ಹಾವುಗಳು ಹಾನಿಕರವಲ್ಲ – ಆತ್ಮೀಕ ಕಥೆ 35

  Posted on   by   No comments

ಬೆಂಗಳೂರಿನಲ್ಲಿ ಜಯಶೀಲನೆಂಬ ಯುವಕನಿದ್ದನು. ಇವನಿಗೆ ಹಾವುಗಳೆಂದರೆ ಬಹಳ ಇಷ್ಟ, ಹಾವುಗಳು ಜಯಶೀಲನಿಗೆ ‘ಪ್ರೀಯ ಸ್ನೇಹಿತರು’ ಒಂದು ಸಾರಿ ಇವನು ಹಾವುಗಳೊಂದಿಗೆ ಐದು ದಿನಗಳಿದ್ದು ದಾಖಲೆಗಳನ್ನು ಸ್ಥಾಪಿಸಿದನು. ಪೋಲಿಸರು ಸಹ ಹಾವುಗಳನ್ನು ಹಿಡಿಯುವುದಕ್ಕಾಗಿ ಜಯಶೀಲನನ್ನು ಉಪಯೋಗಿಸುತ್ತಿದ್ದರು. ಹಾವುಗಳು ಇವನನ್ನು 14 ಸಾರಿ ಕಚ್ಚಿದರೂ ಔಷದ ಸೇವನೆಯಿಂದ ಜೀವಿತನಾಗಿದ್ದು ತನ್ನ ಸ್ನೇಹಿತರನ್ನು ಸಂಗ್ರಹಿಸುತ್ತಿದ್ದರು.

‘ಹಾವುಗಳು ಹಾನಿಕರವಲ್ಲ’ ಎಂದು ಲೋಕಕ್ಕೆ ರುಜುಪಡಿಸಬೇಕೆಂಬುದು ಜಯಶೀಲನ ಮಹಾಕಾಂಕ್ಷೆ. ಮೇ 18,1989 ರಲ್ಲಿ ಪೊಲೀಸರು ಒಂದು ಮನೆಯಲ್ಲಿ ಮರೆಯಾಗಿದ್ದ ಹಾವನ್ನು ಹಿಡಿಯಲು ಜಯಶೀಲನಿಗೆ ಫೋನ್ ಮಾಡಿದರು. . ಅದನ್ನು ಹಿಡಿಯುವ ಪ್ರಯತ್ನದಲ್ಲಿ ಜಯಶೀಲನೇ ಆ ಪ್ರಿಯ ಸ್ನೇಹಿತನ ವಿಷದ ಹಲ್ಲಿನಿಂದ 28 ವಯಸ್ಸಿನಲ್ಲಿಯೇ ಪ್ರಾಣ ನೀಗಿದನು.
ಅನ್ವಯ :- ಮನುಷ್ಯ ದೃಷ್ಟಿಗೆ ಸರಳವಾಗಿ (ಸರಿಯಾಗಿ) ತೋರುವ ದಾರಿಯುಂಟು, ಕಟ್ಟಕಡೆಗೆ ಅದು ಮರಣಮಾರ್ಗವೇ. (ಜ್ಞಾನೋ 16:25)

Categories: Spiritual Stories

Comments

Your email address will not be published. Required fields are marked *

× WhatsApp us