ಹೇರಳವಾದ ದೇವರ ಆಶೀರ್ವಾದಗಳು!

  Posted on   by   No comments

5b6627ccd38e7e19a4273f445a36f62a

“ನೀವು ಹೊಟ್ಟೆ ತುಂಬಾ ಊಟಮಾಡಿ ತೃಪ್ತಿಗೊಂಡು; ನಿಮಗಾಗಿ ಅದ್ಭುತಕಾರ್ಯಗಳನ್ನು ಮಾಡಿದ ನಿಮ್ಮ ದೇವರಾದ ಯೆಹೋವನ ನಾಮವನ್ನು ಕೊಂಡಾಡುವಿರಿ. ನನ್ನ ಜನರು ಎಂದಿಗೂ ಆಶಾಭಂಗಪಡರು”. (ಯೋವೆ. 2:26).

ಹೌದು ! ನಮ್ಮ ದೇವರು, ತನ್ನ ಸಮೃದ್ದವಾದ ಆಶೀರ್ವಾದಗಳನ್ನು ತನ್ನ ಜನರ ಮೇಲೆ ಸುರಿಸಲು ಇಷ್ಟಪಡುತ್ತಾನೆ. ನೀವು ಯೇಸುವನ್ನು ನಿಮ್ಮಸ್ವಂತ ರಕ್ಷಕನನ್ನಾಗಿ ಇಲ್ಲಿಯವರೆಗೆ ಅಂಗೀಕರಿಸಿ ಕೊಂಡಿರದಿದ್ದಲ್ಲಿ, ಈಗಲೇ, ನಿಮ್ಮನ್ನು ತಗ್ಗಿಸಿಕೊಂಡು ಕೂಗಿರಿ, “ಕರ್ತನೇ ದಯಮಾಡಿ ನನ್ನನ್ನು ನಿನ್ನ ಮಗುವನ್ನಾಗಿ ಸ್ವೀಕರಿಸಿ ನನ್ನನ್ನು ಆಶೀರ್ವದಿಸು” ಎಂದು. ನಾವು ಅ.ಕೃ 9:6 ರಲ್ಲಿ ಓದುವಂತೆ, ನಿಮ್ಮ ಜೀವನವನ್ನು ಆತನ ಚಿತ್ತಕ್ಕೆ ಒಪ್ಪಿಸಿಕೊಡು. ಹೌದು! ಆತನ ಹೆಸರಿನಲ್ಲಿ ನಂಬಿಕೆಯಿಟ್ಟವರಿಗೆ ಆತನ ಹೆಸರಿನಲ್ಲಿ ನಂಬಿಕೆಯಿಟ್ಟವರಿಗೆ ಆತನ ಮಕ್ಕಳಾಗುವ ಅಧಿಕಾರ ಕೊಟ್ಟನು (ಯೋಹಾ. 1:12). ಆತನು ನಿನ್ನನ್ನು ತನ್ನ ಮಗುವನ್ನಾಗಿ ಸ್ವೀಕರಿಸಿ. ಹೇರಳವಾಗಿ ಆಶೀರ್ವದಿಸುತ್ತಾನೆ.

