ಮನುಷ್ಯ ಕುಮಾರನು ಕೆಟ್ಟು ಹೋದವರನ್ನು ಹುಡುಕಲು ಬಂದನು!

  Posted on   by   1 comment

44_luke19110_44

“ಮನುಷ್ಯ ಕುಮಾರನು ಕೆಟ್ಟು ಹೋಗಿರುವದನ್ನು ಹುಡುಕಿ ರಕ್ಷಿಸುವದಕ್ಕೆ ಬಂದನು” (ಲೂಕ. 19:10).

ಇಂದು, ಅನೇಕ ಕುಟುಂಬಗಳು ಒಬ್ಬರನ್ನೊಬ್ಬರು ಪ್ರೀತಿಸದೇ ಇರುವದರಿಂದ ಅವರು ಸಂತೋಷವನ್ನು ಸಮಾಧಾನವನ್ನು ಕಳೆದು ಕೊಂಡಿದ್ದಾರೆ. ಯಾಕಂದರೆ, ಕುಟುಂಬದ ಸದಸ್ಯರಲ್ಲಿ ದೈವತ್ವವಾಗಲೀ ಶುದ್ಧತೆಯಾಗಲೀ ಇಲ್ಲದೇ ಇರುವುದರಿಂದ, ಅವರು ಅನೇಕ ಭಾದೆಗಳಿಗೆ ಒಳಗಾಗುತ್ತಾರೆ (ಯಾಕೋ. 3:14). ಸತ್ಯವೇದದಲ್ಲಿ ನಾವು ಜಕ್ಕಾಯನೆಂಬುವವನು ಯೇಸುವನ್ನು ಹುಡುಕಿಕೊಂಡು ಬಂದವನ ವಿಚಾರ ಓದುತ್ತೇವೆ. ಅವನು ಯೇಸುವನ್ನು ಹುಡುಕಿದಾಗ, ಯೇಸು ಆತನ ಮನೆಗೆ ಹೋಗಿ ಆತನಿಗೆ ಹೇಳಿದನು “ಇಂದು ಈ ಮನೆಗೆ ರಕ್ಷಣೆಯಾಗಿದೆ” ಎಂದು. ಆತನು ರಕ್ಷಣಾನಂದವನ್ನು ನಿನ್ನ ಕುಟುಂಬಕ್ಕೂ ಕೊಡಲು ಸಿದ್ಧನಾಗಿದ್ದಾನೆ (ಕೀರ್ತ. 51:12). ಯಾಕೆಂದರೆ, ಜಕ್ಕಾಯನು ಕರ್ತನನ್ನು ಹುಡುಕಿ ಬಂದನು. ಅವನು ಮತ್ತು ಅವನ ಮನೆಯವರು ರಕ್ಷಣಾನಂದವನ್ನು ಉಚಿತವಾಗಿ ಪಡೆದರು. ಇಂದು, ಈ ಸಂತೋಷದ ಅನುಭವನ್ನು ಪಡೆಯಲು ವಿಫಲವಾಗಿದ್ದರೆ ಜಕ್ಕಾಯನಂತೆ ಕರ್ತನ್ನು ಹುಡುಕಿರಿ ಮತ್ತು ಆತನ ಸಂತೋಷದಿಂದ ತುಂಬಲ್ಪಡಿರಿ (ಇಬ್ರಿ. 2:4).

