ಪ್ರೀತಿ ತ್ಯಾಗದಲ್ಲಿರಲಿ – ಆತ್ಮೀಕ ಕಥೆ 44

  Posted on   by   1 comment

ಹಲವು ವರ್ಷಗಳ ಹಿಂದೆ ಚೈನಾ ದೇಶವು ಭೀಕರ ಕ್ಷಾಮವನ್ನು ಎದುರಿಸುತ್ತಿತ್ತು. ಆಗ ಪ್ರತಿ ಪಟ್ಟಣವಾಸಿಗೆ ಪ್ರತಿ ದಿನ ಒಂದು ಬಟ್ಟಲು ಸೂಪ್ ಮಾತ್ರ ದೊರಕುತ್ತಿತ್ತು. ಹೊಸ ವರ್ಷದ ಒಂದು ದಿನ ಸೂಪ್‍ನೊಂದಿಗೆ ಒಂದೊಂದು ಬೇಯಿಸಿದ ಮೊಟ್ಟೆಯನ್ನು ಕೊಟ್ಟರು. ಹಲವರು ಹಸಿವನ್ನು ತಾಳಲಾರದೇ ಮೊಟ್ಟೆಯ ಸಿಪ್ಪೆಯನ್ನು ಅಗಿದು ತಿನ್ನುತ್ತಿದ್ದರು. ಆದರೆ ಕ್ರೈಸ್ತರ ಕುಟುಂಬಗಳಲ್ಲಿನ ವಿಷಯವೇ ಬೇರೆಯಾಗಿರುತ್ತಿತ್ತು. ಅವರು ತಮ್ಮ ಮಕ್ಕಳಿಗೆ ತಮ್ಮ ಮೊಟ್ಟೆಗಳನ್ನು ಕೊಡಲು ಮುಂದಾಗುತ್ತಿದ್ದರು. ಅಂತೇ ಮಕ್ಕಳು ಅವುಗಳನ್ನು ತಮ್ಮ ತಂದೆ ತಾಯಿಯರಿಗೆ ಹಿಂತಿರುಗಿಸುತ್ತಿದ್ದರು. ಆದರೆ ತಂದೆ-ತಾಯಿಯರು ಮಕ್ಕಳಿಗೆ “ನಾವು ವೃದ್ಧರು, ಒಂದಲ್ಲಾ ಒಂದು ದಿನ ಸಾಯುವವರೇ, ನೀವು ಮಕ್ಕಳು, ನಿಮಗೆ ಹೆಚ್ಚು ಬಲಬೇಕು, ನಮ್ಮ ಮೊಟ್ಟೆಗಳನ್ನು ತೆಗೆದುಕೊಳ್ಳಿ, ತಿಂದು ಬಲ ಹೊಂದಿರಿ, “ ಎಂದು ಪ್ರೋತ್ಸಾಹಿಸುತ್ತಿದ್ದರು.

ಇದು ನಿಜವಾದ ಕ್ರಿಸ್ತೀಯತೆ. ಅಷ್ಟೇ ಅಲ್ಲ ನಿಜವಾದ ಪ್ರೀತಿಯಾಗಿದೆ. ನಿಜವಾದ ಪ್ರೀತಿ ತ್ಯಾಗದಿಂದ ಕೂಡಿದ್ದಾಗಿದೆ, ನಿಜವಾದ ಪ್ರೀತಿ ಇತರರ ಹಿತಚಿಂತನೆ ಮಾಡುವಂಥದ್ದೂ, ಇತರರಿಗಾಗಿ ಪ್ರಾಣ ನೀಡಲು ಹಿಂಜರಿಯುವಂಥದ್ದೂ ಆಗಿದೆ.

“ಪ್ರೀತಿ ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ” (1 ಕೊರಿ. 13:5).

Categories: Spiritual Stories

1 comment

  1. Kavitha says:

    Wow thank you Lord Jesus,amen and Amen.

Comments

Your email address will not be published. Required fields are marked *

× WhatsApp us