ಭಾವೊದ್ವೇಗದ ಪ್ರೊಫೆಸರ್ – ಔರೇಲಿಯಸ್ ಆಗಸ್ಟಿನ್

  Posted on   by   3 comments

         ” ಉಷ್, ನಿಮ್ಮ ಅಮ್ಮನನ್ನು ಎಬ್ಬಿಸಬೇಡ. ಆಕೆಯ ಉಪದೇಶ ಕೇಳಲು ನನಗೆ ಇಷ್ಟವಿಲ್ಲ; ” ಎಂದು ತಂದೆ ಮಗನು ಗುಸು ಗುಸು ಮಾತಾಡಿಕೊಂಡು ಶಬ್ದವಾಗದಂತೆ ತಮ್ಮ ರೋಮ್ ಮನೆಯೊಳಗೆ ಹೋದರು. ಆದರೆ ಅವರು ಬಂದದ್ದು ಮೋನಿಕಾಗೆ ತಿಳಿಯಿತು. ವ್ಯಭಿಚಾರದಲ್ಲಿ ರಾತ್ರಿಗಳನ್ನು ಕಳೆಯುತ್ತಿದ್ದ ಗಂಡನಿದ್ದ ಆಕೆ ಹಲವಾರು ಸಲ ನೊಂದು ಹೋಗಿದ್ದಳು. ಆದರೆ ಈಗ ಹದಿನೇಳರ ಪ್ರಾಯದ ಮಗ ತಂದೆಯನ್ನು ಹಿಂಬಾಲಿಸುತ್ತಿರುವುದು ಆಕೆಗೆ ಸಹಿಸಲಾರದಷ್ಟು ನೋವಾಯಿತು. ಕಣ್ಣೀರು ಸುರಿಸುತ್ತಿದ್ದ ‘ ತಾಯಿಯ ಕದೆ ಔರೇಲಿಯಸ್ ನೋಡಿ  ಕನಿಕರಗೊಂಡರೂ, ಆಕೆಯ ಪ್ರಯತ್ನವನ್ನು ಅವನು ಅರ್ಥಮಾಡಿಕೊಳ್ಳಲಾರದೆ ಹೋದ.  ಒಂದು ವರ್ಷದ ನಂತರ ಔರೇಲಿಯಸ್ ಅನೈತಿಕ ರೀತಿಯಲ್ಲಿ ತಂದೆಯಾದ. ಇದು ಮೋನಿಕಾಳ ಆಸೆಯನ್ನು ನುಚ್ಚುನೂರು ಮಾಡಿತು. ಔರೇಲಿಯಸ್ ಮದುವೆ ಇಲ್ಲದ ತನ್ನ ಗೆಳತಿಯೊಡನೆ 13 ವರ್ಷಗಳ ಕಾಲ ಜೀವಿಸಿದ.  ತಂದೆ ಸಾಯುವಷ್ಟರಲ್ಲಿ ಔರೇಲಿಯಸ್ ಅನೈತಿಕ ಜೀವನದಲ್ಲಿ ಸಾಕಷ್ಟು ಮುಂದುವರಿದಿದ್ದ. ಇತ್ತ ಮೋನಿಕಾಳ ಪ್ರಾರ್ಥನೆಯೂ ಮುಂದುವರೆದಿತ್ತು. 
                     
