ಮೇಲಿಗಾಗಿ ದೇವರ ಹಸ್ತ!

  Posted on   by   3 comments

“ನಮ್ಮ ದೇವರ ಹಸ್ತವು ಆತನ ಎಲ್ಲಾ ಶರಣಾರ್ಥಿಗಳನ್ನೂ ಪಾಲಿಸುವದು” (ಎಜ್ರ. 8:22).

ಹೌದು ಮೇಲಿನ ವಾಕ್ಯಕ್ಕನುಸಾರವಾಗಿ ದೇವರ ಹಸ್ತ ನಿಮ್ಮನ್ನು ಮುಟ್ಟಿದಾಗ, ನಿಮಗೆ ಮೇಲು ಉಂಟಾಗುತ್ತದೆ. ವಾಸ್ತವವಾಗಿ ಹೇಳಬೇಕಾದರೆ ಇದು ದೈವೀಕ ಅನುಭವ. ಈ ದೈವೀಕವಾದ ಆಶೀರ್ವಾದ ಎಂದರೆ ದೇವರ ಸ್ವರ್ಶವನ್ನು ನೀವು ಹೊಂದಿದಾಗ ಆ ವಿಷಯವನ್ನು ನೀವು ಗ್ರಹಿಸಬೇಕೆಂದು ಹೇಳಬಯಸುತ್ತಿದ್ದೇನೆ. ನೀವು ಕರ್ತನನ್ನು ಹೃತ್ಪೂರ್ವಕವಾಗಿ ಹುಡುಕಿದರೆ ಆತನು ಬಹಳ ಸಂತೋಷಿಸುತ್ತಾನೆ. ಆತನು ನಿಮ್ಮ ಬಳಿಗೆ ಬರುತ್ತಾನೆ. ಆತನ ಕೈಗಳು ನಿಮ್ಮನ್ನು ಮುಟ್ಟುತ್ತವೆ. ಆಗ ನೀವು ಆತನ ಸ್ವರ್ಶವನ್ನು ಹೊಂದುವಿರಿ (ಯೆರೆ. 29:13). ಆತನ ಹಸ್ತವನ್ನು ಮೇಲೆ ಹೀಗೆ ಇಳಿದು ಬರುತ್ತದೆ. (ಕೀರ್ತ. 139:5). ರಲ್ಲಿ ಓದಿದರೆ, ಆ ಹಸ್ತವೇ ನಿಮ್ಮ ಮುಂದೆ ನಿಮ್ಮ ಹಿಂದೆ ಕಾವಲಾಗಿದೆ ಎಂದು ಹೇಳಲಾಗಿದೆ. ಕೋಳಿ ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕಾಪಾಡಿದಂತೆ ಆತನ ಬಲವಾದ ರೆಕ್ಕೆಗಳ ಕೆಳಗೆ ನಿಮ್ಮನ್ನು ಬಲಪಡಿಸಿ ಕಾಪಾಡುತ್ತಾನೆ. ಪ್ರೀತಿಯಿಂದ ತುಂಬಿದ ಆತನ ಕೈಗಳು ಹೀಗೆ ಮೇಲು ಮಾಡುತ್ತವೆ. ಈ ಮಾತುಗಳನ್ನು ಕರ್ತನು ನಿಮಗೆ ವಾಗ್ದಾನವಾಗಿ ಹೇಳುತ್ತಿದ್ದಾನೆ. ಆಹಾ ಎಷ್ಟು ಆಶೀರ್ವಾದಕರವಾದ ವಾಕ್ಯ.

