ಸಹಾಯವು ಪರಲೋಕದ ಪರ್ವತದಿಂದ!

  Posted on   by   No comments

cl0ouk3wkaax8tb

“ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ; ನನ್ನ ಸಹಾಯವು ಎಲ್ಲಿಂದ ಬರುವುದು? ಭೂಮ್ಯಾಕಾಶಗಳನ್ನು ನಿರ್ಮಿಸಿದ ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ” (ಕೀರ್ತ. 121:1-2).

ನಾವೆಲ್ಲರೂ ಈಗಲೇ ಹೊಸ ವರ್ಷಕ್ಕೆ ಪ್ರವೇಶಿಸಿದ್ದೇವೆ. ಈ ಹೊಸ ವರ್ಷ ನಮಗಾಗಿ ಏನನ್ನು ತರುತ್ತದೆ ಎಂಬ ಬೇರೆ ಬೇರೆ ನಿರೀಕ್ಷೆ ಇರಬಹುದು. ನಾವು ಕೆಲವರು ಆಲೋಚಿಸಬಹುದು. “ಈ ವರ್ಷವಾದರೂ ನನ್ನ ವೃತ್ತಿಯಲ್ಲಿ ಹೊಸದನ್ನು ನಾನು ಸಾಧಿಸಬಹುದಾ?” ಬೇರೆಯವರು ಚಿಂತಿಸುತ್ತಿರಬಹುದು. “ಅನಿರ್ಧಿಷ್ಟಿತ ಕಾಲದಿಂದ ಕಾಯುತ್ತಿರುವ ಆಶೀರ್ವಾದ ಈ ವರ್ಷವಾದರೂ ಫಲಿಸಬಹುದಾ?” ಆದ್ದರಿಂದ, ತಲೆ ಬರಹದ ವಾಗ್ದಾನದಂತೆ, ಎಲ್ಲಾ ಸಮಯದಲ್ಲಿ ನಮಗೆ ಸಹಾಯ ಹರಿದುಬರುವ ಪರ್ವತವೆಂದರೆ ಕರ್ತನಾದ ಯೇಸು (ಕೀರ್ತ. 35:2-3). ಆದ್ದರಿಂದ ನಮ್ಮ ಎಲ್ಲಾ ನಂಬಿಕೆಯನ್ನು ಆತನ ಮೇಲೆ ಹಾಕಿ ಆತನನ್ನೆ ಹೊಂದಿಕೊಳ್ಳೋಣ. ಆದ್ದರಿಂದ ನಾವು ಕೇಳುವುದಕ್ಕಿಂತಲೂ, ಯೋಚಿಸುವುದಕ್ಕಿಂತಲೂ, ನಮ್ಮಲ್ಲಿ ಕೆಲಸ ಮಾಡುವ ಶಕ್ತಿಗಿಂತಲೂ ನಾವು ಹೇರಳವಾಗಿ ಆಶೀರ್ವಾದಿಸಲ್ಪಡುವೆವು (ಎಫೆ. 3:20).

ಒಂದು ನಿರ್ದಿಷ್ಟವಾದ ಕಛೇರಿಯಲ್ಲಿ, ಒಬ್ಬ ಅಧಿಕಾರಿ, ತನ್ನ ಕಾರ್ಯಗಳನ್ನು ಹೆಚ್ಚಾದ ಭಕ್ತಿಯಿಂದ ಸಮಗ್ರತೆಯಿಂದಲೂ ನಿರ್ವಹಿಸುತ್ತಿದ್ದರು. ಆದರೆ, ಆತನ ಕೈಕೆಳಗಿನವರಿಗೆ ಬಡ್ತಿ ದೊರೆತಾದರೂ, ಇವನ ಪ್ರಾಮಾಣಿಕತೆಯ ಸೇವೆ ಗುರುತಿಸಲಿಲ್ಲ ಮತ್ತು ಯಾವ ಹೆಚ್ಚುವರಿ ಸೌಲಭ್ಯಗಳೂ ಇವನಿಗೆ ದೊರೆಯಲಿಲ್ಲ. ಆದ್ದರಿಂದ ಅವನು ಹೃದಯ ಮುರಿದವನಾಗಿದ್ದನು. ಒಂದು ದಿನ ಅವನು ಒಂದು ತುರ್ತು ತೀರ್ಮಾನ ತೆಗೆದುಕೊಂಡನು. ಅವನು ಕಛೇರಿಯಿಂದ ಹಿಂತಿರುಗಿದ ನಂತರ, ರಾತ್ರಿ ಊಟ ಮಾಡದೆ ತನ್ನ ಕೊಠಡಿಯಲ್ಲಿ ತನ್ನ ಎಲ್ಲಾ ಯಾತನೆ, ನಿರಾಸೆಯನ್ನು ಕರ್ತನಲ್ಲಿ ಪ್ರಾರ್ಥನೆಯ ಮೂಲಕ ಹೊಯ್ದನು. ಒಂದು ಅಳವಾದ ದೈವಿಕ ಸಮಾಧಾನ ಆತನ ಹೃದಯವನ್ನು ತುಂಬಿಕೊಂಡಿತು, ನಂತರ ಅವನು ನಿದ್ರೆ ಹೋದನು. ಈ ಅನುಭವದಿಂದ ಉತ್ಸಾಹಿತನಾಗಿ ದಿನದಿಂದ ದಿನಕ್ಕೆ ಪ್ರಾರ್ಥನೆ ಮುಂದುವರಿಸಿದನು. ಒಂದು ದಿನ ದಿಢೀರನೆ, ಕಂಪನಿಯ ಉನ್ನತ ಅಧಿಕಾರಿ ಅವನ ಕಛೇರಿಗೆ ಆಕಸ್ಮಿಕ ಭೇಟಿ ಕೊಟ್ಟರು. ಆತನು ಪ್ರತಿಯೊಬ್ಬ ನೌಕರನ ಯೋಗ್ಯತಾ ಪತ್ರಗಳನ್ನು ನೋಡಿದಾಗ ಈ ವ್ಯಕ್ತಿಗೆ ಅವನ ಬಡ್ತಿಯ ಸಂಬಳ ಮುಂತಾದ ವಿಚಾರದಲ್ಲಿ ದೊಡ್ಡ ಅನ್ಯಾಯವಾಗಿರುವುದಾಗಿ ತಿಳಿದು ಬಂದಿತು. ಈ ವಿಚಾರದಲ್ಲಿ ಸೂಕ್ತ ಉತ್ತರಗಳು ದೊರೆಯಲಿಲ್ಲ. ಆತನು ಅವರನ್ನು ಗದರಿಸಿ, ಒಂದು ಹೊಸ ಹುದ್ದೆಯನ್ನು ನಿರ್ಮಾಣ ಮಾಡಿ ಆ ಉನ್ನತ ಹುದ್ದೆಗೆ ಈ ವ್ಯಕ್ತಿಯನ್ನು ಇರಿಸಲಾಯಿತು. ಈ ಅಧಿಕಾರಿ ಎದುರು ನೋಡುತ್ತಿದ್ದದ್ದಕ್ಕಿಂತ ಹೆಚ್ಚಾಗಿ ಸಂಬಳದಲ್ಲಿ ಬಡ್ತಿಯನ್ನು ಕೊಡಲಾಗಿತ್ತು. ಇಡೀ ಕಛೇರಿಯು ಆಶ್ಚರ್ಯದಿಂದ ಈ ಉನ್ನತ ಅಧಿಕಾರಿಯ ಕಾರ್ಯಗಳಿಂದ ನಡುಗಿದ್ದರು.