 ಔರೇಲಿಯಸ್ ಒಬ್ಬ ಪ್ರೋಫಸರ್ ಆದ ಉತ್ತರ ಆಫ್ರಿಕಾದಲ್ಲಿ ಕಾರ್ಥಗೆ ಎಂಬಲ್ಲಿ ತನ್ನದೆ ಒಂದು ಶಾಲೆಯನ್ನು ಪ್ರಾರಂಭಿಸಿದ. ಆ ಕಾಲದಲ್ಲಿ ಹೆಚ್ಚಾಗಿ ಮನೆಗಳಲ್ಲಿ ಅಥವಾ ಬಾಡಿಗೆ ಮನೆಗಳಲ್ಲಿ ವಿದ್ಯೆ ಹೇಳಿಕೊಡುತ್ತಿದ್ದರು. ವಿದ್ಯಾರ್ಥಿಗಳು ಕೊಡುತ್ತಿದ್ದ ವಿದ್ಯಾಶುಲ್ಕದಿಂದ ಉಪಾಧ್ಯಾಯರ ಸಂಬಳ ಮತ್ಮತ್ತೆ ಶಾಲೆಯ ಇತರ ಅವಶ್ಯಕತೆಗಳನ್ನು ಪೂರೈಸುತ್ತಿದ್ದರು. ಇವನ ಶಾಲೆ ಆಫ್ರಿಕಾದ ಪ್ರಸಿದ್ಧ ಪಟ್ಟಣದ ಬ್ಯಾಂಕರ್ಸ್ ರಸ್ತೆಯಲ್ಲಿತ್ತು. ಇದರಿಂದಾಗಿ ಅದು ಅಭಿವೃದ್ಧಿಯಾಯಿತು. ಇವರ ವಿದ್ಯಾರ್ಥಿಗಳೆಲ್ಲ ಅದೇ ನಗರದ ಯುವಕರು. ಒಂದಲ್ಲ ಒಂದು ದಿನ ಇವರೆಲ್ಲ ಸರ   ಅಧಿಕಾರಿಗಳಾಗುತ್ತಾರೆ.  ಸಮಯ ಬಂದಾಗ ನನ್ನನ್ನು ಒಳ್ಳೆ ಹುದ್ದೆಗೆ ನೇಮಿಸಿಕೊಳ್ಳುತ್ತಾರೆಂದು ಭಾವಿಸಿದ ಅವನಿಗೆ ಎಲ್ಲಾ ಒಳ್ಳೆದಾಗಿ ತೋರಿತು. ಸ್ವಲ್ಪ ಕಾಲದ ಔರೇಲಿಯಸ್ ಶಾಲೆ ದರೋಡೆಯಿಂದ ನಾಶವಾಯಿತು. ಹೆದರಿದ ಇವನು ಅಲ್ಲಿಂದ ಪಲಾಯನ ಮಾಡಿದ. ರೋಮಿನಲ್ಲಿ ಶಾಲೆ ಆರಂಭಿಸಿದ.                   
 ಮ್ಯೂನಿಕಿಯರೆಂಬ ಸುಳ್ಳು ಕ್ರೈಸ್ತರು ಇವನ ಮನಸ್ಸನ್ನು ಸೆಳೆದುಕೊಂಡರು. ಔರೇಲಿಯಸ್ ನಿಷ್ಠ ವಿದ್ಯಾರ್ಥಿಯಾಗಿ ಅವರ ಪಂಗಡದ ಗ್ರೀಕ್ ತತ್ವಶಾಸ್ತ್ರ ಮಿಶ್ರಿತವಾದ ಸತ್ಯವೇದಾಧ್ಯಯನ ಮಾಡಿದ ಮ್ಯಾನಿಕಿಯನ್ಸ್ ಪ್ರಸಿದ್ಧ ಉಪಾಧ್ಯಾಯನಾದ ಬಿಷಪ್ ಫೌಸ್ಟಸ್ ನೊಡನೆ ಮಾತಾಡಿದಾಗ ಇವನಿಗೆ ಆ ಸಂಘದ ಕುರಿತು ಜಿಗುಪ್ಸೆಯಾಯಿತು. ಇವನು ಕೇವಲ ಸ್ವಂತ ತತ್ವದಲ್ಲಿ ಪ್ರತಿಪಾದಕರೆಂದು ತಿಳಿದ ಔರೇಲಿಯಸ್, ಒಂಬತ್ತು ವರ್ಷಗಳಿಂದ ಈ ಪಂಗಡದ ಮೇಲೆ ತನಗಿದ್ದ ನಂಬಿಕೆಯನ್ನು ಕಿತ್ತೊಗೆದ. ರೋಮಿಗೆ ಒಂದು ಒಂದು ವರ್ಷವಾದ ಬಳಿಕ ಅಲ್ಲಿಯ ಸರ್ಕಾರ ಇವನನ್ನು ಸಾಹಿತ್ಯ ಶಾಸ್ತ್ರಕ್ಕೆ ಮಿಲನಿನಲ್ಲಿ ಪ್ರೋಫೆಸರಾಗಿ ನೇಮಿಸಿತು. ಔರೇಲಿಯಸ್ ತಾಯಿಯನ್ನು ಅಲ್ಲಿಗೆ ಕರೆಸಿಕೊಂಡು. ಇವನ ಮಾರ್ಪಾಟಿಗನಾಗಿ ತಾಯಿ ಇನ್ನೂ ಪ್ರಾರ್ಥನೆ ಮಾಡುತ್ತಿದ್ದಳು. 

