ವೈಟ್ ಫೀಲ್ಡ್

  Posted on   by   No comments

         ಒಂದು ದಿನ ವಿಶ್ವಖ್ಯಾತನಾದ ಸುವಾರ್ತಿಕನಾಗಬೇಕಿದ್ದವನು ಮಧ್ಯಾಹ್ನ ಸಾಯಂಕಾಲಗಳನ್ನು ಕಸಗುಡಿಸುವುದರಲ್ಲಿ, ಸಾರಾಯಿ ಕೊಡುವುದರಲ್ಲಿ,ದೇವರ ಸೇವಕರಾದ ಕೋಲ್ ಅವರನ್ನು ಹಾಸ್ಯ ಮಾಡುವದರಲ್ಲಿ ಕಳೆದನು.ಒಂದು ರಾತ್ರಿ ದೇವರ ಸೇವಕನು ಆರಾಧನೆ ನಡೆಸುತ್ತಿದ್ದಾಗ ಜಾರ್ಜ್ ಮತ್ತು ಅವನ ಮಿತ್ರರು ಒಳನುಗ್ಗಿ ” ಮುದುಕ ಕೋಲ್, ಮುದುಕ ಕೋಲ್ ” ಎಂದು ಕೂಗಿ ಕೋಲಾಹಲವೆಬ್ಬಿಸಿದರು. ದೇವರ ಸೇವಕರ ಪ್ರಸಂಗದಲ್ಲಿ ಜಾರ್ಜ್ ಗೆ ಅಭಿರುಚಿ ಇದೆ ಎಂಬುದು ಅವನ ಗೆಳೆಯರಿಗಾಗಲೀ, ಛತ್ರದ ಗಿರಾಕಿಗಳಿಗಾಗಲೀ ತಿಳಿದಿರಲಿಲ್ಲ.ಅನೇಕ ಸಲ ಛತ್ರ ಮುಚ್ಚಿದ ಮೇಲೆ ಈ ಯುವಕ ಎದ್ದು ಕುಳಿತು ಬೈಬಲನ್ನು ಓದುತ್ತಿದ್ದ. ಒಂದು ದಿನ ಸ್ನೇಹಿತನೊಬ್ಬನು ಬಂದು ಅಕ್ಸ್ ಫರ್ಡ್ ಗೆ ಹೋಗಲು ಇರುವ ಅವಕಾಶವನ್ನು ಕುರಿತು ತಿಳಿಸಿ, ” ನಿನಗೆ ತೋರಿದಂತೆ ನಿರ್ಧಾರ ಮಾಡು  ” ಎಂದು ಹೇಳಿ ಹೋದನು. 

           ಜಾರ್ಜ್ ತಾಯಿಯನ್ನು ಭೇಟಿಯಾಗಿ ಸಲಹೆ ಕೇಳಿದ. ತಾಯಿ ಅದಕ್ಕೆ ಒಪ್ಪಿದಳು. ವ್ಯಾಕರಣ ಶಾಲೆಗೆ ಹೋಗಿ ಕಲಿತು ವಿಶ್ವವಿದ್ಯಾಲಯ ಸೇರಲು ಅರ್ಹತೆ ಪಡೆಯುವ ಮಹತ್ವಾಕಾಂಕ್ಷೆಯಿಂದ ಜಾರ್ಜ್ ಹೊರಟ. ಆಕ್ಸ್ ಫರ್ಡ್ ನ್ನು ತಲುಪಿದ ಜಾರ್ಜ್, ಅಲ್ಲಿ ಜಾನ್ ಮತ್ತು ಚಾರ್ಲ್ಸ್ ವೆಸ್ಲಿ ಅವರನ್ನು ಭೇಟಿಯಾದ. ಆ ಸಹೋದರರು ಪವಿತ್ರ ಕೂಟವನ್ನು ಏರ್ಪಡಿಸಿದರು. ಈ ಕೆಲವು ವಿಧ್ಯಾರ್ಥಿಗಳು ಅದಕ್ಕೆ ದೈವಿಕ ಕೂಟ, ಬೈಬಲಿನ ಪತಂಗಗಳು, ಬೈಬಲಿನ ಮತಾಂಧರಂ, ಮೆಥೋಡಿಸ್ಟರಂ ಮುಂತಾದ ಹೆಸರುಗಳಿಂದ ಹಾಸ್ಯ ಮಾಡುತ್ತಿದ್ದರು. ಕ್ರಮಬದ್ಧವಾಗಿ ಆರಾಧಿಸುತ್ದಿದ್ದದ್ದರಿಂದ ಮೆಥೋಡಿಸ್ಟರಂ ಎಂದು ಕರೆಯುತ್ತಿದ್ದರು.

