ಬಡವನಾದ ಶ್ರೀಮಂತ – ಫ್ರಾನ್ಸಿಸ್ ಆಸ್ಸಸಿ

  Posted on   by   4 comments

         ಕಲ್ಲು ಕಟ್ಟಡದ ಸೆರೆಮನೆಯಿಂದ ಹರ್ಷೋಲ್ಲಾಸದ ನಗು ಕೇಳಿ ಬಂತು. ” ಅದು ಫ್ರಾನ್ಸಿಸ್ ನದೇ ” ಕೇಳಿಸಿಕೊಂಡರು ” ಇವನು ಹಬ್ಬ ಆಚರಿಸುತ್ತಿದ್ದಾನೆ ಎನ್ನುವಂತಿದೆ ” ಎಂದು ಅಲ್ಲಿಯ ಒಬ್ಬ ಕೈದಿ ಹೇಳಿದ. ಮತ್ತೊಬ್ಬ ಕೈದಿ ನಿಟ್ಟುಸಿರು ಬಿಟ್ಟು ” ಸಂತೋಷದಿಂದಿರುವುದು ಅವನಿಗೆ ಸುಲಭ. ಎರಡು ಪಟ್ಟಣಗಳ ನಡುವೆ ಶಾಂತಿ ಒಪ್ಪಂದವಾದರೆ ಅವನು ಸ್ವತಂತ್ರ ವ್ಯಕ್ತಿಯಾಗುತ್ತಾನೆ ” ಎಂದು ಪ್ರತ್ಯುತ್ತರ ಕೊಟ್ಟನು. 
       
   ಫ್ರಾನ್ಸಿಸ್ಕೊ ಬರ್ನ್ಅರ್ಡೊನ್ ಇಟಲಿ ದೇಶದವನು. 13 ನೇ ಶತಮಾನದ ಆರಂಭದಲ್ಲಿ 20 ರ ತರುಣದಲ್ಲಿ ಇವನು ತನ್ನ ತಾಯ್ನಾಡಾದ ಆಸ್ಸಿಸಿ ಮತ್ತು ನೆರೆಯ ರಾಜ್ಯ ಪೆರುಗಿಯ ನಡುವೆ ಆದ ಯುದ್ದದಲ್ಲಿ ಸೆರೆಯಾಳಾದ ” ವೀರಪುರುಷ ” ಎಂಬ ಪದವಿ ಪಡೆಯಬೇಕೆಂಬ ಇವನ ಆಸೆ ಸೆರೆವಾಸದಿಂದಾಗಿ ನಿರಾಶೆಯಾಯಿತು. ಒಂದು ವರ್ಷದ ಬಳಿಕ, 1203 ರ ನವೆಂಬರ್ ನಲ್ಲಿ ಫ್ರಾನ್ಸಿಸ್ ಗೆ ಬಿಡುಗಡೆಯಾಯಿತು. ಕ್ರೀಡೆ,ಹಬ್ಬ, ಉತ್ಸಾಹ ಕೂಟಗಳಲ್ಲಿ ಮೇಲ್ದರ್ಜೆಯ ತನ್ನ ಜನರೊಡನೆ ಸೇರಿ ಸಂತೋಷಿಸಿ ನಲಿಯಲು ಅವನಿಗೆ ಸಾಧ್ಯವಾಯಿತು. ಅವನು ಮೊದಲು ಕೂಟಗಳಲ್ಲಿ ತೋರುತ್ತಿದ್ದ ಬೆಡಗು ಸಂತೋಷಗಳನ್ನು ನೆನೆದು ಸ್ನೇಹಿತರು ಅವನಿಗೆ ಆದರದ ಸ್ವಾಗತ ನೀಡಿದರು. 

