ಪರಿಶುದ್ಧ ಪರ್ವತವು ದೇವರ ಗುಡಾರವಾಗಿದೆ!

  Posted on   by   No comments

5452bc77cd9f666ae75a6d47cc8dc711

“ಯೆಹೋವನೇ ನಿನ್ನ ಗುಡಾರದಲ್ಲಿ ಇಳುಕೊಂಡಿರುವದಕ್ಕೆ ಯೋಗ್ಯನು ಯಾರು? ನಿನ್ನ ಪರಿಶುದ್ಧ ಪರ್ವತದಲ್ಲಿ ವಾಸಿಸತಕ್ಕವನು ಎಂಥವನಾಗಿರಬೇಕು?” (ಕೀರ್ತ. 15:1).

ನಮ್ಮಲ್ಲಿ ಅನೇಕರು ಈ ವಚನದಂತೆ ದೇವರ ಗುಡಾರದಲ್ಲಿ ನೆಲೆಸಿ ಆತನ ಪರಿಶುದ್ಧ ಪರ್ವತದಲ್ಲಿ ವಾಸಿಸಲು ಸಾಧ್ಯವಾ? ಎಂದು ಅನುಮಾನ ಪಡುತ್ತಾರೆ. ಆದರೆ ಈ ಒಂದು ಅನುಭವ ಪಡೆಯುವಂತೆ ಕರ್ತನು ನಮ್ಮನ್ನು ಆಶೀರ್ವದಿಸಲು ಕಾತುರದಿಂದ ಕಾಯುತ್ತಿದ್ದಾನೆ ಎಂದು ನಮಗೆ ಗೊತ್ತಿರಬೇಕು. ನಾವು ನೀತಿವಂತ ಜೀವನ ನಡೆಸಿದಾಗ ಸತ್ಯವನ್ನೇ ಮಾತನಾಡಿ ನಮ್ಮ ಪೂರ್ಣ ಹೃದಯದಿಂದ ಆತನಿಗೆ ಭಯಪಟ್ಟು ನಡೆದರೆ ಕರ್ತನು ನಮ್ಮನ್ನು ಆ ದೈವೀಕ ಅನುಭವದಿಂದ ಆಶೀರ್ವದಿಸುತ್ತಾನೆ. ಆದ್ದರಿಂದ ದಿನವೂ ಪ್ರಾರ್ಥಿಸುವಂತೆ ತೀರ್ಮಾನಿಸೋಣ. “ಪ್ರಿಯ ಕರ್ತನೇ! ನಿನ್ನಂತೆ ಇರಲು ನನ್ನನ್ನು ಬದಲಾಯಿಸು. ನನ್ನ ಜೀವನವನ್ನು ನಿನಗೆ ಸಮರ್ಪಿಸಿ ನಿನ್ನ ದೃಷ್ಟಿಯಲ್ಲಿ ಉಲ್ಲಾಸಕರವಾದ ಜೀವನ ನಡೆಸುವಂತೆ ಮಾಡು” ಎಂದು ಹೇಳಿರಿ. ಈ ಅನುಭವಕ್ಕಾಗಿ ಯಾಕೋಬನು ಆತನೊಡನೆ ಹೋರಾಡಿದಂತೆ ಆತನಲ್ಲಿ ನೆಲೆಸಿ ಆತನ ಸಾಟಿಯಿಲ್ಲದ ಆಶೀರ್ವಾದಗಳನ್ನು ನಿನ್ನ ಜೀವನದಲ್ಲಿ ಪಡೆದುಕೋ.