ಒಂದು ಸಲ, ಒಬ್ಬ ಯೌವನಸ್ಥ ಹುಡುಗಿ ಒಂದು ಕೂಟದಲ್ಲಿ ಕರ್ತನಾದ ಯೇಸುವನ್ನು ತನ್ನ ಸ್ವಂತ ರಕ್ಷಕನನ್ನಾಗಿ ಸ್ವೀಕರಿಸಿದರು. ಕೂಟದ ಕೊನೆಯಲ್ಲಿ, ಒಂದು ನಿವೇದನೆ ಮಾಡಿ ಹೇಳಿದ್ದೇನಂದರೆ, “ಈ ಕೂಟಗಳನ್ನು ವ್ಯವಸ್ಥೆ ಮಾಡಲು ಹೇರಳವಾಗಿ ದಾನಮಾಡಿ” ಎಂದು ನಂತರ ಕಾಣಿಕೆಕೊಡುವ ಸಮಯ ಬಂದಿತು, ಆಗ ಈ ಹುಡುಗಿ ರೂ. ಒಂದು ನೂರ ನೋಟನ್ನು ತನ್ನ ಕೈಯಲ್ಲಿ ಹಿಡಿದು ಹೇಳಿಕೊಂಡಳು” ಈ ನೂರು ರೂಪಾಯಿ ನೋಟು ಕಾಣಿಕೆಗೆ ಸಾಕು, “ಒಡಯನೇ, ದೇವರು ಅವಳ ಹತ್ತಿರ ಮಾತನಾಡಿ ಹೇಳಿದನು” ನನ್ನ ಪ್ರಿಯ ಮಗಳೇ, ನಿನ್ನ ಹುಟ್ಟು ಹಬ್ಬಕ್ಕೆ ಬೇಕಾದಷ್ಟು ಉಡುಗೊರೆಗಳನ್ನು ಪಡೆದಿದ್ದೀಯ. ಇದರಿಂದ, ಸ್ವಲ್ಪವನ್ನು ನನ್ನ ಸೇವೆಗಾಗಿ ಯಾಕೆ ಕೊಡುವದಿಲ್ಲ? ಇದಕ್ಕಿಂತ ಹೆಚ್ಚಾಗಿ ಕೊಡಲು ಸಾಧ್ಯವಿಲ್ಲವಾ? ಈ ಮಾತುಗಳು ಅವಳ ಹೃದಯವನ್ನು ಮುರಿಯಿತು. ಅವಳು ತನ್ನ ಚೀಲವನ್ನು ತೆಗೆದು ಎಣಿಸದೆ ಚೀಲದಲ್ಲಿ ಇದ್ದ ಎಲ್ಲಾ ಹಣವನ್ನು ಕಾಣಿಕೆಯಾಗಿ ಕೊಟ್ಟಳು. ದೇವರ ಮಾತನ್ನು ಕೇಳಿದ್ದಕ್ಕಾಗಿ ಅವಳ ಹೃದಯ ಸಂತೋಷದಿಂದ ತುಂಬಿತು. ಮರುದಿನ ಅವಳು ಕಛೇರಿಗೆ ಎಂದಿನಂತೆ ಹೋದಾಗ, ಅಲ್ಲಿ ಅವಳಿಗಾಗಿ ಒಂದು ಪತ್ರ ಕಾದಿತ್ತು. ಅವಳು ಆ ಪತ್ರವನ್ನು ತೆರೆದಾಗ ಅದರಲ್ಲಿ ಅವಳಿಗೆ ಸಂಬಳದಲ್ಲಿ 3000/- ರೂ ಹೆಚ್ಚು ಕೊಡುವುದಾಗಿ ಇತ್ತು. ಅವಳಿಗೆ ಗೊತ್ತಿತ್ತು ಅದು ಕರ್ತನ ಮಾಡುವಿಕೆಯೆಂದು “ಸಂತೋಷವಾಗಿ ಕೊಡುವವರನ್ನು ದೇವರು ಇಷ್ಟಪಡುತ್ತಾನೆ (2 ಕೊರಿ. 9:7).

ಪ್ರಿಯರೇ, ನೀವು ಸಹ ಗುಣಗುಟ್ಟುತಿರಬಹುದು! “ಅಯ್ಯೋ” ನಾನು ಏನು ಮಾಡಲಿ, ನನ್ನ ಕುಟುಂಬ ಹೇಗೆ ನಡೆಸಲಿ? ನನ್ನ ಸಂಬಳ ತೀರ ಕಡಿಮೆ ಇದರಿಂದ ಎರಡೂ ಕಡೆ ಭರಿಸಲು ಆಗುತ್ತಿಲ್ಲ. ಚಿಂತಿಸಬೇಡ. ನಮ್ಮ ಅದ್ಭುತದ ದೇವರು, ನಿಮಗೆ ಬೇಕಾಗಿರುವ ಮತ್ತು ತೃಪ್ತಿಪಡಿಸುವ ಎಲ್ಲಾ ವಸ್ತುಗಳನ್ನು ಶ್ರೀಮಂತಿಕೆಯಿಂದ ಕೊಡುತ್ತಾನೆ (1 ತಿಮೊ. 6:17).

ಪ್ರಾರ್ಥನೆ : ಪ್ರಿಯ ತಂದೆಯೇ, ಇಂದಿನಿಂದ, ನಿನ್ನ ವಾಕ್ಯಕ್ಕೂ ನಿನ್ನ ಚಿತ್ತಕ್ಕೂ ಸಮರ್ಪಿಸಿಕೊಳ್ಳುವಂತಹ ಹೃದಯವನ್ನು ಕೊಡು. ಎಲ್ಲಾ ಸಮಯದಲ್ಲಿ, ನಿನಗೆ ವಿಧೇಯತೆಯಿಂದಲೂ, ನಿನ್ನನ್ನು ಹಿಂಬಾಲಿಸುವಂತೆ ಸಹಾಯಮಾಡು. ನನ್ನನ್ನು ನಿನ್ನ ಮಗುವನ್ನಾಗಿ ಸ್ವೀಕರಿಸಿ, ನಿನ್ನ ದೃಷ್ಟಿಯಲ್ಲಿ ಸಮರ್ಪಕರಾದ ಜೀವನ ಜೀವಿಸುವಂತೆ ಮಾಡು. ಯೇಸುವಿನ ಬಲವಾದ ನಾಮದಲ್ಲಿ ಪ್ರಾರ್ಥಿಸುವೆ, ಆಮೆನ್.

ಪ್ರಾರ್ಥನೆ ಮತ್ತು ವಂದನೆಗಳೊಂದಿಗೆ,

MANNA MINISTRIES

Mannaministries.in@gmail.com

*For Daily Devotion Contact: +91 9964247889*

Comments

Your email address will not be published. Required fields are marked *