  ಆದರೆ ಕೆಲವೇ ವಾರಗಳ ತರುವಾಯ ಫ್ರಾನ್ಸಿಸನು ವಿಷಯ ಕಾಯಿಲೆಗೆ ತುತ್ತಾದ. ಸ್ವಲ್ಪ ಚೇತರಿಸಿಕೊಂಡ ಮೇಲೆ ಒಂದು ದಿನ ಒಬ್ಬನೇ ಬಹಳ ದೂರ ನಡೆದು, ವಸಂತಕಾಲದ ಪ್ರಕೃತಿ ಸೌಂದರ್ಯ ಸೂರೆಗೊಳ್ಳಬೇಕಾಗಿತ್ತು. ಆದರೆ ಅದಕ್ಕೆ ಬದಲಾಗಿ ಅವನ ಮನಸಾಕ್ಷಿ ವ್ಯರ್ಥವಾಗಿ ಕಳೆದುಹೋದ ಅವನ ಯೌವ್ವನದ ಜೀವನವನ್ನು ನೆನಪಿಗೆ ತರತೊಡಗಿತು. 
ಸ್ವಲ್ಪ ಕಾಲವಾದ ಮೇಲೆ ಫ್ರಾನ್ಸಿಸನಿಗೆ ಧಾರ್ಮಿಕ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲಾಯಿತು. ಗುರಾಣಿ ಮತ್ತು ಕವಚವನ್ನು ತೆಗೆದುಕೊಂಡು ಫ್ರಾನ್ಸಿಸ್ ತನ್ನ ಮಂಕು ಮತ್ತು ನಿರುತ್ಸಾಹದ ಜೀವನ ಅಂತ್ಯವಾಯಿತೆಂದು ನೆನೆದು ಉಲ್ಲಾಸದಿಂದ ಹೊರಟ. ಆದರೆ ದಾರಿಯಲ್ಲೇ ಕಾಯಿಲೆ ಬಿದ್ದ. ನಿತ್ರಾಣನಾಗಿ ಮನೆಗೆ ಹಿಂತಿರುಗಿದ. 

  ಫ್ರಾನ್ಸಿಸ್ ತನ್ನ ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿರುವಾಗ ಅರ್ಥ ರಹಿತವಾದ ತನ್ನ ಜೀವನದ ಬಗ್ಗೆ ಆಲೋಚಿಸತೊಡಗಿದ. ತನ್ನ ತಂದೆಯ ಅಂಗಡಿಯ ಎದುರಿನ ರಸ್ತೆಯಲ್ಲಿದ್ದ ಗುಂಪು ಗುಂಪು ಭಿಕ್ಷುಕರನ್ನು, ಬಡಜನರನ್ನು ಗಮನಿಸಿದ. ಇವರಿಗೆ ತುಂಬ ಹಣ ಸಹಾಯ ಮಾಡುವುದರ ಮೂಲಕ ತನ್ನ ಜೀವನದ ಅರ್ಥ ಕಂಡುಕೊಳ್ಳಲು ಸಾಧ್ಯವೇ ? ಇದು ಜಿಪುಣ ತಂದೆಯನ್ನು ಉದ್ವೇಗಪಡಿಸುವುದೇ ? ಅಂದುಕೊಂಡು ಸುಮ್ಮನಾದನು. ಫ್ರಾನ್ಸಿಸ್ ಗುಣ ಹೊಂದಿದ ಮೇಲೆ ಒಂದು ದಿನ ತಂದೆಯ ಅಂಗಡಿಯಲ್ಲಿ ಸಹಾಯ ಮಾಡುತ್ತಿದ್ದ. ಆಗ ಚಿಂದಿ ಬಟ್ಟೆ ಧರಿಸಿದ ಭಿಕ್ಷುಕನೊಬ್ಬನು ಬಂದು ” ಸ್ವಾಮಿ ದೇವರ ಹೆಸರಿನಲ್ಲಿ ಏನಾದರೂ ಕೊಡಿ ” ಎಂದು ಚೀರಿದ. ಕೋಪಗೊಂಡ ಫ್ರಾನ್ಸಿಸ್ ಒಮ್ಮೆ ದೃಷ್ಟಿಸಿ ನೋಡಿ ” ಹೋಗೊ ಆಚೆಗೆ ” ಎಂದು ಕಿರುಚಿದ. ಭಿಕ್ಷುಕ ಭಯದಿಂದ ಓಡಿಹೋದ.  “ಒಂದು ವೇಳೆ ಒಬ್ಬ ವೀರನ ಹೆಸರಿನಲ್ಲಿ ಅವನು ಕೇಳಿದ್ದರೆ ಏನಾದರೂ ಕೊಡುತ್ತಿದ್ದೆ. ಆದರೆ ಅವನು ದೇವರ ಹೆಸರಿನಲ್ಲಿ ಕೇಳಿದ್ದಕ್ಕೆ ಅವನನ್ನು ಬೆದರಿಸಿ ಓಡಿಸಿಬಿಟ್ಟೇನಲ್ಲ! ” ಎಂದು ಫ್ರಾನ್ಸಿಸ್ ಅಂದುಕೊಂಡ.ಅವನಿಗೆ ಅಂಗಡಿಯಲ್ಲಿರಲು ಸಾಧ್ಯವಾಗದೆ ಫ್ರಾನ್ಸಿಸ್ ಆ ಭಿಕ್ಷುಕನನ್ನು ಹುಡುಕುತ್ತಾ ಹೊರಟ. ಬಡಜನರ ದುರವಸ್ಥೆ, ಬಿಕ್ಷುಕನಿಗೆ ತಾನು ಮಾಡಿದ ಅನ್ಯಾಯ, ಅವನನ್ನು ಕೊರೆಯಲಾರಂಭಿಸಿತು. ಆಗಿಂದಾಗ್ಗೆ ಅವನು ನಿರ್ಜನ ಪ್ರದೇಶದಲ್ಲಿರುವ ಗುಹೆಗೆ ಹೋಗಿ, ” ಕರ್ತನೇ ಜೀವನದ ಅರ್ಥ ತೋರಿಸು ” ಎಂದು ಪ್ರಾರ್ಥಿಸ ತೊಡಗಿದ. ಅವನ ಸ್ಥಿತಿ ಮತ್ತು ಅಸ್ತಿರತೆಯನ್ನು ಕಂಡು ತಂದೆ ಫ್ರಾನ್ಸಿಸನನ್ನು ಗದರಿಸಿದ. ಬಡವರನ್ನು ಮರೆತು ಸಮಾಜದಲ್ಲಿ ಎಂದಿನಂತೆ ಬಾಳುವಂತೆ ಅವನ ಸ್ಸ್ನೇಹಿತರು ಅವನನ್ನು ಬೇಡಿಕೊಂಡರು. ಆದರೆ ಬಡವರನ್ನು ಮರೆಯಲು ಫ್ರಾನ್ಸಿಸನಿಗೆ ಸಾಧ್ಯವಾಗಲಿಲ್ಲ. ಅವರಿಗಾಗಿ ಅವನ ಪ್ರಾರ್ಥನೆ ಮುಂದುವರಿಯಿತು. 

