ಹಳೇ ಸಂಗತಿಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಬೇಡಿರಿ, ಪುರಾತನ ಕಾರ್ಯಗಳನ್ನು ಮರೆತುಬಿಡಿರಿ!

  Posted on   by   No comments

“ಹಳೇ ಸಂಗತಿಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಬೇಡಿರಿ, ಪುರಾತನ ಕಾರ್ಯಗಳನ್ನು ಮರೆತುಬಿಡಿರಿ” (ಯೆಶಾ. 43:18).

ಪ್ರತಿ ಸಮಯ ನಾವು ಶೋಧನೆ ಮತ್ತು ಸಂಕಟದ ಮೂಲಕ ಹಾದು ಹೋಗುವಾಗ ನಾವು ಹಿಂದಿನದನ್ನು ನೋಡಿ, ಹೃದಯ ಕುಗ್ಗಿದವರಾಗಿ ಮತ್ತು ಗುಣಗುಟ್ಟಿ ಹೇಳುತ್ತೇವೆ, “ಅಯ್ಯೋ, ಕಳೆದ್ದು ಎಂಥಹ ಅದ್ಭುತವಾಗಿತ್ತು. ಈ ದಿನ ಬಹಳ ಕೆಟ್ಟದಾಗಿದೆ. ನಾನು ಬದುಕಲು ಹೋರಾಟ ಮಾಡಬೇಕಾಗಿದೆ.” ಅದೇ ರೀತಿ, ಹೊಸದಾಗಿ ಮದುವೆಯಾದ ಹೆಣ್ಣುಗಳು ತಮ್ಮ ಗಂಡಂದಿರ ಮನೆಗೆ ಹೋಗಿ ತಮ್ಮ ತಂದೆ ತಾಯಿಯವರ ಜೊತೆಯಲ್ಲಿನ ಜೀವನವನ್ನು ಆಲೋಚಿಸಿ ಕೆಲವು ಸಣ್ಣ ವಿಷಯಗಳನ್ನು ಗಂಡನ ಮನೆಯಲ್ಲಿ ಉಲ್ಲಣಗೊಳಿಸುತ್ತಾನೆ. ಆದರೆ, ಇಂಥಹ ಬೇಕಿಲ್ಲದ ಹೋಲಿಕೆಯಿಂದ ಅವರಿಗೆ ಏನು ಸಿಕ್ಕುತ್ತದೆ? ಏನೂ ಇಲ್ಲ. ಇದಕ್ಕೆ ಬದಲಾಗಿ, ಅವರು ಹಿಂದೆ ಇದ್ದದ್ದನ್ನು ಮರೆತು, ಮುಂದೆ ಇರುವ ಸಂಗತಿಗಾಗಿ ಎಟುಕಿಸಿದರೆ, ಅವರಿಗೆ ಹೊಸ ಸಂತೋಷ, ಸಮಾಧಾನ ಮತ್ತು ದೈವೀಕ ಆಶೀರ್ವಾದ ಸಿಗುತ್ತದೆ (ಫಿಲಿ. 3:1-3). ಇದು ಕ್ರೈಸ್ತೀಯ ಜೀವಿತದಲ್ಲೂ ಸತ್ಯ. ನಾವು ಹಿಂದಿನದನ್ನು ಮರೆತು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡಬೇಕು (ಫಿಲಿ. 3:14).

