ರಕ್ಷಣೆಗೆ ಒಂದೇ ದಾರಿ “ಯೇಸು”

  Posted on   by   2 comments

“ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಕ್ಕುವುದಿಲ್ಲ. ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ” (ಅ.ಕೃ. 4:12).

ಈ ಪ್ರಪಂಚದಲ್ಲಿ ನಾವು ಅನೇಕ ಸಂಕಟಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಕರ್ತನಾದ ಯೇಸು ಇದೆಲ್ಲವನ್ನು ಶಿಲುಬೆಯ ಮೇಲೆ ಜಯಿಸಿ ಜಯಪಡೆದವನೆಂದು ನಮಗೆ ಗೊತ್ತಿರಬೇಕು. ಆದ್ದರಿಂದಲೇ, ಯೋಹಾನ 16:33 ಹೀಗೆ ಹೇಳಿದನು “ಲೋಕದಲ್ಲಿ ನಿಮಗೆ ಸಂಕಟ ಉಂಟು ಧೈರ್ಯವಾಗಿರಿ; ನಾನು ಲೋಕವನ್ನು ಜಯಿಸಿದ್ದೇನೆ” ಎಂದು. ನಾವು ನಮ್ಮ ಮನಸ್ಸಿನಲ್ಲಿ ಬೇಕಿಲ್ಲದ ಭಯಗಳನ್ನು ಆಲೋಚಿಸಿ ಚಿಂತಿಸಲು ಆರಂಭಿಸುತ್ತೇವೆ. ಈ ದಿನ, ಇವುಗಳೆಲ್ಲವನ್ನು ಜಯಿಸಲು ಶಕ್ತಿ ಹೊಂದಿರುವ ಕರ್ತನನ್ನು ನೋಡಿ ನಮಗೆ ಜಯವನ್ನು ಕೊಡುವಂತೆ ಪ್ರಾರ್ಥಿಸೋಣ (1 ಕೊರಿ. 15:57).

ಒಂದು ಸಲ, ಒಬ್ಬ ದಂಪತಿಗಳು ಕರ್ತನನ್ನು ನಂಬಿಕೆಯಿಂದ ಹುಡುಕುತ್ತಿದ್ದರು. ಕರ್ತನ ಸಂಬಂಧಪಟ್ಟ ವಿಷಯವಾಗಿ ಅವರು ಬಹಳ ಶಿಸ್ತುಬದ್ಧರಾಗಿದ್ದರು. ಇದ್ದಕ್ಕಿದ್ದಂತೆಯೇ, ಹೆಂಡತಿ ಕಾಯಿಲೆಯಿಂದ ತಿನ್ನಲೂ, ಮತ್ತು ಮಲಗಲು ಆಗುತ್ತಿರಲಿಲ್ಲ. ಅವಳಿಗೆ ಅನ್ನಿಸಿತು ಯಾವುದೋ ಒಂದು ದುಷ್ಟಶಕ್ತಿ ಅವಳನ್ನು ಹೊಕ್ಕು ಅವಳನ್ನು ತೊಂದರೆ ಪಡಿಸಿ ಅವಳ ಸಮಾಧಾನವನ್ನು ಹಾಳುಮಾಡುತ್ತಿತ್ತು. ಸುಮಾರು ಆರು ತಿಂಗಳ ಕಾಲ, ಏನೂ ಮಾಡಲು ಗೊತ್ತಾಗದೆ ಬಹಳವಾಗಿ ಭಾದೆಯನ್ನು ಅನುಭವಿಸಿದಳು. ಆ ಹಂತದಲ್ಲೂ, ಗಂಡನು ಬಲವಾಗಿ ನಂಬಿದ್ದನು. “ಕರ್ತನು ನಿಮ್ಮನ್ನು ಎಂದಿಗೂ ಕೈ ಬಿಡುವುದಿಲ್ಲ” ನನ್ನ ಹೆಂಡತಿಯನ್ನು ರಕ್ಷಿಸಿದ ಯೇಸು ಕ್ರಿಸ್ತನು ಅವಳನ್ನು ಈ ಬಂಧನದಿಂದಲೂ ಪೂರ್ಣ ಬಿಡುಗಡೆ ಕೊಡುತ್ತಾನೆ ಎಂದು ನಂಬಿದ್ದನು. “ಆತನು ದೊಡ್ಡ ನಂಬಿಕೆಯಿಂದ ಪ್ರಾರ್ಥನೆಯನ್ನು ಮುಂದುವರಿಸಿದನು. ಆದರೆ, ಕೆಲವು ಸ್ನೇಹಿತರು ಹೇಳಿದರು,” ಈ ಮನೆಯಲ್ಲಿ ಒಂದು ವಿಧವಾದ ಶಾಪವಿದೆ, ಜೊತೆಗೆ ಸೈತಾನನ ಕೆಲಸಗಳೂ ಇಲ್ಲಿರಬಹುದು ಎಂದು. ಆದ್ದರಿಂದ, ನೀವು ಈ ಮನೆಯನ್ನು ಖಾಲಿ ಮಾಡಿ ಬೇರೆ ಮನೆಗೆ ಹೋಗಿರಿ. ಆಗ, ನಿಮ್ಮ ಆರೋಗ್ಯ ಹಿಂದಕ್ಕೆ ಪಡೆಯಬಹುದು. ಆದರೆ ಅವನು ಮೊನಚಾಗಿ ಹೇಳಿದನು, “ನಮಗೆ ಈ ಮನೆಯನ್ನು ಖಾಲಿ ಮಾಡುವ ಅವಶ್ಯಕತೆ ಇಲ್ಲ. ಕೇವಲ ಸೈತಾನನು ಮತ್ತು ದುಷ್ಟ ಶಕ್ತಿಗಳು ಮಾತ್ರವೇ ಈ ಜಾಗವನ್ನು ಬಿಡಬೇಕು. ನಾವು ಆರಾಧಿಸುವ ದೇವರಿಗೆ ನಮ್ಮನ್ನು ರಕ್ಷಿಸಲು ಎಲ್ಲಾ ಪರಿಸ್ಥಿತಿಯಲ್ಲಿ ಎಲ್ಲಾ ಶಕ್ತಿ ಇದೆ” ಎಂದು. ದೇವರು ಅವರ ಅಚಲವಾದ ನಂಬಿಕೆಯನ್ನು ನೋಡಿ ಅವರ ಶ್ರದ್ದೆಯ ಪ್ರಾರ್ಥನೆಯನ್ನು ಕೇಳಿದನು. ಆಕೆಯ ಆರೋಗ್ಯವನ್ನು ಹಿಂತಿರುಗಿಸಿದನು. ಮತ್ತು ಸೈತಾನನ ಕೆಲಸಗಳ ಶಕ್ತಿಯನ್ನು ಮುರಿದನು. ಅವರ ಜೀವನವನ್ನು ಹೇರಳವಾಗಿ ಆಶೀರ್ವದಿಸಿದನು.