 1206 ರ ಒಂದು ದಿನ ಫ್ರಾನ್ಸಿಸನು ನಗರದ ಹೊರಗಿನ ಪಾಳುಬಿದ್ದ ಹಳೆಯ ದೇವಾಲಯದಲ್ಲಿ ಪ್ರಾರ್ಥಿಸತೊಡಗಿದ. ಯೇಸು ಕ್ರಿಸ್ತನು ಅವನೊಡನೆ ಸ್ಪಷ್ಟವಾಗಿ ಮಾತಾಡಿದ ಅರಿವು ಅವನಿಗಾಯಿತು. ” ಕರ್ತನಾದ ಯೇಸುವೇ, ಕತ್ತಲಾದ ಮನಸ್ಸಿನ ಮೇಲೆ ನಿನ್ನ ಬೆಳಕನ್ನು ಚೆಲ್ಲು. ನನಗೆ ಕಾಣಿಸಿಕೊ. ಕರ್ತನೇ ! ನಿನ್ನ ಪವಿತ್ರ ಚಿತ್ತದಂತೆ ನಡೆಯಲು ನನಗೆ ಸಹಾಯ ಮಾಡು ” ಎಂದು ಅವನು  ಪ್ರಾರ್ಥಿಸಿದ. ಕ್ಷಣಕಾಲ ಮೌನವಾದ. ದೇವರ ಉತ್ತರಕ್ಕಾಗಿ ಕಾದ. ” ನಾನು ನಿನ್ನನ್ನು ಸ್ವೀಕರಿಸಿದ್ದೇನೆ. ನಿನ್ನ ಜೀವನ,ಸೇವೆ ಸಮಸ್ತ ನನಗೆ ಬೇಕು ” ಎಂಬ ಉತ್ತರ ದೇವರಿಂದ ಅವನಿಗೆ ದೊರೆಯಿತು. ಎಂದು ಮುಂದಿನ ದಿನಗಳಲ್ಲಿ ಫ್ರಾನ್ಸಿಸ್ ನು ತಿಳಿಸಿದ. ಆನಂದ, ಸಂತೋಷ, ಹೊಸ ಸಮಾಧಾನವನ್ನು ಪಡೆದ ಫ್ರಾನ್ಸಿಸನು ತನ್ನ ಆಸ್ತಿಯನ್ನೆಲ್ಲ ಮಾರಿ ಬಡವರ ಅಪೊಸ್ತಲನಾಗಲು ನಿಶ್ಚಯಿಸಿರುವುದಾಗಿ ತನ್ನ ತಂದೆಗೆ ತಿಳಿಸಲು ಬೇಗನೆ ಮನೆಗೆ ಹೋದನು. ಇದನ್ನು ಕೇಳಿದ ವ್ಯಾಪಾರಿ ತಂದೆಗೆ ಎಲ್ಲಿಲ್ಲದ ಕೋಪ ಬಂತು. ನಯವಾದ ಮಾತಾಗಲೀ ಗದರಿಕೆಯಾಗಲೀ ಅವನನ್ನು ಬದಲಿಸಲಾಗದ್ದನ್ನು ಕಂಡ ತಂದೆ ಬಹಿರಂಗ ಕೂಟವೊಂದರಲ್ಲಿ ಅವಹೇಳನ ಮಾಡಿ ತನ್ನ ಆಸ್ತಿಗೆ ಹಕ್ಕುದಾರನಲ್ಲವೆಂದು ಹೇಳಿದ. ತನಗೆ ವಿರೋಧವಾದ ತಂದೆಗೆ ತನ್ನಲ್ಲಿದ್ದ ಬಟ್ಟೆಯನ್ನು ಹಣವನ್ನು ತಂದೆಗೆ ಹಿಂತಿರುಗಿಸಿದ ಅದನ್ನು ತೆಗೆದುಕೊಂಡ ನಿರ್ದಯಿ ತಂದೆ ಮಗನಿಗೆ ಬೆನ್ನು ಮಾಡಿ ಮನೆಗೆ ಹೋದ. 

