ಯೆಹೋವನು ಒಳ್ಳೆಯವನೆಂದು ಅನುಭವಿಸಿ ನೋಡಿ!

  Posted on   by   2 comments

17164-taste-and-see-cupcake

ಯೆಹೋವನು ಸರ್ವೋತ್ತಮನೆಂದು ಅನುಭವದಿಂದ ತಿಳಿದುಕೊಳ್ಳಿರಿ ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಧನ್ಯರು” (ಕೀರ್ತ. 34:8).

ಈ ಲೋಕದಲ್ಲಿ, ನಂಬಿಕೆ ಮತ್ತು ನಿರೀಕ್ಷೆ ಜನರಿಂದ ಜನರಿಗೆ ಭಿನ್ನವಾಗಿರುತ್ತದೆ. ನಮ್ಮ ನಂಬಿಕೆ ಮತ್ತು ನಿರೀಕ್ಷೆ ದೇವರಲ್ಲಿ ಬಲವಾಗಿದ್ದರೆ, ಆತನು ದಿನದಿಂದ ದಿನಕ್ಕೆ, ಆತನ ಒಳ್ಳೆಯದನ್ನು ಅನುಭವಿಸಲು ಕೃಪೆಯನ್ನು ಕೊಡುತ್ತಾನೆ. ಯಾವನು ಯೆಹೋವನಲ್ಲಿ ನಂಬಿಕೆಯಿಟ್ಟಿದ್ದಾನೋ ಯಾವನಿಗೆ ಯೆಹೋವನು ಭರವಸೆಯಾಗಿದ್ದಾನೋ ಅವನು ಧನ್ಯನು (ಯೆಶಾ. 17:7). ಪ್ರಿಯ ಸ್ನೇಹಿತರೇ, ನಮ್ಮ ಜೀವನದ ಒಂದು ಸಣ್ಣ ಭಾರವನ್ನು ಹೊರಲು ನಾವು ಪರದಾಡುತ್ತೇವೆ. ಯಾಕಂದರೆ, ನಾವು ದೇವರನ್ನು ನಂಬುವ ಅನುಭವವನ್ನಾಗಲೀ ಆತನಲ್ಲಿ ನಿರೀಕ್ಷೆ ಹೊಂದಿರುವುದಾಗಲೀ ಇಲ್ಲದೇ ಇರುವುದರಿಂದ. ಈ ದಿನದಲ್ಲಿ, ನೀವು ಇಂತಹ ಪರಿಸ್ಥಿತಿಯಲ್ಲಿದ್ದರೆ ದಾವೀದನಂತೆ ದಯಮಾಡಿ ಆತನು ಒಳ್ಳೆಯವನೆಂದು ಅನುಭವದ ಮೂಲಕ ನೋಡಿರಿ ಮತ್ತು ಆತನ ಆಶೀರ್ವಾದವನ್ನು ಪಡೆಯಿರಿ (ಕೀರ್ತ. 84:5).

