ಶಿಲುಬೆಯ ಹೆಚ್ಚಳ – ಆತ್ಮೀಕ ಕಥೆ 41

  Posted on   by   1 comment

ಒಂದು ಅಂದವಾದ ಮರದ ಶಿಲುಬೆ, ಐಶ್ವರ್ಯವಂತಳಾದ ಹೆಣ್ಣುಮಗಳ ತಲೆಯ ಕಡೆಯಲ್ಲಿ ಗೋಡೆಗೆ ತೂಗುಹಾಕಲ್ಪಟ್ಟಿದ್ದಿತು! ರೋಗಪೀಡಿತಳಾದ ಆ ತಾಯಿಯು ಆ ಶಿಲುಬೆಯನ್ನೇ ನೋಡುತ್ತಾ ಕಣ್ಣೀರು ಬಿಡುತ್ತಿದ್ದಳು, ಪಾಪ; ಆಕೆಗೆ ನಾಲ್ಕು ಮಂದಿ ಮಕ್ಕಳಿದ್ದರೂ, ಒಬ್ಬರಾದರೂ ಆಕೆಯನ್ನು ಉಪಚರಿಸುತ್ತಿರಲಿಲ್ಲ, ಆಕೆಗೆ ಸಹಾಯ ಮಾಡುತ್ತಿರಲಿಲ್ಲ. ಆದರೆ ಪಕ್ಕದ ಮನೆಯಲ್ಲಿದ್ದ ಒಬ್ಬ ಬಡ ಹುಡುಗಿ ರಾತ್ರಿಹಗಲು, ರೋಗ ಪೀಡಿತಳಾಗಿದ್ದ ಆ ತಾಯಿಯನ್ನು ಪ್ರೀತಿಸಿ, ಆಕೆಗೆ ಆರೈಕೆ ಮಾಡುತ್ತಿದ್ದಳು.
ಪ್ರಾಣ ಹೋಗುವ ಸಮಯಕ್ಕೆ ಸರಿಯಾಗಿ ಆ ತಾಯಿಯ ನಾಲ್ಕು ಮಕ್ಕಳೂ ಬಂದು ಆಸ್ತಿಯನ್ನು ಹಂಚಿಕೊಂಡರು; ಉಳಿದಿದ್ದು ಆ ಮರದ ಶಿಲುಬೆ ಒಂದೇ; ಅದನ್ನೆತ್ತಿ ಆ ಬಡಹುಡುಗಿಯ ಕಡೆ ಬಿಸಾಡಿ ಬಿಟ್ಟು ಅವರು, ಹೊರಟು ಹೋದರು. ಆ ಹುಡುಗಿಯು ಗುಣುಗಾಡದೆ ಶಿಲುಬೆ ತನ್ನ ಪಾಲಿಗೆ ಬಂದುದಕ್ಕಾಗಿ ಸ್ತೋತ್ರಮಾಡುತ್ತೇನೆಂದು ಹೇಳಿ, ಶಿಲುಬೆಯನ್ನು ಸಂತೋಷದಿಂದ ತೆಗೆದುಕೊಂಡಳು.
ಕೆಲವು ವರ್ಷಗಳು ಕಳೆದನಂತರ, ಒಂದು ದಿನ ಆ ಶಿಲುಬೆಯ ತಳ ಭಾಗದಲ್ಲಿ ಮರದ ಮುಚ್ಚಳವನ್ನು ನೋಡಿದ ಆ ಹುಡುಗಿ ಅದನ್ನು ತೆಗೆದಳು; ಎಂಥಾ ಆಶ್ಚರ್ಯ! ಅದರೊಳಗಿದ್ದ ಬೆಲೆಬಾಳುವ ಒಡವೆಗಳನ್ನು, ಮುತ್ತು ರತ್ನಗಳು ಕೆಳಗೆ ಬಿದ್ದವು! ಅಲ್ಪವಾಗಿ ಎಣಿಸಲ್ಪಟ್ಟ ಆ ಶಿಲುಬೆಯೊಳಗೆ ಅಡಗಿದ್ದ ಆ ಮಹತ್ತಾದ ಆಶೀರ್ವಾದಗಳನ್ನು ಎಣಿಸಿ ಆ ಬಡಹುಡುಗಿ ಸಂತೋಷದಿಂದ ಉಬ್ಬಿಹೋದಳು.
ದೇವರ ಮಗುವೇ, ಶಿಲುಬೆಯೇ ಸಿಂಹಾಸನಕ್ಕೆ ಮಾರ್ಗ!
“ಆತನು (ಕ್ರಿಸ್ತನು) ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡು, ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ” (ಇಬ್ರಿ. 12:2).

Categories: Spiritual Stories

1 comment

  1. Arpudam.k says:

    JESUS is love……Amazing love…..Amen

Comments

Your email address will not be published. Required fields are marked *

× WhatsApp us