ಒಂದು ಸಲ, ಒಬ್ಬ ಯೌವನಸ್ಥ ಮನುಷ್ಯನಿದ್ದನು. ಅವನನ್ನು ಗಮನಿಸಲು ಯಾರೂ ಇಲ್ಲದ್ದರಿಂದ, ಅವನು ಬಹಳವಾಗಿ ಹೋರಾಡುತ್ತಿದ್ದನು. ಜೊತೆಗೆ ಮೂರ್ಛೆ ರೋಗದಿಂದಲೂ ಭಾದಿತನಾಗಿದ್ದನು. ಕೆಲವು ಸಲ ದಿನದಲ್ಲಿ, ಅನೇಕ ಬಾರಿ ಈ ಮೂರ್ಛಾರೋಗದಿಂದ ಭಾದಿಸಲ್ಪಡುತ್ತಿದ್ದನು. ಅವನು ಹತಾಶವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದನು. ಒಂದು ದಿನ, ಅವನು ಮನೆಯನ್ನು ಬಿಟ್ಟು ಎಲ್ಲಿಗೆ ಹೋಗುತ್ತಿದ್ದೇನೆ ಎಂದು ತಿಳಿಯದೆ ನಡೆಯುತ್ತಾ ಹೋದನು. ದಾರಿಯಲ್ಲಿ, ಒಬ್ಬ ದೇವರ ಸೇವಕನು ಬೋಧಿಸುತ್ತಿದ್ದುದ್ದನ್ನು ಕೇಳಿದನು. “ಮಗನೇ! ದೇವರು ನಿನ್ನನ್ನು ಕರೆಯುತ್ತಿದ್ದಾನೆ! ನಿನ್ನ ಎಲ್ಲಾ ಭಾರಗಳಿಂದಲೂ, ಚಿಂತೆಗಳಿಂದಲೂ ನಿನಗೆ ಪರಿಹಾರ ಕೊಡಲು ಆತನು ತಯಾರಿದ್ದಾನೆ” ಎಂದು. ಆತನು ಆಶ್ಚರ್ಯಚಕಿತನಾದ! ಅವನು ಧ್ವನಿ ಬಂದ ಕಡೆಗೆ ಓಡಲು ಆರಂಭಿಸಿದನು. ಅಲ್ಲಿ, ಒಬ್ಬ ದೇವರ ಸೇವಕನು ಬೋಧಿಸುತ್ತಿದ್ದನು. ಪ್ರಾರ್ಥನಾ ಸಮಯದಲ್ಲಿ, ಒಂದು ದೈವೀಕ ಶಕ್ತಿ ಇವನ ದೇಹ ಪ್ರವೇಶಿಸುತ್ತಿರುವುದರ ಅನುಭವವಾಯಿತು. ಅವನು ದೊಡ್ಡ ಸಂತೋಷದಿಂದ ತುಂಬಿದವನಾದನು! ಅವನು ನೆಟ್ಟಗೆ ಹಿಂದಕ್ಕೆ ಮನೆಗೆ ಬಂದನು. ಮಾರನೆಯ ದಿನ, ಅವನಿಗೆ ಮೂರ್ಛೆಯ ಅಕ್ರಮಣವಿರಲಿಲ್ಲ. ಸಾಯಂಕಾಲ ಮತ್ತೆ ಅದೇ ಜಾಗದಲ್ಲಿನ ಕೂಟದಲ್ಲಿ ಭಾಗವಹಿಸಿ ತನ್ನ ಸಾಕ್ಷಿಯನ್ನು ಹಂಚಿಕೊಂಡನು. ಅವನು ತನ್ನ ಜೀವನವನ್ನು ಮಾತ್ರ ಯೇಸುವಿಗೆ ಸಮರ್ಪಿಸಿಕೊಂಡದ್ದು ಮಾತ್ರವಲ್ಲದೇ, ಯೇಸುವಿನ ಸೇವಕನಾದನು. ದೇವರು ಅವನನ್ನು ಅವನ ಸೇವೆಯನ್ನು ಆಶೀರ್ವದಿಸಿದನು.

ನಮಗೆ ಗೊತ್ತಿದೆ ಕರ್ತನು ಯೋಬನಿಗೆ ಮೊದಲಿಗಿಂತ ಎರಡರಷ್ಟು ಹೆಚ್ಚಾಗಿ ಕೊಟ್ಟನು (ಯೋಬ. 42:10). ಅದೇ ರೀತಿ, ನೀನು ಮತ್ತು ನಿನ್ನ ಕುಟುಂಬ ಕಳೆದುಕೊಂಡಿರುವ ಎಲ್ಲಾ ಸಂತೋಷವನ್ನು ದೇವರು ಹಿಂತಿರುಗಿ ಕೊಡಲು ಸಿದ್ಧನಿದ್ದಾನೆ. ಇಂದೇ, ಆತನನ್ನು ಹುಡುಕಿರಿ ಮತ್ತು ನೀನು ಕಳೆದುಕೊಂಡ ಸಂತೋಷವನ್ನು ಪಡೆದುಕೋ.

ಪ್ರಾರ್ಥನೆ :- ಪ್ರಿಯ ಪರಲೋಕದ ತಂದೆಯೇ! ನೀನು ನನ್ನನ್ನು ಬಿಡಿಸಲು ಶಿಲುಬೆಯ ಮೇಲೆ ಸತ್ತೆ. ನೀನು ಈ ಪ್ರಪಂಚಕ್ಕೆ ನನ್ನನ್ನು ಹುಡುಕಲು ಬಂದೆ. ಇಂಥಹ ದೊಡ್ಡ ಆಶೀರ್ವಾದಕ್ಕಾಗಿ ವಂದನೆಗಳು. ಇಂದು ನೀನು ನನ್ನನ್ನು ಆಶೀರ್ವದಿಸಿ ನಿನ್ನ ದೈವೀಕ ಪ್ರೀತಿ, ಸಮಾಧಾನ ಮತ್ತು ಸಂತೋಷವನ್ನು ನನ್ನ ಜೀವನದಲ್ಲಿ ಕೊಡುತ್ತೀಯ ಎಂದು ದೃಢವಾಗಿ ನಂಬಿದ್ದೇನೆ. ಹಾಗೆ ಮಾಡುವುದಕ್ಕಾಗಿ ಸ್ತೋತ್ರ. ಯೇಸುವಿನ ಶಕ್ತಿಯುಳ್ಳ ನಾಮದಲ್ಲಿ ನಾನು ಪ್ರಾರ್ಥಿಸುವೆ, ಆಮೆನ್.

1 comment

  1. Arun pinto says:

    Yesu ninenanna Jothi ninenanna sarvasva .ninnalli edhe jivadhayakka bugge.amen

Comments

Your email address will not be published. Required fields are marked *

WhatsApp us