ಯೇಸುವಿನ ರಕ್ತ ನಮ್ಮನ್ನು ನೀತಿವಂತರನ್ನಾಗಿ ಮಾಡುತ್ತದೆ!

  Posted on   by   No comments

“ಯೇಸುವಿನ ರಕ್ತ ನಮ್ಮನ್ನು ನೀತಿವಂತರಾಗಿರಲಾಗಿ ಆತನ ಮೂಲಕ ಬರುವ ಕೋಪಕ್ಕೆ ತಪ್ಪಿಸಿಕೊಳ್ಳುವುದು ಮತ್ತು ನಿಶ್ಚಯವಲ್ಲವೇ?” (ರೋಮ. 5:9).

ಈ ಲೋಕದಲ್ಲಿ, ಎಲ್ಲಾ ಜನರು ಪವಿತ್ರವಾದ ಜೀವನ ನಡೆಸುವುದಿಲ್ಲ. ಕೇವಲ ಕೆಲವೇ ಜನರು, ದೇವರ ಶಿಲುಬೆಯ ಮೂಲಕ ಉಚಿತವಾಗಿ ಕೊಟ್ಟಿರುವ ವಿಮೋಚನೆಯ ಮಹಾ ವೈಭವವನ್ನು ಅನುಭವಿಸಿದ್ದಾರೆ (1 ಕೊರಿ. 1:18). ಒಬ್ಬ ಮನುಷ್ಯನಾದ, ಸೌಲನು ದೇವರಿಗೆ ವಿರುದ್ಧವಾಗಿ ಅನೇಕ ದುಷ್ಟ ಸಂಗತಿಗಳನ್ನು ಮಾಡಿದನು. ಆದರೆ, ದೇವರಿಗಿದ್ದ ಅವನ ಮೇಲಿನ ಕರುಣೆ ಮತ್ತು ಕನಿಕರದಿಂದ ಅವನಿಗೆ ತನ್ನನ್ನು ಪ್ರಕಟಿಸಿಕೊಂಡನು. ಇದು, ಅವನ ಜೀವನವನ್ನು ತಲೆಕೆಳಗು ಮಾಡಿತು. ಇಂದಿಗೂ, ಆತನು ನಮ್ಮನ್ನು ಪ್ರೀತಿಸಿ, ನಮ್ಮನ್ನು ಹುಡುಕುತ್ತಾನೆ (ಅ.ಕೃ. 9:3-5). ಆತನ ಪ್ರೀತಿ ಎಂಥಹ ದೊಡ್ಡ, ಕೇವಲ ಈ ಕಾರಣಕ್ಕಾಗಿ, ಆತನು ತನ್ನ ಅಮೂಲ್ಯ ರಕ್ತವನ್ನು ಶಿಲುಬೆಯ ಮೇಲೆ ನಮಗಾಗಿ ಸುರಿಸಿ, ಶಿಲುಬೆಯನ್ನು ನೋಡುವವರೆನ್ನೆಲ್ಲಾ ವಿಮೋಚಿಸುತ್ತಾನೆ (1 ಪೇತ್ರ. 1:19).