  ಫ್ರಾನ್ಸಿಸ್ ಅಸ್ಸಿಸಿ ನಗರವನ್ನು ಬಿಟ್ಟು ಹೊರಟಾಗ ತೋಟಗಾರನು ಕೊಟ್ಟಿದ್ದ ಹಳೆಯ ತೋಳಿಲ್ಲದ ಸಡಿಲವಾದ ಮೋಟುಂ ಮೇಲಂಗಿ ಹೊರತು ಬೇರೇನೂ ಇರಲಿಲ್ಲ. ಬೀದಿಯಲ್ಲಿ ಮಲಗುತ್ತಾ ಭಿಕ್ಷೆಯಿಂದ ಜೀವಿಸುತ್ತಾ ಫ್ರಾನ್ಸಿಸ್ ಎರಡು ವರ್ಷಕಾಲ ಕಳೆದ. ಬಡವರಿಗೆ ಮತ್ತು ಕುಷ್ಠರೋಗಿಗಳಿಗೆ ಆತ್ಮೀಕ ಆದರಣೆ ನೀಡುತ್ತಾ, ಹಾಳಾಗುತ್ತಿದ್ದ ಕ್ರೈಸ್ತ ಸಭೆಗಳನ್ನು ಉದ್ದರಿಸುತ್ತಾ ಜೀವಿಸತೊಡಗಿದ. 1209 ರಲ್ಲಿ, ಫ್ರಾನ್ಸಿಸನಿಗೆ ಕೇವಲ 27 ವರ್ಷದವನಾಗಿದ್ದಾಗ, ಮುಂದಿನ ಜೀವನವನ್ನು ಸೇವೆಗೆ ಮೀಸಲಿಡಲು ಕರ್ತನಿಂದ ಅವನಿಗೆ ಒಂದು ಕರೆ ಬಂತು. ಆ ಕರೆ ಇಂತಿತ್ತು : ” ರೋಗಿಗಳನ್ನು ಸ್ವಸ್ಥಮಾಡಿರಿ,ಸತ್ತವರನ್ನು ಬದುಕಿಸಿರಿ, ಕುಷ್ಠಹತ್ತಿದವರನ್ನು ಶುದ್ಧಮಾಡಿರಿ,ದೆವ್ವಗಳನ್ನು ಬಿಡಿಸಿರಿ, ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ. ನಿಮ್ಮ ಹಮ್ಮಿಣಿಗಳಲ್ಲಿ ಹೊನ್ನು ಹಣ ದುಡ್ಡುಗಳನ್ನೂ ದಾರಿಗೆ ಹಸಿಬೆಯನ್ನೂ ಎರಡು ಅಂಗಿ ಕೆರೆ ಕೋಲು ಮೊದಲಾದವುಗಳನ್ನೂ ಸೌರೆಸಿಕೊಳ್ಳಬೇಡಿರಿ. ಆಳು ಅಂಬಲಿಗೆ ಯೋಗ್ಯನಷ್ಟೇ  “.   ಮತ್ತಾಯ 10:8-10  ಈ ಸಂದೇಶ ತನ್ನನ್ನು ಸರಿಯಾದ ಮಾರ್ಗದಲ್ಲಿ ನಡೆಸುತ್ತಿದೆ ಎಂದು ಫ್ರಾನ್ಸಿಸನಿಗೆ ಸ್ಪಷ್ಟವಾಯಿತು. ತನ್ನ ಪಾದರಕ್ಷೆ ,ಹಣದ ಚೀಲಗಳನ್ನು ತೊರೆದು, ದೇವವಾಕ್ಯದ  ಈ ಆಜ್ಞೆಯಂತೆ ಜೀವಿಸಲು ಮನಸ್ಸುಳ್ಳವರನ್ನು ಒಟ್ಟಾಗಿ ಸೇರಿಸತೊಡಗಿದನು. ದೇವರ ಈ ಕರೆಯನ್ನು ಹೊಂದಿದ ಸಹೋದರರು ಇಬ್ಬಿಬ್ಬರಾಗಿ ಸುವಾರ್ತಾ ಸೇವೆಗೆ ಹೊರಟರು. ಅವರು ಊರಿನ ಪ್ರಮುಖ ಸ್ಥಳಗಳಲ್ಲಿ, ಮಾರುಕಟ್ಟೆಗಳಲ್ಲಿ ಸ್ತುತಿಗೀತೆಗಳನ್ನೂ ಹಾಡಿದರು. ಉಪದೇಶ ಮಾಡಿದರು ;ಬಡಬಗ್ಗರಿಗೆ ಅನ್ನ, ಬಟ್ಟೆಗಳನ್ನು ಹಂಚಿದಳು. 