ಹೌದು! ನಾವು ಧೈರ್ಯವಾಗಿ ಹೇಳಬಲ್ಲೆವು, ಕರ್ತನು ತಾನೇ ಆ ಉನ್ನತ ಅಧಿಕಾರಿಯಂತೆ ಬಂದು ಈತನಿಗೆ ನ್ಯಾಯವನ್ನು ಕೊಟ್ಟಿದ್ದನು. ಈ ದಿನದಲ್ಲೂ ಕರ್ತನು ಜೀವಿಸಿದ್ದಾನೆ. ಈ ಅಧಿಕಾರಿಯಂತೆ ನೀವು ನಿಜಕ್ಕೂ ಸಹಾಯ ಅಪೇಕ್ಷಿಸಿದರೆ, ನೀವು ಸಹ ಈ ಹೊಸ ವರ್ಷ ಪೂರಾ ಅಂಥಹ ಅದ್ಭುತದ ಅನುಭವ ಪಡೆಯಬಹುದು. ಆತನು ನಿನ್ನ ಅವಶ್ಯಕತೆಯನ್ನು ಆಶೀರ್ವಾದವಾಗಿ ಬದಲಾಯಿಸುತ್ತಾನೆ (ಕೀರ್ತ. 44:26).

ಪ್ರಾರ್ಥನೆ: ಅಮೂಲ್ಯ ಕರ್ತನೇ, ನನ್ನ ಜೀವನದಲ್ಲಿ ಅನೇಕ ಅವಶ್ಯಕತೆಗಳಿವೆ. ನಾನು ಅನೇಕ ದಿನಗಳಿಂದ ಕಾಯುತ್ತಿರುವ ಆಶೀರ್ವಾದಗಳನ್ನು ಈ ವರ್ಷವಾದರೂ ಪಡೆಯುವುದಿಲ್ಲವಾ? ಕರ್ತನೆ ಈ ಸಹೋದರನಿಗೆ ಸಹಾಯಮಾಡಿದಂತೆ ನನ್ನ ವಿಷಯದಲ್ಲೂ ಒಂದು ಅದ್ಬುತವನ್ನು ಇಂದಿನಿಂದಲೇ ತುಂಬಿ ಹರಿಯುವಂತೆ ಮಾಡು. ನನಗೆ ಎಲ್ಲಾ ಅವಶ್ಯಕತೆಗಳನ್ನು ಈ ವರ್ಷದಲ್ಲಿ ಅದ್ಭುತವಾಗಿ ಕೊಡಲ್ಪಡಲಿ. ಇದನ್ನು ನಾನು ಕರ್ತನಾದ ಯೇಸುವಿನ ಹೆಸರಿನಲ್ಲಿ ಪಡೆದಿದ್ದನೆ ಆಮೆನ್.

 

ಪ್ರಾರ್ಥನೆ ಮತ್ತು ವಂದನೆಗಳೊಂದಿಗೆ,

MANNA MINISTRIES

Mannaministries.in@gmail.com

*For Daily Devotion Contact: +91 9964247889*

Comments

Your email address will not be published. Required fields are marked *