          ಅವರ ಕಟ್ಟುನಿಟ್ಟಾದ ಧಾರ್ಮಿಕ ಕ್ರಮಗಳು ಜಾರ್ಜ್ ನನ್ನು ಆಕರ್ಷಿಸಿತು. ಇದು ವೆಸ್ಲಿ ಸಹೋದರರಿಗೂ ತಿಳಿಯಿತು. ಆಕ್ಸ್ ಫರ್ಡ್ ನಲ್ಲಿ ಎರಡನೆ ವರ್ಷ ಕಲಿಯುತ್ತಿದ್ದಾಗ ತಾನೂ ಕೂಟದ ಸದಸ್ಯನಾಗಿ ನಿಯಮಗಳನ್ನೆಲ್ಲಾ ಅನುಸರಿಸುವುದಾಗಿ ಮಾತುಕೊಟ್ಟ. ಪವಿತ್ರ ಕೂಟದ ಇತರರಂತೆ ಉಪವಾಸ ಮಾಡಿದ,ಪ್ರಾರ್ಥಿಸಿದ. ಆದರೆ ಆತ್ಮ ಸಮಾಧಾನ ಸಿಕ್ಕದೆ ನಿರಾಶನಾದ. 

            ಚಾರ್ಲ್ಸ್ ವೆಸ್ಲಿ ಅವನಿಗೆ ” ಮನುಷ್ಯನ ಆತ್ಮದಲ್ಲಿ ದೇವರ ಜೀವ ” ಎಂಬ ಪುಸ್ತಕ ಕೊಟ್ಟರು. ಆ ಪುಸ್ತಕದ ಬೋಧನೆಗಳು ಜಾರ್ಜ್ ನ ಹೃದಯದಲ್ಲಿ ಬೆಳಕಿನ ಕಿರಣಗಳಾಗಿ ಪ್ರಕಾಶಿಸಿದವು. ವೈಟ್ ಫೀಲ್ಡ್ ಅವರು ಇದರ ಬಗ್ಗೆ ಹೇಳುತ್ತಾ ” ಕ್ರಿಸ್ತನ ಮೂಲಕ ಆತ್ಮ ದೇವರೊಡನೆ ಒಂದಾಗುವುದೇ ನಿಜವಾದ ಧರ್ಮ ಎಂಬುದನ್ನು ದೇವರು ನನಗೆ ತೋರಿದನು “ಎಂದಿದ್ದಾರೆ. 

          ಈ ನಿಜವಾದ ಧರ್ಮ ತಿಳಿಯಲು ವೈಟ್ ಫೀಲ್ಡ್ ಎಡಬಿಡದೆ ಪ್ರಾರ್ಥಿಸತೊಡಗಿದನು. ಪ್ರತಿ ರಾತ್ರಿ ಯಾತನೆಪಡುತ್ತಾ, ಸೈತಾನನಿಗೆ ತನ್ನಿಂದ ತೊಲಗಿ ಹೋಗಬೇಕೆಂದು ಒತ್ತಾಯಿಸಿದನು.ತನ್ನಲ್ಲಿದ್ದ ಹಣವನ್ನೆಲ್ಲಾ ಬಡವರಿಗೆ ಕೊಟ್ಟು ಉಪವಾಸದಿಂದಿರಲು ಪ್ರಯತ್ನಿಸಿದನು. ಒರಟಾದ ತೇಪೆ ಹಚ್ಚಿದ ಉಣ್ಣೆ ಬಟ್ಟೆಗಳನ್ನು ಧರಿಸಿಕೊಂಡನು. ಹರಿದ ಷೂಗಳನ್ನು ಹಾಕಿಕೊಂಡನು. ಹೀಗೆ ದೇವರ ಅನ್ಯೋನ್ಯತೆಗಾಗಿ ಬಯಸಿ ಕೊರಗಿ, ಕೊರಗಿ ಅವನಿಗೆ ಕಾಯಿಲೆ ಆಯಿತು. 

          ಬಳಿಕ ಒಂದು ದಿನ ಅವನಿಗೆ ಶಿಲುಬೆಯ ಮರಣದ ಚಿತ್ರ ಕಣ್ಣಿಗೆ ಕಟ್ಟಿದಂತಾಯಿತು. ಯೇಸು ತನಗೆ ಬಾಯರಿಕೆ ಆಗಿದೆ ಎಂದು ಹೇಳಿದ್ದನ್ನು ಬಳಿಕ ಆತನ ಶ್ರಮೆ ತೀರಿದನ್ನೂ ನೆನಸಿಕೊಂಡು. ಕೂಡಲೇ ಹಾಸಿಗೆಯಿಂದ ಎದ್ದು, ” ಬಾಯರಿಕೆಯಾಗಿದೆ, ಬಾಯಾರಿಕೆಯಾಗಿದೆ ” ಎಂದು ಕೂಗಿಕೊಂಡನು. 

           ಸ್ವಲ್ಪ ಕಾಲದ ಬಳಿಕ ಈ ಅನುಭವವನ್ನು ಅವರು ಹೇಳುತ್ತಾ ” ನಾನು ಕೂಗಿಕೊಂಡ ಮೇಲೆ ನನ್ನಲ್ಲಿದ್ದ ಭಾರ ಹೋಯಿತು. ದುಃಖದ ಮನಸ್ಸು ಇಲ್ಲವಾಯಿತು. ನನ್ನ ರಕ್ಷಕನಾದ ದೇವರಲ್ಲಿ ದೊರೆಯುವ ಸಂತೋಷದ ಅನುಭವವಾಯಿತು. ” ಎಂದಿದ್ದಾರೆ. 