ಮಿಲನ್ ನಲ್ಲಿ ಬಿಷಪ್ ಅಂಬ್ರೋಸ್ ಪ್ರತಿಷ್ಟಿತನಾದ ಕ್ರೈಸ್ತನಾಯಕ; ನಗರದ ಪ್ರಮುಖ ವ್ಯಕ್ತಿ . ಈತ ಔರೇಲಿಯಸ್ ನಿಗೆ, ” ಬನ್ನಿ ನನ್ನ ಪ್ರಸಂಗ ಕೇಳಿ ” ಎಂದು ಆಹ್ವಾನಿಸಿದ. ಅಂತೆಯೇ ಔರೇಲಿಯಸ್ ಉದಾಸೀನ ಭಾವದಿಂದ ಅಲ್ಲಿಗೆ ಹೋದ ಬಿಷಪ್ಪರ ಪ್ರಸಂಗದ ವೈಖರಿ, ಭಾಷಾಶೈಲಿ ಇವನಿಗೆ ತುಂಬಾ ಇಷ್ಟವಾಯಿತು ಮತ್ತೆ ಮತ್ತೆ ಹೋಗತೊಡಗಿದ. ಒಮ್ಮೆ ಬಿಷಪ್ಪರು ದಾವೀದನ ಬಗ್ಗೆ ಪ್ರಸಂಗ ಮಾಡಿದರು. ” ದಾವೀದನ ಪಾಪ ಮಾನವ ಸಹಜವಾದದ್ದು, ಆದರೆ ಅವನ ಪಶ್ಚಾತ್ತಾಪ ಅಪೂರ್ವವಾದದ್ದು, ಜನರು ದಾವೀದನ ಪಾಪ ಅನುಸರಿಸುತ್ತಾರೆ. ಆದರೆ ಅವನ ಪಶ್ಚಾತ್ತಾಪ ಮತ್ತು ಮನಪರಿವರ್ತನೆಗಳಲ್ಲಿ ಅವನನ್ನು ಅನುಸರಿಸುವುದಿಲ್ಲ ” ಎಂದು ಒತ್ತಿ ಹೇಳಿದರು.

ಔರೇಲಿಯಸಿನ ಹಿಂದಿನ ಪಾಪ ಜೀವನ ಅವನನ್ನು ಚುಚ್ಚತೊಡಗಿತು. ದಾವೀದನಂತೆ ಆತ ಪಾಪ ಮಾಡಿದ್ದ. ಆದರೆ ದಾವೀದನಂತೆ ಪಶ್ಚಾತ್ತಾಪಪಟ್ಟಿರಲಿಲ್ಲ.   ಪಾಪದ ತಿಳಿವು ಹೆಚ್ಚಾದಂತೆ, ಕ್ರಿಸ್ತ ನಂಬಿಕೆಯಲ್ಲದ್ದ ಸಂದೇಹವೂ ಕಡಿಮೆಯಾಗತೊಡಗಿತು. ಕಡೆಗೆ, ಬೈಬಲ್ ದೇವರ ವಾಕ್ಯ, ಯೇಸು ದೇವರ ಮಗನು ಎಂದು ಆತ ಒಪ್ಪಿಕೊಂಡ. ಆದರೂ ಅವನಲ್ಲಿದ್ದ ಪಾಪ ಸ್ವಭಾವ ಅವನನ್ನು ಇನ್ನೂ ಅನೈತಿಕ ಜೀವನದತ್ತ ನಡೆಸುತ್ತಾ ಇತ್ತು.  ಅವನ ಹಸಿದ ಹೃದಯ ಪಾಪದೊಡನೆ ಹೋರಾಡಿ ಬಳಲಿಹೋಗಿತ್ತು. ಒಂದು ದಿನ ತೋಟಕ್ಕೆ ಹೋಗಿ ಅಂಜೂರದ ಮರದ ಕೆಳಗೆ ಮೊಣಕಾಲೂರಿ, ” ಕರ್ತನೇ, ನನ್ನ ಅನೈತಿಕ ಜೀವನಕ್ಕೆ ಇದೇ ಕಡೆಗಳಿಗೆಯಾಗಮಾಡು ” ಎಂದು ಪ್ರಾರ್ಥಿಸಿದ.  ಕೂಡಲೇ ತೋಟದ ಹೊರಗಿನಿಂದ ಮಗುವಿನ ಧ್ವನಿಯಂತಿದ್ದ ಕೋಮಾಲ ಸ್ವರವೊಂದು ” ಟೋಲೆ ಲೆಗೆ ! ಟೋಲೆ ಲೆಗೆ ! ಅಂದರೆ ತೆಗೆದುಕೊಂಡು ಓದು ! ತೆಗೆದುಕೊಂಡು ಓದು ! ” ಎಂದು ಹೇಳಿತು. 

