ಯೇಸು ಹೇರಳವಾದ ಜೀವನವನ್ನು ಕೊಡುತ್ತಾನೆ!

  Posted on   by   12 comments

“ಕ್ರಿಸ್ತ ಯೇಸುವಿನವರು ತಮ್ಮ ಶರೀರ ಭಾವವನ್ನು ಅದರ ವಿಷಯಾಭಿಲಾಷೆ ಸ್ವೇಚ್ಛಾಭಿಲಾಷೆ ಸಹಿತ ಶಿಲುಬೆಗೆ ಹಾಕಿದವರು” (ಗಲಾ. 5:24).

ನಮ್ಮ ಪ್ರಾಪಂಚಿಕ ಜೀವನದಲ್ಲಿ ನಾವು ಅನೇಕ ವಿಧವಾದ ಜನರನ್ನು ನೋಡುತ್ತೇವೆ. ದೇವರಲ್ಲಿ ನಿಜವಾದ ನಂಬಿಕೆಯಿರುವವರನ್ನು ನೋಡಲು ಬಹಳ ಕಷ್ಟವಿದೆ. ಈಗಿನ ಪ್ರಪಂಚದಲ್ಲಿ, ಪಾಪ ಎಲ್ಲಾ ಕಡೆ ರಾರಾಜಿಸುತ್ತಿದೆ. ಲೋಕದಲ್ಲಿರುವ ಶರೀರದಾಶೆ, ಕಣ್ಣಿನಾಶೆ, ಬದುಕು ಬಾಳಿನಡಂಬ ಇವುಗಳು ಪ್ರಪಂಚವನ್ನು ಹಿಡಿದಿಟ್ಟುಕೊಂಡಿದೆ (ಯೋಹಾ. 2:16). ಈ ಆಶೆಗಳು ಎಲ್ಲಾ ದಾರಿಯ ಜನರನ್ನು ಹಿಡಿತದಲ್ಲಿಟ್ಟುಕೊಂಡಿದೆ. ಮುಂದೆ, ಚಲನ ಚಿತ್ರಗಳು ಮತ್ತೊಂದು ಪಾಪ, ಜನರನ್ನು ಉತ್ತೇಜನಗೊಳಿಸಿ, ಜನರನ್ನು ಪಾಪದ ಜೀವನಕ್ಕೆ ನಡೆಸುತ್ತದೆ. ಆದರೆ ದೇವರು ಎಲ್ಲಾವನ್ನು ಬದಲಾಯಿಸಿ, ಕ್ರಿಸ್ತನನ್ನು ಹುಡುಕಿ ಬರುವವರಿಗೆ ಹೊಸ ಜೀವನವನ್ನು ಕೊಡಲಾಗುತ್ತದೆ (1 ಪೇತ್ರ. 2:9).

ಒಂದು ಕಛೇರಿಯಲ್ಲಿ, ಅಲ್ಲಿನ ಎಲ್ಲಾ ನೌಕರರ ಕಣ್ಣುಗಳು ಒಬ್ಬ ನಿರ್ಧಿಷ್ಟ ವ್ಯಕ್ತಿಯ ಮೇಲೆ ಇತ್ತು. ಇದಕ್ಕೆ ಕಾರಣವೆಂದರೆ, ಅವನು ಯಾವಾಗಲೂ ತನ್ನ ಕೆಲಸ ಮೇಲೆ ಏಕಾಗ್ರತೆಯಿದ್ದು, ಬೇರೆ ಜನರ ಜೀವಿತದಲ್ಲಿ ತಲೆ ಹಾಕುತ್ತಿರಲಿಲ್ಲ. ಅವನು ಮಾತನಾಡುವ ಮಾತಿನಲ್ಲಿಯು ಬಹಳ ಬುದ್ಧಿವಂತನಾಗಿದ್ದನು. ಈ ಗುಣಗಳು, ಬೇರೆ ಜನರು ಅವನನ್ನು ಗೌರವಿಸಿ ಮರ್ಯಾದೆ ಕೊಡುವಂತೆ ಮಾಡಿತು. ಒಂದು ದಿನ, ಒಬ್ಬ ನೌಕರನು ಅವನ ಬಳಿ ಹೋಗಿ ಇಷ್ಟೊಂದು ಪರಿಪೂರ್ಣ ಜೀವಿತವನ್ನು ನಡೆಸಲು ಹೇಗೆ ಸಾಧ್ಯ ಎಂದು ಕೇಳಿದನು. ನಿಮಗೆ ಗೊತ್ತಾ, ಅವನು ಏನು ಹೇಳಿದನೆಂದು? ಅವನು ಹೇಳಿದನು, “ಅಯ್ಯೋ, ನನ್ನ ಹಿಂದಿನ ಜೀವಿತವನ್ನು ನೆನೆಸಿಕೊಂಡರೆ ತತ್ತರಿಸುತ್ತೇನೆ. ನಾನು ಭಯಂಕರ ಜೀವಿತವನ್ನು ಜೀವಿಸಿದ್ದೇನೆ. ನನಗೆ ಕೋಪ ಬಂದಾಗಲೆಲ್ಲಾ, ನನ್ನ ಹೆಂಡತಿ ಮಕ್ಕಳನ್ನು ಹೊಡೆಯುತ್ತಿದ್ದೆ. ಆದರೆ ಒಂದು ದಿನ, ಯೇಸುವಿನ ಪ್ರೀತಿಯ ಬಗ್ಗೆ ಕೇಳಿದೆ ಮತ್ತು ಆತನ ಶಿಲುಬೆಯ ಕಡೆಗೆ ಓಡಿ ಬಂದೆ. ನಾನು ನ್ನನ ಎಲ್ಲಾ ಪಾಪಗಳನ್ನು ಮತ್ತು ತಪ್ಪು ಕೆಲಸಗಳನ್ನು ಅರಿಕೆ ಮಾಡಿದೆ. ಅದೇ ಕ್ಷಣದಲ್ಲಿ, ಕರ್ತನಾದ ಯೇಸು ನನ್ನನ್ನು ಮುಟ್ಟಿ ನನ್ನನ್ನು ರಕ್ಷಿಸಿದನು. ಆತನ ರಕ್ತ ನನ್ನನ್ನು ಶುದ್ಧಿಮಾಡಿತು. ನನ್ನ ಜೀವನ ಪರಿಪೂರ್ಣವಾಗಿ ಬದಲಾಯಿತು. ಈಗ ನಾನು ಕ್ರಿಸ್ತನು ಇರುವ ಜೀವಿತದ ಮನುಷ್ಯನ ಹಾಗೆ ಹೊಸ ಜೀವನ ನಡೆಸುತ್ತಿದ್ದೇನೆ.”

