ಯೇಸುವಿನ ರಕ್ತದಿಂದ ಕೊಟ್ಟ ಸಮಾಧಾನ!

  Posted on   by   1 comment

“ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ತಾನು ಸಮಾಧಾನ ಉಂಟುಮಾಡಿ” (ಕೊಲೊ. 1:20).

ನಮ್ಮ ದಿನ ನಿತ್ಯದ ಜೀವನದಲ್ಲಿ, ಅನೇಕರು ವೈಯಕ್ತಿಕವಾಗಿಯೂ ಕುಟುಂಬ ಸದಸ್ಯರಾಗಿಯೂ ಸಮಾಧಾನವಿರುವದಿಲ್ಲ, ಅವರು ಜೀವಿಸಲು ಹೋರಾಡುತ್ತಾರೆ. ಆದರೆ, ಸಮಾಧಾನದ ಪ್ರಭು, ನಿಮ್ಮ ಹೃದಯದಲ್ಲಿ ಸಮಾಧಾನವನ್ನು ಕೊಡಲು ಇಷ್ಟಪಟ್ಟು, ನಿಮ್ಮ ಜೀವನವನ್ನು ಬದಲಾಯಿಸುತ್ತಾನೆ (ಯೋಹಾ. 14:27). ಕೇವಲ ಈ ಒಂದು ಕಾರಣಕ್ಕಾಗಿ, ಆತನು ತನ್ನ ರಕ್ತವನ್ನು ಶಿಲುಬೆಯ ಮೇಲೆ ಸುರಿಸಿದನು. ನಾವು ದೈವೀಕ ಸಮಾಧಾನವನ್ನು ರಕ್ತದಿಂದ ಮಾತ್ರ ಪಡೆಯಲು ಸಾಧ್ಯ. ಎಲ್ಲಾ ಸಮಯದಲ್ಲಿ, ದೇವರ ಪ್ರಸನ್ನತೆ ನಮ್ಮ ಹೃದಯಗಳನ್ನು, ನಮ್ಮ ಮನೆಗಳನ್ನು ದೈವೀಕ ಸಮಾಧಾನದಿಂದ ತುಂಬಲು ಸಾಧ್ಯವಿದೆ (ಯೋಹಾ. 20:19).

ಒಂದು ಸಾರಿ, ಒಬ್ಬ ಡಕಾಯಿತನು ವಾಸವಾಗಿದ್ದನು. ಅವನು ರಾತ್ರಿ ಹೊತ್ತು ಜನರಿಂದ ಕಳ್ಳತನ ಮಾಡಿ, ಹೆಂಗಸರಿಂದ ಒಡವೆಗಳನ್ನು ತೆಗೆದುಕೊಂಡು ಹೋಗುತ್ತಿದ್ದನು. ಅವನು ಈ ಎಲ್ಲಾ ಒಡವೆಗಳನ್ನು ತನ್ನ ಹೆಂಡತಿಗೆ ಕೊಡುತ್ತಿದ್ದನು. ಅವಳು ಜಂಭದಿಂದ ಈ ಎಲ್ಲಾ ಬೆಲೆಬಾಳುವ, ಸುಂದರವಾದ ಒಡವೆಗಳನ್ನು ಧರಿಸಿ ಆರಾಮ ಜೀವನ ನಡೆಸುತ್ತಿದ್ದಳು. ಒಂದು ದಿನ, ಒಬ್ಬ ಸಾಧಾರಣ ಮನುಷ್ಯನು ದೇವರು ಕೊಡುವ ಅಸಾಧಾರಣವಾದ ಸಮಾಧಾನದ ಬಗ್ಗೆ ಬೋಧಿಸುತ್ತಿದ್ದುದ್ದನ್ನು, ಆ ಡಕಾಯಿತನು ಕೇಳಿದನು. ಅವನು, ಒಂದು ಕ್ಷಣ ಯೋಚಿಸಿದನು, “ಅಯ್ಯೋ! ನಾನು ಒಬ್ಬ ಕಳ್ಳ ಎಂದು ನನ್ನ ಹೃದಯದಲ್ಲಿ ಎಷ್ಟೊಂದು ಭಯವಿದೆ. ಪೋಲಿಸ್ ಬಗ್ಗೆ ಮತ್ತು ಬೇರೆಯವರ ಬಗ್ಗೆ! ಪ್ರತಿ ಸಲ ನಾನು ಅವರನ್ನು ನೋಡಿದಾಗ, ಅವರು ನನ್ನನ್ನು ಹಿಡಿದು ಶಿಕ್ಷಿಸಬಹುದೆಂಬ ಭಯವಿದೆ. ನಾನು ಭಯದ ಜೀವಿತ ಜೀವಿಸಲು ನಿರ್ಬಂಧಕ್ಕೆ ಒಳಗಾಗಿರುವೆ. ಮತ್ತು ನನಗೆ ಸಮಾಧಾನವೇ ಇಲ್ಲ” ಎಂದು. ಅವನು ತನ್ನ ಜೀವನದ ಬಗ್ಗೆ ಒಂದು ಕ್ಷಣ ಆಲೋಚಿಸಿದನು. ಆ ಸಮಯದಲ್ಲಿ ಬೋಧಕರು ಯೇಸುವಿನ ಬಗ್ಗೆಯೂ ಮತ್ತು ಆತನು ಕೊಡುವ ದೈವೀಕ ಸಮಾಧಾನದ ಬಗ್ಗೆಯೂ ಮಾತನಾಡಿದರು. ಆತನು ಯೇಸು ಮತ್ತು ಆತನ ಪ್ರೀತಿಯ ಬಗ್ಗೆ ಹೆಚ್ಚು ಹೆಚ್ಚಾಗಿ ಕೇಳಿದಂತೆಲ್ಲಾ ತನ್ನ ಜೀವನವನ್ನು ಆತನಿಗೆ ಸರ್ಮಪಿಸಿದನು. ಅವನ ಹೃದಯ ಬದಲಾಯಿತು. ಅವನಿಗೆ ಗೊತ್ತಾಯಿತು. ಆತನ ರಕ್ತ ಅವನ ಎಲ್ಲಾ ಪಾಪಗಳನ್ನು ಶುದ್ಧೀಕರಿಸಿದೆ ಮತ್ತು ಅವನ ಹೃದಯ ಮನುಷ್ಯರ ಆಲೋಚನೆಗೆ ಮೀರಿದ ಸಮಾಧಾನದಿಂದ ತುಂಬಿದೆ ಎಂದು ಗೊತ್ತಾಯಿತು. ಬೇಗನೆ, ಅವನ ಎಲ್ಲಾ ಭಯ ಮತ್ತು ಹೋರಾಟ ಮಾಯವಾಯಿತು ಮತ್ತು ಅವನು ಹೊಸ ಜೀವನ ಆರಂಭಿಸಿದನು.

