ಸಜ್ಜನರ ಮನೆಯು ನಿಲ್ಲುವದು!

  Posted on   by   No comments

“ಸಜ್ಜನರ ಮನೆಯು ನಿಲ್ಲುವುದು”. (ಜ್ಞಾನೋ. 12:7).

ಈ ಆಧುನಿಕ ಪ್ರಪಂಚದಲ್ಲಿ ಕುಟುಂಬದಲ್ಲಿನ ವಿಭಾಗಗಳು ಬಹಳ ಶೋಚನೀಯವಾದ ಪರಿಸ್ಥಿತಿ, ಕ್ಷುಲ್ಲಕ ಕಾರಣಗಳಿಗಾಗಿ, ಗಂಡಸು ಮತ್ತು ಹೆಂಗಸು ಇಬ್ಬರೂ ‘ನಾನು ಮತ್ತು ನನ್ನದು’ ಎಂಬ ಪ್ರತಿಷ್ಠೆಗಾಗಿ ಜಗಳವಾಡಿ ಸುಲಭವಾಗಿ ಬೇರ್ಪಡುತ್ತಾರೆ. ಬಿಸಿ ಏರಿದ ವಾಗ್ವಾದ ಮತ್ತು ಜಗಳದ ಮಧ್ಯೆ ಜನರು ತಮ್ಮನ್ನು ತಾವೇ ಇದು ದೇವರು ಮೆಚ್ಚುವಂಥದ್ದಾ? ಎಂಬ ಪ್ರಶ್ನೆ ಕೇಳಿಕೊಳ್ಳುವದಿಲ್ಲ. ನಾನು ಹೀಗೆ ಮಾಡಬಹುದಾ? ನಾನು ಯಾಕೆ ತಾಳ್ಮೆಯಿಂದ ಇರಲಾಗದು? ಆದರೆ, ದೇವರ ವಾಕ್ಯ ಏನು ಹೇಳುತ್ತದೆ ನೋಡಿರಿ! ನೀತಿವಂತನ ಮನೆ ನಿಲ್ಲುವದು. ಯಾರು ನೀತಿಯನ್ನು ಅಪೇಕ್ಷಿಸಿ ದೇವರಿಗೆ ಭಯಪಟ್ಟು ಜೀವನ ನಡೆಸುವವರು, ಯೇಸುವನ್ನು ತಮ್ಮ ಕುರುಬನನ್ನಾಗಿ ಮಾಡಿಕೊಳ್ಳುತ್ತಾರೆ (ಕೀರ್ತ. 23:3). ಕುಟುಂಬ ಪ್ರಾರ್ಥನೆ, ಕೃತಜ್ಞತಾಸ್ತುತಿ ಪ್ರಾರ್ಥನೆಗಳು ಮತ್ತು ವೈಯಕ್ತಿಕ ಪ್ರಾರ್ಥನೆಗಳು ನೀತಿವಂತ ಮನೆಗಳ ಭಾಗವಾಗಿರುತ್ತದೆ.

