ವೇದನೆಯಲ್ಲಿರುವವರಿಗೆ ದೇವರ ಕರುಣೆ !

  Posted on   by   No comments

scdevo-joy1

“ಯೆಹೋವನು ತನ್ನ ಪ್ರಜೆಯನ್ನು ಸಂತೈಸಿ, ದಿಕ್ಕಿಲ್ಲದ ತನ್ನ ಜನರನ್ನು ಕರುಣಿಸುತ್ತಿದ್ದಾನೆ “ (ಯೆಶಾ. 49:13).

ಈ ದಿನಗಳಲ್ಲಿ ಅನೇಕ ಕುಟುಂಬಗಳು ಭಾದಿಸಲ್ಪಟ್ಟಿದೆ. ಕಾರಣ, ದ್ವೇಷ ಮತ್ತು ತಪ್ಪು ಅಭಿಪ್ರಾಯಗಳಿಂದ ನನ್ನ ಭವಿಷ್ಯ ಏನು? ನನ್ನ ಜೀವಮಾನ ಪೂರ್ತಿ, ಈ ಭಾದೆಗಳು ಬೆಟ್ಟಗಳಂತೆ ಕಾಣಬಹುದು. ನೀವು ಇವುಗಳನ್ನು ನೋಡಿ ಆಳುವುದನ್ನು ಮುಂದುವರಿಸಬೇಕಾ? ಇಲ್ಲ! ನನ್ನ ಪ್ರಿಯ ಸ್ನೇಹಿತನೇ ! ಈ ಎಲ್ಲಾ ಬೆಟ್ಟಣಗಳನ್ನು ಸುಲಭವಾಗಿ ಚಲಿಸುವಂತೆ ಮಾಡಲು,  ನಿನಗೆ ಸಹಾಯವನ್ನು ಒಬ್ಬ ಬಲಶಾಲಿ ಇದ್ದಾನೆ. ನಮ್ಮ ಬಲವಾದ ದೇವರನ್ನು ನೋಡು, ನಿನ್ನ ಎಲ್ಲಾ ದು:ಖ ಮತ್ತು ನಿಟ್ಟಿಸುರು ಹಾರಿ ಹೋಗುತ್ತದೆ (ಯೆಶಾ. 35:10).