ಹೌದು! ಎಲ್ಲಾ ಶಾಪಗಳಿಂದ, ಜನರ ದುಷ್ಟತನದಿಂದಲೂ, ಸೈತಾನನ ಶಕ್ತಿಯ ದುಷ್ಟ ಕಾರ್ಯಗಳಿಂದ, ರಕ್ಷಿಸಲು ಕರ್ತನಾದ ಯೇಸು ಕ್ರಿಸ್ತನಿಗೆ ಪರಿಪೂರ್ಣ ಶಕ್ತಿ ಇದೆ. ಆತನು ನಿನ್ನನ್ನು ಆಶೀರ್ವದಿಸಲು ತಯಾರಾಗಿದ್ದಾನೆ. ಆದ್ದರಿಂದ, ನಿಮ್ಮ ಎಲ್ಲಾ ಅನಗತ್ಯತೆಯ ಚಿಂತೆಗಳನ್ನು ಬಿಡಿರಿ ಮತ್ತು ಆತನಲ್ಲಿ ನಂಬಿಕೆಯನ್ನು ಹೆಚ್ಚಿಸಿಕೊಳ್ಳಿರಿ. ದೇವರ ಶಕ್ತಿ ನಿಮ್ಮನ್ನು ಎಲ್ಲಾ ತೊಂದರೆಗಳಿಂದಲೂ ಭಾರಗಳಿಂದಲೂ ರಕ್ಷಿಸುತ್ತದೆ (2 ಕೊರಿ. 13:4).

ಪ್ರಾರ್ಥನೆ : ಪ್ರಿಯ ರಕ್ಷಕನೇ, ನನ್ನ ರಕ್ಷಣೆಗಾಗಿ ನಿನ್ನನ್ನು ನೀನು ಶಿಲುಬೆಯ ಮೇಲೆ ಯಜ್ಞವಾಗಿ ಸಮರ್ಪಿಸಿಕೊಂಡೆ. ನನಗೋಸ್ಕರ ನೀನು ಪರಲೋಕದ ಅನೇಕ ಆಶೀರ್ವಾದಗಳನ್ನು ಸಂಪಾಸಿದಿ. ಈ ದಿನದಲ್ಲಿ ನೀನೊಬ್ಬನೇ ನಿಜವಾದ ರಕ್ಷಕನೆಂದೂ ಪರಲೋಕದ ಕೆಳಗೆ ಯಾವ ಹೆಸರು ನನ್ನನ್ನು ರಕ್ಷಿಸಲು ಸಾಧ್ಯವಿಲ್ಲವೆಂದು ಈ ದಿನ ನಾನು ತಿಳಿದುಕೊಳ್ಳುವಂತೆ ಸಹಾಯ ಮಾಡಿದ್ದಕ್ಕಾಗಿ ವಂದನೆಗಳು. ಯೇಸುವಿನ ಬಲವಾದ ನಾಮದಲ್ಲಿ ನಾನು ಪ್ರಾರ್ಥಿಸುವೆ, ಆಮೆನ್.

Please fill this form to receive Manna ministry “Daily Devotional‎” in Kannda https://goo.gl/forms/SAa56s26a1vNc2pp1 To (Free)

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.?

For more install our app from Play Store

Manna Ministry Kannada?

https://play.google.com/store/apps/details?id=org.mannaministry.app&hl=en

1000 Praises Kannada?

https://play.google.com/store/apps/details?id=org.mannaministry1000praises.app&hl=en

Mannaministries.in@gmail.com

For Daily Devotion Contact: +91 9964247889

2 comments

  1. Priya says:

    Praise the lord ….. devara vakya u yellarigu e rithi yalli sigtha erodu devara krupeye agide yesuvina namadali sothraagallannu sallisuthene

  2. Raju gagana says:

    Nice I love my Jesus

Comments

Your email address will not be published. Required fields are marked *

× WhatsApp us