ಪ್ರಿಯರೇ! ಆತನ ಆತ್ಮ ನಮ್ಮಲ್ಲಿ ಸೇರಿ ನಾವು ನಿಜ ಕ್ರಿಸ್ತನನ್ನು ತಿಳಿದುಕೊಳ್ಳುವಂತೆಯೂ, ಹೀಗೆ ಸಹಾಯ ಮಾಡುತ್ತದೆ (ಜ್ಞಾನೋ. 8:35). ಮೊದಲನೆಯದಾಗಿ, ನಾವು ನಾಮಧೇಯ ಕ್ರೈಸ್ತರಾಗಿರುವುದನ್ನು ನಿಲ್ಲಿಸಬೇಕು ಮತ್ತು ಪ್ರಪಂಚದ ಆಸೆಗಳಿಂದ ಬಿಡುಗಡೆ ಪಡೆಯಬೇಕು. ನಾವು ದೇವರನ್ನು ಕೇಳಿಕೊಳ್ಳೋಣ ಕರ್ತನೇ! ನಾನು ಏನು ಮಾಡಬೇಕೆಂದು ಅಪೇಕ್ಷಿಸುವೆ? (ಅ.ಕೃ. 9:6). ನಂತರ, ಆತನ ಸತ್ಯದಲ್ಲಿ ನಡೆದು ನಿಂತು, ಯೇಸುಕ್ರಿಸ್ತನಿಗಾಗಿ ಪ್ರಕಾಶಿಸಬೇಕು (ಯೆಶಾ. 60:1).

ಪ್ರಾರ್ಥನೆ : ಪ್ರೀತಿಯ ಕರ್ತನೇ! ಈಗ, ನೀನು ನಮಗಾಗಿ ಹೇಗೆ ರಕ್ಷಣೆಯನ್ನು ಶಿಲುಬೆಯ ಮೇಲೆ ಸಂಪಾದಿಸಿದ್ದು, ನಮ್ಮ ಜೀವನವನ್ನು ಬದಲಾಯಿಸುತ್ತದೆ. ಈ ದಿನ, ರಕ್ಷಣಾ ಆನಂದವು ನನ್ನ ಜೀವನವನ್ನು ತುಂಬಲಿ. ನಾನು ಸತ್ಯದ ಕ್ರಿಸ್ತೀಯ ಜೀವಿತವನ್ನು ನಡೆಸುವಂತೆ ಕೃಪೆ ಮಾಡು. ಹಾಗೆ ಮಾಡುವುದಕ್ಕಾಗಿ ಮಿಲಿಯಾಂತರ ವಂದನೆಗಳು. ಯೇಸುವಿನ ಅಮೂಲ್ಯ ನಾಮದಲ್ಲಿ ನಾನು ಪ್ರಾರ್ಥಿಸುವೆ, ಆಮೆನ್.

 

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ  whatsapp ಗೆ join ಆಗಿ  Click here to join :??

http://bit.ly/2qZzHAR

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.?

https://play.google.com/store/apps/details?id=org.anudinadamanna.app

For Daily Devotion Contact: +91 9964247889

12 comments

 1. Siddu says:

  *Praise The Lord Jesus*
  Number one app Manna ministry

 2. David kumar says:

  Praise God

 3. Henry Vijay says:

  Lord thank you for your precious Blessings, I believe You are the only Living God!!!! Amen

 4. Sabu rubens says:

  Prise god sir

 5. Shiva says:

  Thank you Lord

 6. Ajith says:

  Praise the lord thank you Jesus for everything

 7. Kavitha says:

  Devarigea sthothra Amen and Amen.

 8. Enoch says:

  We are purify his own blood,we son of Jesus Christ Praise the Lord halleluja

 9. Cecilia D'Mello says:

  All glory to God !

 10. grace says:

  Praise God thank you for the manna ministry app so useful to me to this app thank so much for this app.

Comments

Your email address will not be published. Required fields are marked *

× WhatsApp us