        ಕೇವಲ ಒಂದು ವರ್ಷದ ನಂತರ, ತಮ್ಮ ಹೊರ ಜನ್ಮದ ಕುರಿತು ಲಂಡನ್ನಿನ ದೊಡ್ಡ ಚರ್ಚುಗಳಲ್ಲಿ ಪ್ರಸಂಗಿಸುತ್ತಿದ್ದ ಯುವಕ ವೈಟ್ ಫೀಲ್ಡ್ ರ ಬೋಧನೆಯಿಂದ ಇಂಗ್ಲೆಂಡ್ ಜನತೆ ಉತ್ತೇಜನಗೊಂಡಿತು. ರೋಮಾಂಚನಗೊಂಡಿತು. 

          ವೆಸ್ಲಿ ಸಹೋದರರ ಆಹ್ವಾನದಂತೆ ವೈಟ್ ಫೀಲ್ಡ್ ರವರು ಆಮೆರಿಕಾಕ್ಕೆ ಹೋದರು. ಜಾರ್ಜಿಯಾದಲ್ಲಿ ಆತ್ಮೀಕ ಆಂದೋಲನ ಮಾಡಿದರು. ಇಂಗ್ಲೆಂಡಿಗೆ ಮರಳಿದಾಗ ಅವರು ಬಹಳ ಜನಪ್ರಿಯರಾಗಿದ್ದರು. ಸ್ಥಳೀಯ ಚರ್ಚುಗಳು ಅವರನ್ನು ಆಹ್ವಾನಿಸಲಿಲ್ಲ, ತಮಗೆ ತೊಡಕಾಗುವುದೆಂದು ಅವಕಾಶ ನೀಡಲಿಲ್ಲ. ಆದ್ದರಿಂದ ಅವರು ಬಯಲಿನಲ್ಲಿ ಕೂಟವೇರ್ಪಡಿಸಿ, ಏಕಕಾಲದಲ್ಲಿ ಮೂವತ್ತು ಸಾವಿರಕ್ಕಿಂತಲೂ ಹೆಚ್ಚು ಮಂದಿಗೆ ಬೋಧಿಸಿದರು. ಅವರ ಬೋಧನೆ ಕೇಳಿದ ಅನೇಕಾನೇಕರು ಕ್ರಿಸ್ತನನ್ನು ತಮ್ಮ ಸ್ವಂತ ರಕ್ಷಕನನ್ನಾಗಿ ಸ್ವೀಕರಿಸಿಕೊಂಡರು. 

           ಅವರು ಮತ್ತೆ ಆಮೆರಿಕಾಕ್ಕೆ ಹಿಂತಿರುಗಿದರು. ಅವರ ಸೇವೆ ಮತ್ತಷ್ಟು ಫಲಕಾರಿಯಾಗತೊಡಗಿತು. ಅಪನಂಬಿಕೆಯ ಬೆಂಜಮಿನ್ ಫ್ರಾಂಕ್ಲಿನ್ ಅವರ ಸೇವೆಯ ಬಗ್ಗೆ ಕೇಳುತ್ತಾ, ” ಇಡೀ ಲೋಕವೇ ಧಾರ್ಮಿಕ ಭಕ್ತಿಯಲ್ಲಿ ಬೆಳೆಯುತ್ತಿರುವಂತೆ ಕಾಣುತ್ತಿದೆ “ಎಂದಿದ್ದಾರೆ. 

            ವೈಟ್ ಫೀಲ್ಡ್ ಅವರು ಮೂವತ್ತು ವರ್ಷಕ್ಕಿಂತಲೂ ಹೆಚ್ಚು ಕಾಲ ಸುವಾರ್ತಾ ಸೇವೆ ಮಾಡಿದರು. ಸಮುದ್ರ ಮಾರ್ಗದಲ್ಲಿ ವಿದೇಶಗಳಲ್ಲಿ ಸಂಚರಿಸಿ ಮಹಾಸಮೂಹಗಳಿಗೆ ಬೋಧಿಸಿದರು. ಅವರು 1770 ರಲ್ಲಿ ಅಸುನೀಗಿದರೂ, ಕ್ರಿಸ್ತನನ್ನು ತಿಳಿಯದವರಿಗಾಗಿ ಅವರ ಪ್ರಾರ್ಥನೆ ಇನ್ನೂ ಜೀವಂತವಾಗಿದೆ. ಲಾರ್ಡ್ ಬೋಲಿಂಗ್ ಬ್ರೋಕ್ ಇವರ ಬಗ್ಗೆ ಹೇಳುತ್ತಾ, ” ನಮ್ಮ ಯುಗದ ಅಸಾಮಾನ್ಯ ವ್ಯಕ್ತಿ ” ಎಂದು ಬಣ್ಣಿಸಿದ್ದಾರೆ. 

Comments

Your email address will not be published. Required fields are marked *

× WhatsApp us