ಒಂದು ಸಲ, ಒಂದು ಯೌವನಸ್ಥ ಹುಡುಗರ ಗುಂಪು ಯೇಸುವಿನ ರಕ್ಷಣೆಯನ್ನು ತಮ್ಮ ಜೀವನದಲ್ಲಿ ಅನುಭವಿಸಿದ್ದರು. ಅವರೆಲ್ಲಾ ಬಹಳ ಸಂತೋಷದಿಂದ ಒಂದು ಗುಂಪಾಗಿ, ಅವರು ಒಟ್ಟಾಗಿ ಸೇರಿದಾಗ ಕ್ರಿಸ್ತನ ಪ್ರೀತಿಯ ಬಗ್ಗೆ, ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ, ಅವರಲ್ಲಿಯ ಒಬ್ಬ ಯೌವನಸ್ಥನು, ನಿಜಕ್ಕೂ ಸಂತೋಷವಾಗಿ ಇರಲಿಲ್ಲ. ಅವನು ಈ ಸಂತೋಷದ ಗುಂಪಿನಲ್ಲಿದ್ದರೂ ಯಾವಾಗಲೂ ಆಳವಾದ ಯೋಚನೆಯಲ್ಲಿದ್ದು ದು:ಖದಿಂದ ಇರುವಂತೆ ಇರುತ್ತಿದ್ದನು. ಇದು ಎಲ್ಲರಿಗೂ ಆಶ್ಚರ್ಯ ಉಂಟು ಮಾಡುತ್ತಿತ್ತು. ಅನೇಕ ಸಲ ಅವನನ್ನು ಕೇಳಿದರು, “ನೀನು ಯಾಕೆ ಹೀಗಿರುವೇ? ಆದರೆ, ಅವನು ಯಾವ ಉತ್ತರವನ್ನು ಕೊಡಲಿಲ್ಲ. ಒಂದು ದಿನ, ಅವನು ಒಂಟಿಗನಾಗಿದ್ದಾಗ, ಅವನು ಮೊಣಕಾಲೂರಿ ಕಣ್ಣೀರಿನಿಂದ ಪ್ರಾರ್ಥಿಸಿದನು” ಪ್ರಿಯ ಕರ್ತನೇ, ನಾನು ಯಾಕೆ ದು:ಖದಲ್ಲಿ ಇದ್ದೇನೆ, ಬೇರೆಯವರು ಅಷ್ಟೊಂದು ಸಂತೋಷವಾಗಿದ್ದಾರೆ? ನನಗೆ ದೈವೀಕ ಸಂತೋಷವನ್ನು ಪಡೆಯಲು ನನ್ನ ಜೀವನದಲ್ಲಿ ಪಡೆಯಲು ಯಾಕೆ ಆಗುತ್ತಿಲ್ಲ? ಎಂದು. ಆ ಸಮಯದಲ್ಲಿ, ಶಿಲುಬೆಯ ಮೇಲಿನ ಯೇಸು ಪ್ರತ್ಯಕ್ಷನಾದನು. ಅವನ ಮೇಲೆ ಒಂದು ಹನಿ ರಕ್ತ ಇವನ ಮೇಲೆ ಬಿದ್ದಂತಾಯಿತು. ಅಷ್ಟೇ! ಅವನ ಎಲ್ಲಾ ಭಾರಗಳು, ಚಿಂತೆಗಳು, ಒತ್ತಡಗಳು ಕ್ಷಣದಲ್ಲಿ ಮಾಯವಾಯಿತು. ಒಂದು ದೈವೀಕ ಸಮಾಧಾನ ಅವನ ಹೃದಯವನ್ನು ಹೆಚ್ಚಾಗಿ ತುಂಬಿದಂತಾಯಿತು. ಆ ದಿನವೇ, ಅವನು ನಿಜವಾದ ರಕ್ಷಣೆಯ ಆನಂದವನ್ನು ಪಡೆದನು. ಬೇಗನೇ, ಅವನು ನೀತಿಯ ದಾರಿಯಲ್ಲಿ ದೇವರ ಕೃಪೆಯಿಂದ ನಡೆಯುವಂತಾಯಿತು ಮತ್ತು ಇತರರಿಗೂ ಆಶೀರ್ವಾದದ ಮೂಲವಾದನು.

ನನ್ನ ಪ್ರಿಯ ಸಹೋದರ ಮತ್ತು ಸಹೋದರಿಯೇ, ವಿಶೇಷವಾಗಿ ಯೌವನಸ್ಥರೇ ನಿಮಗೆ ಅನ್ನಿಸುವುದಿಲ್ಲವಾ? ನೀವೂ ಕೂಡ ರಕ್ಷಣಾನಂದದ ಅನುಭವವನ್ನು ಮೇಲಿನ ಘಟನೆಯಲ್ಲಿನ ಯುವಕನಂತೆ ಪಡೆಯಬೇಕು ಅನ್ನಿಸುವುದಿಲ್ಲವೇ, ದೇವರನ್ನು ಕೇಳಿ. ಈ ದಿನವೂ ಆತನು ನಿಮಗೆ ಕೊಡುತ್ತಾನೆ (ರೋಮ. 3:23-24).

ಪ್ರಾರ್ಥನೆ : ಪ್ರಿಯ ಕರ್ತನೇ, ನೀನು ನಿನ್ನನ್ನೇ, ಶಿಲುಬೆಯ ಮೇಲೆ ಸಮರ್ಪಿಸಿಕೊಂಡು, ನಮ್ಮ ಪಾಪಗಳಿಗಾಗಿ ಸತ್ತೆ. ನೀನು ಸುರಿಸಿದ ರಕ್ತ ರಕ್ಷಣಾನಂದವನ್ನು ನನಗೆ ಕೊಡಲು ಮತ್ತು ನೀತಿಯ ಜೀವನ ನಡೆಸುವುದಕ್ಕಾಗಿಯೇ. ಇಂದು ನೀನು ನಿನ್ನ ಅಮೂಲ್ಯ ರಕ್ತದಿಂದ ತೊಳೆ ನನ್ನ ಎಲ್ಲಾ ಪಾಪಗಳು, ಅತಿಕ್ರಮಣ ಮತ್ತು ಶಾಪಗಳು ನನ್ನಿಂದ ಅಳಿಸಲ್ಪಡಲಿ. ನೀತಿಯ ದಾರಿಯಲ್ಲಿ ನಡೆಯುವಂತೆ ನಿನ್ನ ಕೃಪೆಯನ್ನು ಕೊಡು. ಯೇಸುವಿನ ಅಮೂಲ್ಯ ನಾಮದಲ್ಲಿ ನಾನು ಪ್ರಾರ್ಥಿಸುವೆ, ಆಮೆನ್.

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ  whatsapp ಗೆ join ಆಗಿ  Click here to join :??

http://bit.ly/2qZzHAR

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.?

https://play.google.com/store/apps/details?id=org.anudinadamanna.app

For Daily Devotion Contact: +91 9964247889

Comments

Your email address will not be published. Required fields are marked *

× WhatsApp us