ಒಂದು ಸಾರಿ, ಒಬ್ಬ ಪತಿ ಕೆಟ್ಟ ಮತ್ತು ಹೊಲಸು ಜೀವನ ಜೀವಿಸುತ್ತಿದ್ದನು. ಅವನು ತನ್ನ ಪತ್ನಿಗೆ ದ್ರೋಹ ಮಾಡಿ ಅವಳನ್ನು ಗಮನಿಸುತ್ತಲೇ ಇರಲಿಲ್ಲ. ಆದರೆ, ಆಕೆ ನಂಬಿಕೆಯಿಂದ ಆತನಲ್ಲಿ ಪ್ರಾರ್ಥಿಸುತ್ತಿದ್ದಳು. ಆಕೆ ಮತ್ತು ಮಕ್ಕಳು ನೀತಿವಂತ ಮತ್ತು ಪ್ರಾರ್ಥನಾ ಜೀವಿತವನ್ನು ಜೀವಿಸಲು ಕಾತುರರಾಗಿದ್ದರು. ವರ್ಷಗಳು ಉರುಳಿದವು. ಆಗ್ಗಿಂದಾಗೆ ಅವಳ ಸಂಬಂಧಿಗಳು ಮತ್ತು ನೆರೆಹೊರೆಯವರು ಅವಳಿಗೆ ಹೇಳುತ್ತಿದ್ದರು. “ನೀನು ಇಂಥಹ ಬೇಜವಾಬ್ದಾರಿ ಮನುಷ್ಯನ ಜೊತೆ ಇರುವುದನ್ನು ಯಾಕೆ ಮುಂದುವರಿಸುವೆ? ಯಾಕೆ ಬೇರೆ ಎಲ್ಲಾದರೂ ಹೋಗಬಾರದೆ” ಎಂದು. ಆದರೆ, ಅವಳು ಅವರೆಲ್ಲರ ಸಲಹೆಯನ್ನು ತಿರಸ್ಕರಿಸಿ, ಆತನೊಡನೆ ಜೀವಿಸುತ್ತ ದೇವರನ್ನೇ ನೋಡುತ್ತಿದ್ದಳು. ಪ್ರಾರ್ಥನೆಗಳನ್ನು ಉತ್ತರಿಸುವ ದೇವರು ಅವಳನ್ನು ಕನಿಕರಿಸಿದನು. ಆಕೆಯ ಪತಿ ಇದ್ದಕ್ಕಿದ್ದ ಹಾಗೆ ಚರ್ಮರೋಗಕ್ಕೆ ತುತ್ತಾದನು. ಒಡನೆಯೇ, ಅವನ ಎಲ್ಲಾ ಸ್ನೇಹಿತರು, ಅವನನ್ನು ತೊರೆದು ಬಿಟ್ಟರು. ಅವನು ಕೆಲಸಕ್ಕೆ ಹೋಗಲಾರದೆ ಮನೆಯಲ್ಲೇ ಉಳಿದನು. ಈಗ ಅವನಿಗೆ, ಅವನ ಹೆಂಡತಿಯ ಕಾಳಜಿ, ಪ್ರೀತಿ ಪ್ರಾರ್ಥನಾ ಜೀವಿತದ ಬಗ್ಗೆ ಗಮನಿಸಲು ಅವಕಾಶವಾಯಿತು. ಅವನು ಕೂಗಿ ಹೇಳಿದನು “ಓಹ್! ಎಂಥಹ ಅವಮಾನ! ನಾನು ಇಂಥಹ ಒಳ್ಳೆಯ ಪ್ರಾರ್ಥನಾ ಪೂರ್ವಕಳಾದ ಹೆಂಡತಿಗೆ ದ್ರೋಹ ಮಾಡಿದ್ದೇನೆ. ಎಲ್ಲರೂ ನನ್ನನ್ನು ಕೈ ಬಿಟ್ಟರೂ, ಅವಳು ನನಗೆ ಇನ್ನು ನಂಬಿಗಸ್ತಳಾಗಿ ನನ್ನನ್ನು ಪ್ರೀತಿಸುತ್ತಿದ್ದಾಳೆ. ಅವನು ತನ್ನ ಹೆಂಡತಿಗೆ ತಪ್ಪು ಅರಿಕೆಮಾಡಿ ತನ್ನ ಅಪ್ರಾಮಾಣಿಕತನವನ್ನು ಕ್ಷಮಿಸುವಂತೆ ಕೇಳಿಕೊಂಡನು. ಅವಳು ಅವನನ್ನು ಕ್ಷಮಿಸಿದ್ದು ಮಾತ್ರವಲ್ಲದೆ, ದೇವರ ಪ್ರೀತಿಯನ್ನು ವಿವರಿಸಿ ದೇವರ ಸೇವಕನಾಗುವಂತೆ ಮಾಡಿದಳು. ಬೇರ್ಪಡೆಯಾಗಬೇಕಿದ್ದ ಕುಟುಂಬ ಈಗ ಒಟ್ಟಾಗಿ ಪ್ರಾರ್ಥಿಸಿ ಜೊತೆಯಾಗಿ ಇದ್ದರು. ಕಾರಣ ಪತ್ನಿಯ ಪ್ರಾರ್ಥನೆ ಮತ್ತು ಪ್ರಾಮಾಣಿಕತನದಿಂದಲೇ.

ಪ್ರಿಯ ಪತ್ನಿ ಮತ್ತು ಪತಿಯರೇ! ನೀವು ಅದೇ ರೀತಿ ಹಿಂಬಾಲಿಸಿರಿ, ದೇವರು ಗಂಡ, ಹೆಂಡತಿ ಬೇರ್ಪಡುವುದನ್ನು ಇಷ್ಟಪಡುವುದಿಲ್ಲ (1 ಕೊರಿ. 7:5). ದೇವರ ಸನ್ನಿಧಿಯಲ್ಲಿ ಕಲ್ಲು ಹೃದಯವನ್ನು ಮಾಂಸದ ಹೃದಯವಾಗುವಂತೆ ಬಿಡದೆ ಪ್ರಾರ್ಥಿಸಿ. ದೇವರು ನಿಜಕ್ಕೂ ನಿಮಗೆ ಆಶೀರ್ವಾದದ ಕುಟುಂಬ ಜೀವನವನ್ನು ಕೊಡುತ್ತಾನೆ.

ಪ್ರಾರ್ಥನೆ : ಪ್ರೀತಿಯ ದೇವರೇ, ಎಲ್ಲಾ ಸಮಯದಲ್ಲೂ, ನನ್ನ ಕುಟುಂಬದಲ್ಲಿ ಪೂರ್ಣಸಮಾಧಾನವಿರಲಿ. ನನ್ನ ಕುಟುಂಬದ ಸಮಾಧಾನವನ್ನು ಕೆಡಿಸುವ ಎಲ್ಲಾ ಅಡೆತಡೆಗಳನ್ನು ಗೆಲ್ಲುವಂತೆ ಸಹಾಯಮಾಡು. ನಿನ್ನನ್ನು ಹಿಂಬಾಲಿಸಲು ನನಗೆ ಕೃಪೆ ಮತ್ತು ಬಲವನ್ನು ಕೊಡು. ಇಂದಿನಿಂದ ನನ್ನ ಕೈಯನ್ನು ಹಿಡಿದು ನೀತಿ ಮಾರ್ಗದಲಲಿ ನಡೆಸು. ಯೇಸುವಿನ ಪವಿತ್ರ ನಾಮದಲ್ಲಿ ಬೇಡುವೆ, ಆಮೆನ್.

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ  whatsapp ಗೆ join ಆಗಿ  Click here to join :??

http://bit.ly/2qZzHAR

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.?

https://play.google.com/store/apps/details?id=org.anudinadamanna.app

Comments

Your email address will not be published. Required fields are marked *

× WhatsApp us