ಮನಸ್ಸಾಕ್ಷಿ – ಆತ್ಮೀಕ ಕಥೆ 37

  Posted on   by   2 comments

ತಾನು ನೌಕರಿಮಾಡುತ್ತಿದ್ದ ಕಂಪನಿಯಿಂದ ಯಾರಿಗೂ ತಿಳಿಯದಂತೆ, ಒಬ್ಬ ಗುಮಾಸ್ತನು ಹಣವನ್ನು ಅಪಹರಿಸಿದನು. ಸಾಯಂಕಾಲ ಒಂಟಿಯಾಗಿ ರಸ್ತೆಯಲ್ಲಿ ಹೋಗುತ್ತಿರುವಾಗ ಫಕ್ಕನೆ ಮಳೆ ಬರಲಾರಂಭಿಸಿತು. ಹಿಂದೆ ಬರುತ್ತಿದ್ದ ಪೊಲೀಸ್ ವಾಹನದಲ್ಲಿದ್ದ ಸಬ್‍ಇನ್ಸ್‍ಪೆಕ್ಟರ್, ಮಳೆಯಲ್ಲಿ ನೆನೆದುಕೊಂಡು ಹೋಗುತ್ತಿದ್ದೆ ಈತನ ಮೇಲೆ ದಯೆತೋರಿಸಿ ಸಹಾಯಮಾಡಬೇಕೆಂದೆಣಿಸಿ, ಪೊಲೀಸ್ ವಾಹನವನ್ನು ಆತನ ಪಕ್ಕದಲ್ಲಿ ತಂದು ನಿಲ್ಲಿಸಿದರು.
ಪೊಲೀಸ್ ವಾಹನ ಪಕ್ಕದಲ್ಲಿ ಬಂದು ನಿಂತೊಡನೆಯೇ, ಗುಮಾಸ್ತನು ಮನಸ್ಸಿನಲ್ಲಿ ಚುಚ್ಚಲ್ಪಟ್ಟವನಾಗಿ ತನಗರಿವಿಲ್ಲದೆಯೇ ಓಡಲಾರಂಭಿಸಿದನು. ಆತನು ಹಣವನ್ನು ಕದ್ದದ್ದು, ಅದು ಚೀಲದಲ್ಲಿರುವುದು, ಇನ್ಸ್‍ಪೆಕ್ಟರ್‍ಗೆ ತಿಳಿದಿರಲಿಲ್ಲ; ಪ್ರೀತಿಯಿಂದ ಸಹಾಯ ಮಾಡಲು ಅಪೇಕ್ಷಿಸಿ ವಾಹನವನ್ನು ನಿಲ್ಲಿಸಿದರು; ಆದರೆ ಗುಮಾಸ್ತನ ಓಟ ಇನ್ಸ್‍ಪೆಕ್ಟರಿಗೆ ಸಂಶಯವನ್ನುಂಟುಮಾಡಿತು. ಪಾಪವುಳ್ಳ ಮನುಷ್ಯರು ಪರಲೋಕ ಹೋಗಲು ಪ್ರಯತ್ನಿಸುವುದಾದರೆ, ಅಂಥವನ ಸ್ಥಿತಿಯೂ ಸಹ ಇದೇ ಆಗಿದೆ! ಮನಸ್ಸಾಕ್ಷಿಯಿಂದ ಪೀಡಿಸಲ್ಪಟ್ಟು ಸುಳ್ಳುಗಾರನಾಗಿ ಈ ಭೂಮಿಯಲ್ಲಿ ಜೀವಿಸಿದರೂ ಪರಿಶುದ್ಧನಾದ ದೇವರ ಪ್ರಭಾವದ ಮುಂದೆ ನಿಲ್ಲಲಾರನು (1 ತಿಮೊ. 4:1).
ಒಬ್ಬ ಮನುಷ್ಯನ ಮನಸ್ಸಾಕ್ಷಿಯೇ ಅವನನ್ನು ತಪ್ಪಿತಸ್ಥನೆಂದು ತೀರ್ಪುಮಾಡುವುದು; ಕ್ರಿಸ್ತನ ರಕ್ತವೇ ನಮಗೆ ಶುದ್ಧ ಮನಸ್ಸಾಕ್ಷಿಯನ್ನು ಕೊಡುವಂತಹದ್ದಾಗಿದೆ. ಸತ್ಯವೇದ ಹೇಳುತ್ತದೆ, “ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ ನಿರ್ಜೀವ ಕರ್ಮಗಳಿಂದ ಬಿಡಿಸಿ, ನಾವು ಜೀವವುಳ್ಳ ದೇವರನ್ನು ಆರಾಧಿಸುವಂತೆ ನಮ್ಮ ಮನಸ್ಸನ್ನು ಶುದ್ಧೀಕರಿಸುವುದಲ್ಲವೇ” (ಇಬ್ರಿ. 9:14).
“ನಂಬಿಕೆಯನ್ನು ಒಳ್ಳೆ ಮನಸ್ಸಾಕ್ಷಿಯನ್ನು ಬಿಡದೆ ಹಿಡಿದುಕೋ” (1 ತಿಮೊ. 1:19).
“ಪವಿತ್ರಾತ್ಮ ಧೀನವಾಗಿರುವ ನನ್ನ ಮನಸ್ಸೇ ಸಾಕ್ಷಿ; (ರೋಮ. 9:2) ಹೀಗೆ ಹೇಳುವ ಶುದ್ಧ ಮನಸ್ಸಾಕ್ಷಿಯ ಆನುಭವದಲ್ಲಿ ನೆಲೆಸಿನಿಲ್ಲು”

Categories: Spiritual Stories

2 comments

  1. B M Manjunatha says:

    Super

  2. c h vinod kumar says:

    Super enu aneka katha barari ok

Comments

Your email address will not be published. Required fields are marked *

× WhatsApp us