  ಈ ಸೇವೆಗೆ ತಮ್ಮನ್ನು ಪ್ರತಿಷ್ಟಿಸಿಕೊಂಡ ಸಹೋದರರು ತಮ್ಮ ಆಸ್ತಿಯನ್ನೆಲ್ಲಾ ಮಾರಿ ಬಡಬಗ್ಗರಿಗೆ ಹಂಚಿಕೊಟ್ಟರು. ಇದೇ ರೀತಿ ಸಹಾಯ ಮಾಡುತ್ತಾ ಮುಂದುವರಿಯಲು ಅವರು ನಿರ್ಧರಿಸಿಕೊಂಡಿದ್ದರು.  ಈ ಬಡ ಸಹೋದರರಿಗೂ ಸಮಯದಲ್ಲಿ ಸ್ವಾರ್ಥದಿಂದ ವೈಭವ ಪೂರ್ಣವಾಗಿ ಬದುಕುತ್ತಿದ್ದ ಕ್ರೈಸ್ತ ಸಭೆಯ ನಾಯಕರುಗಳಿಗೂ ಇದ್ದ ವ್ಯತ್ಯಾಸ ಜನತೆಗೆ ಸ್ಪಷ್ಟವಾಗಿ ತಿಳಿಯಿತು. ಸಹೋದರರ ಶುದ್ಧವಾದ ನೈತಿಕ ಜೀವನವನ್ನು ಕ್ರೈಸ್ತ ಸಭೆಯ ನಾಯಕರ ಪಾಪದ ಜೀವನವನ್ನು ಜನರು ಗಮನಿಸಿದರು. ಅಂಧಕಾರದ ಯುಗದಲ್ಲಿ ಫ್ರಾನ್ಸಿಸ್ ಮತ್ತು ಸಹೋದರರ ಸೇವೆ ಭಕ್ತಿ ಸಂಜೀವನಕ್ಕೆ ನಾಂದಿಯಾಯಿತು. ಅತಿ ಬಡವರ ಅಪೊಸ್ತಲನಾಗಿ ಕೇವಲ 17 ವರ್ಷ ಬದುಕಿದರೂ ಇಂದಿನ ಎಲ್ಲಾ ಕ್ರೈಸ್ತರಿಗೂ ಅವನು ಮಾದರಿಯಾಗಿದ್ದಾನೆ. ಮಾರ್ಟಿನ್ ಲೂಥರನಿಗಿಂತ ಮೂರು ಶತಮಾನಗಳ ಮೊದಲು ಜೀವಿಸಿದ್ದ ಈತನನ್ನ ಪ್ರೊಟೆಸ್ಟಂಟ್ ಇತಿಹಾಸಕಾರ ಫಿಲಿಪ್ ಸ್ಕಾಫನು ” ಅಂಧಕಾರ ಯುಗದ ಒಂದು ಆತ್ಮೀಕ ಬೆಳಕು ” ಎಂದು ಹೊಗಳಿದ್ದಾನೆ. 

4 comments

  1. Mahesh G says:

    Praise the Lord juses

  2. Mahesh Shilpa says:

    Prise the lord Jesus

  3. Maheshnaik says:

    Praise the Lord Jesus

Comments

Your email address will not be published. Required fields are marked *

× WhatsApp us