ಹೆಮ್ಮೆಪಡಬೇಡ! – ಆತ್ಮೀಕ ಕಥೆ – 2

  Posted on   by   8 comments

%ce%b1%cf%81%cf%87%ce%b5%ce%af%ce%bf-%ce%bb%ce%ae%cf%88%ce%b7%cf%82-2-4

“ಯಾರೂ ತನ್ನ ಯೋಗ್ಯತೆಗೆ ಮೀರಿ ತನ್ನನ್ನು ಭಾವಿಸಿಕೊಳ್ಳದೆ ದೇವರು ಒಬ್ಬೊಬ್ಬನಿಗೆ ಎಂತೆಂಥ ವಿಶ್ವಾಸ ಬಲವನ್ನು ಕೊಟ್ಟನೋ ಅದಕ್ಕೆ ತಕ್ಕ ಹಾಗೆ ನ್ಯಾಯವಾದ ಅಭಿಪ್ರಾಯದಿಂದ ತನ್ನನ್ನು ಭಾವಿಸಿಕೊಳ್ಳಬೇಕು” (ರೋಮ. 12:3).

ಒಂದು ಕಥೆಯುಂಟು. ಒಂದು ದೊಡ್ಡ ಆನೆಯು ಮತ್ತು ಇಲಿಯು ಬಹಳ ಸ್ನೇಹವಾಗಿದ್ದವು, ಇಲಿಯು ಆನೆಯ ಮೇಲೆ ಹತ್ತಿ ಹೋಗಿ ಅದರ ಅಗಲವಾದ ಕಿವಿಯ ಬಳಿ ಕುಳಿತು ಸ್ನೇಹಿತನೊಂದಿಗೆ ಮಾತನಾಡುತ್ತಿದ್ದಿತು. ಆನೆ ತಾನು ಹೋದಕಡೆಗೆಲ್ಲಾ ಇಲಿಯನ್ನು ಹೊತ್ತು ನಡೆಯುತ್ತಿತ್ತು.

ಒಮ್ಮೆ ಒಂದು ನದಿಯ ಮೇಲಿನ ಸೇತುವೆಯನ್ನು ದಾಟಬೇಕಾಗಿತ್ತು. ಆನೆ ಸೇತುವೆಯ ಮೇಲೆ ಹತ್ತಿದಾಗ ಸೇತುವೆ ಆನೆಯ ಭಾರದಿಂದ ಅಲುಗಾಡಿತು. ಆನೆಯು ಹೆಜ್ಜೆಯ ಮೇಲೆ ಹೆಜ್ಜೆಯನ್ನು ಇಡುತ್ತಾ, ಅಪಾಯವಿಲ್ಲದೆ ಸೇತುವೆಯನ್ನು ದಾಟಿತು; ಆಗ ಆ ಇಲಿ ಮರಿ “ನೋಡಿದೆಯಾ, ನಾನು ನಿನ್ನ ಮೇಲೆ ಸ್ವಲ್ಪಭಾರ ಬಿಟ್ಟಾಗ ಸೇತುವೆ ಅಲ್ಲಾಡಿತಲ್ಲಾ, ಇನ್ನೂ ಹೆಚ್ಚು ಭಾರ ಬಿಟ್ಟಿದ್ದಿದ್ದರೆ ಸೇತುವೆ ಬಿದ್ದೇ ಹೋಗುತ್ತಿತ್ತು” ಎಂದಿತಂತೆ.
ಈ ಇಲಿಮರಿಯಂತೆ ನೆನಸಿ ಹೆಚ್ಚಳ ಪಟ್ಟುಕೊಳ್ಳುವವರು ನಾವೇ!

ಕರ್ತನು ಆತ್ಮಗಳ ಮೇಲಿನ ಅನುತಾಪದಿಂದ ತನ್ನ ತ್ಯಾಗದ ರಕ್ತದ ಮೂಲಕ ವ್ಯಾಧಿಗಳನ್ನು ಗುಣಪಡಿಸುವಾಗ ನಾವು ಕೂಡಲೇ ಹೇಳಿಕೊಳ್ಳುತ್ತೇವೆ “ನಾನು ಪ್ರಾರ್ಥಿಸಿದೆ, ಕೂಡಲೇ ಗುಣವಾಯಿತು” ಎಂದು ಊರೆಲ್ಲಾ ಸಾರಿ ಬಿಡುತ್ತೇವೆ. ಇದೇ, ಆತ್ಮೀಯ ವಿಷಯದಲ್ಲಿ ಬೀಳುವಿಕೆಗೆ ಕಾರಣವಾಗುತ್ತದೆ.

ಹೀಗೆ ಹೆಮ್ಮೆ ಪಡುವುದರಿಂದ ಅನೇಕರಿಗೆ ಕರ್ತನು ವರಗಳನ್ನು ಕೊಡುವುದಿಲ್ಲ! ಕೊಟ್ಟಿರುವ ವರಗಳನ್ನು ಕ್ರಮೇಣ ತೆಗೆದು ಬಿಡುತ್ತಾನೆ. ಪಾಪಮಾಡಿ ಬಿದ್ದು ಹೋದ ಭಕ್ತರಿಗಿಂತ ಹೆಮ್ಮೆಪಟ್ಟು, ಹೆಚ್ಚಿಸಿಕೊಂಡು ಬಿದ್ದು ಹೋದವರೇ ಹೆಚ್ಚು ಮಂದಿ! ಆತ್ಮೀಯವರಗಳೂ ಕೃಪೆಗಳೂ ಕರ್ತನ ಮಕ್ಕಳನ್ನು ಹೆಚ್ಚಳಕ್ಕೊಳ ಪಡಿಸಿಬಿದ್ದು ಹೋಗಲು ಕಾರಣವಾಗುವುದುಂಟು. “ಇಂಥದ್ದನ್ನು ತಿಳಿದು ಕೊಂಡಿದ್ದೇನೆಂದು ನೆನಸುವನು ತಾನು ಇನ್ನೂ ತಿಳಿದುಕೊಳ್ಳಲಿಲ್ಲ” (1 ಕೊರಿ. 8:2).

“ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನೂ ತಗ್ಗಿಸಲ್ಪಡುವನು” ಅಂದನು (ಲೂಕ. 18:14).

Categories: Spiritual Stories

8 comments

 1. mahesh paiganakar Yellapur says:

  PRAISE THE LORD GOOD story i like this

 2. I.W.R Soans says:

  Good Message 👌 👍

 3. pastor. S.ANAND says:

  Good story. It’s spiritual thinking applying each one.. thank you very much.

 4. Arun says:

  Praise the Lord pastor
  Nice msg

 5. Anthony Joyson says:

  Meaningful story

 6. Akhil says:

  Praise the Lord good msg

 7. Geetha says:

  Good meaningful story

 8. Venkatesh says:

  Very beautiful and moral story

Comments

Your email address will not be published. Required fields are marked *