ಹರ್ಷೋಲ್ಲಾಸ! ಆತ್ಮೀಕ ಕಥೆ 36

  Posted on   by   5 comments

ಒಬ್ಬ ಭಕ್ತನು ಪ್ರಯಾಣ ಮಾಡಿದ ಹಡಗು ಬಿರುಗಾಳಿಗೆ ಸಿಕ್ಕಿ ಒಡೆದು ಹೋಯಿತು. ಪ್ರಯಾಣಿಕರೆಲ್ಲರೂ ಗತಿಸಿ ಹೋದರು. ಆ ಭಕ್ತನು ಮಾತ್ರ ತಪ್ಪಿಸಿಕೊಂಡು ದೂರದಲ್ಲಿದ್ದ ಒಂದು ದ್ವೀಪವನ್ನು ಸೇರಿದನು. ಆ ದ್ವೀಪದಲ್ಲಿ ಜನರೇ ಇರಲಿಲ್ಲ. ಮುಳ್ಳಿನ ಪೊದೆಗಳಿಂದ ಕೂಡಿದ ಆ ಸ್ಥಳ ಬಹಳ ಭಯಂಕರವಾಗಿದ್ದಿತು. ಹಡಗಿನಿಂದ ತೇಲಿಕೊಂಡು ಬಂದ ಹಲಗೆಗಳಿಂದ ಒಂದು ಸಣ್ಣ ಗುಡಿಸಲನ್ನು ಮಾಡಿಕೊಂಡು, ರಾತ್ರಿ ಹಗಲೂ ಕಣ್ಣೀರು ಸುರಿಸುತ್ತಾ, ತನ್ನನ್ನು ಊರಿಗೆ ಸೇರಿಸುವಂತೆ ಪ್ರಾರ್ಥಿಸುತ್ತಿದ್ದನು. ಹೀಗೆ ಕೆಲವು ವಾರಗಳು ಕಳೆಯಿತು.
ಒಂದು ದಿನ ಈತನು ಮೀನು ಹಿಡಿಯಲು ಹೋಗಿದ್ದಾಗ ತನ್ನ ಗುಡಿಸಲಿಗೆ ಬೆಂಕಿಹತ್ತಿ ಉರಿಯುತ್ತಿರುವುದನ್ನು ನೋಡಿದನು, ಓಡಿಬಂದು ಬೆಂಕಿಯನ್ನು ಆರಿಸಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಯಿತು. ತನಗಿದ್ದ ಒಂದೇ ಒಂದು ಆಶ್ರಯ ಅದು ಕೂಡ ನಾಶವಾಗಿ ಹೋಯಿತಲ್ಲಾ ಎಂದು ಬಹಳ ದು:ಖಪಟ್ಟು ಗೋಳಾಡಿದನು; ಅವನ ದು:ಖ ಹೇಳಲು ಅಸಾಧ್ಯವಾಗಿದ್ದಿತು.
ಕರ್ತನು ಗೋಳಾಟವನ್ನು, ಸಂತೋಷವನ್ನಾಗಿ ಮಾರ್ಪಡಿಸುವಾತನಲ್ಲವೇ? ಹತ್ತಿ ಉರಿಯುತ್ತಿದ್ದ ಬೆಂಕಿಯನ್ನು ದೂರದಲ್ಲಿ ಬರುತ್ತಿದ್ದ ಹಡಗಿನವರು ನೋಡಿ, ಆ ದ್ವೀಪಕ್ಕೆ ಬಂದು ಆ ಭಕ್ತನನ್ನು ಕಾಪಾಡಿದರು. ತನ್ನ ಗುಡಿಸಲಿಗೆ ಬೆಂಕಿ ಬಿದ್ದು ಉರಿದುಹೋಗಲು, ಕರ್ತನು ಅನುಮತಿಸಿ ದುದೇಕೆಂಬ ರಹಸ್ಯವನ್ನು ತಿಳಿದ ಆ ಭಕ್ತನು ಮನ:ಪೂರ್ವಕವಾಗಿ ಕರ್ತನನ್ನು ಸ್ತುತಿಸಿದನು.
ದೇವರ ಮಗುವೇ, ನಿನಗೆ ಸಂಭವಿಸುವ ಎಲ್ಲಾ ದು:ಖಗಳಲ್ಲಿ ಮರೆಯಾಗಿರುವ ದೇವರ ಆಶೀರ್ವಾದ ಒಂದುಂಟು, ನಿನ್ನ ಕಷ್ಟಗಳನ್ನು ನಿಜವಾಗಿಯೂ ಕರ್ತನು ಮಾರ್ಪಡಿಸುವನು. “ಆತನ ಅನುಗ್ರಹವೋ ಜೀವಮಾನವೆಲ್ಲಾ ಇರುವುದು; ಸಂಜೆಗೆ ದು:ಖವೆಂಬುದು ಬಂದು ನಮ್ಮ ಬಳಿಯಲ್ಲಿ ಇಳಿದುಕೊಂಡರೂ ಮುಂಜಾನೆ ಹರ್ಷಧ್ವನಿ ಕೇಳಿಸುವುದು” (ಕೀರ್ತ. 30:5).

Categories: Spiritual Stories

5 comments

 1. Saroja says:

  Amen Praise tha lord store is a bintstick nice

 2. Sujatha g says:

  Namma praathane vyarthavaagadhu…

 3. Mala says:

  Hwdu namage kastagalu vadagidaga talme inda sahisikondu kuggi hogade prarthane madutta irabeku devaru nammannu appattinalli bittu biduvanalla atanu nammannu kapaduva devaru….

  • PAVADEPPA Yallamma says:

   Hwdu namage kastagalu vadagidaga talme inda sahisikondu kuggi hogade prarthane madutta irabeku devaru nammannu appattinalli bittu biduvanalla atanu nammannu kapaduva devaru….

 4. Pushpalatha says:

  Hamen

Comments

Your email address will not be published. Required fields are marked *

× WhatsApp us