ಸತ್ಯವನ್ನು ಹೇಳಿದ ಕೈದಿ – ಆತ್ಮೀಕ ಕಥೆ – 3

  Posted on   by   11 comments

prison-cannabis

 ವಿಜಯ ನಗರದ ಸಾಮ್ರಾಜ್ಯವನ್ನು ಆಳಿದ ಅರಸನು ಒಂದು ಸಾರಿ ಸೆರೆಮನೆಯಲ್ಲಿದ್ದ ಕೈದಿಗಳನ್ನು ಸಂದರ್ಶಿಸಲು ಹೋಗಿದ್ದರು. ಅಲ್ಲಿ ಕೋಣೆಯಲ್ಲಿ ಐದು ಕೈದಿಗಳು ಸರಪಣಿಯಿಂದ ಕಟ್ಟಲ್ಪಟ್ಟಿರುವುದನ್ನು ಕಂಡನು. ಅರಸನು ಅವರು ಸೆರೆಗೆ ಬಂದಿರುವ ಕಾರಣವನ್ನು ವಿಚಾರಿಸಿದನು.

“ನಾನು ಒಂದು ತಪ್ಪನ್ನೂ ಮಾಡಲಿಲ್ಲ,ಸುಳ್ಳು ಸಾಕ್ಷಿಯನ್ನು ನಂಬಿ ನ್ಯಾಯಾಧಿಪತಿಯು ನನ್ನನ್ನು ಇಲ್ಲಿಗೆ ಕಳುಹಿಸಿಬಿಟ್ಟರು” ಎಂದು ಒಬ್ಬ ಕೈದಿ ಹೇಳಿದನು.

“ನ್ಯಾಯಾಧಿಪತಿಯು ನನ್ನ ಮೇಲೆ ಹೊಟ್ಟೆ -ಕಿಚ್ಚುಪಟ್ಟು ನನ್ನನ್ನು ಅನ್ಯಾಯವಾಗಿ ಇಲ್ಲಿಗೆ ಕಳುಹಿಸಿದ್ದಾರೆ ” ಎಂದು ಎರಡನೆಯ ಕೈದಿ ಹೇಳಿದ.

ನಾನು ನ್ಯಾಯಾಧಿಪತಿಯು ಅಲಕ್ಷದಿಂದಲೇ ನಾನು ಇಲ್ಲಿಗೆ ಬಂದು ಶಿಕ್ಷೆ ಅನುಭವಿಸುತ್ತಿದ್ದೇನೆ “ಎಂದು ಮೂರನೆಯ ಕೈದಿಯು ಹೇಳಿದ.

“ನನ್ನ ಶತ್ರುಗಳು ಬೇಕೆಂದು ನನ್ನ ಮೇಲೆ ಅಪರಾಧ ಹೊರಿಸಿ ನನ್ನನ್ನು ಸೆರೆಗೆ ಕಳುಹಿಸಿದ್ದಾರೆ.” ಎಂದು ನಾಲ್ಕನೆಯ ಕೈದಿಯು ಕಾರಣ ಕೊಟ್ಟನು.

ಹೀಗೆ ಒಬ್ಬೊಬ್ಬರು ತಾವು ಸೆರೆಗೆ ಬಂದಿರುವ ಕಾರಣವನ್ನು ಕೊಟ್ಟು, ಅರಸನು ತಮ್ಮನ್ನು ಬಿಡುಗಡೆ ಮಾಡಬೇಕೆಂದು ಬೇಡಿಕೊಂಡನು. ಆಗ ಅರಸನು ಮೌನವಾಗಿದ್ದ ಐದನೆಯ ಕೈದಿಯನ್ನು ನೋಡಿ, “ನೀನು ಇಲ್ಲಿರುವ ಕಾರಣವೇನು? ಎಂದು ಕೇಳಿದನು.

“ಪ್ರಭು ! ನಾನು ಕಳ್ಳತನ ಮಾಡಿದೆ .ಆದುದರಿಂದ ನಾನು ತಪ್ಪು ಮಾಡಿದ್ದಕ್ಕಾಗಿ ಇಲ್ಲಿದ್ದೇನೆ. ನನ್ನನ್ನು ಶಿಕ್ಷಿಸುತ್ತಿರುವುದು ನ್ಯಾಯವೋ. ನಾನು ತಮ್ಮಿಂದ ಕ್ಷಮೆ ಕೇಳುವುದು ಸರಿಯಲ್ಲ? “ಎಂದು ಸೌಮ್ಯವಾಗಿ ಉತ್ತರಿಸಿದನು. ಇದನ್ನು ಕೇಳಿದ ಅರಸನು “ಇತರ ನಿರಪರಾಧಿಗಳ ಮಧ್ಯದಲ್ಲಿ ಈ ಅಪರಾಧಿ ಇದ್ದರೆ ಇನ್ನೂ ಕೆಟ್ಟು ಹೋಗುವನು ಆದಕಾರಣ ಇವನನ್ನು ಬೇಗ ಬಿಡುಗಡೆ ಮಾಡಿರಿ” ಎಂದು ವೆಂಗ್ಯವಾಗಿ ಹೇಳಿದನು. ಹೌದು, ಇವನು ಸತ್ಯವನ್ನಾಡಿದ್ದರಿಂದ ಬಿಡುಗಡೆ ಹೊಂದಿದನು.

 

ಅನ್ವಯ :- ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವುದು.  (ಯೋಹಾ 8:32)

Categories: Spiritual Stories

11 comments

 1. says:

  Good Moral in life

 2. says:

  Praise the lord

 3. says:

  Life turning story

 4. says:

  Praise the Lord .It’s true Thank you jesus

 5. says:

  Praise the*LORD* JESUS all program very nice thankyou

 6. says:

  PRAISE THE LORD Manna ministry JESUS all program very nice. thank you
  Thank you

Comments

Your email address will not be published. Required fields are marked *