ಪಾಪವಾ ನೀಗಿಸಲು ಶಾಪವ ನೀಗಿಸಲು – Kannada Christian songs MP3

  Posted on   by   1 comment

ಪಾಪವಾ ನೀಗಿಸಲು ಶಾಪವ ನೀಗಿಸಲು
ಈ ಲೋಕ ಬಂದನಯ್ಯಾ
ಮನುಷ್ಯರ ಬಿಡಿಸಲು ಪರಲೋಕ ತೆರೆಯಲು
ಶಿಲುಬೆಯ ಹೊತ್ತರಯ್ಯಾ  -2
ಕಣ್ಣಿರನ್ನು ಓರೆಸಿದನಯ್ಯಾ ಸಂತೋಷವಾ ತಂದನಯ್ಯಾ – 2
ನನ್ನಯ ಯೇಸುವೆ – 4

[೧].ಬಂಗಾರವ ಕೇಳಲಿಲ್ಲ ವೈಡೂರ್ಯ ಕೇಳಲಿಲ್ಲ
ಹೃದಯ ಕೇಳಿದನಯ್ಯಾ
ಆಸ್ತಿಯ ಕೇಳಲಿಲ್ಲ ಅಂತಸ್ತು ಕೇಳಲಿಲ್ಲ
ಅಂತರ್ಯ  ಕೇಳಿದನಯ್ಯಾ -2
ನಾ ಹುಡುಕಿ ಹೋಗಲಿಲ್ಲ
ನನ್ನ ಹುಡುಕಿ ಬಂದರಯ್ಯಾ -2
ನನ್ನಯ ಯೇಸುವೆ – 4

[೨]. ತಾಯಿ ನನ್ನ ತೊರೆದರು  ತಂದೆ ನನ್ನ ತೊರೆದರು
ಆತ ನನ್ನ ತೊರೆಯುವುದಿಲ್ಲ
ಸ್ನೇಹಿತರು ಮರೆತರು ಸಂಬಂಧ ಮುರಿದರು
ಆತ ನನ್ನ ಕೈ ಬಿಡಲಾರ -2
ನಿನ್ನ ಹೆಸರಿಡಿದು ಕರೆದಾತನು
ನಿನ್ನ ಕೈ ಹಿಡಿದು ನಡೆಸುವನು  -2
ನನ್ನಯ ಯೇಸುವೆ – 4

Categories: Kannada Mp3 songs

1 comment

  1. Rajkumar says:

    Nice song

Comments

Your email address will not be published. Required fields are marked *