ಒಂದು ಸಾರಿ, ಕುಟುಂಬದಲ್ಲಿ ಅನೇಕ ಸಹೋದರ ಸಹೋದರಿಯರು ಇದ್ದರು. ಅವರಿಗೆ ದೇವರಲ್ಲಿ ಹೆಚ್ಚು ನಂಬಿಕೆ ಇಲ್ಲದೆ ಸ್ವಲ್ಪ ಮಾತ್ರವೇ ಇತ್ತು. ಅವರಿಗೆ ಜೀವನದಲ್ಲಿ ಎಲ್ಲಾ ಆಶೀರ್ವಾದವಿದ್ದರೂ, ದೇವರಲ್ಲಿ ಅವರಿಗೆ ನಂಬಿಕೆ ಪೂರ್ಣವಾಗಿರದೆ ಕೇವಲ ಅಪೂರ್ಣವಾಗಿತ್ತು. ಅವರಲ್ಲಿ ಒಬ್ಬ ಸಹೋದರಿ ಮಾತ್ರ, ತನ್ನ ಎಲ್ಲಾ ಬಲದಿಂದಲೂ ಹೃದಯದಿಂದಲೂ ದೇವರನ್ನು ಪ್ರೀತಿ ಮಾಡುತ್ತಿದ್ದಳು. ಆದರೆ, ಅವಳ ಜೀವನ ಅನೇಕ ಅವಶ್ಯಕತೆಯಿಂದಲೂ ವೈಫಲತೆಯಿಂದಲೂ ತುಂಬಾ ಭಾದೆಯಿಂದ ಕೂಡಿತ್ತು. ಆದ್ದರಿಂದ ಅವಳ ಎಲ್ಲಾ ಸಹೋದರರು ಮತ್ತು ಸಹೋದರಿಯರು ಒಟ್ಟಾಗಿ ಸೇರಿ ಅವಳನ್ನು “ನಿನ್ನ ವಿಪರೀತವಾದ ನಂಬಿಕೆಯಿಂದ ನೀನು ದೇವರನ್ನು ಅನುಭವಿಸುತ್ತಿರುವೆ. ನಮಗಿರುವಂತೆ ನಿನಗೆ ದೇವರಲ್ಲಿ ಸ್ವಲ್ಪ ನಂಬಿಕೆ ಇದ್ದರೆ ಸಾಕು, ನಮ್ಮ ಹಾಗೆ ನೀನು ಜೀವನದಲ್ಲಿ ಸಂತೋಷ ಪಡಬಹುದು” ಎಂದು ಹಾಸ್ಯವನ್ನು ಮಾಡುತ್ತಿದ್ದರು. ದೇವರು ಒಂದು ದಿನ, ಅವಳ ಎಲ್ಲಾ ಭಾರ, ಬಾಧೆಗಳನ್ನು ತೊಡೆದು ಹಾಕುತ್ತಾನೆ ಎಂಬ ಪೂರ್ಣವಾದ ಭರವಸೆ ಅವಳಿಗೆ ಇತ್ತು. ದಿನಗಳು, ವರ್ಷಗಳು ಕಳೆದವು. ದೇವರ ಕೃಪೆಯಿಂದ ಅವಳ ಗಂಡನಿಗೆ ಬಡ್ತಿ ಸಿಕ್ಕಿ, ಉನ್ನತವಾದ ಸ್ಥಾನ ಪಡೆದನು. ಅವನಿಗೆ ಬಂಗಲೆ ಕಾರು ಎಲ್ಲಾ ಕೊಡಲ್ಪಟ್ಟಿತು. ಈಗ ಅವಳ ಸ್ಥಿತಿ ಅವಳ ಸಹೋದರ, ಸಹೋದರಿಯರಿಗಿಂತ ಉತ್ತಮವಾಯಿತು. ಆಗ ಅವರ ಕಣ್ಣು ತೆರೆಯಲ್ಪಟ್ಟಿತು ಮತ್ತು ಅವರುಗಳು ತಮ್ಮ ಮೂರ್ಖತನವನ್ನು ಅರ್ಥಮಾಡಿಕೊಂಡರು.

ಪ್ರಿಯರೇ, ಪ್ರತಿಯೊಬ್ಬರ ಹೃದಯವನ್ನು ದೇವರು ಬಲ್ಲವನಾಗಿದ್ದಾನೆ. ಕಥೆಯಲ್ಲಿನ ಸಹೋದರಿ ತನ್ನ ಬಾಧೆಗಳನ್ನು
ಉತ್ಪೇಕ್ಷೆಮಾಡದೆ ತನ್ನ ಎಲ್ಲಾ ಕಷ್ಟಗಳ ನಡುವೆ ಆತನನ್ನೇ ನಂಬಿ ಆತನ ಹೇರಳವಾದ ಆಶೀರ್ವಾದಗಳನ್ನು ಪಡೆದಳು. ನೀವು ಸಹ ಹೀಗೆ ಮಾಡಿದರೆ, ನೀವು ಸಹ ಆಶೀರ್ವದಿಸಲ್ಪಡುವಿರಿ.

ಪ್ರಾರ್ಥನೆ : ಪರಲೋಕದ ತಂದೆಯೇ, ನಾನು ನಿನ್ನ ಮೇಲಿನ ಅಪೂರ್ಣ ನಂಬಿಕೆಯನ್ನು ಪರಿಪೂರ್ಣವಾಗಿ ಬದಲಾಯಿಸು, ಈ ಪ್ರಪಂಚವನ್ನು ನಂಬದೆ, ನಿನ್ನನ್ನು ಮಾತ್ರ ಪೂರ್ಣವಾಗಿ ನಂಬುವಂತೆ ಸಹಾಯಮಾಡು. ನಿನ್ನ ಒಳ್ಳೆಯದನ್ನು ನಾನು ಅನುಭವಿಸುವಂತೆ ನನಗೆ ಕೃಪೆಕೊಡು ಮತ್ತು ನನ್ನ ನಂಬಿಕೆಯನ್ನು ವೃದ್ಧಿಗೊಳಿಸು. ನನ್ನ ಜೀವನ ಈ ಪ್ರಪಂಚದಲ್ಲಿ ಸಾಕ್ಷಿಯಾಗಿರಲಿ. ಇಂದಿನಿಂದಲೇ ಈ ಕೃಪೆಯನ್ನು ಕೊಡು ತಂದೆಯೇ. ಯೇಸುವಿನ ಮಧುರ ನಾಮದಲ್ಲಿ ಪ್ರಾರ್ಥಿಸುವೆ, ಆಮೆನ್.

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.👇

https://play.google.com/store/apps/details?id=org.mannaministry.app

MANNA MINISTRIES
Mannaministries.in@gmail.com
For Daily Devotion Contact: +91 9964247889

 

2 comments

  1. kiran says:

    Thank you god amen

Comments

Your email address will not be published. Required fields are marked *

WhatsApp us