ಔರೇಲಿಯಸ್ ಕೆಳಗೆ ನೋಡಿದ, ಹಿಂದೆ ತಾನು ಬಿಟ್ಟು ಹೋಗಿದ್ದ ಪೌಲನು ರೋಮಾ ನಗರದವರಿಗೆ ಬರೆದ ಪತ್ರ ಅವನ ಮುಂದೆ ಇತ್ತು. 13 ನೇ ಅಧ್ಯಾಯದ 13,14 ನೇ ವಚನಗಳು  ” ದುಂದೌತಣ ಕುಡಿಕತನಗಳಲ್ಲಾಗಲಿ, ಕಾಮವಿಲಾಸ ನಿರ್ಲಜ್ಜಾಕೃತ್ಯಗಳಲ್ಲಾಗಲಿ, ಜಗಳ ಹೊಟ್ಟೆ ಕಿಚ್ಚು ಗಳಲ್ಲಾಗಲಿ, ಕಾಲಕಳೆಯದೆ ಹಗಲು ಹೊತ್ತಿಗೆ ತಕ್ಕ ಹಾಗೆ ಮಾನಸ್ಥರಾಗಿ ನಡೆದುಕೊಳ್ಳೋಣ. ದೇಹದ ಆಶೆಗಳನ್ನು ಪೂರೈಸುವುದಕ್ಕಾಗಿ ಚಿಂತಿಸದೆ ಕರ್ತನಾದ ಯೇಸು ಕ್ರಿಸ್ತನನ್ನು ಧರಿಸಿಕೊಳ್ಳಿರಿ. ” ಅವನನ್ನು ಆಲೋಚನಾ ಮಗ್ನನನ್ನಾಗಿ ಮಾಡಿದವು. ಆನಂದದಿಂದ ಔರೇಲಿಯಸ್ ತನ್ನ ಗೆಳೆಯ ಅಲಿಪಿಯಸನಿಗೆ ಈ ವಾಕ್ಯಗಳನ್ನು ತೋರಿಸಿ ” ನಾನು ಕ್ರಿಸ್ತನನ್ನು ನಂಬಿದ್ಧೇನೆ; ನನ್ನ ಹೃದಯದಲ್ಲಿ ಸಮಾಧಾನ ಸಂತೋಷಗಳು ತುಂಬಿವೆ ” ಎಂದು ಸಾಕ್ಷಿ ಕೊಟ್ಟ.  ತಾಯಿ ಮೋನಿಕಾಳ ಬಳಿಗೆ ಹೋಗಿ ಆಕೆಯ ಹಲವಾರು ವರ್ಷಗಳ ಪ್ರಾರ್ಥನೆಗೆ ಉತ್ತರ ದೊರೆಯಿತೆಂದು ಔರೇಲಿಯಸ್ ತವಕದಿಂದ ಆಕೆಗೆ ತಿಳಿಸಿದ.ಪಾಪ ಪರಿಹಾರವೆಂಬುವ ರಕ್ಷಣೆ, ದೀಕ್ಷಾಸ್ನಾನ, ನೀರಿಕ್ಷೆ,ಮುಂತಾದ ಮೂಲಭೂತ ಸತ್ಯಗಳನ್ನು ಆಭ್ಯಸಿಸಿದ ನಂತರ ಔರೇಲಿಯಸ್ ಬಿಷಪ್ ಅಂಬ್ರೋಸರಿಂದ ದೀಕ್ಷಾಸ್ನಾನವಾಯಿತು. 