ಒಂದು ಸಲ ಒಬ್ಬ ದೈವೀಕ ಮತ್ತು ಭಕ್ತನಾದ ಮನುಷ್ಯನು ತನ್ನ ಕುಟುಂಬದೊಡನೆ ಇದ್ದನು. ಆತನು ನಂಬಿಗಸ್ಥನೂ ಕರ್ತನನ್ನು ಹುಡುಕುವದರಲ್ಲಿ ತನ್ನ ಕುಟುಂಬದೊಡನೆ ಯಥಾರ್ಥವಾಗಿದ್ದನು. ಆತನು ತನ್ನ ನಿತ್ಯದ ಪ್ರಾರ್ಥನೆಯಲ್ಲಿಯೂ ದಿನವೂ ಸತ್ಯವೇದ ಓದುವುದರಲ್ಲಿಯೂ ಮತ್ತು ಅದರ ಮೇಲೆ ಧ್ಯಾನ ಮಾಡುವದರಲ್ಲಿಯೂ ಕ್ರಮಬದ್ಧನಾಗಿದ್ದನು. ಅವನು ಪೂರ್ಣ ಹೃದಯದಿಂದ ದೇವರಿಗೆ ಭಯಪಡುತ್ತಿದ್ದನು. ಆದ್ದರಿಂದ ಅವನ ಜೀವನದಲ್ಲಿ ಅವನು ಬಹಳವಾಗಿ ಆಶೀರ್ವಾದ ಪಡೆದಿದ್ದನು. ಇದರಿಂದಾಗಿ ಅವನ ಹತ್ತಿರದ ನೆಂಟರೂ ಸ್ನೇಹಿತರೂ ತಮ್ಮ ಜೀವನದಲ್ಲಿ ಕರ್ತನ ಬಗ್ಗೆ ತಿಳಿಯದೇ ಇದ್ದವರು ಅವನ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದರು. ಹೊಟ್ಟೆಕಿಚ್ಚು ಮತ್ತು ದ್ವೇಷದಿಂದ ಅವನನ್ನು ಹಾಸ್ಯವಾಗಿ ಕರೆಯುತ್ತಿದ್ದರು, “ದೊಡ್ಡ ಪವಿತ್ರ ಮನುಷ್ಯ! ದೊಡ್ಡ ದೈವ ಭಕ್ತಿ” ಎಂದು. ಆದರೆ ಅವನು ಅವರ ಮೂರ್ಖಮಾತಿಗೆ ಯಾವ ಬೆಲೆಯನ್ನು ಕೊಡದೆ ತನ್ನ ದಿನ ನಿತ್ಯದ ಕೆಲಸ ಮುಂದುವರಿಸಿದನು. ಅವನು ದೇವರನ್ನು ಗಟ್ಟಿಯಾಗಿ ಹಿಡಿದುಕೊಂಡು ತನ್ನ ಹೃದಯದಿಂದಲೂ ಮನಸ್ಸಿನಿಂದಲೂ ಆತನನ್ನು ನಂಬಿದನು. ಆದ್ದರಿಂದ ದೇವರು ಅವನನ್ನು ಆಶೀರ್ವದಿಸಿದ್ದು ಮಾತ್ರವಲ್ಲ, ಅವನ ಕುಟುಂಬ ಸದಸ್ಯರನ್ನು ಆಶೀರ್ವದಿಸಿದನು. ಆತನು ಅವರ ಮಗನನ್ನು ಹೇರಳವಾಗಿ ಅಭಿವೃದ್ಧಿಯಿಂದ ಅವನ ಪ್ರಾಪಂಚಿಕ ಜೀವನದಲ್ಲಿಯೂ ಮತ್ತು ದೇವರಿಗೆ ಆತ್ಮೀಕ ಜೀವನದಲ್ಲೂ ಅವರು ಹೇಳಿದರು, “ಅಯ್ಯಾ! ನಾವು ಅಜ್ಞಾನದ ಜೀವಿತ ಜೀವಿಸಿ ದೇವರನ್ನು ನಂಬಲು ಮರೆತೆವು. ಆದ್ದರಿಂದ, ಈಗ ನಾವು ಅಧಿಕವಾಗಿ ಅನುಭವಿಸುತ್ತಿದ್ದೇವೆ. ಆದರೆ ಆ ಮನುಷ್ಯನನ್ನು ನೋಡಿರಿ. ದೇವರು ಹೇಗೆ ಅವನನ್ನು ಅಭಿವೃದ್ಧಿ ಪಡಿಸಿದ್ದಾನೆ” ಎಂದು. ನಂತರ, ಅವರು ದೇವರ ಕಡೆ ತಿರುಗಿಕೊಂಡು ಆತನನ್ನೇ ಹಿಂಬಾಲಿಸಲು ಆರಂಭಿಸಿದರು.

ಪ್ರಿಯರೇ! ದೇವರಿಗೆ ವಿಭಿನ್ನವಾಗಿದ್ದು ಬೇರೆಯವರು ಏನು ಹೇಳುತ್ತಾರೆಯೋ ಅದರಿಂದ ಹಿಂಬಾಲಿಸಲು ಮರೆಯದಿರಿ. ಪರಿಶುದ್ಧ ಮತ್ತು ನೀತಿಯ ಜೀವನ ನಡೆಸಲು ಎಚ್ಚರವಾಗಿರಿ. ಆತನು ನಿಜಕ್ಕೂ ನಿನ್ನನ್ನು ಆಶೀರ್ವದಿಸಿ ನಿನ್ನನ್ನು ಅಭಿವೃದ್ಧಿಗೊಳಿಸುತ್ತಾನೆ. ಬೇರೆಯವರು ನಿಮ್ಮನ್ನು ಗೌರವಿಸಿ ಮರ್ಯಾದೆ ಕೊಡುತ್ತಾರೆ. ನಿಮ್ಮ ಗುಡಾರ ಪರಿಶುದ್ಧ ಪರ್ವತವಾಗುತ್ತದೆ (ಯೆಹೋ. 1:8).

ಪ್ರಾರ್ಥನೆ :- ಪ್ರಿಯ ಕರ್ತನೇ, ನಿನ್ನ ಪರಿಶುದ್ಧ ಪರ್ವತದಲ್ಲಿ ನೆಲೆಸಲು ಒಂದು ಆಶೀರ್ವಾದದ ಅವಕಾಶ ಕೊಡಿರಿ. ಇಂದಿನಿಂದ, ನಿನ್ನಲ್ಲಿ ನೆಲೆಗೊಳ್ಳಲು ನನ್ನ ಜೀವನದ ಎಲ್ಲಾ ಸಮಯದಲ್ಲಿ ಬಲಪಡಿಸು. ನನ್ನನ್ನು ಆಶೀರ್ವದಿಸು ಮತ್ತು ನಡಿಸು. ಕರ್ತನಾದ ಯೇಸುವಿನ ಪರಿಶುದ್ಧ ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

Please fill this form to receive Manna ministry “Daily Devotional‎” in Kannda https://goo.gl/forms/SAa56s26a1vNc2pp1 To (Free)

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.👇

For more install our app from Play Store

Manna Ministry Kannada👇

https://play.google.com/store/apps/details?id=org.mannaministry.app&hl=en

1000 Praises Kannada👇

https://play.google.com/store/apps/details?id=org.mannaministry1000praises.app&hl=en

Mannaministries.in@gmail.com

For Daily Devotion Contact: +91 9964247889

Comments

Your email address will not be published. Required fields are marked *

WhatsApp us