ಕೆಲವು ವರ್ಷಗಳ ಹಿಂದೆ ಸಮುದ್ರ ತೀರ ಪ್ರದೇಶಗಳನ್ನು ಚಂಡಮಾರುತ ಬಡಿದಾಗ, ಈ ತೀರ ಪ್ರಾಂತಗಳೆಲ್ಲಾ ನೀರಿನಲ್ಲಿ ಮುಳುಗಿ ಹೋದವು. ಆದರೆ ಕೆಲವು ಸ್ಥಳಗಳಲ್ಲಿ ಕರ್ತನು ಅದ್ಭುತ ಮಾಡಿದ ವಿಷಯ ನಿಮಗೆ ಗೊತ್ತೇ? ಅಂಥ ತೀರ ಪ್ರಾಂತಗಳಲ್ಲಿ ಕೆಲವು ಸ್ಥಳಗಳಲ್ಲಿ ಕೆಲವರು ಕುಟುಂಬ ಸಮೇತವಾಗಿ ಪ್ರಾರ್ಥನೆಗಳನ್ನು ಮಾಡಿದಾಗ, ಅವರ ಕುಟುಂಬಗಳು ಸುನಾಮಿ ಚಂಡಮಾರುತದಿಂದ ಕೊಚ್ಚಿಕೊಂಡು ಹೋಗಲಿಲ್ಲ. ಈ ಭಯಂಕರವಾದ ನೈಸರ್ಗಿಕ ಅಪಘಾತದಿಂದ ದೇವರ ಹಸ್ತ ಅವರನ್ನು ಕಾಪಾಡಿದ್ದರಿಂದ ಅವರ ಪ್ರಾಣಗಳು ರಕ್ಷಿಸಲ್ಪಟ್ಟವು. ಅಂಥಾ ದೊಡ್ಡ ಅಲೆಗಳು ಎದ್ದು ಬರುತ್ತಿರುವಾಗ “ನಿಲ್ಲು ಇನ್ನು ಮುಂದೆ ಬರಬೇಡ” ಎಂದು ಆಜ್ಞಾಪಿಸಿದ್ದರಿಂದ ನೀರು ಮುಂದಕ್ಕೆ ಬಾರದಂತೆ ನಿಂತು ಹೋಯಿತು. ಈ ಅದ್ಭುತವನ್ನು ಕಣ್ಣಾರೆ ನೋಡಿದವರು ಬಹಳ ಆಶ್ಚರ್ಯಗೊಂಡರು. ಈ ಅದ್ಭುತವನ್ನು ಕಣ್ಣಾರೆ ನೋಡಿದ ಸುತ್ತಮುತ್ತಲು ಜನರು ಸಹ ಯೇಸು ಕ್ರಿಸ್ತನು ನಿಜವಾದ ದೇವರೆಂದು ಸಾಕ್ಷಿ ಹೇಳಿದರು.

ಇಂದು ಈ ಸರ್ವಶಕ್ತನಾದ ದೇವರು ಈ ಮಹಾ ಶಕ್ತಿಯನ್ನು ತನ್ನನ್ನು ಹುಡುಕುವವರಿಗೆಲ್ಲಾ ನೀಡಬೇಕೆಂದು ಅಂಥವನ್ನು ಹುಡುಕುತ್ತಿದ್ದಾನೆ.

ಪ್ರಾರ್ಥನೆ : ಪ್ರೀತಿಸ್ವರೂಪಿಯೇ, ನಿನ್ನ ಪ್ರೀತಿ ಹೆತ್ತ ತಾಯಿಯ ಪ್ರೀತಿಗಿಂತ ದೊಡ್ಡದಾಗಿರುವದರಿಂದ ನಿನಗೆ ವಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಇಹಲೋಕ ಬಾಧೆಗಳು ಶೋಧನೆಗಳಿಂದ ಕಂಗಾಲಾಗುತ್ತಿದ್ದೇನೆ. ನಿನ್ನ ದೈವೀಕ ಹಸ್ತದಿಂದ ನನ್ನನ್ನು ನಡೆಸು. ಅದ್ಭುತವಾದ ಆಶೀರ್ವಾದಗಳಿಂದ ನನ್ನ ಜೀವನವನ್ನು ತುಂಬಿಸು. ಯೇಸುವಿನ ನಾಮದಲ್ಲಿ ಪ್ರಾರ್ಥಿಸುತ್ತಿದ್ದೇನೆ. ತಂದೆಯೇ, ಆಮೆನ್.

3 comments

  1. Ashwini bakale says:

    How to empruu in pray

  2. Sindu says:

    I want daily pls reply

  3. Sindu says:

    Want to know about bible

Comments

Your email address will not be published. Required fields are marked *

× WhatsApp us