ಪರೋಪಕಾರಿ ಪಾಪಮ್ಮ – ಆತ್ಮೀಕ ಕಥೆ 30

  Posted on   by   No comments

grumpy-old-lady

ಪಾಪಮ್ಮಳಿಗೆ ಇತರರಿಗೆ ಸಹಾಯ ಮಾಡುವದೆಂದರೆ ಬಹಳ ಇಷ್ಟ. ಒಂದು ದಿನ ವೃದ್ಧ ಸ್ತ್ರೀಯೋಬ್ಬಳನ್ನು ರಸ್ತೆಯ ಒಂದು ಕಡೆಯಿಂದ ಮತ್ತೊಂದು ಕಡೆಗೆ ದಾಟಿಸಿ ಹೋದಳು. ಆದರೆ ಆ ವೃದ್ಧ ಸ್ತ್ರೀಗೆ ಹಾಗೆ ದಾಟುವ ಅವಶ್ಯಕವಿರಲಿಲ್ಲ! ಆದಕಾರಣ ಪಾಪಮ್ಮ ಆಕೆಯನ್ನು ಬಿಟ್ಟು ಹೋದ ಕೂಡಲೇ ಪುನಃ ರಸ್ತೆಯ ಆಚೆಕಡೆ ಹೋಗಿ ಬಿಟ್ಟಳು. ಪಾಪಮ್ಮ ತನ್ನ ಗೆಳತಿಯೊಬ್ಬಳ ಪತ್ರವನ್ನು ಅವಳಿಗಾಗಿ ‘ಪೋಸ್ಟ್ ‘ ಮಾಡಿ ಬಂದಳು. ಆದರೆ ಅವಳ ಗೆಳತಿ ಅದರ ಕುರಿತು ಸಂತೋಷಪಡಲಿಲ್ಲ. ಯಾಕೆಂದರೆ, ಆಕೆಯು ಮೇಲೆ ವಿಳಾಸ ಬರೆದಿದ್ದರೂ ಒಳಗೆ ಪತ್ರವನ್ನೇ ಬರೆದಿರಲಿಲ್ಲ! ಪಾಪಮ್ಮ ಅಸ್ವಸ್ಥಳಾಗಿ ಮಲಗಿದ್ದ ನೆರೆಯವಳಿಗೆ ಚಹ ಮಾಡಲು ಹೋಗಿದ್ದಳು. ಚಹ ಕುದಿಯುವದರೊಳಗೆ ಒಂದೆರಡು ವಸ್ತ್ರಗಳನ್ನು ‘ಇಸ್ತ್ರಿ’ ಮಾಡಲಾರಂಭಿಸಿದಳು. ಅಷ್ಟರೊಳಗೆ ಚಹ ಉಕ್ಕಿ ಬರಲು ಪಾಪಮ್ಮ ಅಡಿಗೆ ಮನೆಗೆ ಧಾವಿಸಿ ಸಕ್ಕರೆ ಹಾಕಿ ಸಿದ್ಧ ಮಾಡಿದಳು. ಅಷ್ಟರಲ್ಲಿ ಈಚೆಗೆ ವಸ್ತ್ರ ಚೆನ್ನಾಗಿ ಸುಟ್ಟು ಹೋಗಿತ್ತು! ನೆರೆಯವಳಿಗೆ ಅವಳ ಸಹಾಯ ಹಿಡಿಸಲಿಲ್ಲ. ಅವಳು ಕೊನೆಗೆ ಚಹ ಕೊಟ್ಟು ಹೋಗಬೇಕೆಂದಿದ್ದಾಗ ರೋಗಿಯಾಗಿದ್ದ ನೆರೆಯವಳು ಸಕ್ಕರೆಯಿಲ್ಲದ ಚಹಚಹವನ್ನೇ ಕುಡಿಯುವದು ಎಂಬ ಸಂಗತಿ ನೆನಪಾಯಿತು! ಹೀಗೆ ಪಾಪಮ್ಮಳ ‘ಪರೋಪಕಾರ’ ಯಾವಾಗಲೂ ಇತರರಿಗೆ ತೊಂದರೆಯನ್ನೇ ಉಂಟು ಮಾಡಿತು. (ಈ ಕಥೆಯನ್ನು ಬರೆಯುತ್ತಿರುವಾಗ, ಇದನ್ನು ಸ್ವಲ್ಪ ಹೊತ್ತು ನಿಲ್ಲಿಸಿ,ಪೆನ್ ಒಂದನ್ನು ಹುಡುಕುತ್ತಿದ್ದೆ. ಅದನ್ನು ಹುಡುಕಿ ಕೊಡಲು ಬಂದ ನನ್ನ ಮಗಳು ನಾನು ಕುಡಿಯಬೇಕೆಂದು ಇಟ್ಟಿದ್ದ ಬಿಸಿ ಹಾಲನ್ನು ಚೆಲ್ಲಿಬಿಟ್ಟಳು! ‘ಮಗಳೇ ನೀನೂ ಪರೋಪಕಾರಿ ಪಾಪಮ್ಮಳಾದೆಯಲ್ಲಾ ‘ ಎಂದು ನಾನು ಹೇಳಬೇಕಾಯಿತು.)

ಪ್ರೀಯರೇ, ನಿಮ್ಮ ಪರೋಪಕಾರವು ಇತರರಿಗೆ ತೊಂದರೆಯಾಗಿ ಪರಿಣಮಿಸಿದೆಯೇ? ಇದಕ್ಕೆ ಕಾರಣ ಜ್ಞಾನದ ಕೊರತೆ! ಈ ಸತ್ಯವನ್ನು ತಿಳಿದ ಪಾಪಮ್ಮಳ ಪರೋಪಕಾರವು ಅಂದಿನಿಂದ ಪರಿಣಾಮಕಾರಿಯಾಗಿತ್ತು.

ಅನ್ವಯ :- ಯಾವನಿಗಾದರೂ ಜ್ಞಾನ ಕಡಿಮಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ. (ಯಾಕೋಬ 1:5)

Categories: Spiritual Stories

Comments

Your email address will not be published. Required fields are marked *