ಆತನಲ್ಲಿ ಭರವಸೆ ಇಟ್ಟಿರುವ ಆತನ ಮಕ್ಕಳು ಸಮಾಧಾನ ಮತ್ತು ಅಭಿವೃದ್ಧಿ ಜೀವನ ನಡೆಸುವುದೇ ಆತನ ಒಂದೇ ಉದ್ದೇಶವಾಗಿದೆ. ಮದುವೆಯ ನಂತರ, ಮದುಮಗಳು ತನ್ನ ಗಂಡನ ಬಳಿ ಇರಲು ಹೋದಳು. ಬೇರೆಯವರು ಎಚ್ಚರಿಸಿದಂತೆ ಆಕೆಯ ಅತ್ತೆ ಪ್ರತಿ ದಿನ ಅವಳ ಬಳಿ ಸಿಂಹ ಅರಚಿದಂತೆ ಅರಚುತ್ತಿದ್ದಳು. ಅತ್ತೆಯ ಒಂದೇ ಒಂದು ಆಸೆ ಏನಾಗಿತ್ತೆಂದರೆ ಈ ಹುಡುಗಿಯನ್ನು ನಿಂಧಿಸಿ, ಅವಮಾನಿಸಿ, ಅವಳು ತನ್ನವರಿಗೆ ಹೋಗಬೇಕೆಂಬುದೇ ಆಗಿತ್ತು. ಆರಂಭದಲ್ಲಿ, ಈ ಹುಡುಗಿ ನಿಜಕ್ಕೂ ಬಹಳವಾಗಿ ಘಾಸಿ ಹೊಂದಿ ತನ್ನ ಮನೆಗೆ ಹಿಂತಿರುಗ ಬೇಕೆಂದುಕೊಂಡಿದ್ದಳು, ಆದರೆ, ಎರಡನೆಯದಾಗಿ ಯೋಚಿಸಿದಾಗ, ದೇವರು ನಿಜಕ್ಕೂ ಎಲ್ಲದಕ್ಕಿಂತ ಸಾಕು, ತನ್ನನ್ನು ಆದರಿಸಿ, ಬಿಡಿಸಲು ಎಂದು ತಿಳಿದು ತನ್ನ ಹಾಡಿನಲ್ಲಿ ವ್ಯಕ್ತಪಡಿಸುತ್ತಿದ್ದಳು. ಪ್ರಾರ್ಥನಾ ಸಮಯದಲ್ಲಿ ಪ್ರತಿ ದಿನವೂ ಹಾಡುತ್ತಿದ್ದ ಹಾಡಿನ ಅರ್ಥಗಳನ್ನು ನಂಬದಿದ್ದಕ್ಕಾಗಿ ಅವಳು ಬಹಳ ದು:ಖಪಟ್ಟಳು. ಅವಳು ಮುಂಜಾನೆಯಲ್ಲೇ, ಕರ್ತನನ್ನು ಹುಡುಕಲು ಆರಂಭಿಸಿದಳು. ಕರ್ತನ ಬಲ, ಅವಳನ್ನು ದಿನ ನಿತ್ಯದ ಜೀವನದಲ್ಲಿ ನಡೆಸಬೇಕೆಂದು ಬೇಡಿದಳು. ಅವಳು ಕುಂದಿಹೋದಾಗಲೆಲ್ಲಾ ಈ ರೀತಿ ಪ್ರಾರ್ಥನೆ ಮಾಡುತ್ತಿದ್ದಳು. ವಾರಕ್ಕೊಂದು ಸಲ ಉಪವಾಸದಿಂದ ಪ್ರಾರ್ಥಿಸುತ್ತಿದ್ದಳು. ತನ್ನ ಅತ್ತೆಯ ಕಲ್ಲು ಹೃದಯವನ್ನು ಬದಲಾಯಿಸಬೇಕೆಂದು ಅವಳು ದೇವರನ್ನು ಕೇಳುತ್ತಿದ್ದಳು. ಬೇಗನೇ, ದೇವರ ಕರುಣೆ ಅವಳ ಕುಟುಂಬದಲ್ಲಿ ಚಲಿಸಿ ಪವಿತ್ರಾತ್ಮನು ಅವಳನ್ನು ಬಲಪಡಿಸಿದನು. ಪ್ರತಿ ಸಾರಿ ಅವಳ ಅತ್ತೆ ಅವಳೆಡೆ ಅರಚುತ್ತಾ ಬಂದಾಗಲೆಲ್ಲಾ ಅವಳು ಮುಗಳ್ನಗುತ್ತಿದ್ದಳು ಮತ್ತು ದೈವೀಕ ಪ್ರೀತಿ ಈ ಪರಿಸ್ಥಿತಿಯನ್ನು ಎದುರಿಸಲು ಬಲಪಡಿಸುತಿತ್ತು. ದಿನಗಳು ಕಳೆದವು. ನಿಧಾನವಾಗಿ ಅತ್ತೆಯ ಕೋಪ, ದ್ವೇಷ ಮಾಯವಾಗಿ ಜಗಳಗಳು ನಿಂತು ಹೋದವು. ನಿಧಾನವಾಗಿ ಅತ್ತೆ ದೇವರ ಬಗ್ಗೆ ಕೇಳುತ್ತಾ ತನ್ನ ಎಲ್ಲಾ ಅನುಮಾನಗಳನ್ನು ಪರಿಹಾರ ಮಾಡಿಕೊಂಡಳು. ಇಬ್ಬರೂ ದೇವರ ಪ್ರೀತಿಯನ್ನು ಹಂಚಿಕೊಂಡು ಒಟ್ಟಾಗಿ ಪ್ರಾರ್ಥಿಸಲು ಆರಂಭಿಸಿದರು. ಬೇರೆಯವರೊಡನೆ ಸುಖವಾದ ವೈವಾಹಿಕ ಜೀವನವನ್ನು ನಡೆಸಲು, ದೇವರು ಮಾಡಿ ಕೊಡುವ ದಾರಿಯ ಬಗ್ಗೆ ಹೇಳಲು ಒಂದು ಸಾಕ್ಷಿಯಾದಳು.

ಹೌದು! ಅದೇ ದೇವರು, ನಿಮ್ಮ ಎಲ್ಲಾ ದು:ಖಗಳನ್ನು ಆನಂದಕ್ಕೆ ಮಾರ್ಪಡಿಸುತ್ತಾನೆ. ದೀನಾವಸ್ಥೆಯಲ್ಲಿರುವವರನ್ನು ಸಂತೈಸುವ ದೇವರು ಆತನು (2 ಕೊರಿ. 7:6).

ಪ್ರಾರ್ಥನೆ : ಪ್ರೀತಿಯ ತಂದೆ, ನನ್ನ ಸಮಸ್ಯೆಗಳು ಅವಮಾನಗಳು ನಿನಗೆ ತಿಳಿದಿದೆ. ಈ ದಿನ ನನ್ನ ಜೀವನವನ್ನು ಹತೋಟಿಗೆ ತೆಗೆದುಕೋ ಮತ್ತು ನನಗೆ ಬೇಕಾಗಿರುವ ಪೂರ್ಣ ಸಮಾಧಾನವನ್ನು ಕೊಡು, ನನಗೆ ಗೊತ್ತು. ನೀನು ಇದನ್ನು ಮಾಡುತ್ತೀಯ ಎಂದು. ಅದಕ್ಕಾಗಿ ನಿನಗೆ ಸ್ತೋತ್ರ. ಯೇಸುವಿನ ಸಾಟಿಯಿಲ್ಲದ ಹೆಸರಿನಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.
ಪ್ರಾರ್ಥನೆ ಮತ್ತು ವಂದನೆಗಳೊಂದಿಗೆ, MANNA MINISTRIES

Mannaministries.in@gmail.com

*For Daily Devotion Contact: +91 9964247889*

Comments

Your email address will not be published. Required fields are marked *