ಹೊಸದಾಗಿ ಮದುವೆಯಾದ ಒಬ್ಬ ಹುಡುಗಿಯು ತನ್ನ ಗಂಡನ ಮನೆಯಲ್ಲಿ ಯಾವಾಗಲೂ ತಪ್ಪುಗಳನ್ನು ಕಂಡು ಹಿಡಿಯುತ್ತಿದ್ದಳು ಮತ್ತು ತನ್ನ ತಾಯಿಯ ಕುಟುಂಬವನ್ನು ಘನತೆಯನ್ನು ಹೊಗಳುತ್ತಾ ಇದ್ದಳು. ಇಷ್ಟು ದಿನ ಸುಮ್ಮನಿದ್ದ ಅವಳ ಗಂಡ, ಒಂದು ದಿನ ತನ್ನ ತಾಳ್ಮೆಯನ್ನು ಕಳೆದುಕೊಂಡನು. ಅವನೂ ಸಹ ಕೆಟ್ಟ ಮಾತುಗಳಿಂದ ಹಿಂತಿರುಗಿಸಿದ, ಇದು ಪದೇ ಪದೇ ಅವರಲ್ಲಿ ಜಗಳಕ್ಕೆ ಕಾರಣವಾಯಿತು. ಈ ಸಮಯದಲ್ಲಿ ಅವಳ ಒಬ್ಬ ಹಳೇ ಸ್ನೇಹಿತೆ ಅವಳನ್ನು ಸಂಧಿಸಿದಳು. ಆಗ ಈ ಹುಡುಗಿ ತನ್ನ ಎಲ್ಲಾ ಯಾತನೆಯನ್ನು ನೋವನ್ನು ಅವಳ ಸ್ನೇಹಿತಳ ಹತ್ತಿರ ಹೇಳಿಕೊಂಡಳು. ಈ ದೈವೀಕ ಭಕ್ತಿಯ ಸ್ನೇಹಿತೆ ಈ ಹುಡುಗಿಗೆ ಹಿಂದಿನದನ್ನು ಹೇಗೆ ಮರೆಯಬೇಕು ಮತ್ತು ಮುಂದಕ್ಕೆ ಹೇಗೆ ನಂಬಿಕೆಯಿಂದಲೂ ಧೈರ್ಯದಿಂದಲೂ ನಡೆಯಬೇಕೆಂದು ಸಲಹೆಯಿತ್ತಳು. ಅವಳ ವೈವಾಹಿಕ ಜೀವನವನ್ನು ಹೇಗೆ ನಿರ್ವಹಿಸಬೇಕೆಂದು ಸಲಹೆಕೊಟ್ಟಳು. ಇದು ದೇವರಿಂದ ಪ್ರತಿಷ್ಠಿಸಿ ಆಶೀರ್ವದಿತವಾದದ್ದೆಂದೂ ಹೇಳಿದಳು. ಇದು ಅವಳ ಕೊರತೆಗಳನ್ನು ಅರ್ಥ ಮಾಡಿಕೊಂಡು ತನ್ನ ಗಂಡನ ಕಡೆಗಿನ ನಡವಳಿಕೆ ಅರ್ಥ ಮಾಡಿಕೊಂಡಂತಾಯಿತು. ಈ ವಿಚಾರಕ್ಕೆ ಅವಳು ದೇವರ ಸಹಾಯವನ್ನು ಕೇಳಿ ತನ್ನ ಎಲ್ಲಾ ಭಾರಗಳಿಂದ ಜಯಿಸುವಂತೆ ಆಯಿತು. ಅಂದಿನಿಂದ ಎಲ್ಲಾ ಗಲಿಬಿಲಿ, ಯಾತನೆ, ಹರಟೆ ಜಗಳಗಳು ಮನೆಯಿಂದ ಮಾಯವಾದವು. ಅವಳು ಸಮಾಧಾನದಿಂದಲೂ ಕುಟುಂಬದವರೆಲ್ಲರ ಜೊತೆ ಜೀವಿಸುವಂತೆ ಕೃಪೆ ಕೊಟ್ಟನು.

ಪ್ರಿಯರೇ, ನೀವೂ ಸಹ ನಿಮ್ಮ ಹೃದಯದಲ್ಲಿ ಸಮಾಧಾನವಿಲ್ಲದೆ ಜೀವಿಸುತ್ತಿರಬಹುದು. ಕಾರಣ ಕೆಲವು ಸಣ್ಣ ವಿಷಯಗಳಿಗಾಗಿ ಚಿಂತಿಸಬೇಡಿರಿ! ನಿಮ್ಮ ಜೀವನವನ್ನು ದೇವರಿಗೆ ಸಮರ್ಪಿಸಿರಿ, ಹಿಂದಿನದನ್ನು ಮರೆಯಿರಿ, ಮುಂದಿನದನ್ನು ನೋಡಿರಿ. ದೇವರು ತನ್ನ ಕರುಣೆಯನ್ನು ನಿಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸಿ ಹೇರಳವಾಗಿ ಆಶೀರ್ವದಿಸುತ್ತಾನೆ (ರೋಮ. 12:2).

ಪ್ರಾರ್ಥನೆ :- ಪ್ರಿಯ ಕರ್ತನೇ! ನನ್ನ ಹಿಂದಿನ ಪಾಪದ ಜೀವನವನ್ನು ಮರೆಯಲು ಸಹಾಯ ಮಾಡು ಮತ್ತು ಮೇಲಿನ ಪ್ರಸಂಗದಲ್ಲಿ ಆ ಹುಡುಗಿ ಮಾಡಿದಂತೆ ಹೊಸ ನಂಬಿಕೆಯಿಂದ ನಿನ್ನನ್ನು ನೋಡುವಂತೆ ಮಾಡು. ನಿನ್ನ ಚಿತ್ತದಂತೆ ನಡೆಯುವಂತೆಯು ಮತ್ತು ನಿನ್ನ ಹತ್ತಿರ ಬರುವಂತೆಯೂ ಇಂದಿನಿಂದ ಕೃಪೆ ನೀಡು. ನಿನ್ನ ಮಗುವಂತೆ ನನ್ನನ್ನು ತೆಗೆದುಕೊಂಡು ಆಶೀರ್ವದಿಸು. ಕರ್ತನಾದ ಯೇಸುವಿನ ದಿವ್ಯ ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

MANNA MINISTRIES
Mannaministries.in@gmail.com
*For Daily Devotion Contact: +91 9964247889*

For more install our App: 

https://play.google.com/store/apps/details?id=org.mannaministry.app&hl=en

https://play.google.com/store/apps/details?id=org.mannaministry1000praises.app&hl=en

 

Comments

Your email address will not be published. Required fields are marked *

× WhatsApp us