ಪ್ರಾರ್ಥಿಸಲು ನಾಚಿಕೆ ಪಡಬಹುದೇ? – ಆತ್ಮೀಕ ಕಥೆ 38

  Posted on   by   6 comments

ವಿಲ್ಸನ್‍ರವರು ಅಮೇರಿಕದ ಅಧ್ಯಕ್ಷರಾಗಿದ್ದ ಕಾಲದಲ್ಲಿ ಬಹಳ ಮುಖ್ಯವಾದ ಒಂದು ಸಮಸ್ಯೆಯನ್ನು ತೀರಿಸುವದಕ್ಕಾಗಿ ಮಂತ್ರಿಗಳ ಒಂದು ಕೂಟವೇ ಕೂಡಿತ್ತು. ಯಾವ ತೀರ್ಮಾನ ತೆಗೆದುಕೊಳ್ಳೋಣವೆಂದು ಯೋಚಿಸುತ್ತಿರುವಾಗ ಎಲ್ಲರಿಗೂ ಅದು ಬಹಳ ಕಠಿಣವಾಗಿ ತೋರಿತು. ವಿಲ್ಸನ್‍ರವರ ಮುಖದಲ್ಲಿ ಭಯಭಕ್ತಿ ಕಾಣಬಂತು. ಅವರು ಹೇಳಿದರು. ನಿಮಗೆ ಪ್ರಾರ್ಥನೆ ಮಾಡುವುದರಲ್ಲಿ ನಂಬಿಕೆ ಇದೆಯೋ ಇಲ್ಲವೋ, ಆದರೆ ಈ ಸಮಸ್ಯೆಗೆ ನಾವು ದೇವರ ಸಹಾಯ ಕೇಳುವುದು ಬಿಟ್ಟರೆ ಬೇರೆ ಮಾರ್ಗವಿಲ್ಲ. ಬನ್ನಿರಿ, ಪ್ರಾರ್ಥಿಸೋಣ ಎಂದವರೇ ತಕ್ಷಣವೇ ಮೊಣಕಾಲೂರಿ ಪ್ರಾರ್ಥಿಸಲು ಆರಂಭಿಸಿಯೇ ಬಿಟ್ಟರು. ದೇವರು ಅವರನ್ನು ನಡೆಸಿದರು.
ಅಮೇರಿಕ ಪಾರ್ಲಿಮೆಂಟ್ ಸೇರುವಾಗ ಆಗ ಅಧ್ಯಕ್ಷರಾಗಿದ್ದ ಜಾರ್ಜ್ ವಾಷಿಂಗ್‍ಟನ್‍ರವರ ಗುರುತನ್ನು ಕಂಡು ಹಿಡಿಯುವುದು ಹೇಗೆಂದು ಒಬ್ಬರು ಯೋಚಿಸಿದರಂತೆ. ಅವರಿಗೆ ಮತ್ತೊಬ್ಬರು ದಾರಿ ತೋರಿಸಿದರು. ಕೂಟವು ಆರಂಭವಾದಾಗ ಎಲ್ಲರೂ ಪ್ರಾರ್ಥಿಸುವುದನ್ನು ಗಮನಿಸು. ಅಲ್ಲಿ ಮೊಣಕಾಲೂರಿ ಪ್ರಾರ್ಥಿಸುವವರೊಬ್ಬರನ್ನು ಕಾಣುವಿ, ಅವರೇ ವಾಷಿಂಗ್‍ಟನ್.
ಲೋಕದಲ್ಲಿಯೇ ಪ್ರಸಿದ್ಧಿ ಹೊಂದಿದ ಇವರೆಲ್ಲರೂ ಬಹಿರಂಗ ಸ್ಥಳಗಳಲ್ಲಿ ಮೊಣಕಾಲೂರಿ ಪ್ರಾರ್ಥಿಸಲು ನಾಚಿಕೆ ಪಡುತ್ತಿರಲಿಲ್ಲ. ನಮ್ಮಲ್ಲಿ ಅನೇಕರು ಮೊಣಕಾಲೂರಿ ಪ್ರಾರ್ಥಿಸಲು ಹಿಂಜರಿಯುತ್ತಾರೆ. ಇದು ತಪ್ಪು. ದೇವರ ಮುಂದೆ ಮೊಣಕಾಲೂರುವಾಗ ನಮ್ಮ ದೀನತೆಯನ್ನೂ ನಾವು ಅಪಾತ್ರರೆಂಬುದನ್ನೂ ತಿಳಿಯುತ್ತೇವೆ.

Categories: Spiritual Stories

6 comments

 1. ಸುಂದರ says:

  ಇದು ನಿಜವಾದ ಸತ್ಯ

 2. Siddaraju says:

  Praise the lord Jesus so blessed

 3. roopa says:

  Amen in jesus name

 4. Siddu says:

  Praise the Lord Jesus

 5. Siddu says:

  Amen hallelujah

Comments

Your email address will not be published. Required fields are marked *

× WhatsApp us