ಪ್ರಿಯರೇ, ಯೇಸುಕ್ರಿಸ್ತನ ರಕ್ತ ಎಂಥಹ ಶಕ್ತಿಯುತವಾದದ್ದು. ಅದು ಕಲ್ಲಾದ ಹೃದಯವನ್ನು ಮೃದುವಾದ ಹೃದಯವನ್ನಾಗಿ ಬದಲಾಯಿಸುತ್ತದೆ (ಯೆರೆ. 11:19). ನಿಮ್ಮ ಜೀವನದಲ್ಲೂ ಸಹ ಪಾಪಗಳಿದ್ದರೆ ಕಹಿ, ಕೋಪ ಕರ್ತನಾದ ಯೇಸು ಕ್ರಿಸ್ತನ ಹತ್ತಿರ ಅರಿಕೆ ಮಾಡಿರಿ. ಮತ್ತು ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ನಿಮ್ಮನ್ನು ತೊಳೆಯಲು ಆತನನ್ನು ಕೇಳಿರಿ. ಆಗ, ನೀನು ಸಂತೋಷದಿಂದ ರಕ್ಷಣೆಯ ಬಾವಿಯಿಂದ ನೀನು ನೀರನ್ನು ಸೇದಬಹುದು” (ಯೆಶಾ. 12:3).

ಪ್ರಾರ್ಥನೆ : ಪ್ರಿಯ ಪರಲೋಕದ ತಂದೆಯೇ! ನಿನ್ನ ದೈವೀಕ ಸಮಾಧಾನದಿಂದ ನನ್ನನ್ನು ತುಂಬಿಸಿದ್ದಕ್ಕಾಗಿ ನಿನಗೆ ಸ್ತೋತ್ರ. ಪ್ರಾಪಂಚಿಕ ಜನರ ಮಧ್ಯದಲ್ಲಿ, ಸಾಕ್ಷಿಯ ಜೀವನ ನಡೆಸುವಂತೆಯೂ ಸಮಾಧಾನದ ದಾರಿಯಲ್ಲಿ ನಡೆಯುವಂತೆಯೂ ನಡೆಸು. ಇಂದಿನಿಂದ, ಈ ಅವಕಾಶವನ್ನು ಕೊಡು. ಎಲ್ಲಾ ಸಮಯದಲ್ಲಿ, ನಿಮ್ಮ ಕೃಪೆಯಿಂದ ಸಮಾಧಾನದಿಂದ ನನ್ನನ್ನು ತುಂಬಿಸು. ಯೇಸುವಿನ ಅಮೂಲ್ಯ ನಾಮದಲ್ಲಿ ನಾನು ಪ್ರಾರ್ಥಿಸುವೆ, ಆಮೆನ್.

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ  whatsapp ಗೆ join ಆಗಿ  Click here to join :??

http://bit.ly/2qZzHAR

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.?

https://play.google.com/store/apps/details?id=org.anudinadamanna.app

For Daily Devotion Contact: +91 9964247889

1 comment

  1. Ashwini says:

    Well tried sir…may Jesus always lead u and do such a might things by u ….

Comments

Your email address will not be published. Required fields are marked *

× WhatsApp us