ಬಡ್ಡಿಯೂ ಮರಿಯೂ! ಆತ್ಮೀಕ ಕಥೆ 21

  Posted on   by   No comments

download

“ಪರದೇಶದವನಿಗೆ ಬಡ್ಡಿಗೆ ಕೊಡಬಹುದೇ ಹೊರತು ಸ್ವದೇಶದವನಿಗೆ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಅಭಿವೃದ್ಧಿ ಪಡಿಸುವನು” (ಧರ್ಮೋ. 23:20).

ಅರಬ್ಬೀ ದೇಶದ ಒಂದು ಕಥೆ ಹೀಗಿದೆ. ಒಬ್ಬನು ತನ್ನ ನೆರೆಯವನ ಬಳಿ ಒಂದು ಜಾಡಿಯನ್ನು ಎರವಲು ಪಡೆದನು, ಒಂದು ವಾರ ಕಳೆದ ನಂತರ ಅದನ್ನು ಹಿಂದೆ ಕೊಡುವಾಗ, ಅದರೊಂದಿಗೆ ಅದಕ್ಕೆ ಬಡ್ಡಿಯಾಗಿ ಇನ್ನೊಂದು ಚಿಕ್ಕ ಜಾಡಿಯನ್ನು ಕೊಟ್ಟನು. ಎರವಲು ಕೊಟ್ಟವನಿಗೆ ಬಹಳ ಸಂತೋಷ, ನನ್ನ ಜಾಡಿ ಮರಿ ಹಾಕಿತು ಎಂದು ಹೇಳಿ ಬಹಳ ಸಂತೋಷಪಟ್ಟನು.

ಹತ್ತು ದಿನಗಳ ನಂತರ, ನೆರೆಮನೆಯಾತನು ಇವನ ಬಳಿಯಲ್ಲಿದ್ದ ಬೆಳ್ಳಿಯ ಹೂಜಿಯನ್ನು ಎರವಲು ಕೇಳಿದನು. ಇದು ಕೂಡ ಬಡ್ಡಿಯಾಗಿ ಒಂದು ಮರಿ ಹಾಕುವುದೆಂದು ಎಣಿಸಿ, ಬೆಳ್ಳಿಯ ಹೂಜಿಯನ್ನು ಸಾಲವಾಗಿ ಕೊಟ್ಟನು; ಆದರೆ ತಿಂಗಳುಗಳು ಕಳೆದವು ಪಾತ್ರೆ ಹಿಂದೆ ಬರಲೇ ಇಲ್ಲ. ಆದ್ದರಿಂದ ಸಾಲಕೊಟ್ಟವನು, ತನ್ನ ಪಾತ್ರೆಯನ್ನು ಹಿಂದಿರುಗಿಸುವಂತೆ ಕೇಳಿದನು. ಆಗ ತೆಗೆದುಕೊಂಡವನು ಒಂದು ದೊಡ್ಡ ಧ್ವನಿಯಿಂದ ಅಳುತ್ತಾ ಹೇಳಿದನು “ನಿನ್ನ ಹೂಜಿ ಪ್ರಸವದಲ್ಲಿ ಸತ್ತು ಹೋಯಿತಲ್ಲಾ! ನಾನೇನು ಮಾಡಲಿ?” ಎಂದು ಗೋಳಾಡಿದನು.

ಜಾಡಿ ಮರಿ ಹಾಕಿದ್ದನ್ನು ನಂಬಿದವನು, ಪ್ರಸವದಲ್ಲಿ ಬೆಳ್ಳಿ, ಹೂಜಿ ಸತ್ತದ್ದನ್ನು ನಂಬಲೇ ಬೇಕಲ್ಲವೇ? ಹಣವು ಬಡ್ಡಿಯನ್ನು ಮರಿಯಾಗಿ ಕೊಡುತ್ತದೆ; ಆದರೆ ಅಂತ್ಯದಲ್ಲಿ ಆತ್ಮ ಸತ್ತು ಹೋಗುವುದು.
ದೇವರ ಮಗುವೇ, ನೀನು ಆಶೀರ್ವದಿಸಲ್ಪಡ ಬೇಕಾಗಿದ್ದರೆ ನಿನ್ನ ಹಣವನ್ನು ಬಡ್ಡಿಗೆ ಕೊಡಬೇಡ! ಕರ್ತನು ಅನ್ನುತ್ತಾನೆ. “ಸಾಲಕ್ಕೆ ಬಡ್ಡಿ ತೆಗೆಯದೆ ಲಾಭಕ್ಕೆ ಹಣಕೊಡದೆ ಸದ್ಭರ್ಮಿಯಾಗಿರುವದರಿಂದ ಬಾಳೇ ಬಾಳುವನು” (ಯೆಹೆ. 18:8).

ನನ್ನ ಜನರಲ್ಲಿ ಒಬ್ಬನಿಗೆ ನೀನು ಸಾಲಕೊಟ್ಟರೆ, ಅವನಿಂದ ಬಡ್ತಿಯನ್ನು ಕೇಳಬಾರದು” (ಕೀರ್ತ. 15:5, ವಿಮೋ. 22:25).

Categories: Spiritual Stories

Comments

Your email address will not be published. Required fields are marked *

WhatsApp us