                  ಪ್ರೊಫೆಸರ್ ಔರೇಲಿಯಸ್ ಆಗಸ್ಟಿನ್ 44 ವರ್ಷಗಳ ಕಾಲ ಫಲಫ್ರದವಾದ ಕ್ರಿಸ್ತ ಸೇವೆಯಲ್ಲಿ ಕಳೆದನು. ಈ ಅವಧಿಯಲ್ಲಿ ಅವನು 70 ಕ್ರೈಸ್ತ ಪುಸ್ತಕಗಳನ್ನು ಬರೆದನು. ” ಆಗಸ್ಟೀನನ ಅರಿಕೆಗಳು ” ಎಂಬ ಪುಸ್ತಕವನ್ನು ವಿದ್ವಾಂಸರು ವಿಶ್ವದ ನೂರು ಅಮೋಘ ಪುಸ್ತಕಗಳಲ್ಲಿ ಒಂದೆಂದು ಪರಿಗಣಿಸಿದ್ದಾರೆ. ಇದರಲ್ಲಿ ಎಲ್ಲಾ ನಿವೇದನೆ, ಅರಿಕೆಗಳನ್ನು ದೇವರಿಗೆ ಸಂಭೋಧಿಸಲಾಗಿದೆ. ” ನೀನು ನಮ್ಮನ್ನು ನಿನಗಾಗಿ ಸೃಷ್ಟಿಸಿದೆ, ನಿನ್ನಲ್ಲಿ ನೆಲೆಸಿದೆ ನಮ್ಮ ಹೃದಯಕ್ಕೆ ಶಾಂತಿಯಿಲ್ಲ ” ಎಂಬ ವಾಕ್ಯವನ್ನು ಪದೇ ಪದೇ ಇದರಲ್ಲಿ ಕಾಣಬಹುದು.  ರೋಮ್ ರಾಜ್ಯವು ಅನ್ಯ ಜನಾಂಗಗಳಿಗೆ ವಶವಾದ ನಂತರ ಕ್ರಿ. ಶ 430 ರಲ್ಲಿ ಆಗಸ್ಟೀನ್ ಸಮಾಧಾನದಿಂದ ಅಸುನೀಗಿದ. ಆಗ ಆತ ಉತ್ತರ ಆಫ್ರಿಕಾದ ಹಿಪ್ಪೊದಲ್ಲಿ ಬಿಷಪ್ ಆಗಿದ್ದ. ಆತ ಸತ್ತಾಗ ಆ ನಗರ ಉತ್ತರದ ವ್ಯಾಂಡಲ್ ಪಂಗಡದವರು ಆಕ್ರಮಿಸಿದರರು.       

               
     ಆದರೆ ಆತನ ಆತ್ಮೀಕ ಪ್ರಭಾವ ಮತ್ತು ಉಪದೇಶ ಅಂಧಕಾರದ ಯುಗದಲ್ಲಿ ಜ್ಯೋತಿಯಂತೆ ಪ್ರಕಾಶಿಸು, ಪುನರುಜ್ಜೀವನ ಕಾಲದ ನಾಯಕರುಗಳಾದ ಲೂಥರ್, ಕ್ಯಾಲ್ವಿನ್ ಅವರನ್ನು ಪ್ರೆರೇಪಿಸಿ ಅಂಧಕಾರದಲ್ಲಿದ್ದ ಕ್ರೈಸ್ತ ಸಮಾಜದ ನಾಯಕರುಗಳ ಪ್ರಭುತ್ವವನ್ನು ಪ್ರತಿಭಟಿಸಲು ಸಹಾಯ ಮಾಡಿತು. ಇಟಲಿ ತೋಟದಲ್ಲಿ ಕ್ರಿಸ್ತನಿಗೆ ಒಪ್ಪಿಸಿಕೊಟ್ಟ ಅನ್ಯಜನಾಂಗದ ಪ್ರೊಫೆಸರ್ ಔರೇಲಿಯಸ್ ಆಗಸ್ಟಿನ್ ಇಂದು ಇಲ್ಲದಿದ್ದರೂ ಅವನ ಸಾಹಿತ್ಯ ಮತ್ತು ಜೀವನ ಇತರರಿಗೆ ಮಾರ್ಗದರ್ಶನ ನೀಡುತ್ತಾ ಬಂದಿದೆ. ಅಪೊಸ್ತಲನಾದ ಪೌಲನ ತರುವಾಯ ಅತ್ಯಂತ ಪ್ರಭಾವ ಬೀರಿದ ಕ್ರಿಸ್ತ ವಿಶ್ವಾಸಿ ಎಂದು ಸಭೆ ಇತಿಹಾಸಕರು ಇವನನ್ನು ಹೊಗಳಿದ್ದಾರೆ

3 comments

 1. Heart touching stories of people of God are really nice

 2. Malachi says:

  Devare, nananu aa papadinda bidugade madu
  Devaru maha adbutha devaru
  Prayer for me

 3. Stany.gomes@ says:

  Please put more stories

Comments

Your email address will not be published. Required fields are marked *

× WhatsApp us