ಬೇಸರಗೊಳ್ಳದೆ! – ಆತ್ಮೀಕ ಕಥೆ 39

  Posted on   by   7 comments

“ಯಾರು ಪ್ರಭಾವ ಮಾನ ನಿರ್ಲಯತ್ವಗಳನ್ನು ಹೊಂದಬೇಕೆಂದು ಒಳ್ಳೇದನ್ನು ಬೇಸರಗೊಳ್ಳದೆ ಮಾಡುತ್ತಾರೋ ಅವರಿಗೆ ನಿತ್ಯ ಜೀವವನ್ನು ಕೊಡುವೆನು” (ರೋಮ. 2:7).
ಎರಡು ಕಪ್ಪೆಗಳು ಒಂದು ದೊಡ್ಡ ಮೊಸರಿನ ಮಡಿಕೆಯಲ್ಲಿ ಬಿದ್ದು ಬಿಟ್ಟವು. ಹೊರಗೆ ಬರಲು ಅವುಗಳು ಅನೇಕ ಸಾರಿ ಪ್ರಯತ್ನಿಸಿದವು. ಆದರೆ ಆಗಲಿಲ್ಲ. ಒಂದು ಕಪ್ಪೆ ಬಹಳ ಜಿಗಿದು ಜಿಗಿದು ಸೋತು ಸೊರಗಿ, ಒಂದೆಡೆ ಬಿದ್ದು ಕೊಂಡಿತು. ಮತ್ತೊಂದು ಕಪ್ಪೆ ಬಿಡಲಿಲ್ಲ. ತನ್ನ ಪುಟ್ಟ ಕಾಲುಗಳಿಂದ ಬಡಿದಾಡುತ್ತಲೇ ಇದ್ದಿತು. ಕೆಲವು ಘಂಟೆಗಳು ಹೀಗೆಯೇ ಕಳೆದುಹೋಯಿತು. ಕಪ್ಪೆಯು ಎಡೆಬಿಡದೆ ಮೊಸರನ್ನು ಬಡಿಯುತ್ತಲೇ ಇದ್ದುದರಿಂದ, ಬೆಣ್ಣೆಯು ಉಂಟಾಗಿ, ಒಂದು ದೊಡ್ಡ ಗರಣೆಯಾಗಿ ತೇಲಲಾರಂಭಿಸಿತು. ಇದನ್ನು ನೋಡಿದ ಕಪ್ಪೆಯು ಆ ಬೆಣ್ಣೆಯ ಮುದ್ದೆಯ ಮೇಲೇರಿ ಸುಲಭವಾಗಿ ಹೊರಗೆ ಜಿಗಿಯಿತು!
ಬೇಸರಿಕೆಯ ಮನಸ್ಸನ್ನು ನಿರುತ್ಸಾಹ ಗೊಳಿಸುವುದು. ಅಂತ್ಯದಲ್ಲಿ ಸೋಲು ನಿಶ್ಚಯ. ಆದರೆ ಎಡಬಿಡದೆ ಪ್ರಯತ್ನಿಸಿದರೆ ಅಂತ್ಯದಲ್ಲಿ ಜಯ ಉಂಟು. ಆದ್ದರಿಂದ ದೇವರ ಮಗುವೇ, “ಬೇಸರಗೊಳ್ಳದೆ ಪ್ರಾರ್ಥಿಸು” ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು” (ಗಲಾ. 6:9). ದೇವರ ಮಗುವೇ ಬೇಸರಗೊಳ್ಳಬೇಡ!
“ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು; ಆತನೇ ಅದನ್ನು ಸಾಗಿಸುವನು” (ಕೀರ್ತ. 37:5).

“ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ; ಆತನು ನಿಮಗೋಸ್ಕರ ಚಿಂತಿಸುತ್ತಾನೆ” (1 ಪೇತ್ರ. 5:7).

Categories: Spiritual Stories

7 comments

  1. clotty Olivera says:

    Beautiful Message in our earthly pilgrim journey. Thank you very much

  2. Siddu says:

    Amen Praise The Lorf Jesus

  3. Siddarth says:

    Amen Praise the lord

Comments

Your email address will not be published. Required fields are marked *

× WhatsApp us