ್ತ. 17:11). ಕರ್ತನನ್ನು ಸ್ತುತಿಸು!
“ಹಳೇ ದಿನಗಳನ್ನು ನೆನಸಿಕೊಳ್ಳುತೇವೆ; ನಿನ್ನ ಎಲ್ಲಾ ಕಾರ್ಯಗಳನ್ನೂ ಧ್ಯಾನಿಸುತ್ತೇನೆ” (ಕೀರ್ತ. 143:5).

Categories: Spiritual Stories

6 comments

 1. Mamata C says:

  Wonderful message inspired by reading this story.Ur doing Good job by reading likethis msgs one life will be saved.Continue I am paying for ur ministry’s.

 2. John says:

  It is good story

 3. PAMPAPATHI V says:

  Really Good Story…. This kind of Stories may Change so many Name sake Christen Souls.. Hallelujah….
  May God Bless Your Ministry.

 4. Francis says:

  Very good message. Really touched the heart.

 5. Mary Deepthi.J says:

  Thanks for reminding my old story, and praise the lord………once again thank you to all

 6. Krishna says:

  Good food

Comments

Your email address will not be published. Required fields are marked *

WhatsApp us